School Reopening: ಟೆಂಟ್​ನಲ್ಲಿ ಶಾಲೆ, ಬೀದಿಯಲ್ಲಿ ಮಕ್ಕಳಿಗೆ ಪಾಠ! ಮೊದಲ ದಿನವೇ ಈ ಅವಸ್ಥೆ

School Reopening: ಮೂದೇನೂರು ಗ್ರಾಮದಲ್ಲಿ ತಾತ್ಕಾಲಿಕ ‌ಶೆಡ್​ ನಲ್ಲಿ ಶಾಲೆ ಆರಂಭಿಸಲಾಗಿದೆ. ಶಿಕ್ಷಣ ಇಲಾಖೆ, ಸ್ಥಳೀಯ ಶಾಸಕರ ‌ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ನೆಲದಲ್ಲಿ ಕುಳಿತಿರುವ ವಿದ್ಯಾರ್ಥಿಗಳು

ನೆಲದಲ್ಲಿ ಕುಳಿತಿರುವ ವಿದ್ಯಾರ್ಥಿಗಳು

  • Share this:
ಬೆಳಗಾವಿ(ಮೇ.17): ರಾಜ್ಯದಲ್ಲಿ ಶಾಲೆಗಳು (School) ಆರಂಭವಾಗಿದ್ದು, ಮಕ್ಕಳ (Children) ಕಲರವ ಆರಂಭವಾಗಿದೆ. ಬೇಸಿಗೆಯ ರಜಾ ದಿನಗಳನ್ನು ಕಳೆದು ಮೊದಲ ದಿನ ಉತ್ಸಾಹದಿಂದ ಶಾಲೆಯಂಗಳದತ್ತ ಹೆಜ್ಜೆ ಹಾಕುವ ಮಕ್ಕಳು ಹೆಜ್ಜೆ ಹಾಕಿದ್ದಾರೆ. ಮಕ್ಕಳನ್ನು ಅದ್ದೂರಿಯಾಗಿ ಶಾಲಾ ಸಿಬ್ಬಂದಿ ಸ್ವಾಗತ ಮಾಡಿಕೊಂಡಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ (Ramadurga) ತಾಲ್ಲೂಕಿನ ಮೂದೇನೂರು ಗ್ರಾಮದಲ್ಲಿ ತಾತ್ಕಾಲಿಕ ‌ಶೆಡ್​ ನಲ್ಲಿ ಶಾಲೆ ಆರಂಭಿಸಲಾಗಿದೆ. ಶಿಕ್ಷಣ ಇಲಾಖೆ, ಸ್ಥಳೀಯ ಶಾಸಕರ ‌ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಶಾಲೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿ

ಮೂದೇನೂರ ಗ್ರಾಮದಲ್ಲಿ ‌ಪ್ರಾಥಮಿಕ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿ ಇದೆ. ಇಲ್ಲಿ 10 ರಿಂದ 12 ಕೊಠಡಿಗಳು ಇದ್ದು,‌ ಈ ಪೈಕಿ ಎರಡು ಮಾತ್ರ ಮಕ್ಕಳು ಕುಳಿತುಕೊಳ್ಳಲು ಯೋಗ್ಯವಾಗಿ ಇವೆ. ಇನ್ನೂಳಿದ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿವೆ.  ಕೊಠಿಯ ಮೇಲಿನ ಹಂಚಗಳು ಹಾನಿಯಾಗಿವೆ.

ಶಾಲೆ ಆರಂಭಿಸಲು ದೊಡ್ಡ ಸಮಸ್ಯೆ

ಅಪಾಯದ ಹಿನ್ನೆಲೆಯಲ್ಲಿ ‌ಶಾಲೆ ಆರಂಭಿಸಲು ದೊಡ್ಡ ಸಮಸ್ಯೆ ಎದುರಾಗಿದೆ. ಗ್ರಾಮಸ್ಥರು ಮೈದಾನದಲ್ಲಿ ತಾತ್ಕಾಲಿಕ ಶೆಟ್ ನಿರ್ಮಾಣ ಮಾಡಿ ಶಾಲೆ ಆರಂಭಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.‌ ತಾತ್ಕಾಲಿಕ ಶೆಡ್ ನಲ್ಲಿಯೇ 1 ರಿಂದ 7‌ತರಗತಿ ವರೆಗಿನ ಶಾಲೆಗಳು ಆರಂಭವಾಗಿವೆ. ಶಾಲೆಯ‌ ದುಸ್ಥಿತಿಯ ಬಗ್ಗೆ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.

ನೂರು ವರ್ಷಗಳ ಇತಿಹಾಸ ಹೊಂದಿರುವ ಶಾಲೆ

ನೂರು ವರ್ಷಗಳ ಇತಿಹಾಸ ಹೊಂದಿರುವ ಶಾಲೆಯಲ್ಲಿ ಮಕ್ಕಳಿಗೆ ಕಲಿಯಲು ಕುಳಿತುಕೊಳ್ಳಲು ಕೊಠಡಿಗಳೇ ಇಲ್ಲ. ಹಲುವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಭಯದ ವಾತಾವರಣದಲ್ಲಿ ಶಾಲೆ ಕಲಿಯುತ್ತಿರುವ ಮಕ್ಕಳು, ಇಂದು ಶಾಲೆಯ ಆವರಣದಲ್ಲಿ ಪ್ರಮಾಣದ ಟೆಂಟ್  ಹಾಕಿ ಮಕ್ಕಳಿಗೆ ಕುಳಿತುಕೊಳ್ಳಲು ವ್ಯವಸ್ಥೆಯನ್ನು  ಗ್ರಾಮಸ್ಥರು ಮಾಡಿದ್ದಾರೆ.

315 ಮಕ್ಕಳಿಗೆ 6 ಶಿಕ್ಷಕರು, ಕೇವಲ  2 ಕೊಠಡಿಗಳು

ಶಾಲೆಯಲ್ಲಿ  315 ಮಕ್ಕಳಿಗೆ 6 ಶಿಕ್ಷಕರ . ಕೇವಲ  2 ಕೊಠಡಿಗಳು  ಮಾತ್ರ  ಕಲಿಯಲು ಇವೆ. 11 ಕೊಠಡಿಗಳಿದ್ದು ಪ್ರಾಥಮಿಕ ಶಾಲೆಯಲ್ಲಿ ಕೇವಲ ಎರಡು ಕೊಠಡಿಗಳು ಮಾತ್ರ ಮಕ್ಕಳಿಗೆ ಕಲಿಯಲು ಸುರಕ್ಷಿತವಾಗಿದೆ. ತಕ್ಷಣ ಕೊಠಡಿಗಳನ್ನು ದುರಸ್ತಿ ಮಾಡಿಸಬೇಕು. ಇಲ್ಲವೇ ಗಾಳಿ, ಮಳೆಗೆ ತಾತ್ಕಾಲಿಕ ‌ಟೆಂಟ್ ನಲ್ಲಿ ಸಮಸ್ಯೆಯಾಗಲಿ ಪೋಷಕರು ಆಗ್ರಹಿಸಿದ್ದಾರೆ. ಸ್ಥಳೀಯ ಶಾಸಕ ಮಹಾದೇವಪ್ಪ ಯಾದವಾಡ, ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ‌ಹೊರ ಹಾಕಿದ್ದಾರೆ.

ಇದನ್ನೂ ಓದಿ: Kamal Pant: ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ವರ್ಗಾವಣೆ, ಪ್ರತಾಪ್ ರೆಡ್ಡಿ ಹೊಸ ಪೊಲೀಸ್ ಆಯುಕ್ತ

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1,874 ಪ್ರಾಥಮಿಕ, 506 ಪ್ರೌಢಶಾಲೆಗಳಿವೆ. ಕಳೆದ ಎರಡು ದಿನಗಳಿಂದ ಶಾಲೆ ಆರಂಭಿಸಲು ಸಿದ್ಧತೆಗಳು ನಡೆದಿದ್ದವು. ತಳಿರು– ತೋರಣಗಳಿಂದ ಜ್ಞಾನ ದೇಗುಲಗಳನ್ನು ಸಿಂಗರಿಸಿ ಮಕ್ಕಳಿಗೆ ಸ್ವಾಗತ‌ ಕೊರಲಾಗಿದೆ.‌

ಕಳೆದ ಎರಡು ವರ್ಷಗಳಿಂದ ಕೋವಿಡ್ 19 ಕಾರಣಕ್ಕೆ ತರಗತಿಗಳು ಸರಿಯಾಗಿ ನಡೆದಿಲ್ಲ. ಇದು ಮಕ್ಕಳ ಕಲಿಕೆಯ ಮೇಲೆ ಸಹ ಸಾಕಷ್ಟು ಪ್ರಭಾವ‌ ಬೀರಿತ್ತು. ಈ ವರ್ಷ ಯಾವುದೇ ವಿಘ್ನ ಇಲ್ಲದೇ‌ ತರಗತಿಗಳು ನಡೆಯಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

ಕೋಲಾರದ ಶ್ರೀನಿವಾಸಪುರ ತಾಲೂಕಿನ ಮೊಗಿಲಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಕಟ್ಟಡದ ಮಧ್ಯದ ಕೊಠಡಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕುಸಿದಿದ್ದು, ಉಳಿದ ಎರಡು ಕೊಠಡಿಗಳು ಬಿರುಕು ಬಿಟ್ಟಿರೊ ಹಿನ್ನಲೆ ಶಾಲಾ ಆವರಣದಲ್ಲಿ ಮಕ್ಕಳಿಗೆ ಶಿಕ್ಷಕರು ಪಾಠ ಪ್ರವಚನ ಮಾಡುತ್ತಿದ್ದಾರೆ. ಬರೀ ನೆಲದ ಮೇಲೆ ಟಾರ್ಪಲ್ ಹಾಕಿ 25 ಮಕ್ಕಳನ್ನು ಕೂರಿಸಿ ಮುಖ್ಯೋಪಾಧ್ಯಾಯ ಸುಧಾಕರ್ ಪಾಠ ಮಾಡಿದ್ದಾರೆ.

ಇದನ್ನೂ ಓದಿ: Arms Training: ಕೊಡಗಿನ ಶಾಲೆಯ ಆವರಣದಲ್ಲಿ ಭಜರಂಗದಳ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ

ನೆಲದ ಮೇಲೆ ಕುಳಿತು ಮಕ್ಕಳ ಪಾಠ

ಶಾಲೆಗೆ ಬಂದ ಮೊದಲ ದಿನವೇ ಮಕ್ಕಳನ್ನು ನೆಲದ ಮೇಲೆ ಕುಳಿಸಿ ಪಾಠ ಮಾಡೋದು ಸರಿಯೇ ಎಂದು ಮುಖ್ಯೋಪಾಧ್ಯಾಯರನ್ನು ಕೇಳಿದ್ರೆ ಅವ್ರು ಹೇಳೋದು ಹೀಗೆ. ಶಾಲೆ ಕಟ್ಟಡಗಳು ಬಿರುಕು ಬಿಟ್ಟಿವೆ, ಯಾವಾಗ ಕಟ್ಟಡ ಬೀಳುತ್ತೋ ಗೊತ್ತಿಲ್ಲ, ಹೀಗಾಗಿ ಹೊರಗೆ ಪಾಠ ಮಾಡ್ತಿರೋದಾಗಿ ಶಿಕ್ಷಕರು ಹೇಳಿದ್ದಾರೆ.
Published by:Divya D
First published: