• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬೆಳಗಾವಿಯಲ್ಲಿ ಅಪಾರ ಪ್ರಮಾಣದ ಸ್ಪೋಟಕ ವಸ್ತು ಪತ್ತೆ; ಮೂವರು ಆರೋಪಿಗಳ ಬಂಧನ

ಬೆಳಗಾವಿಯಲ್ಲಿ ಅಪಾರ ಪ್ರಮಾಣದ ಸ್ಪೋಟಕ ವಸ್ತು ಪತ್ತೆ; ಮೂವರು ಆರೋಪಿಗಳ ಬಂಧನ

ಸ್ಪೋಟಕ ವಸ್ತುಗಳ ಪತ್ತೆ

ಸ್ಪೋಟಕ ವಸ್ತುಗಳ ಪತ್ತೆ

ನಿಯಮವನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಒಂದೇ ಲಾರಿಯಲ್ಲಿ ನಾಲ್ಕು ಲಕ್ಷ ಮೌಲ್ಯದ 6.67 ಲಕ್ಷ ಮೌಲ್ಯದ ಸ್ಪೋಟಕವನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಪೊಲೀಸರು ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ಬಳಿ ಡಾಬಾ ಬಳಿಯಲ್ಲಿ ನಿಂತಿದ್ದ ಲಾರಿಯನ್ನು ಪರಿಶೀಲನೆ ನಡೆಸಿದ್ದಾರೆ.

ಮುಂದೆ ಓದಿ ...
  • Share this:

ಬೆಳಗಾವಿ(ಮಾರ್ಚ್ 8): ರಾಜ್ಯದಲ್ಲಿ ಗುಡಿ ಬಂಡೆ ಹಾಗೂ ಹುಣಸೂಡಿನಲ್ಲಿ ಜಿಲೆಟಿನ್ ಸ್ಪೋಟಗೊಂಡು ಅನೇಕ ಜನ ಮೃತಪಟ್ಟಿದ್ದಾರೆ. ಈ ಪ್ರಕರಣ ಮಾಸುವ ಮುನ್ನವೇ ಬೆಳಗಾವಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಪೋಟಕ ವಸ್ತುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆ ದಾಳಿ ಮಾಡಿದ ಪೊಲೀಸರಿಗೆ ಅಪಾರ ಪ್ರಮಾಣ ಸ್ಟೋಟಕ ವಸ್ತುಗಳು ಪತ್ತೆಯಾಗಿದ್ದು, ಮತ್ತೆ ಆತಂಕವನ್ನು ಸೃಷ್ಠಿಸಿದೆ.


ರಾಜ್ಯದಲ್ಲಿ ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಿಲೆಟಿನ್ ಸ್ಪೋಟಗೊಂಡು ಸಾವು, ನೋವು ಸಂಭವಿಸಿದೆ. ಈ ಪ್ರಕರಣದ ಬೆನ್ನಲ್ಲೇ ರಾಜ್ಯಾದ್ಯಂತ ಪೊಲೀಸರು ಕಲ್ಲು ಗಣಿಗಾರಿಕೆ ಮೇಲೆ ಕಣ್ಣಿಟ್ಟಿದ್ದಾರೆ. ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಲ್ಲುಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಬೆಳಗಾವಿಯ ಡಾಬಾವೊಂದರ ಬಳಿ ನಿಂತಿದ್ದ ವಾಹನವನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ದೊಡ್ಡ ಶಾಕ್ ಕಾದಿತ್ತು. ಲಾರಿಯ ತುಂಬಾ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಈ ಬಗ್ಗೆ ತನಿಖೆಯನ್ನು ಆರಂಭಿಸಿದ್ದಾರೆ.


Health Tips: ಮುಖದ ಮೇಲಿನ ರಂಧ್ರಗಳ ನಿವಾರಣೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ..!


ನಿಯಮವನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಒಂದೇ ಲಾರಿಯಲ್ಲಿ ನಾಲ್ಕು ಲಕ್ಷ ಮೌಲ್ಯದ 6.67 ಲಕ್ಷ ಮೌಲ್ಯದ ಸ್ಪೋಟಕವನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಪೊಲೀಸರು ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ಬಳಿ ಡಾಬಾ ಬಳಿಯಲ್ಲಿ ನಿಂತಿದ್ದ ಲಾರಿಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆಯಲ್ಲಿ ಕೃತ್ಯ ಬಯಲಾಗಿದ್ದು, ಒಂಟು ಟ್ಯಾಂಕರ್ ಹಾಗೂ ಬುಲೆರೋ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ಆರಂಭಿಸಿದ್ದಾರೆ.


ಈ ಸ್ಟೋಟಕ ವಸ್ತುಗಳನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮ, ಗದಗ ಜಿಲ್ಲೆಯ ಶಿರಹಟ್ಟಿ ಹಾಗೂ ಹುಬ್ಬಳ್ಳಿ  ಕಡೆಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪ್ರಕರಣ ಸಂಬಂಧ ಮೂರು ಜನರನ್ನು ಬಂಧಿಸಲಾಗಿದೆ. ಚಿಕ್ಕೋಡಿ ತಾಲೂಕಿನ ಬೊಬಲವಾಡ ಗ್ರಾಮದ ರಾಯಪ್ಪ ಲಕೋಟಿ, ರಾಜು ಶಿರಗಾಂವಿ, ಅರುಣ ಮಠದ ಬಂಧಿತ ಆರೋಪಿಗಳು. ಬಂಧಿತರ ವಿಚಾರಣೆಯಲ್ಲಿ ಪೊಲೀಸರು ಕೈಗೊಂಡಿದ್ದಾರೆ.


ವಶಕ್ಕೆ ಪಡೆದಕೊಂಡಿರುವ ಸ್ಪೋಟಕ ವಸ್ತುಗಳನ್ನು ನಿಂಗಾನಟ್ಟಿ ಗ್ರಾಮದ ಸ್ಪೋಟಕ ಮ್ಯಾಗಜೀನ್ ನಲ್ಲಿ ಇರಿಸಲಾಗಿದೆ.  ಈ ಬಗ್ಗೆ ನಗರ ಪೊಲೀಸ ಆಯುಕ್ತರು ಹಾಗೂ ಡಿಸಿಪಿ ಕಾಕತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಳ್ಳೂರ್ ಅವರನ್ನು ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಪ್ರಕರಣ ತನಿಖೆ ನಂತರ ಯಾವೆಲ್ಲಾ ಸತ್ಯ ಹೊರ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

top videos
    First published: