• Home
  • »
  • News
  • »
  • state
  • »
  • Belagavi Politics: ಕಾಂಗ್ರೆಸ್ ಬಣ ರಾಜಕೀಯ; ಜಾರಕಿಹೊಳಿ ಸಹೋದರರಿಗೆ ಫಿರೋಜ್ ಸೇಠ್ ಟಾಂಗ್

Belagavi Politics: ಕಾಂಗ್ರೆಸ್ ಬಣ ರಾಜಕೀಯ; ಜಾರಕಿಹೊಳಿ ಸಹೋದರರಿಗೆ ಫಿರೋಜ್ ಸೇಠ್ ಟಾಂಗ್

ಸತೀಶ್ ಜಾರಕಿಹೊಳಿ ಮತ್ತು ಫಿರೋಜ್ ಸೇಠ್

ಸತೀಶ್ ಜಾರಕಿಹೊಳಿ ಮತ್ತು ಫಿರೋಜ್ ಸೇಠ್

ಫಿರೋಜ್ ಸೇಠ್ ಹಾಗೂ ಪರಿವಾರದವರಿಗೆ ಕೇವಲ ಒಂದೇ ಪಕ್ಷ ಇರೋದು ಅದು ಕಾಂಗ್ರೆಸ್ ಪಕ್ಷ. ನಾವು ಕೆಲವರು ಇಲ್ಲಿ, ಇನ್ನೂ ಕೆಲವರು ಅಲ್ಲಿ ಇಲ್ಲ ಎನ್ನುವ ಮೂಲಕ ಜಾರಕಿಹೊಳಿ ಸಹೋದರರಿಗೆ ಟಾಂಗ್ ಕೊಟ್ಟರು.

  • Share this:

ಬೆಳಗಾವಿ: ರಾಜ್ಯದಲ್ಲಿ ಮುಂದಿನ ಚುನಾವಣೆಗೆ (Assembly Election 2023) ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಭರ್ಜರಿ ತಯಾರಿಯನ್ನು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರೋ ಮಾಜಿ ಶಾಸಕರು, ಮುಖಂಡರು ಚುನಾವಣೆಗೆ ಸ್ಪರ್ಧೆಗೆ ಸಿದ್ದತೆಯನ್ನು ನಡೆಸಿದ್ದಾರೆ. ಈ ನಡುವೆ ಕಾಂಗ್ರೆಸ್ (Congress) ಪಕ್ಷಕ್ಕೆ ರಾಜ್ಯದ ಎಲ್ಲಾ ಜಿಲ್ಲೆ, ವಿಧಾನಸಭೆ ಕ್ಷೇತ್ರದಲ್ಲಿ ಬಣ ರಾಜಕೀಯ ತಲೆನೋವು ಆಗಿದೆ. ಇತ್ತೀಚಿಗೆ ಬೆಳಗಾವಿ ನಗರದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಸಭೆ ನಡೆಯಿತು. ಸಭೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಪಾಲ್ಗೊಂಡಿದ್ದರು. ಆದರೆ ಸಭೆಗೆ ಸ್ಥಳೀಯ ಮಾಜಿ ಶಾಸಕ ಫಿರೋಜ್ ಸೇಠ್ (Firoz Saith) ಹಾಗೂ ನಗರ ಘಟಕದ ಅಧ್ಯಕ್ಷ ರಾಜು ಸೇಠ್ (Raju Saith) ಆಹ್ವಾನ ನೀಡಿರಲಿಲ್ಲ. ಇದು ನಗರ ಕಾಂಗ್ರೆಸ್ ನಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಸೇಠ್ ಬಣ ರಾಜಕೀಯ ಮತ್ತೊಮ್ಮೆ ಬಹಿರಂಗವಾಗಿತ್ತು.


ಈ ಬಗ್ಗೆ ಬಹಿರಂಗವಾಗಿ ಮಾತನಾಡಿರೋ ಮಾಜಿ ಶಾಸಕ ಫಿರೋಜ್ ಸೇಠ್, ಮುಂದಿನ ಚುನಾವಣೆಯಲ್ಲಿ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ನಾನೇ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸೇಠ್ ಪರಿವಾರ ಒಂದು ಪಕ್ಷಕ್ಕೆ ನಿಷ್ಠವಾಗಿದೆ. ಅರ್ಧ ಜನ ಅಲ್ಲಿ ಇನ್ನರ್ಧ ಜನ  ಇಲ್ಲಿ ಇಲ್ಲ ಎಂದು ಜಾರಕಿಹೊಳಿ ಸಹೋದರರಿಗೆ ಟಾಂಗ್ ನೀಡಿದ್ದಾರೆ.


ಕಳೆದ ಚುನಾವಣೆಯಲ್ಲಿ ಹಳಸಿದ ಸಂಬಂಧ


ಈ ಮೊದಲು ಸತೀಶ್ ಜಾರಕಿಹೊಳಿ ಹಾಗೂ ಸೇಠ್ ಸಹೋದರರ ನಡುವೆ ಉತ್ತಮ ಬಾಂಧ್ಯವ ಇತ್ತು. ಆದರೆ ಕಳೆದ ಚುನಾವಣೆ ಬಳಿಕ ಈ ಸಂಬಂಧ ಹಳಸಿದೆ. ಕಳೆದ ವರ್ಷ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇಬ್ಬರು ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಹೋರಾಟ ನಡೆಸಿದ್ದರು. ಇಬ್ಬರ ನಡುವಿನ ಪ್ರತಿಷ್ಠೆಯ ಫೈಟ್ ನಿಂದಲೇ 10 ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತ್ತಿದ್ದರು.


ಇದನ್ನೂ ಓದಿ: D K Shivakumar: ಸಿದ್ದರಾಮೋತ್ಸವದ ಬಗ್ಗೆ ತುಟಿ ಬಿಚ್ಚದ ಡಿಕೆಶಿ; ಹೀಗೆ ಹೇಳಿದ್ದು ಯಾಕೆ?


ಸೋಲಿನ ಬಳಿಕ ಸತೀಶ್ ಜಾರಕಿಹೊಳಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಕಾಂಗ್ರೆಸ್ ಹಿನ್ನಡೆಗೆ ನಮ್ಮದೇ ಪಕ್ಷದ ಮುಖಂಡನ ಅಸಹಕಾರ ಕಾರಣವಾಗಿದೆ. ಇಡೀ ಕಾಂಗ್ರೆಸ್ ನಮ್ಮ ಮನೆಯಲ್ಲಿರಬೇಕು. ನಾನು, ಬಳಿಕ ನನ್ನ ಮಗ, ನಂತರ ನನ್ನ ಮೊಮ್ಮಗ ಆಳಬೇಕು ಎನ್ನುವ ಮನಸ್ಥಿತಿಯನ್ನು ಹೊಂದಿದ್ದಾರೆ. ಹೀಗಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ.


ಸೇಠ್ ಹೆಸರು ಹೇಳದೇ ವಾಗ್ದಾಳಿ


ನಗರದಲ್ಲಿ ಯಾವುದೇ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ. ಬೆಳಗಾವಿ ನಗರದಲ್ಲಿ ನಾನೇ ನೇರವಾಗಿ ಪಕ್ಷ ಸಂಘಟನೆಗೆ ಎಂಟ್ರಿಯಾಗಿದ್ದಾನೆ. ಪಕ್ಷದ ಸಂಘಟನೆಗೆ ಮರು ಜೀವ ಕೊಡಲು ಪ್ರಯತ್ನ ಮಾಡುತ್ತೇನೆ. ಲೋಕಸಭೆ ಉಪಚುನಾವಣೆಯಲ್ಲಿ ಹಿನ್ನಡೆಯಾಗಲಿ ವ್ಯಕ್ತಿಯೇ ಕಾರಣ ಎಂದು ಸೇಠ್ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದರು.


ಆಗಸ್ಟ್ 3ರ ಬಳಿಕ ಸುದ್ದಿಗೋಷ್ಠಿ


ಬಣ ರಾಜಕೀಯ ಬಗ್ಗೆ ಮಾತನಾಡಿರೋ ಮಾಜಿ ಶಾಸಕ ಫಿರೋಜ್ ಸೇಠ್, ನಗರ ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲ ಇಲ್ಲ. ಜಮೀರ್ ಬಂದಿರೋದು ಸಿದ್ದರಾಮಯ್ಯ ಅಮೃತ ಮಹೋತ್ಸವ ಪೂರ್ವ ಸಿದ್ಧತೆ ಕಾರ್ಯಕ್ರಮಕ್ಕೆ. ನಮಗೆ ಅದರ ಬಗ್ಗೆ ಮಾಹಿತಿ ಇಲ್ಲ. ನಾನು ಫೋಟೋ ರಾಜಕೀಯ ಮಾಡಿಲ್ಲ. ವೇದಿಕೆ ಮೇಲೆ ಇದ್ದವರು ಕಾಂಗ್ರೆಸ್ ಹೌದೊ ಅಲ್ಲೋ ಗೊತ್ತಿಲ್ಲ. ಕೇವಲ 50 ಜನರು ಮಾತ್ರ ಇದ್ದರು. ಹಿರಿಯ ನಾಯಕ ಜಮೀರ್ ಅಹಮ್ಮದ್ ಗೌರವ ತರೋ ಕಾರ್ಯಕ್ರಮ ಅದಲ್ಲ. ಗೊಂದಲ ಬಗ್ಗೆ ಆಗಸ್ಟ್ 3ರ ಬಳಿಕ ನಾನು ಸುದ್ದಿಗೋಷ್ಠಿ ನಡೆಸಿ ಎಲ್ಲಾ ಗೊಂದಲಕ್ಕೆ ತೆರೆ ಎಳೆಯುತ್ತೇನೆ.


ನನ್ನನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ


ಜಿಲ್ಲೆಯುಲ್ಲಿ ಏನೇನೂ ಹೊಂದಾಣಿಕೆ ಆಗಿದ್ದೇ ಎಂಬುದು ಹೇಳುತ್ತೇನೆ. ನಾನು ಮುಂದಿನ ಚುನಾವಣೆಯಲ್ಲಿ ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ. ಸೇಠ್ ಹಾಗೂ ಜಾರಕಿಹೊಳಿ ಸಹೋದರರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನನ್ನನ್ನು ಯಾರು ಕಡೆಗಣಿಸುವ ಪ್ರಶ್ನೆಯೇ ಇಲ್ಲ.


ಇದನ್ನೂ ಓದಿ: Karnataka Politics: ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿ ಪೈಪೋಟಿಗೆ ಮತ್ತೊಂದು ಹೆಸರು ಸೇರ್ಪಡೆ: ಮಾಜಿ ಸಿಎಂ ಹೇಳಿದ್ದೇನು? 


ಫಿರೋಜ್ ಸೇಠ್ ಹಾಗೂ ಪರಿವಾರದವರಿಗೆ ಕೇವಲ ಒಂದೇ ಪಕ್ಷ ಇರೋದು ಅದು ಕಾಂಗ್ರೆಸ್ ಪಕ್ಷ. ನಾವು ಕೆಲವರು ಇಲ್ಲಿ, ಇನ್ನೂ ಕೆಲವರು ಅಲ್ಲಿ ಇಲ್ಲ ಎನ್ನುವ ಮೂಲಕ ಜಾರಕಿಹೊಳಿ ಸಹೋದರರಿಗೆ ಟಾಂಗ್ ಕೊಟ್ಟರು.

Published by:Mahmadrafik K
First published: