HOME » NEWS » State » BELAGAVI SAUNDATTI YELLAMMA TEMPLE WILL NOT OPEN ON DIWALI FOR DEVOTEES DUE TO CORONAVIRUS CSB SCT

ದಸರಾ ಬಳಿಕ ದೀಪಾವಳಿಗೂ ಭಕ್ತರಿಗಿಲ್ಲ ಸವದತ್ತಿ ಯಲ್ಲಮ್ಮ ದೇವಿಯ ದರ್ಶನ

ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮ, ಚಿಂಚಲಿ ಮಾಯಕ್ಕ ಹಾಗೂ ಜೋಗಳಬಾವಿ ಸತ್ತವ್ವ ದೇವಸ್ಥಾನ ನವೆಂಬರ್ 30ರವರೆಗೆ ಭಕ್ತರ ಪ್ರವೇಶಕ್ಕೆ ನಿಷೇಧ ಮುಂದುವರೆಸಿ ಬೆಳಗಾವಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

news18-kannada
Updated:November 9, 2020, 7:39 AM IST
ದಸರಾ ಬಳಿಕ ದೀಪಾವಳಿಗೂ ಭಕ್ತರಿಗಿಲ್ಲ ಸವದತ್ತಿ ಯಲ್ಲಮ್ಮ ದೇವಿಯ ದರ್ಶನ
ಸವದತ್ತಿ ಯಲ್ಲಮ್ಮ ದೇವಸ್ಥಾನ
  • Share this:
ಬೆಳಗಾವಿ (ನ. 9):  ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಿ 8 ತಿಂಗಳು ಕಳೆದಿವೆ. ಮದುವೆ, ದಸರಾ ಹಬ್ಬ ಹಾಗೂ ದೀಪಾವಳಿ ಹಬ್ಬಕ್ಕೂ ದೇವಿಯ ದರ್ಶನ ಭಕ್ತರಿಗೆ ಸಿಕ್ಕಿಲ್ಲ. ದೇವಿಯ ದರ್ಶನಕ್ಕಾಗಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ಅನೇಕ ಭಕ್ತರು ಇಂದಿಗು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಇಷ್ಟೊಂದು ದಿನ ದೇವಾಲಯಕ್ಕೆ ಭಕ್ತರ ಪ್ರವೇಶ ನೀಡದೇ ಇರೋದು ಇತಿಹಾಸದಲ್ಲಿ ಇದೇ ಮೊದಲು.

ದೇಶದಲ್ಲಿ ಕೊರೋನಾ ಸೋಂಕಿನ  ಹಾವಳಿಯಿಂದ ಎಲ್ಲವೂ ಅಸ್ತವ್ಯಸ್ಥಗೊಂಡಿದೆ. ಮಾರ್ಚ್ ತಿಂಗಳ 22ರಂದು ಒಂದು ದಿನ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ನಂತರ ಲಾಕ್ ಡೌನ್ ಕಾರಣದಿಂದಲೂ ಇದು ಮುಂದುವರೆದಿದೆ. ಇನ್ನೂ ಅನ್ ಲಾಕ್ ಮಾಡಿ  ಆದೇಶ ಜಾರಿ ಮಾಡಿ ರಾಜ್ಯದ ಬಹುತೇಕ ದೇವಾಲಯಗಳು ಓಪನ್ ಆಗಿ ಈಗಾಗಲೇ ತಿಂಗಳುಗಳೇ ಕಳೆದಿವೆ. ಆದರೆ, ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮ, ಚಿಂಚಲಿ ಮಾಯಕ್ಕ ಹಾಗೂ ಜೋಗಳಬಾವಿ ಸತ್ತವ್ವ ದೇವಸ್ಥಾನ ನವೆಂಬರ್ 30ರವರೆಗೆ ಭಕ್ತರ ಪ್ರವೇಶಕ್ಕೆ ನಿಷೇಧ ಮುಂದುವರೆಸಿ ಬೆಳಗಾವಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಉತ್ತರ ಕರ್ನಾಟಕದಲ್ಲಿ ಪ್ರತಿ ಹುಣ್ಣಿಮೆಯಂದು ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಜಾತ್ರೆ ಸಂಭ್ರಮ  ಇರುತ್ತಿತ್ತು. ಇನ್ನೂ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಯುವ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಸಾಮಾನ್ಯ. ಕಳೆದ 8 ತಿಂಗಳಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನೀಡದೇ ಇರುವುದು ಇದೀಗ ಭಕ್ತರ ಬೇಸರಕ್ಕೆ ಕಾರಣವಾಗಿದೆ. ಇನ್ನೂ ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇವಿಯ ದರ್ಶನ ಭಾಗ್ಯ ಭಕ್ತರಿಗೆ ಸಿಕ್ಕಿಲ್ಲ.

ಇದನ್ನೂ ಓದಿ: KAS ಅಧಿಕಾರಿ ಸುಧಾ ಆಪ್ತೆ ಮನೆಯಲ್ಲಿ ಸಿಕ್ಕ ಹಣ, ಆಸ್ತಿ ಪತ್ರ ನೋಡಿ ಎಸಿಬಿ ಅಧಿಕಾರಿಗಳೇ ಶಾಕ್!

ದೇವಸ್ಥಾನಕ್ಕೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರ ಪದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸೋದು ವಾಡಿಕೆಯಾಗಿದೆ. ಹೀಗಾಗಿ ಬೇರೆ ರಾಜ್ಯಗಳಿಂದ ಬರೋ ಭಕ್ತರಿಂದ ಕೊರೊನಾ ಸೋಂಕು ಹರಡಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದೆ. ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧವಿದ್ದರೂ, ದೇವಿಗೆ ಮಾತ್ರ ಎಂದಿನಂತೆ ಪೂಜೆ, ಅರ್ಚನೆ, ಅಭಿಷೇಕಗಳು ನಡೆಯುತ್ತಿವೆ. ಇದಕ್ಕಾಗಿ ಪೂಜಾರಿಗಳು ನಿತ್ಯ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
Youtube Video

ದೇವಸ್ಥಾನ ಕಳೆದ 8 ತಿಂಗಳಿಂದ ಬಂದ್ ಆಗಿದ್ದು, ಭಕ್ತರನ್ನು ನಂಬಿಕೊಂಡು ಹಾಕಲಾಗಿದ್ದ ಅಂಗಡಿಗಳ ಕುಟುಂಬಗಳಿಗೆ ದೊಡ್ಡ ಮಟ್ಟದಲ್ಲಿ ಸಂಕಷ್ಟ ಎದುರಾಗಿದೆ. ಇವರಿಗೆ ಯಾವುದೇ ಪರಿಹಾರ ಇಲ್ಲದೇ ಬೇರೆಡೆ ಹೋಗಿ ಕೆಲಸ ಮಾಡುವ ಸ್ಥಿತಿ ಸದ್ಯ ನಿರ್ಮಾಣವಾಗಿದೆ. ಸರ್ಕಾರದಿಂದ ನಮಗೂ ಪರಿಹಾರ ನೀಡಬೇಕು ಎಂದು ಇಲ್ಲಿನ ವ್ಯಾಪಾರಿಗಳ ಆಗ್ರಹವಾಗಿದೆ. ಹೊಟ್ಟೆಪಾಡಿಗಾಗಿ ಇದೀಗ ಇಲ್ಲಿನ ಜನ ಅನಿವಾರ್ಯವಾಗಿ ಬೇರೆ ಕೆಲಸ ಮಾಡೊ ಸ್ಥಿತಿ ನಿರ್ಮಾಣವಾಗಿದೆ.
Published by: Sushma Chakre
First published: November 9, 2020, 7:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories