HOME » NEWS » State » BELAGAVI SAUNDATTI YELLAMMA TEMPLE WILL BE OPEN FROM TODAY TO DEVOTEES AFTER 10 MONTHS SCT

10 ತಿಂಗಳ ಬಳಿಕ ಇಂದಿನಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನ ಓಪನ್

Saundatti Yellamma Temple: ಕೊರೊನಾ ಹಾವಳಿ ಕ್ರಮೇಣ ತಗ್ಗಿದ್ದರೂ ಭಕ್ತರ ಹಿತದೃಷ್ಟಿಯಿಂದ ಸವದತ್ತಿ ಯಲ್ಲಮ್ಮನ ದೇವಸ್ಥಾನ ಓಪನ್ ಮಾಡಿರಲಿಲ್ಲ. ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನ 10 ತಿಂಗಳ ಬಳಿಕ ಇಂದಿನಿಂದ ಭಕ್ತರಿಗೆ ಮುಕ್ತವಾಗಿದೆ. 

news18-kannada
Updated:February 1, 2021, 1:47 PM IST
10 ತಿಂಗಳ ಬಳಿಕ ಇಂದಿನಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನ ಓಪನ್
ಸವದತ್ತಿ ಯಲ್ಲಮ್ಮ ದೇವಸ್ಥಾನ
  • Share this:
ಬೆಳಗಾವಿ (ಫೆ. 1): ಆದಿಶಕ್ತಿ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ಲಕ್ಷಾಂತರ ಭಕ್ತರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಕಿಲ್ಲರ್ ಕೊರೊನಾ ಪರಿಣಾಮದಿಂದ 10 ತಿಂಗಳು ಬಂದ್ ಆಗಿದ್ದ ದೇವಸ್ಥಾನದ ಬಾಗಿಲು ಇಂದಿನಿಂದ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದೆ. ಯಲ್ಲಮ್ಮನ ದರ್ಶನಕ್ಕೆ ಬರುವ ಭಕ್ತರು ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ಮತ್ತು ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.

ದೇಶದೆಲ್ಲೆಡೆ ಕೊರೊನಾ ಹಾವಳಿ ಮಿತಿಮೀರಿತ್ತು. ಕೊರೊನಾಗೆ ಜನರು  ತತ್ತರಿಸಿ ಹೋಗಿದ್ದರು. ಮಾರಣಾಂತಿಕ ಕೊರೊನಾದಿಂದ ದೇಶದಾದ್ಯಂತ ಲಾಕ್ ಡೌನ್ ಜಾರಿ ಮಾಡಿದ್ದರಿಂದ  ಬೆಳಗಾವಿ ಜಿಲ್ಲೆ ಸವದತ್ತಿಯ ಸುಪ್ರಸಿದ್ಧ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನ ಸಹ ಬಂದ್ ಮಾಡಲಾಗಿತ್ತು. ಕೊರೊನಾ ಹಾವಳಿ ಕ್ರಮೇಣ ತಗ್ಗಿದ್ದರೂ ಭಕ್ತರ ಹಿತದೃಷ್ಟಿಯಿಂದ ಸವದತ್ತಿ ಯಲ್ಲಮ್ಮನ ದೇವಸ್ಥಾನ ಓಪನ್ ಮಾಡಿರಲಿಲ್ಲ. ಈಗ ಕೊರೊನಾ ನಿಯಂತ್ರಣ ಕ್ಕೆ ಬಂದಿದ್ದು, ಮೇಲಾಗಿ ಕೊರೊನಾಗೆ ಲಸಿಕೆ ಬಂದಿದ್ದರಿಂದ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನ 10 ತಿಂಗಳ ಬಳಿಕ ಭಕ್ತರಿಗೆ ಮುಕ್ತವಾಗಿದೆ.  ಇಂದಿನಿಂದ ಸಾರ್ವಜನಿಕರಿಗೆ ಆದಿಶಕ್ತಿ ದರ್ಶನಕ್ಕೆ ಬೆಳಗಾವಿ ಡಿಸಿ ಡಾ. ಎಂ.ಜಿ.ಹಿರೇಮಠ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Gold Silver Price: ಬೆಂಗಳೂರಿನಲ್ಲಿ ದಾಖಲೆ ಮಟ್ಟಕ್ಕೇರಿದ ಬೆಳ್ಳಿ ದರ; ಚಿನ್ನದ ಬೆಲೆಯಲ್ಲೂ ಏರಿಕೆ

ಇದು ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿ ದೇಶ, ವಿದೇಶದಲ್ಲಿ ಇರುವ ಅಸಂಖ್ಯಾತ ಭಕ್ತರಿಗೆ ಖುಷಿ ತಂದಿದೆ. ಭಕ್ತರು ಕಡ್ಡಾಯವಾಗಿ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ದೇವಿ ದರ್ಶನ ಪಡೆಯಬೇಕೆಂದ್ರೆ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಲೇಬೇಕು.  ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜೆರ್ ಸೇರಿದಂತೆ  ಕೋವಿಡ್ ನಿಯಮ  ಪಾಲಿಸಬೇಕು. ಜೊತೆಗೆ ಸಾಮಾಜಿಕ ಅಂತರದ ಬಾಕ್ಸ್  ಸೇರಿದಂತೆ ಕೊರೊನಾ ನಿಯಮ ಪಾಲಿಸಬೇಕು.
Youtube Video

ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಜಾತ್ರೆ, ಉತ್ಸವ ಗಳಿಗೆ ಭಕ್ತರ ಪ್ರದೇಶವನ್ನು ನಿರ್ಬಂಧಿಸಲಾಗಿದೆ. ದೇವಸ್ಥಾನ ಸಿಇಒ ರವಿ ಕೋಟಾರಗಸ್ತಿ ನೇತೃತ್ವದಲ್ಲಿ ದೇವಸ್ಥಾನ ಕ್ಕೆ ಬರುವ ಭಕ್ತರ ಸುರಕ್ಷಿತೆಗೆ ಆದ್ಯತೆ ನೀಡಲಾಗುತ್ತಿದೆ. ಯಲ್ಲಮ್ಮನ  ದೇವಿ ದರ್ಶನಕ್ಕೆ  ಹಂಬಲಿಸುವ ಭಕ್ತರಿಗೆ ಯಲ್ಲಮ್ಮ ದೇವಿ ದರ್ಶನದ ಭಾಗ್ಯ ಸಿಕ್ಕಿದೆ. ಆದಿಶಕ್ತಿ ದರ್ಶನ ಪಡೆಯಲು ಭಕ್ತರು ಸಿದ್ಧರಾಗಿದ್ದಾರೆ.
Published by: Sushma Chakre
First published: February 1, 2021, 1:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories