HOME » NEWS » State » BELAGAVI POLICE SEIZED DRUGS TODAY GNR

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ - ಅಪಾರ ಪ್ರಮಾಣದ ಗಾಂಜಾ ವಶ

ಬೆಳಗಾವಿ ಜಿಲ್ಲೆಗೆ ಬಹುತೇಕವಾಗಿ ಗಾಂಜಾ ಸೇರಿ ಮಾದಕ ವಸ್ತುಗಳು ಪಕ್ಕದ ಮಹಾರಾಷ್ಟ್ರದಿಂದಲೇ ಹೆಚ್ಚಾಗಿ ಸರಬರಾಜು ಮಾಡಲಾಗುತ್ತದೆ. ಬೆಳಗಾವಿ ಜಿಲ್ಲೆಗೆ ಅನೇಕ ಚಿಕ್ಕ ಚಿಕ್ಕ ಮಾರ್ಗಗಳ ಮೂಲಕ ಬೈಕ್​​ನಲ್ಲಿಯೇ ದುಷ್ಕರ್ಮಿಗಳು ಗಾಂಜಾವನ್ನು ಸಾಗಾಟ ಮಾಡುತ್ತಿದ್ದಾರೆ. ಇದೀಗ ತೀವ್ರವಾಗಿ ಕಾರ್ಯಾಚರಣೆಗೆ ಇಳಿದಿರೋ ಬೆಳಗಾವಿ ಪೊಲೀಸರು ಅನೇಕ ಆರೋಪಿಗಳನ್ನು ಬೆನ್ನು ಹತ್ತಿದ್ದಾರೆ.

news18-kannada
Updated:September 26, 2020, 6:27 PM IST
ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ - ಅಪಾರ ಪ್ರಮಾಣದ ಗಾಂಜಾ ವಶ
ಬೆಳಗಾವಿ ಪೊಲೀಸರ ಕಾರ್ಯಾಚರಣೆ
  • Share this:
ಬೆಳಗಾವಿ(ಸೆ.26): ರಾಜ್ಯದಲ್ಲಿ ಅನೇಕ ನಟ, ನಟಿಯರು ಡ್ರಗ್ಸ್ ಜಾಲದಲ್ಲಿ ಸಿಲುಕೊಂಡಿದ್ದಾರೆ. ಈ ವೇಳೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನಗರ ಹಾಗೂ ಜಿಲ್ಲಾ ಪೊಲೀಸರು ಗಾಂಜಾ ಸಾಗಾಟದ ಬೆನ್ನತ್ತಿದ್ದಾರೆ. 24 ಗಂಟೆಯಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಅಪಾರ ಪ್ರಮಾಣ ಗಾಂಜಾ, ನಗದು ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಂತರ್​ ರಾಜ್ಯ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಿಸಿಐಬಿ, ಮಾಳ ಮಾರುತಿ ಹಾಗೂ ಎಪಿಎಂಸಿ ಪೊಲೀಸರು ಪ್ರತ್ಯೇಕ ದಾಳಿಯನ್ನು ನಡೆಸಿದ್ದಾರೆ. ಗಾಂಜಾ ಮರಾಟ ಹಾಗೂ ಸಾಗಾಟದಲ್ಲಿ ತೊಡಗಿದ್ದ 13 ಜನರನ್ನು ಬಂಧಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಗಾಂಜಾ ವ್ಯಾಪರದಲ್ಲಿ ತೊಡಗಿದ್ದರು. ಬಂಧಿತರ ಪೈಕಿ ಬಹುತೇಕರು ಮಹಾರಾಷ್ಟ್ರ ಮೂಲದ ಆರೋಪಿಗಳು ಎಂಬುದು ಗಮನಾರ್ಹ.

ಬೆಳಗಾವಿ ಜಿಲ್ಲೆಗೆ ಬಹುತೇಕವಾಗಿ ಗಾಂಜಾ ಸೇರಿ ಮಾದಕ ವಸ್ತುಗಳು ಪಕ್ಕದ ಮಹಾರಾಷ್ಟ್ರದಿಂದಲೇ ಹೆಚ್ಚಾಗಿ ಸರಬರಾಜು ಮಾಡಲಾಗುತ್ತದೆ. ಬೆಳಗಾವಿ ಜಿಲ್ಲೆಗೆ ಅನೇಕ ಚಿಕ್ಕ ಚಿಕ್ಕ ಮಾರ್ಗಗಳ ಮೂಲಕ ಬೈಕ್​​ನಲ್ಲಿಯೇ ದುಷ್ಕರ್ಮಿಗಳು ಗಾಂಜಾವನ್ನು ಸಾಗಾಟ ಮಾಡುತ್ತಿದ್ದಾರೆ. ಇದೀಗ ತೀವ್ರವಾಗಿ ಕಾರ್ಯಾಚರಣೆಗೆ ಇಳಿದಿರೋ ಬೆಳಗಾವಿ ಪೊಲೀಸರು ಅನೇಕ ಆರೋಪಿಗಳನ್ನು ಬೆನ್ನು ಹತ್ತಿದ್ದಾರೆ.

ನಗರ ಪೊಲೀಸರು ಮೂರು ಪ್ರಕರಣಗಳಲ್ಲಿ 27 ಕೆಜಿಯಷ್ಟು ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ 4 ಲಕ್ಷಕ್ಕೂ ಅಧಿಕವಾಗಿದೆ. ಪ್ರಕರಣದಲ್ಲಿ ಬಂಧಿತವಾಗಿರೋ ಆರೋಪಿಗಳಿಂದ 11 ಮೊಬೈಲ್, 1 ಕಾರ್ ಹಾಗೂ
3 ಬೈಕ್ ಹಾಗೂ 15 ಸಾವಿರ ನಗದು ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿರೋ ಪೊಲೀಸರು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಬೆಳಗಾವಿ ಡಿಸಿಐಬಿ ಪೊಲೀಸ್ ಇನ್ಸ್​ಪೆಕ್ಟರ್​​​​ ನಿಂಗನಗೌಡ ನೇತೃತ್ವದಲ್ಲಿ ಬೃಹತ್ ದಾಳಿಯನ್ನು ಮಾಡಲಾಗಿದೆ. ಈ ವೇಳೆಯಲ್ಲಿ ಮಹಾರಾಷ್ಟ್ರದ ಮೀರಜ್ ಮೂಲಕ ಅಂತರ್​​ ರಾಜ್ಯ ಡ್ರಗ್ ಪೆಡ್ಲರ್​​​ನನ್ನು ಬಂಧಿಸಲಾಗಿದೆ. ಆರೋಪಿ ಆಶ್ಪಾಕ್ ಮುಲ್ಲಾ ಬಂಧಿಸಿ, 2 ಕೆಜಿ ತೂಕದ 60 ಗಾಂಜಾ ಚೀಲಗಳನ್ನು ವಶಕ್ಕೆ ಪಡೆಸಿಕೊಳ್ಳಲಾಗಿದೆ. ಆರೋಪಿ ಗಾಂಜಾ ಸಾಗಾಟಕ್ಕೆ ಬಳಕೆ ಮಾಡಿದ ಕಾರ್ ಬೈಕ್ ಸೇರಿ 28ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ಡ್ರಗ್ಸ್​ ಜಾಲದ ತನಿಖೆ; ಸತತ 6 ಗಂಟೆ ಕಾಲ ವಿಚಾರಣೆಗೆ ಹಾಜರಾಗಿ ತೆರಳಿದ ನಟಿ ದೀಪಿಕಾ ಪಡುಕೋಣೆಬೆಳಗಾವಿಗೆ ಮಹಾರಾಷ್ಟ್ರ ರಾಜ್ಯದಿಂದಲೇ ಮಾದಕ ವಸ್ತುಗಳ ಸಾಗಾಟ ಆಗೋದು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಹೀಗಾಗಿ ಗಡಿ ಭಾಗದಲ್ಲಿ ಹೆಚ್ಚಿನ ನಿಗಾವನ್ನು ಪೊಲೀಸರು ವಹಿಸಿದ್ದಾರೆ. ಮಾದಕ ವಸ್ತು ಸಾಗಾಟದ ಅನೇಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಅನೇಕ ಕಡೆಗಳಲ್ಲಿ ದಾಳಿ ಮಾಡಲು ಸಿದ್ದತೆಯನ್ನು ಮಾಡಿಕೊಂಡಿದ್ದಾರೆ.
Published by: Ganesh Nachikethu
First published: September 26, 2020, 6:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories