ಬೆಳಗಾವಿ ಪಾಲಿಕೆ ಫೈಟ್; ಖಾತೆ ತೆಗೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ

ಅಂತಿಮವಾಗಿ ಚುನಾವಣೆ ಕಣದಲ್ಲಿ 385 ಜನ ಅಭ್ಯರ್ಥಿಗಳು ಉಳಿದಿದ್ದಾರೆ. ಬಿಜೆಪಿ- 55, ಕಾಂಗ್ರೆಸ್- 45, ಆಮ್‌ ಆದ್ಮಿ- 27, ಜೆಡಿಎಸ್-11, ಎಂಐಎಂ- 7 ಉತ್ತಮ ಪ್ರಜಾಕೀಯ- 1, ಎಸ್ ಡಿ ಪಿ ಐ 1 ವಾರ್ಡ್ ನಲ್ಲಿ ಸ್ಪರ್ಧೆ ಮಾಡಿವೆ.

ಆಮ್‌ ಆದ್ಮಿ

ಆಮ್‌ ಆದ್ಮಿ

  • Share this:
ಬೆಳಗಾವಿ(ಆ.28): ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಕಣ ರಂಗೇರಿದೆ. ಸದ್ಯ ಪ್ರಚಾರದ ಅಬ್ಬರ ಆರಂಭವಾಗಿದ್ದು, ಅಂತಿಮವಾಗಿ ಕಣದಲ್ಲಿ 385 ಜನ ಅಭ್ಯರ್ಥಿಗಳು ಉಳಿದಿದ್ದಾರೆ. ಪಾಲಿಕೆಯ 58 ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದ್ದು, ಉಮೇದುವಾರಿಕೆ ವಾಪಸ್ ಪಡೆಯುವ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇನ್ನೂ ಬಿಜೆಪಿ, ಕಾಂಗ್ರೆಸ್ ಹಾಗೂ ಎಂಇಎಸ್ ನಡುವೆ ನೇರವಾದ ಹಣಾಹಣಿ ಇದೆ. ಜತಗೆ ಬೆಳಗಾವಿ ಖಾತೆ ಓಪನ್ ಮಾಡಲು ಎಎಪಿ ಸಹ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. 27 ವಾರ್ಡ್ ನಲ್ಲಿ ಎಎಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪಕ್ಷಗಳು  ಸ್ವೀಕಾರ ಮಾಡಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವ ಸಾಧಿಸುವ ತವಕ ಇದೆ. ಬೆಳಗಾವಿ ನಗರ ಎರಡು ಕ್ಷೇತ್ರದಲ್ಲಿ ಸದ್ಯ ಬಿಜೆಪಿ ಶಾಸಕರೇ ಇದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವ ಉಳಿಸಿಕೊಳ್ಳುವ‌ ಪ್ರಶ್ನೆಯಾಗಿದೆ. ಅಂತಿಮವಾಗಿ ಚುನಾವಣೆ ಕಣದಲ್ಲಿ 385 ಜನ ಅಭ್ಯರ್ಥಿಗಳು ಉಳಿದಿದ್ದಾರೆ. ಬಿಜೆಪಿ- 55, ಕಾಂಗ್ರೆಸ್- 45, ಆಮ್‌ ಆದ್ಮಿ- 27, ಜೆಡಿಎಸ್-11, ಎಂಐಎಂ- 7 ಉತ್ತಮ ಪ್ರಜಾಕೀಯ- 1, ಎಸ್ ಡಿ ಪಿ ಐ 1 ವಾರ್ಡ್ ನಲ್ಲಿ ಸ್ಪರ್ಧೆ ಮಾಡಿವೆ. ಇನ್ನೂ ಪಕ್ಷಗಳ ಅಭ್ಯರ್ಥಿಗಳಿಗೆ ಪಕ್ಷೇತತರು ಸಹ ದೊಡ್ಡ ಸವಾಲ್ ಆಗಿದ್ದಾರೆ. ಒಟ್ಟು 238 ಜನ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ‌.

ಇದನ್ನೂ ಓದಿ:Gold Price Today: ಆಭರಣ ಪ್ರಿಯರಿಗೆ ಶಾಕ್; ಇಂದು ದಿಢೀರ್​ ಏರಿಕೆ ಕಂಡ ಚಿನ್ನದ ಬೆಲೆ

ಬೆಳಗಾವಿಯಲ್ಲಿ ಖಾತೆ ತೆಗೆಯಲು ಪ್ರಯತ್ನ ಆರಂಭಿಸಿರೋ ಎಎಪಿ ಬೆಳಗಾವಿಯ 58 ವಾರ್ಡ್ ಪೈಕಿ 27 ವಾರ್ಡ್ ನಲ್ಲಿ ಅಭ್ಯರ್ಥಿಗಳು ಕಣಕ್ಕೆ ಇಳಿಸಿದೆ. ಸಮಾಜ ಸೇವೆ ಮಾಡಿರೋ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರೋ ಎಎಪಿ, ವಾರ್ಡ್ ನಂಬರ್ 30ರಲ್ಲಿ ಸಾಮಾನ್ಯ ವ್ಯಕ್ತಿ ರಾಮಚಂದ್ರ ಸುತಾರ್ ಕಣಕ್ಕೆ ಇಳಿಸಿದೆ‌. 2020ರಲ್ಲಿ ಬೆಸ್ಟ್ ಟೀಚರ್ ಎಂದು ಅವಾರ್ಡ್ ಪಡೆದ ಶಿಕ್ಷಕಿ ಎಎಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಾರ್ಡ್ ನಂಬರ್ 33ರಲ್ಲಿ ಶಿಕ್ಷಕಿ ಗುಲ್ತಾಜ್ ಖಾನ್ ಸ್ಪರ್ಧೆ ಮಾಡಿದ್ದಾರೆ.  ವಾರ್ಡ್ ನಂ. 29ರಲ್ಲಿ ರಾಣಿ ಚನ್ನಮ್ಮ ವಂಶಸ್ಥ ಮಹೇಂದ್ರ ದೇಸಾಯಿ ಸ್ಪರ್ಧೆ ಮಾಡಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖಂಡ ಬಿ ಟಿ ನಾಗಣ್ಣ  ಮಾತನಾಡಿ,  ಬೆಳಗಾವಿಯಲ್ಲಿ ನಾವು ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಚುನಾವಣೆ ಮಾಡಲ್ಲ. 5ಕೆಜಿ ಅಕ್ಕಿ ಉಚಿತ ಕೊಟ್ಟ ತಕ್ಷಣ ಬಡತನ ನಿರ್ಮೂಲನೆ ಆಗಲ್ಲ. ಬೆಳಗಾವಿ ಪಾಲಿಕೆಗೆ ಯಾರೊಬ್ಬರು ಆಯುಕ್ತರು ಬರುತ್ತಿಲ್ಲ. ಇಲ್ಲಿನ ಶಾಸಕರ ದರ್ಪಕ್ಕೆ ಅಧಿಕಾರಿಗಳು ಬೇಸತ್ತು ಹೊಗಿದ್ದಾರೆ.

ಇದನ್ನೂ ಓದಿ:Mysuru Gang Rape Case: ಮೈಸೂರಿಗೆ ದೌಡಾಯಿಸಿದ ಡಿಜಿಪಿ ಪ್ರವೀಣ್ ಸೂದ್; ಮಧ್ಯಾಹ್ನ ಮಹತ್ವದ ಸುದ್ದಿಗೋಷ್ಠಿ

ಶಾಸಕರು ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ಸುರಿದು ದರ್ಪ ತೋರಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿಗೆ 1 ಸಾವಿರ ಕೋಟಿ ಹಣ ಬಂದಿದೆ. ಸಾವಿರ ಕೋಟಿ ರೂಪಾಯಿ ಯಾವುದೇ ಅಭಿವೃದ್ಧಿಯಾಗಿಲ್ಲ. ಭ್ರಷ್ಟಾಚಾರದ ವಿರುದ್ಧ ಮುಂದೆ ಎಎಪಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ‌. ಸರಿಯಾಗಿ ತನಿಖೆಯಾದ್ರೆ ಇಬ್ಬರು ಶಾಸಕರು ಜೈಲು ಸೇಲಿದ್ದಾರೆ ಎಂಬುದು ನಮ್ಮ ಊಹೆ ಎಂದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: