ಬೆಳಗಾವಿ: ಸಚಿವ ಸ್ಥಾನ ಸಿಗದಿದ್ದಕ್ಕೆ ಮಾಜಿ ಸಚಿವರಾದ ಕೆ.ಎಸ್ ಈಶ್ವರಪ್ಪ (K.S. Eshwarappa) ಹಾಗೂ ರಮೇಶ್ ಜಾರಕಿಹೊಳಿ (Ramesh Jarkiholi) ಅಸಮಾಧಾನಗೊಂಡಿದ್ದಾರೆ. ಕಳೆದ 2 ದಿನಗಳಿಂದ ಬೆಳಗಾವಿ ಅಧಿವೇಶನಕ್ಕೆ (Belagavi Winter Session) ಗೈರು ಹಾಜರಾಗಿ, ಬೆಂಗಳೂರಿಗೆ (Bengaluru) ಇಬ್ಬರು ನಾಯಕರು ಬಂದಿದ್ದರು. ಸದ್ಯ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಸೂಚನೆ ಮೇರೆಗೆ ಪುನಃ ಬೆಳಗಾವಿಗೆ ಈಶ್ವರಪ್ಪ, ರಮೇಶ್ ಜಾರಕಿಹೊಳಿ ತೆರಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ಸಿಎಂ ಬೊಮ್ಮಾಯಿ ಅವರು, ಈಶ್ವರಪ್ಪ ಅವರು ಹಿರಿಯರಿದ್ದಾರೆ. ನಮ್ಮಲ್ಲಿ ಯಾವುದೇ ಅಸಮಾಧಾನ ಏನು ಇಲ್ಲ, ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದಿದ್ದಾರೆ.
ಸಿಎಂ ಕರೆದಿದ್ದಕ್ಕೆ ಬಂದಿದ್ದೇನೆ ಎಂದ್ರು ಈಶ್ವರಪ್ಪ
ಬೆಳಗಾವಿಯ ಸಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಮಾತನಾಡಿದ ಈಶ್ವರಪ್ಪ ಅವರು, ಸಿಎಂ ಕರೆದಿದಕ್ಕೆ ನಾನು ಬಂದಿದ್ದೇನೆ. ಅವರನ್ನು ಇಂದು ಭೇಟಿ ಮಾಡುತ್ತೇನೆ. ಉಳಿದಂತೆ ನನಗೆ ಯಾವುದೇ ಮಾಹಿತಿ ಇಲ್ಲ.
ಅವರು ಮಾತನಾಡಿದ ನಂತರ ಎಲ್ಲವೂ ಗೊತ್ತಾಗಲಿದೆ. ಈ ವಿಚಾರದಲ್ಲಿ ಜಾತಿಯನ್ನು ನಡುವೆ ತರುವುದು ಬೇಡ. ಜನರಿಗೆ ಉತ್ತರ ಕೊಡಲು ಆಗದ ಪರಿಸ್ಥಿತಿ ಈಗಲೂ ಇದೆ. ನನ್ನ ಪರವಾಗಿ ಕ್ಲೀನ್ ಚೀಟ್ ಸಿಕ್ಕಿ ಆಗಿದೆ. ನನಗೆ ಉತ್ತರ ಕೊಟ್ಟು ಕೊಟ್ಟು ಸಾಕಾಗಿದೆ. ಸಿಎಂ ಬರಲು ಹೇಳಿದ್ದಾರೆ, ಅವರು ಏನು ಮಾತನಾಡುತ್ತಾರೆ ನೋಡೋಣ ಎಂದರು.
ಇದನ್ನೂ ಓದಿ: Belagavi Border Dispute: 'ನಮ್ಮ ಸಿಎಂ ಬೊಮ್ಮಾಯಿ ಬಹಳ ವೀಕ್ ಇದ್ದಾರೆ'-ಮಾಜಿ ಸಿಎಂ ಸಿದ್ದರಾಮಯ್ಯ ಕಟು ಟೀಕೆ
'ಹೈಕಮಾಂಡ್ ಸುದ್ದಿ ನನಗೆ ಸಿಕ್ಕಿದೆ'
ಇದೇ ವೇಳೆ ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂಧಿಸಿರುವ ಬಗ್ಗೆ ನನಗೂ ಸುದ್ದಿ ಸಿಕ್ಕಿದೆ. ಆದರೆ ಯಾವಾಗ ಏನು ಅಂತಾ ಗೊತ್ತಿಲ್ಲ. ಸಿಎಂ ಮಾತಾನಾಡಿದ ಪ್ರಕಾರ ಕೇಂದ್ರ ಪಾಸಿಟಿವ್ ಆಗಿದೆ. ನನಗೆ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಬಗ್ಗೆ ಸಕಾರಾತ್ಮಕವಾಗಿದ್ದಾರೆ.
ಇಬ್ಬರನ್ನು ಸೇರಿಸಿಕೊಳ್ಳಬೇಕು ಅಂತ ಮಾತಾಡಲು ಕರೆದಿದ್ದಾರೆ. ಖಂಡಿತ ನನಗೆ ನೋವಾಗಿದೆ, 10 ಬಾರಿ ಅದನ್ನೇ ಹೇಳಿದ್ದೇನೆ. ಅವರು ಏಕೆ ಕೊಡಲಿಲ್ಲ ಅಂತ ಮಾತ್ರ ಗೊತ್ತಿಲ್ಲ. ಎಲ್ಲಾ ಕರೆ ಮಾಡಿ ಕೇಳುತ್ತಿದ್ದಾರೆ. ನಮ್ಮನ್ನು ಸಚಿವರಾಗಿ ತೆಗೆದುಕೊಳ್ಳಬೇಕೆಂಬ ಆಸೆ ಸಿಎಂ ಅವರಿಗೂ ಇದೆ ಎಂದು ತಿಳಿಸಿದರು.
ಒಂದು ಸುತ್ತಿನ ಮಾತುಕತೆ ನಡೆಸಿರೋ ಸಚಿವಕಾಂಕ್ಷಿಗಳು
ಇನ್ನು, ಸಿಎಂ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಇಬ್ಬರು ನಾಯಕರು ಬೆಳಗಾವಿಗೆ ಆಗಮಿಸಿದ್ದಾರೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಾಉಕರು ಇಂದು ರಾತ್ರಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಇಬ್ಬರು ಸಚಿವಕಾಂಕ್ಷಿಗಳು, ಫೋನ್ ಮೂಲಕ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ.
ಇದನ್ನೂ ಓದಿ: Janardhan Reddy: ಜನಾರ್ದನ ರೆಡ್ಡಿ ಹೊಸ ಪಕ್ಷದ ಹೆಸರು ಇದೇನಾ? 72 ಗಂಟೆಯ ನಂತರ ಉತ್ತರ ಎಂದ ಗಣಿಧಣಿ
ಈ ವೇಳೆ ಶೀಘ್ರದವೇ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಬೆಳಗಾವಿ ಸದನ ಆರಂಭಕ್ಕೂ ಮುನ್ನ ಸಚಿವ ಸ್ಥಾನ ಸಿಗುವ ಬಗ್ಗೆ ನಿರೀಕ್ಷೆ ಹೊಂದಿದ್ದ ನಾಯಕರು, ಸಚಿವ ಸ್ಥಾನ ಸಿಗದ ಬಗ್ಗೆ ಅಸಮಾಧಾನಗೊಂಡಿದ್ದರು. ಈ ಕಾರಣದಿಂದಲೇ ಬೆಳಗಾವಿ ಅಧಿವೇಶನಕ್ಕೆ ಗೈರಾಗಿ ಬೆಂಗಳೂರಿಗೆ ಆಗಮಿಸಿದ್ದರು ಎನ್ನಲಾಗಿತ್ತು. ಅಲ್ಲದೇ ಈಶ್ವರಪ್ಪ ಅವರು ಸ್ಪೀಕರ್ ಅವರಿಗೆ ಪತ್ರ ಬರೆದು ಸದನಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ