• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Belagavi Politics: ಲಖನ್ ಜಾರಕಿಹೊಳಿ ಬೆಂಬಲ ನಮಗೆ ಬೇಕಿಲ್ಲ; ಉಮೇಶ್ ಕತ್ತಿ ಖಡಕ್ ಮಾತು

Belagavi Politics: ಲಖನ್ ಜಾರಕಿಹೊಳಿ ಬೆಂಬಲ ನಮಗೆ ಬೇಕಿಲ್ಲ; ಉಮೇಶ್ ಕತ್ತಿ ಖಡಕ್ ಮಾತು

ಉಮೇಶ್ ಕತ್ತಿ ಮತ್ತು ಲಖನ್ ಜಾರಕಿಹೊಳಿ

ಉಮೇಶ್ ಕತ್ತಿ ಮತ್ತು ಲಖನ್ ಜಾರಕಿಹೊಳಿ

ಲಖನ್ ಹೇಳಿಕೆಗೆ ಟಾಂಗ್ ಕೊಟ್ಟಿರೋ ಸಚಿವ ಉಮೇಶ್ ಕತ್ತಿ,  ಲಖನ್ ಜಾರಕಿಹೊಳಿ ಬೆಂಬಲ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ಹೇಳುವ ಮೂಲಕ ಜಾರಕಿಹೊಳಿ ಸಹೋದರರಿಗೆ ಟಾಂಗ್ ನೀಡಿದ್ದಾರೆ.

  • Share this:

ಬೆಳಗಾವಿ: ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ (Election) ನಡೆಯುತ್ತಿದೆ. ಚುನಾವಣೆ ಎದುರಿಸಲು ಕಾಂಗ್ರೆಸ್, ಬಿಜೆಪಿ (Congress And BJP) ಒಗ್ಗಟ್ಟಿನ ಮಂತ್ರ ಜಪಿಸಿದೆ. ಬೆಳಗಾವಿ (Belagavi) ಜಿಲ್ಲೆಯ ಬಿಜೆಪಿಯಲ್ಲಿ ಎಲ್ಲವೂ‌ ಸರಿಯಲ್ಲ ಎನ್ನುವುದು ಪದೇ ಪದೇ ಬಹಿರಂಗ ಆಗುತ್ತಿದೆ. ಕಳೆದ 6 ತಿಂಗಳ ಹಿಂದೆ ಸ್ಥಳೀಯ ಸಂಸ್ಥೆಗಳಿಂದ ಪರಿಷತ್ ನಡೆದ ಚುನಾವಣೆಯಲ್ಲಿ (Vidhanaparishat Election) ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ (Mahantesh Kavatagimutt) ಸೋತಿದ್ದರು. ಬಳಿಕ ಬೆಳಗಾವಿ ಜಿಲ್ಲೆಯ ಬಿಜೆಪಿಯಲ್ಲಿ  ಎರಡು ಬಣ ನಿರ್ಮಾಣವಾಗಿದ್ದು, ಪಕ್ಷದ ಮುಖಂಡರು ಏನಿಲ್ಲ ಮೇಲ್ನೋಟಕ್ಕೆ ಹೇಳುತ್ತಿದ್ದಾರೆ.


ಜಿಲ್ಲೆಯಲ್ಲಿ ಕತ್ತಿ, ಜಾರಕಿಹೊಳಿ ಬಣ ನಡುವೆ ಗುದ್ದಾಟ ಇನ್ನೂ ಮುಗಿದಿಲ್ಲ. ಇದಕ್ಕೆ ಸಾಕ್ಷಿಯಾಗಿದ್ದು ಸಚಿವ ಉಮೇಶ್ ಕತ್ತಿ ನೀಡಿರುವ ಹೇಳಿಕೆ. ಪಕ್ಷಕ್ಕೆ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಬೆಂಬಲದ ಅವಶ್ಯಕತೆ ಇಲ್ಲ ಎಂದು ಹೇಳಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.


ಮೇಲ್ನೋಟಕ್ಕೆ ಏನು ಇಲ್ಲ ಅಂತ ಹೇಳ್ತಿರೋ ನಾಯಕರು


ಜಿಲ್ಲೆಯ ರಾಜಕೀಯ ನಿರ್ಧಾರವಾಗೋದೆ ಡಿಸಿಸಿ ಬ್ಯಾಂಕ್ ಚುನಾವಣೆಯ ಆಧಾರದ ಮೇಲೆ. ಡಿಸಿಸಿ ಬ್ಯಾಂಕ್ ನಲ್ಲಿ ಜಾರಕಿಹೊಳಿ ಬಣದ ವಿರುದ್ಧ ಕತ್ತಿ, ಸವದಿ, ಜೊಲ್ಲೆ ಬಣ ಒಂದಾಗಿ ಹೋರಾಟ ನಡೆಸುತ್ತಿವೆ. ಜಿಲ್ಲೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಎಲ್ಲಾ ನಾಯಕರು ಹೇಳುತ್ತಾರೆ.


ಇದನ್ನೂ ಓದಿ:  Text Book Row: ಬಿಜೆಪಿ ಸರ್ಕಾರಕ್ಕೆ ಬೇಡವಾದ ವಿಷಯಗಳೇ ಪ್ರಮುಖವಾಗಿದೆ; ರಾಜ್ಯ ಒಕ್ಕಲಿಗರ ಸಂಘ


ಜಿಲ್ಲ ವಿಭಜನೆ ವಿಚಾರದಲ್ಲಿ ಪ್ರತ್ಯೇಕ ಕೂಗು


ಆದರೆ ಆಂತರಿಕವಾಗಿ ಬಣ ರಾಜಕೀಯ ಇನ್ನೂ ಮುಗಿದಿಲ್ಲ. ಜಾರಕಿಹೊಳಿ, ಕತ್ತಿ ಸಹೋದರರು ನಡುವೆ ವೈಮನಸ್ಸು ಮುಂದುವರಿದಿದೆ. ದಶಕಗಳ ಕಾಲ ಒಂದಾಗಿದ್ದ ಎರಡು ಬಣಗಳು ಈಗ ಪ್ರತ್ಯೇಕಗೊಂಡಿವೆ. ಜಿಲ್ಲೆ ವಿಭಜನೆ ವಿಚಾರದಲ್ಲಿ ಪರಸ್ಪರ ಹೋರಾಟದ ಕೂಗು ಕೇಳಿ ಬಂದಿದೆ.


ಉಮೇಶ್ ಕತ್ತಿ ವರ್ಸಸ್ ಜಾರಕಿಹೊಳಿ ಬ್ರದರ್ಸ್


ಸಚಿವ ಉಮೇಶ್ ಕತ್ತಿ, ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆಗೆ ಒತ್ತಾಯ ಮಾಡಿದ್ದಾರೆ. ಗೋಕಾಕ್ ಜಿಲ್ಲೆಗೆ ಪ್ರಬಲ ಲಾಭಿ‌ ಮಾಡುತ್ತಿರೋ ಜಾರಕಿಹೊಳಿ ಸಹೋದರರು. ಈ ವಿಚಾರದಲ್ಲಿ ಸಹ ಕತ್ತಿ, ಜಾರಕಿಹೊಳಿ ಬಣಗಳ ನಡುವೆ ಭಿನ್ನಪ್ರಾಯ ಮುಂದುವರೆದಿದೆ.


ಬೆಳಗಾವಿ ರಾಜಕಾರಣದಲ್ಲಿ ವಾಕ್ಸಮರ


ಜೂನ್13ಕ್ಕೆ ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದೆ. ಪರಿಷತ್ ಸದಸ್ಯ ಲಖನ್ ಜಾರಕಿಹೊಳಿಗೆ ಬಿಜೆಪಿಗೆ ಬೆಂಬಲ ವಿಚಾರ ಚರ್ಚೆ ಆಗಿದೆ. ಜಾರಕಿಹೊಳಿ ಸಹೋದರರು, ಕತ್ತಿ ಸಹೋದರ ಮಾತಿನ ಯುದ್ಧ ನಡೆಯುತ್ತಿದೆ.


ಬಿಜೆಪಿ ಬೆಂಬಲ ಎಂದ ಲಖನ್ ಜಾರಕಿಹೊಳಿ


ಲಖನ್ ಜಾರಕಿಹೊಳಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಅಥಣಿಯಲ್ಲಿ ಹೇಳಿಕೆ ನೀಡಿದ್ದ ಲಖನ್ ಜಾರಕಿಹೊಳಿ, ನಾನು ಪಕ್ಷೇತರ ಪರಿಷತ್ ಸದಸ್ಯನಾಗಿ ಮುಂದುವರೆಯುತ್ತೇನೆ. ಆದರೆ ನನ್ನ ಬೆಂಬಲ ಮಾತ್ರ ಬಿಜೆಪಿಗೆ ಎಂದಿದ್ದರು‌.


ಲಖನ್ ಹೇಳಿಕೆ ಉಮೇಶ್ ಕತ್ತಿ ಟಾಂಗ್


ಲಖನ್ ಹೇಳಿಕೆಗೆ ಟಾಂಗ್ ಕೊಟ್ಟಿರೋ ಸಚಿವ ಉಮೇಶ್ ಕತ್ತಿ,  ಲಖನ್ ಜಾರಕಿಹೊಳಿ ಬೆಂಬಲ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ಹೇಳುವ ಮೂಲಕ ಜಾರಕಿಹೊಳಿ ಸಹೋದರರಿಗೆ ಟಾಂಗ್ ನೀಡಿದ್ದಾರೆ.


ಇದನ್ನೂ ಓದಿ:  BC Nagesh: ದೇಶವನ್ನು ಇಟಲಿಕರಣ ಮಾಡಲು ಹೋಗ್ತಿಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಬಿ ಸಿ ನಾಗೇಶ್ ತಿರುಗೇಟು


ಬಿಜೆಪಿಯ 37 ಸದಸ್ಯರು ಪರಿಷತ್ ಸದಸ್ಯರು ನಮ್ಮ ಪಕ್ಷದ ಸದಸ್ಯರು ‌ಇದ್ದಾರೆ. ಇತ್ತೀಚೆಗೆ ನಾಲ್ಕು ಜನ ಹೊಸದಾಗಿ ಆಯ್ಕೆ ಆಗಿದ್ದಾರೆ. ನಮಗೆ ಬಹುಮತದ ಕೊರತೆ ಇಲ್ಲ. ಯಾರ ಬೆಂಬಲವು ನಮಗೆ ಬೇಕಾಗಿಲ್ಲ.‌ ಪಕ್ಷ ತೀರ್ಮಾನ ಮಾಡಿದ್ರೆ ನಾವೆಲ್ಲ ಬದ್ಧ. ಈ ಚುನಾವಣೆಯಲ್ಲಿ ನಾವೆಲ್ಲ 13 ಜನ ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದಿದ್ದಾರೆ.

First published: