ಸೇನಾಧಿಕಾರಿ ಎಂದು ನಂಬಿಸಿ ನೂರಾರು ಜನರಿಗೆ ವಂಚಿಸಿದ ಆರೋಪಿ ಬಂಧನ
ಈತ ಸೇನಾಧಿಕಾರಿ ಎಂದು ಹೇಳಿ ಐದು ಜನ ಮಹಿಳೆಯರನ್ನು ಮದುವೆಯಾಗಿ ಕೈಕೊಟ್ಟಿರೋದು ಸದ್ಯ ಪೊಲೀಸರ ತನಿಖೆ ವೇಳೆಯಲ್ಲಿ ಬಯಲಾಗಿದೆ
news18-kannada Updated:November 12, 2020, 7:50 AM IST

ವಂಚಿಸಿದ ವ್ಯಕ್ತಿ
- News18 Kannada
- Last Updated: November 12, 2020, 7:50 AM IST
ಬೆಳಗಾವಿ(ನ.,9): ಸೇನಾಧಿಕಾರಿ ಎಂದು ನಂಬಿಸಿ ವ್ಯಕ್ತಿಯೊಬ್ಬ ಹಲವು ಜನರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ವಂಚನೆ ಪ್ರಕರಣ ಬಯಲಾಗಿದೆ. ಮಂಜುನಾಥ ಬಿರಾದಾರ್ ಎಂಬ ವ್ಯಕ್ತಿ ವಂಚಿಸಿದಾತ. ಆರೋಪಿ ಸೇನಾಧಿಕಾರಿ ಎಂದು ಹೇಳಿ ಹುತಾತ್ಮ ಸೈನಿಕರ ಕುಟುಂಬಗಳಿಗೆ ಹಣದ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಇದೇ ಹೆಸರನ್ನು ಬಳಸಿಕೊಂಡು ಐದು ಜನ ಮಹಿಳೆಯರನ್ನು ಮದುವೆಯಾಗಿ ಕೈಕೊಟ್ಟಿರೋದು ಸದ್ಯ ಪೊಲೀಸರ ತನಿಖೆ ವೇಳೆಯಲ್ಲಿ ಆರೋಪಿ ಬಾಯಿ ಬಿಟ್ಟಿದ್ದಾನೆ. ಮಂಜುನಾಥ ಬಿರಾದಾರ್ ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ನಿವಾಸಿ. ಈತ ಕಳೆದ ಅನೇಕ ವರ್ಷಗಳಿಂದ ತಾನು ಸೇನಾಧಿಕಾರಿ ಎಂದು ಹೇಳಿಕೊಂಡು ಓಡಾಡುತ್ತಿದ್ದ. ರಾಜ್ಯದ ಅನೇಕ ಕಡೆಗಳಲ್ಲಿ ಮೋಸ ಮಾಡಿರುವುದು ತಿಳಿದು ಬಂದಿದೆ.
ಈತ ಇತ್ತೀಚಿಗೆ ಬೆಳಗಾವಿಗೆ ಬಂದಿದ್ದು,. ಇಲ್ಲಿಯೂ ಸಹ ಸೇನಾಧಿಕಾರಿ ಸಮವಸ್ತ್ರದಲ್ಲಿ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದನು. ಇದನ್ನು ಗಮಿಸಿದ ಕೆಲವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ವಂಚನೆಯ ಜಾಲ ಪತ್ತೆಯಾಗಿದೆ. ಆರೋಪಿ ಮಂಜುನಾಥ ಬಿರಾದಾರ್, ಐದು ಜನರನ್ನು ಮದುವೆಯಾಗಿ ವಂಚನೆ ಮಾಡಿದ್ದು, ಇನ್ನೂ ಕೆಲ ಮಹಿಳೆಯರಿಗೆ ವಂಚನೆ ಮಾಡಿರು ಅನುಮಾನ ಸಹ ವ್ಯಕ್ತವಾಗಿದೆ. ಈ ಬಗ್ಗೆ ಕ್ಯಾಂಪ್ ಪೊಲೀಸರು ಹೆಚ್ಚಿನ ತನಿಖೆಯನ್ನು ಸಹ ನಡೆಸುತ್ತಿದ್ದಾರೆ. ವಂಚನೆಗೆ ಒಳಗಾಗಿದ್ದರೆ ಠಾಣೆಗೆ ಬಂದು ಮಾಹಿತಿ ನೀಡುವಂತೆ ಸಹ ಡಿಸಿಸಿ ವಿಕ್ರಮ ಅಮಟೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಇದನ್ನು ಓದಿ: ಬಾಗಿನ ರಾಜಕೀಯ: ಒಂದೇ ಕೆರೆಗೆ ಪ್ರತ್ಯೇಕವಾಗಿ ಬಾಗಿನ ಬಿಟ್ಟ ಕಾಂಗ್ರೆಸ್- ಜೆಡಿಎಸ್ ಶಾಸಕರು
ಜಿಲ್ಲೆಯ ಅನೇಕ ಗ್ರಾಮಗಳಿಗೆ ಹೋಗಿ ನಾನು ನಿವೃತ್ತ ಸೇನಾಧಿಕಾರಿ ಎಂದು ಹೇಳಿಕೊಂಡು ಪರಿಚಯ ಮಾಡಿಕೊಳ್ಳುತ್ತಿದ್ದನು. ನಂತರ ಹುತಾತ್ಮ ಯೋಧರ ಕುರಿತು ಕಾರ್ಯಕ್ರಮವನ್ನು ಆಯೋಜನೆ ಮಾಡಿ ಹಣದ ವಂಚನೆ ಮಾಡುತ್ತಿದ್ದನು. ಸದ್ಯ ಅನೇಕರು ಕ್ಯಾಂಪ್ ಪೊಲೀಸರನ್ನು ಸಂಪರ್ಕ ಮಾಡಿ ನಮಗೆ ವಂಚನೆ ಆಗಿದೆ ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ಪೊಲೀಸರು ಸಹ ತನಿಖೆಯನ್ನು ನಡೆಸುತ್ತಿದ್ದು, ಮತ್ತಷ್ಟು ವಂಚನೆ ಜಾಲ ಬಯಲಾಗೋ ಸಾಧ್ಯತೆ ಇದೆ. ಸೇನೆಯಲ್ಲಿ ನೌಕರಿ ಕೊಡಿಸುವುದಾಗಿಯೂ ಅನೇಕರಿಗೆ ನಾಮ ಹಾಕಿರೋ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನನಗೆ ಅಪ್ಪ, ಅಮ್ಮ ಯಾರು ಇಲ್ಲ ಅಂತ ಹೇಳಿ ಸಹ ಮದುವೆಯಾಗಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಕ್ಯಾಂಪ್ ಪೊಲೀಸರು ಇತನ ಬಗ್ಗೆ ಇನ್ನಷ್ಟು ತನಿಖೆಯನ್ನು ನಡೆಸುತ್ತಿದ್ದಾರೆ.
(ವರದಿ: ಚಂದ್ರಕಾಂತ್ ಸುಗಂಧಿ)
ಈತ ಇತ್ತೀಚಿಗೆ ಬೆಳಗಾವಿಗೆ ಬಂದಿದ್ದು,. ಇಲ್ಲಿಯೂ ಸಹ ಸೇನಾಧಿಕಾರಿ ಸಮವಸ್ತ್ರದಲ್ಲಿ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದನು. ಇದನ್ನು ಗಮಿಸಿದ ಕೆಲವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ವಂಚನೆಯ ಜಾಲ ಪತ್ತೆಯಾಗಿದೆ.