ಸಂಚಾರಿ ನಿಮಯ ಉಲ್ಲಂಘನೆಗೆ ಭಾರೀ ದಂಡ: ತಿಂಗಳಾದರೂ ಫೈನ್​​​ ಕಟ್ಟದ ಸವಾರರು; ಬೈಕ್​​ ಕಾಯುತ್ತಿರುವ ಪೊಲೀಸರು

ಕಳೆದ ಒಂದು ತಿಂಗಳ ಅವಧಿಯಲ್ಲಿ ಕುಡಿದು ವಾಹನ ಚಲಾವಣೆ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸಾಕಷ್ಟು ಮಂದಿಗೆ ಪೊಲೀಸರು 10ರಿಂದ 12 ಸಾವಿರತನಕ ದಂಡ ವಿಧಿಸಿದ್ಧಾರೆ. ದಂಡ ಕಟ್ಟಿ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಬೇಕಿದ್ದ ಮಾಲೀಕರು ಹೀಗೆ ಕಟ್ಟುವುದು ಎಂದು ಸುಮ್ಮನಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ(ಫೆ.03): ಭಾರತೀಯ ಮೊಟರ್ ಕಾಯ್ದೆಯ ಹೊಸ ನಿಯಮಾವಳಿಗಳ ಪ್ರಕಾರ ಸಂಚಾರಿ ದಂಡದ ಮೊತ್ತ ಹೆಚ್ಚು ಮಾಡಲಾಗಿದೆ. ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಸವಾರರಿಗೆ ದಂಡ ವಿಧಿಸುವ ಕೆಲಸ ಬೆಳಗಾವಿ ಪೊಲೀಸರು ಮಾಡುತ್ತಿದ್ಧಾರೆ. ಆದರೆ, ಹೀಗೆ ಸಾವರರಿಗೆ ಭಾರೀ ಪ್ರಮಾಣದಲ್ಲಿ ದಂಡ ಹಾಕುವುದೇ ಪೊಲೀಸರಿಗೆ ತಲೆನೋವಾಗಿ ಮಾರ್ಪಟ್ಟಿದೆ. 

ಹೌದು, ಸಂಚಾರಿ ನಿಯಮ ಉಲ್ಲಂಘಿಸಿದವರು ಹಾಕಿದ ದಂಡವೂ ಕಟ್ಟುತ್ತಿಲ್ಲ. ಪೊಲೀಸರ ವಶದಲ್ಲಿರುವ ತಮ್ಮ ವಾಹನವೂ ವಾಪಸ್ ತೆಗೆದುಕೊಂಡು ಹೋಗುವ ಮನಸ್ಸು ಮಾಡುತ್ತಿಲ್ಲ. ಬೆಳಗಾವಿ ನಗರದಲ್ಲಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಸವಾರರ ಹಿಡಿದು ದಂಡ ಹಾಕುತ್ತಿದ್ದಾರೆ. ನಿತ್ಯವೂ ಹೀಗೆ ಸಾವಿರಾರು ವಾಹನಗಳ ತಪಾಸಣೆ ಮಾಡಿ ದಂಡ ಹಾಕುವ ಪೊಲೀಸರು ಈಗ ಸವಾರರ ಬೈಕುಗಳನ್ನು ಕಾಯುವ ಪರಿಸ್ಥಿತಿ ಬಂದಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಕುಡಿದು ವಾಹನ ಚಲಾವಣೆ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸಾಕಷ್ಟು ಮಂದಿಗೆ ಪೊಲೀಸರು 10ರಿಂದ 12 ಸಾವಿರತನಕ ದಂಡ ವಿಧಿಸಿದ್ಧಾರೆ. ದಂಡ ಕಟ್ಟಿ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಬೇಕಿದ್ದ ಮಾಲೀಕರು ಹೀಗೆ ಕಟ್ಟುವುದು ಎಂದು ಸುಮ್ಮನಿದ್ದಾರೆ. ಹಾಗೆಯೇ ಪೊಲೀಸರ ಬಳಿ ಬಿಟ್ಟ ವಾಹನಗಳನ್ನು ಇಲ್ಲಿಯವರೆಗೂ ತೆಗೆದುಕೊಂಡು ಹೋಗಲು ಯಾರು ಬರುತ್ತಿಲ್ಲ.

ಇದನ್ನೂ ಓದಿ: ಸೋನಿಯಾ ಗಾಂಧಿ ಅನಾರೋಗ್ಯ: ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲು

ಹೀಗೆ ಠಾಣೆಯ ಬಳಿಯೇ ಸವಾರರು ಬಿಟ್ಟು ಹೋಗಿರುವ 60ಕ್ಕೂ ಹೆಚ್ಚು ಬೈಕುಗಳನ್ನು ಪೊಲೀಸರು ಕಾಯಬೇಕಾಗಿದೆ. ಒಂದು ತಿಂಗಳು ಕಳೆದರೂ ಯಾರು ಬೈಕ್ ತೆಗೆದುಕೊಂಡು ಹೋಗಲು ಬರುತ್ತಿಲ್ಲ. ಈ ಕಾರಣಕ್ಕೆ ಪೊಲೀಸ್ ಠಾಣೆ ಮುಂಭಾಗದಲ್ಲೇ ಇರುವ ಬೈಕುಗಳು ಕಳುವಾಗಬಾರದು ಎಂದು ಸರಪಳಿ ಹಾಕಿ ಸೇಫ್​ ಮಾಡಲಾಗಿದೆ. ಫೈನ್​​ ಕಟ್ಟದ ಬೈಕ್​ ತೆಗೆದುಕೊಂಡು ಹೋಗದ ಕಾರಣ ಏನು ಮಾಡಬೇಕೆಂಬ ಗೊಂದಲ ಸ್ಥಿತಿಯಲ್ಲಿ ಪೊಲೀಸರಿದ್ದಾರೆ.
First published: