• Home
  • »
  • News
  • »
  • state
  • »
  • Belagavi: ಮಾನವೀಯತೆ ಮರೆತ ಉಪ ನೋಂದಣಾಧಿಕಾರಿ; ಸ್ಟ್ರೆಚರ್​ನಲ್ಲೇ ಕಚೇರಿಗೆ ಬಂದ ವೃದ್ಧೆ!

Belagavi: ಮಾನವೀಯತೆ ಮರೆತ ಉಪ ನೋಂದಣಾಧಿಕಾರಿ; ಸ್ಟ್ರೆಚರ್​ನಲ್ಲೇ ಕಚೇರಿಗೆ ಬಂದ ವೃದ್ಧೆ!

ಸ್ಟ್ರೆಚರ್​ನಲ್ಲಿ ಬಂದ ವೃದ್ಧೆ

ಸ್ಟ್ರೆಚರ್​ನಲ್ಲಿ ಬಂದ ವೃದ್ಧೆ

ವೃದ್ಧೆ ದಾಖಲಾಗಿರುವ ಆಸ್ಪತ್ರೆ ನಮ್ಮ ವ್ಯಾಪ್ತಿಗೆ ಬರಲ್ಲ ನೀವೇ ಕರೆದುಕೊಂಡು ಬನ್ನಿ ನಾವು ಬರಲು ಆಗಲ್ಲ ಅಂತ ಕಚೇರಿ ಸಿಬ್ಬಂದಿ ತಿಳಿಸಿದ್ದಾರಂತೆ. ಹೀಗಾಗಿ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ  ಪಡೆಯುತ್ತಿದ್ದ ವೃದ್ಧೆಯನ್ನು ವಿಧಿಯಿಲ್ಲದೇ ಸ್ಟ್ರೆಚರ್ ಮೇಲೆ ಕರೆದುಕೊಂಡು ಬಂದು ಹಕ್ಕು ಬಿಟ್ಟ ಪತ್ರಕ್ಕೆ ಸಹಿ ಹಾಕಿದ್ದಾರೆ‌.

ಮುಂದೆ ಓದಿ ...
  • Share this:

ಬೆಳಗಾವಿ (ಅ.1): 80 ವರ್ಷದ ವೃದ್ಧೆಯೋರ್ವಳನ್ನು ಸ್ಟ್ರೆಚರ್ (Stretcher) ಮೇಲೆ ಉಪನೋಂದಣಾಧಿಕಾರಿ ಕಚೇರಿಗೆ ಬಂದು ಹಕ್ಕಬಿಟ್ಟ ಪತ್ರಕ್ಕೆ ಹೆಬ್ಬಟ್ಟು ಒತ್ತಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಮೂಲತಃ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 80 ವರ್ಷದ ಮಹಾದೇವಿ ಅಗಸಿಮನಿ ವಯೋಸಹಜ ಕಾಯಿಲೆಗಳಿಂದ (Geriatric Disease) ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಗೆ (Private Hospital) ಕಳೆದ ವಾರ ದಾಖಲಾಗಿದ್ದರು.


 ಸ್ಟ್ರೆಚರ್​ನಲ್ಲಿ ಬಂದ ವೃದ್ಧೆ


ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ಹದಗೆಟ್ಟು ಮಗಳು ಮತ್ತು ಮಗನಿಗೆ ಆಸ್ತಿಗಳ ಹಕ್ಕುಗಳನ್ನು ಬಿಟ್ಟುಕೊಡುವ ನಿರ್ಧಾರವನ್ನು ವೃದ್ಧೆ ವ್ಯಕ್ತಪಡಿಸಿದಾಗ ವೃದ್ಧೆಯ ಮಗ ರವೀಂದ್ರ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿ ವಿಚಾರಿಸಿರುತ್ತಾರೆ. ಆದ್ರೆ  ವೃದ್ಧೆ ದಾಖಲಾಗಿರುವ ಆಸ್ಪತ್ರೆ ನಮ್ಮ ವ್ಯಾಪ್ತಿಗೆ ಬರಲ್ಲ ನೀವೇ ಕರೆದುಕೊಂಡು ಬನ್ನಿ ನಾವು ಬರಕ್ಕಾಗಲ್ಲ ಅಂತ ಕಚೇರಿ ಸಿಬ್ಬಂದಿ ತಿಳಿಸಿದ್ದಾರಂತೆ. ಹೀಗಾಗಿ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ  ಪಡೆಯುತ್ತಿದ್ದ ವೃದ್ಧೆಯನ್ನು ವಿಧಿಯಿಲ್ಲದೇ ಸ್ಟ್ರೆಚರ್ ಮೇಲೆ ಕರೆದುಕೊಂಡು ಬಂದು ಹಕ್ಕು ಬಿಟ್ಟ ಪತ್ರಕ್ಕೆ ಸಹಿ ಹಾಕಿದ್ದಾರೆ‌.


belagavi sub registrar staff calls elderly woman to office csb pvn
ಸ್ಟ್ರೆಚರ್​ನಲ್ಲಿ ಬಂದ ವೃದ್ಧೆ


ಅಧಿಕಾರಿಗಳಿಂದ ನಿರ್ಲಕ್ಷ್ಯ ಉತ್ತರ


ಘಟನೆ ಬಗ್ಗೆ ಪ್ರತಿಕ್ರಿಯಿಸಲು ವೃದ್ಧೆ ಮಹಾದೇವಿ ಅಗಸಿಮನಿ ಕುಟುಂಬಸ್ಥರು ನಿರಾಕರಿಸಿದ್ದಾರೆ. ಇತ್ತ ಬೆಳಗಾವಿ ದಕ್ಷಿಣ ವಿಭಾಗದ ಉಪನೋಂದಣಾಧಿಕಾರಿ ಕಚೇರಿಗೆ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ತೆರಳಿದಾಗ ಉಪನೋಂದಣಾಧಿಕಾರಿ ಪದ್ಮನಾಭ ಗುಡಿ ರಜೆ ಮೇಲಿದ್ದಾರೆ ಎಂದು ಸಹಾಯಕ ಉಪನೋಂದಣಾಧಿಕಾರಿ ಸಚಿನ್ ಮಂಡೇದ್ ತಿಳಿಸಿದರು. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಉಪನೋಂದಣಾಧಿಕಾರಿ ಸಚಿನ್ ಮಂಡೇದ್, 'ನಾನು ನಿನ್ನೆ ಇದ್ದಿರಲಿಲ್ಲ ಸಬ್ ರಿಜಿಸ್ಟ್ರಾರ್ ಇದ್ದರು, ಅವರಿಂದು ರಜೆ ಮೇಲೆ ತೆರಳಿದ್ದಾರೆ. ಕಂಪ್ಯೂಟರ್ ಆಪರೇಟರ್ ಹತ್ತಿರ ಕೇಳಿದಾಗ ನನಗೆ ಈ ಬಗ್ಗೆ ಗೊತ್ತಾಗಿದೆ. ಹಕ್ಕ ಬಿಟ್ಟ ಪತ್ರ ಮಾಡಿಸಲು ಅಜ್ಜಿಯನ್ನು ಸ್ಟ್ರೆಚರ್ ಮೇಲೆ ಕರೆದುಕೊಂಡು ಬಂದಿದ್ದರು.


ಹಣ ನೀಡಲು ನಿರಾಕರಿಸಿ ಆಸ್ಪತ್ರೆಗೆ ಕರೆತಂದ್ರಾ?


ಪ್ರೈವೆಟ್ ಅಟೆಂಡೆನ್ಸ್‌ಗೆ ಅರ್ಜಿ ಸಲ್ಲಿಸಿದ ಬಗ್ಗೆ ನನಗೆ ಗೊತ್ತಿಲ್ಲ. ಅರ್ಜಿ ಕೊಟ್ರೆ ನಾವು ಪ್ರೈವೆಟ್ ಅಟೆಂಡೆನ್ಸ್ ಮಾಡ್ತೀವಿ. ಪ್ರೈವೆಟ್ ಅಟೆಂಡೆನ್ಸ್‌ಗೆ ಅರ್ಜಿ ಸಲ್ಲಿಸುವ ವೇಳೆ 1000 ರೂ‌. ಶುಲ್ಕ ಪಾವತಿಸಬೇಕಿರುತ್ತೆ. ಆಗ ನಾವು ಓರ್ವ ಸಿಬ್ಬಂದಿ ನೇಮಿಸಿ ಕಳಿಸಿರುತ್ತೇವೆ' ಎಂದು ತಿಳಿಸಿದ್ದಾರೆ‌. ಇನ್ನು ಹಣ ನೀಡದ ಹಿನ್ನೆಲೆ ಕಚೇರಿಗೆ ಕರೆದುಕೊಂಡು ಬರುವಂತಾಯ್ತು ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿನ್ ಮಂಡೇದ್, ಈ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ‌.




ಬೆಳಗಾವಿ ದಕ್ಷಿಣ ವಿಭಾಗದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಅಧಿಕಾರಿಗಳ ದರ್ಪ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಬೆಳಗಾವಿ ದಕ್ಷಿಣ ವಲಯಕ್ಕೆ ಪ್ರತ್ಯೇಕವಾಗಿ ಉಪನೋಂದಣಾಧಿಕಾರಿ ಕಚೇರಿ ಸ್ಥಾಪಿಸಿದ್ದು ಹಳೆಯ ಬಿಎಸ್‌ಎ‌ನ್‌ಎಲ್ ಕಸ್ಟಮರ್ ಕೇರ್ ಸೆಂಟರ್‌ನಲ್ಲಿ ಕಚೇರಿ ನಡೆಸಲಾಗುತ್ತಿದೆ.


ಉಪನೋಂದಣಾಧಿಕಾರಿ ಕಚೇರಿ ಅವ್ಯವಸ್ಥೆಯ ಆಗರ


ಈ ಕಚೇರಿಗೆ ಬಂದ ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯಕ್ಕೆ ತೆರಳಲು ಸಹ ಯಾವುದೇ ವ್ಯವಸ್ಥೆ ಇಲ್ಲ. ಬೆಳಗಾವಿಯ ಉಪನೋಂದಣಾಧಿಕಾರಿ ಕಚೇರಿ ಅವ್ಯವಸ್ಥೆಯ ಆಗರವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ತಾಯಿಯ ಆರೋಗ್ಯ ದಲ್ಲಿ ಏರುಪೇರು ಆಗುತ್ತಿರುವದರಿಂದ ಮಗಳು ವಿದ್ಯಾ ಹಾಗೂ ಮಗ ರವೀಂದ್ರನಾಥ ಅಗಸಿಮನಿ ಆಸ್ತಿ ಹಕ್ಕುಗಳನ್ನು ಬಿಟ್ಟುಕೊಡುವ ನಿಟ್ಟಿನಲ್ಲಿ ಈ ಹಕ್ಕು ಬಿಟ್ಟ ಪತ್ರ ಸಹಿ ಮಾಡಿಸಲು ಮುಂದಾಗಿದ್ದರು‌.


ಇದನ್ನೂ ಓದಿ: H D Kumaraswamy: ಅವ್ರು 50 ಕೋಟಿ ಕೊಟ್ಟಿರೋದು ನನ್ನನ್ನು ಕಟ್ಟಿ ಹಾಕಲು; ನಮ್ಮ ಕಾರ್ಯಕರ್ತರನ್ನು ಕೆಣಕಬೇಡಿ ಎಂದ್ರು ಕುಮಾರಸ್ವಾಮಿ


ಇಂತಹ ಸಂದರ್ಭಗಳಲ್ಲಿ ಖಾಸಗಿ ಹಾಜರಾತಿ ನಿಯಮ ಅನ್ವಯ ಶುಲ್ಕ ಪಾವತಿಸಿಕೊಂಡು ಖುದ್ದಾಗಿ ಆಸ್ಪತ್ರೆಗೆ ತೆರಳಿ ಸಹಿ ಮಾಡಿಸಿಕೊಳ್ಳಬೇಕಿತ್ತು. ಆದ್ರೆ ಮಾನವೀಯತೆ ಮರೆತು ಸ್ಟ್ರೆಚರ್ ಮೇಲೆ ವೃದ್ಧೆಯನ್ನು ಕಚೇರಿಗೆ ಕರೆಯಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ‌.

Published by:ಪಾವನ ಎಚ್ ಎಸ್
First published: