ವೋಟೂ ಬ್ಯಾಡ, ಈ ಊರಿನ ಸಾವಾಸವೂ ಬೇಡ..! ಸಂಕಷ್ಟದಲ್ಲಿರುವ ಇಟ್ನಾಳ ಗ್ರಾಮದತ್ತ ಸುಳಿಯದ ಅಭ್ಯರ್ಥಿಗಳು, ಕಾರ್ಯಕರ್ತರು

ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹಳ್ಳಿಹಳ್ಳಿಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ. ಆದ್ರೇ ಆ ಒಂದು ಗ್ರಾಮಕ್ಕೆ ಯಾವೊಬ್ಬ ಕಾರ್ಯಕರ್ತರಾಗಲಿ ಅಭ್ಯರ್ಥಿಯಾಗಲಿ ವೋಟ್ ಕೇಳಲು ಹೋಗುತ್ತಿಲ್ಲ.

news18
Updated:April 16, 2019, 3:09 PM IST
ವೋಟೂ ಬ್ಯಾಡ, ಈ ಊರಿನ ಸಾವಾಸವೂ ಬೇಡ..! ಸಂಕಷ್ಟದಲ್ಲಿರುವ ಇಟ್ನಾಳ ಗ್ರಾಮದತ್ತ ಸುಳಿಯದ ಅಭ್ಯರ್ಥಿಗಳು, ಕಾರ್ಯಕರ್ತರು
ಇಟ್ನಾಳ್ ಗ್ರಾಮಸ್ಥರು
news18
Updated: April 16, 2019, 3:09 PM IST
ಬೆಳಗಾವಿ(ಏ. 16): ಮನೆಯ ಕಟ್ಟೆಯ ಮೇಲೆಯೇ ಸಲಾಯಿನ್ ಹಚ್ಚಿಕೊಂಡು ಚಿಕಿತ್ಸೆ ಪಡೆಯುತ್ತಿರುವುದು… ದೇವಸ್ಥಾನದಲ್ಲೇ ಮಲಗಿ ನೆಮ್ಮದಿ ಪಡೆದುಕೊಳ್ಳುತ್ತಿರುವುದು… ಒಂದು ನಿಮಿಷ ನಿಲ್ಲಲೂ ಆಗದೆ ಕಾಯಿಲೆಯಿಂದ ಒದ್ದಾಡುತ್ತಿರುವುದು… ಗ್ರಾಮದ ಯಾವುದೇ ಮನೆಗೆ ಹೋದ್ರೂ ಕಾಯಿಲೆಯಿಂದ ಬಳಲುತ್ತಿರುವುದು... ಈ ದೃಶ್ಯಗಳು ಇಲ್ಲಿ ಕಂಡುಬರುವುದು ಸಾಮಾನ್ಯ. ಈ ಗ್ರಾಮದ ಹೆಸರು ಇಟ್ನಾಳ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕೊನೆಯ ಹಳ್ಳಿ ಈ ಇಟ್ನಾಳ. ಕಳೆದ ಒಂದು ತಿಂಗಳಿಂದ ಈ ಗ್ರಾಮದಲ್ಲಿ ಮಾರಕ ಚಿಕೂನ್ ಗುನ್ಯಾ ಕಾಯಿಲೆ ಎಡೆ ಎತ್ತಿದೆ. ಪ್ರತಿಯೊಂದು ಮನೆಯಲ್ಲೂ ಈ ಕಾಯಿಲೆಯಿಂದ ಬಳಲುತ್ತಿರುವ ಇಬ್ಬರು ಅಥವಾ ಮೂರು ಜನರಿದ್ದಾರೆ. ಚಿಕಿತ್ಸೆ ಪಡೆದುಕೊಂಡರೂ ಕೂಡ ಕಾಯಿಲೆ ಮಾತ್ರ ಕಮ್ಮಿಯಾಗುತ್ತಿಲ್ಲವಂತೆ.

ಕಳೆದ ಹದಿನೈದು ದಿನಗಳಿಂದ ಆರೋಗ್ಯ ಇಲಾಖೆಯ ಗಮನಕ್ಕೂ ತಂದಾಗ ವೈದ್ಯರು ಒಂದು ವಾರದ ಹಿಂದೆ ಬಂದು ಹೋದವರು ಮತ್ತೆ ವಾಪಾಸ್ ಬಂದೇ ಇಲ್ಲವಂತೆ. ಸದ್ಯ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕೂಡ ಇಲ್ಲಿ ಜನ ಈ ಚಿಕೂನ್ ಗುನ್ಯಾ ಕಾಯಿಲೆಯಿಂದ ಒದ್ದಾಡುತ್ತಿದ್ದಾರೆ. ಎದ್ದು ಓಡಾಡಲು ಕೂಡ ಆಗದ ಸ್ಥಿತಿ ಇದ್ದದ್ದರಿಂದ ಅನಿವಾರ್ಯವಾಗಿ ಗ್ರಾಮದಲ್ಲಿರುವ ಆರ್.ಎಂ.ಪಿ ಡಾಕ್ಟರ್​ಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರವರ ಮನೆಯಲ್ಲೇ ಸಲಾಯಿನ್ ಹಚ್ಚಿಕೊಂಡು ಔಷಧಿ ಪಡೆಯುತ್ತಿದ್ದರೂ ಕಾಯಿಲೆ ಮಾತ್ರ ಕಮ್ಮಿಯಾಗುತ್ತಿಲ್ಲ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಇದನ್ನೂ ಓದಿ: 'ಗೊಣ್ಣೆ ಸುರಿಸಿಕೊಂಡು ನಿಂತಿದ್ದ ರೇವಣ್ಣನನ್ನು ಡೈರಿ ಅಧ್ಯಕ್ಷನನ್ನಾಗಿ ಮಾಡಿದ್ದೆ ನಾನು'; ಎ. ಮಂಜು ಲೇವಡಿ

ಇಡೀ ಊರಿಗೆ ಊರೇ ಕಾಯಿಲೆಯಿಂದ ಬಳಲುತ್ತಿರುವುದರಿಂದ ಈ ಗ್ರಾಮಕ್ಕೆ ಚುನಾವಣೆಯ ಕಾವು ಕೂಡ ತಟ್ಟುತ್ತಿಲ್ಲ. ವಿಪರ್ಯಾಸ ಅಂದರೆ, ಇಲ್ಲಿ ವೋಟ್ ಕೇಳಲು ಹೋದರೆ ನಮಗೂ ತೊಂದರೆ ಆಗಬಹುದು ಎಂದುಕೊಂಡಿರುವ ವಿವಿಧ ಪಕ್ಷದ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಕೂಡ ಇಟ್ನಾಳ ಗ್ರಾಮದತ್ತ ಸುಳಿಯುತ್ತಿಲ್ಲ.

ನಾಲ್ಕು ದಿನಗಳ ಹಿಂದೆ ಗ್ರಾಮದಲ್ಲಿ ಬಸವೇಶ್ವರ ದೇವರ ಜಾತ್ರೆ ನಡೆದಿದ್ದು, ಆ ಜಾತ್ರೆಗೂ ಯಾವ ಬೀಗರು ಬಿಜ್ಜರು ಕೂಡ ಬರಲಿಲ್ಲವಂತೆ. ಇಡೀ ಗ್ರಾಮದಲ್ಲಿ ಸುಮಾರು ಐದನೂರಕ್ಕೂ ಅಧಿಕ ಜನ ಈ ಚಿಕೂನ್ ಗುನ್ಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈಗಾಗಲೇ ಗ್ರಾಮಪಂಚಾಯಿತಿ ಅಧಿಕಾರಿಗಳಿಂದ ಹಿಡಿದು ಶಾಸಕರು ಹಾಗೂ ಆರೋಗ್ಯ ಇಲಾಖೆಯ ಗಮನಕ್ಕೂ ತಂದಿದ್ದರೂ, ಯಾರು ಕೂಡ ಇವರ ಸಮಸ್ಯೆಗೆ ಸ್ಪಂದನೆ ಮಾಡುತ್ತಿಲ್ಲ.

ಇದನ್ನೂ ಓದಿ: ಉತ್ತರ ಪ್ರದೇಶ ಆಯ್ತು, ದಿಲ್ಲಿಯಲ್ಲೂ ಬಿಜೆಪಿ ಗೆಲುವಿಗೆ ದಾರಿ: ಕಾಂಗ್ರೆಸ್ ಮೈತ್ರಿ ಲೆಕ್ಕಾಚಾರಕ್ಕೆ ಆಮ್ ಆದ್ಮಿ ಗರಂ
Loading...

ಈ ಕಾಯಿಲೆ ನೀರಿನಿಂದ ಬರುತ್ತಿದೆಯೋ ಅಥವಾ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದ್ದರಿಂದ ಬರುತ್ತಿದೆಯೋ ಎಂಬುದು ಕೂಡ ಗ್ರಾಮಸ್ಥರಿಗೆ ಗೊತ್ತಾಗುತ್ತಿಲ್ಲ. ಇದನ್ನ ಪತ್ತೆ ಹಚ್ಚಿ ಇದಕ್ಕೆ ಬೇಕಾದ ಪೂರಕ ಕ್ರಮಗಳನ್ನ ತೆಗೆದುಕೊಂಡು ಗ್ರಾಮಸ್ಥರನ್ನ ಕಾಯಿಲೆಯಿಂದ ಬಚಾವ್ ಮಾಡಬೇಕಿದ್ದ ಆರೋಗ್ಯ ಇಲಾಖೆಯವರು ಕೂಡ ಇತ್ತ ಸುಳಿಯದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ...

ಒಂದು ತಿಂಗಳಿಂದ ಗ್ರಾಮಸ್ಥರು ಕಾಯಿಲೆಯಿಂದ ಬಳಲುತ್ತಿದ್ದರೂ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇತ್ತ ಲೋಕಸಭೆ ಚುನಾವಣೆಗೆ ಒಂದೊಂದು ಮತ ಮುಖ್ಯ ಎನ್ನುವ ಪಕ್ಷಗಳು ಇಡೀ ಗ್ರಾಮದಲ್ಲಿ ಕಾಯಿಲೆ ಇದೆ ಎಂಬ ಕಾರಣಕ್ಕೆ ಈ ಗ್ರಾಮದತ್ತ ಸುಳಿಯದಿರುವುದು ಎಷ್ಟರ ಮಟ್ಟಿಗೆ ಕಾಯಿಲೆ ಎಫೆಕ್ಟ್ ಆಗಿದೆ ಎಂಬುದು ಗೊತ್ತಾಗುತ್ತೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಗ್ರಾಮದ ಜನರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕಿದೆ.

(ವರದಿ: ಚಂದ್ರಕಾಂತ ಸುಗಂಧಿ)
First published:April 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626