ಪರಿಹಾರ ಕೇಳಿದ ನೆರೆ ಸಂತ್ರಸ್ತರನ್ನು ‘ನದಿಗೆ ಬಿದ್ದು ಸಾಯಿರಿ‘ ಎಂದ ಬೆಳಗಾವಿ ತಹಶೀಲ್ದಾರ್?

ಈ ಮಧ್ಯೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ತಾತ್ಕಾಲಿಕ ಶೆಡ್​ ತೆರವುಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಇದು ಸಂತ್ರಸ್ತರಿಗೆ ಪಾಲಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಮನೆಯೂ ಇಲ್ಲ, ಬೆಳೆಯು ಇಲ್ಲ ಸದ್ಯ ವಾಸವಿರೋ ತಾತ್ಕಲಿಕ ಶೆಡ್​ ನಿಂದ ಹೊರ ಹಾಕಿದರೆ ಎಲ್ಲಿಗೆ ಹೋಗೊದು ಎಂಬ ಪ್ರಶ್ನೆ ಉದ್ಭವಿಸಿದೆ.

news18-kannada
Updated:February 22, 2020, 4:35 PM IST
ಪರಿಹಾರ ಕೇಳಿದ ನೆರೆ ಸಂತ್ರಸ್ತರನ್ನು ‘ನದಿಗೆ ಬಿದ್ದು ಸಾಯಿರಿ‘ ಎಂದ ಬೆಳಗಾವಿ ತಹಶೀಲ್ದಾರ್?
ಬೆಳಗಾವಿ ಪ್ರವಾಹ ಸಂತ್ರಸ್ಥರು
  • Share this:
ಬೆಳಗಾವಿ(ಫೆ.19): ಆಗಸ್ಟ್​​​ ತಿಂಗಳಲ್ಲಾದ ಪ್ರವಾಹದಿಂದ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ. ಶಾಶ್ವತ ಸೂರು, ಬೆಳೆಗಳಿಗೆ ಪರಿಹಾರದ ಭರವಸೆ ನೀಡಿದ್ದ ಸರ್ಕಾರ ಸಂತ್ರಸ್ತರಿಗೆ ನಡು ನೀರಿನಲ್ಲೇ ಕೈಕೊಟ್ಟಿದೆ. ಪರಿಹಾರ ಸಿಗದೆ ಬೆಟ್ಟದಲ್ಲೇ ಸಂತ್ರಸ್ತರು ಬದುಕುತ್ತಿದ್ದು, ಇಲ್ಲಿಂದ ಡಿಢೀರ್​​ ಖಾಲಿ ಮಾಡಿ ಎಂದು ಅರಣ್ಯ ಇಲಾಖೆ ಒತ್ತಡ ಹೇರುತ್ತಿದೆ.

ಹೌದು, ಕಳೆದ ವರ್ಷ ಮಲಪ್ರಭಾ ನದಿಯಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ರಾಮದುರ್ಗ ತಾಲೂಕಿನ 30ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ತತ್ತರಿಸಿದ್ದವು. ಪ್ರಮುಖವಾಗಿ ಗೋಣಗನೂರು ಗ್ರಾಮ ಅರ್ಧದಷ್ಟು ಮುಳುಗಿ ಹೋಗಿತ್ತು. ನದಿ ಸುತ್ತಮುತ್ತ ಇರುವ ಜಮೀನಿನಲ್ಲಿ ಅನೇಕ ವರ್ಷಗಳಿಂದ ಜನ ಮನೆ ಮಾಡಿಕೊಂಡು ವಾಸವಿದ್ದರು. ಸದ್ಯ ಮನೆ, ಜಮೀನು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿವೆ.

ಇದರಿಂದ ಅತಂತ್ರರಾದ ಸಂತ್ರಸ್ತರು ಕಳೆದ ಆಗಷ್ಟ್ ತಿಂಗಳಿಂದಲೇ ಗ್ರಾಮದ ಬಂಡೆಮ್ಮ ನಗರದ ಬಳಿ ಇರುವ ಬೆಟ್ಟದ ಮೇಲೆ ತಾತ್ಕಲಿಕ ಶೆಡ್​ ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಇವರಿಗೆ ಸರ್ಕಾರಿಂದ ಯಾವುದೇ ನೆರವು ಸಿಗುತ್ತಿಲ್ಲ. ನಿಮ್ಮ ಮನೆ ಬಗ್ಗೆ ಗ್ರಾಮ ಪಂಚಾಯತ್​​ನಲ್ಲಿ ದಾಖಲೆ ಇಲ್ಲ. ಹೀಗಾಗಿ ಪರಿಹಾರ ನೀಡಲು ಬರಲ್ಲ ಎಂದು ಹೇಳಿದ್ದಾರೆ. ಅದಕ್ಕೆ ನಾವು ಸರ್ಕಾರಕ್ಕೆ ಸಂಬಂಧ ಇಲ್ಲ ಅಂದರೆ ನಮ್ಮನ್ನು ರಕ್ಷಣೆ ಯಾಕೆ ಮಾಡಿದ್ದರು ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಸಿಎಂ ಕೇಜ್ರಿವಾಲ್​​​-ಅಮಿತ್​​ ಶಾ ಮೊದಲ ಭೇಟಿ: ದೆಹಲಿ ಅಭಿವೃದ್ದಿಗೆ ಒಟ್ಟಾಗಿ ಕೆಲಸ ಮಾಡುವ ಶಪಥ

ಇನ್ನು, ಈ ಬಗ್ಗೆ ತಹಶೀಲ್ದಾರ್ ಗಿರೀಶ ಸ್ವಾಧಿರನ್ನು ಕೇಳಿದರೆ, ನದಿಯಲ್ಲಿ ಬಿದ್ದು ಸಾಯಿ ಎಂದು ಬೇಜವಾಬ್ದಾರಿಯುತ್ತ ಉತ್ತರ ನೀಡಿದರು ಎನ್ನುತ್ತಾರೆ ಸಂತ್ರಸ್ತ ಶಂಕರಪ್ಪ.

ಕಳೆದ 7 ತಿಂಗಳಿಂದ 10ಕ್ಕೂ ಕುಟುಂಬಗಳು ಗ್ರಾಮದ ಬೆಟ್ಟದ ಮೇಲೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅನೇಕ ತಿಂಗಳಗಳ ಕಾಲ ದಾನಿಗಳು ನೀಡಿದ ದಿನಸಿಯಿಂದಲೇ ಜೀವನ ನಡೆಸಿದ್ದಾರೆ. ಸದ್ಯ ಜಮೀನಗಳ ದುರಸ್ತಿ ಮಾಡಲು ಆಗದೇ ಇರುವಷ್ಟು ಹಾಳಾಗಿವೆ. ಹೀಗಾಗಿ ಪರಿಹಾರಕ್ಕಾಗಿ ಕಾದು ಕುಳತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಇವರ ಕಡೆ ಗಮನ ಹರಿಸಿಲ್ಲ.

ಈ ಮಧ್ಯೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ತಾತ್ಕಾಲಿಕ ಶೆಟ್ ತೆರವುಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಇದು ಸಂತ್ರಸ್ತರಿಗೆ ಪಾಲಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಮನೆಯೂ ಇಲ್ಲ, ಬೆಳೆಯು ಇಲ್ಲ ಸದ್ಯ ವಾಸವಿರೋ ತಾತ್ಕಲಿಕ ಶೆಟ್ ನಿಂದ ಹೊರ ಹಾಕಿದರೆ ಎಲ್ಲಿಗೆ ಹೋಗೊದು ಎಂಬ ಪ್ರಶ್ನೆ ಉದ್ಭವಿಸಿದೆ.ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಸಂತ್ರಸ್ತರ ಬದುಕು ನರಕವಾಗಿದೆ. ಜಿಲ್ಲೆಯಲ್ಲಿ ನಾಲ್ಕು ಜನ ಸಚಿವರು ಇದ್ದರು ಯಾರೊಬ್ಬರು ಇಲ್ಲಿನ ಪ್ರವಾಹ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇನ್ನೂ ಜಿಲ್ಲಾಢಳಿತ ಮಾತ್ರ ದಾಖಲೆಯಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಮನೆ ನಿರ್ಮಾಣ ಮಾಡಿದ್ದೇವೆ, ಬೆಳೆಗೆ ಪರಿಹಾರ ಕೊಟ್ಟಿದ್ದೇವೆ ಎಂದು ಹೇಳುತ್ತದೆ. ಆದರೆ, ವಾಸ್ತವದಲ್ಲಿ ಪರಿಸ್ಥಿತಿಯೇ ಬೇರೆಯಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮವಹಿಸಬೇಕಿದೆ.
First published: February 19, 2020, 8:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading