• Home
  • »
  • News
  • »
  • state
  • »
  • Ramzan: ರಂಜಾನ್​ ವೇಳೆ 1 ತಿಂಗಳ ಕಠಿಣ ಉಪವಾಸ ಮಾಡಿದ 6 ವರ್ಷದ ಬಾಲಕಿ!

Ramzan: ರಂಜಾನ್​ ವೇಳೆ 1 ತಿಂಗಳ ಕಠಿಣ ಉಪವಾಸ ಮಾಡಿದ 6 ವರ್ಷದ ಬಾಲಕಿ!

ಉಪವಾಸ ಆಚರಣೆ ಮಾಡಿದ  ಆಯಿಷಾ

ಉಪವಾಸ ಆಚರಣೆ ಮಾಡಿದ ಆಯಿಷಾ

ಪ್ರತಿದಿನ ನಸುಕಿನ ಜಾವ 4 ಗಂಟೆಗೆ ತಂದೆ-ತಾಯಿ ಜೊತೆಗೆ ಎದ್ದೇಳುವ ಬಾಲಕಿ ಆಯಿಷಾ, ಮನೆಯವರ ಜೊತೆ ಪ್ರಾರ್ಥನೆ ಸಲ್ಲಿಸುತ್ತಾಳೆ.

  • Share this:

ಬೆಳಗಾವಿ (ಮೇ 25): ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಒಂದು ಹನಿ ನೀರು ಕುಡಿಯದೆ ಮುಸ್ಲಿಂ ಬಾಂಧವರು  ಕಟ್ಟುನಿಟ್ಟಾದ ಉಪವಾಸ ಪಾಲನೆ ಮಾಡುತ್ತಾರೆ. ಇಂತಹ ಕಠಿಣ ಉಪವಾಸ ಒಂದು ತಿಂಗಳವರೆಗೆ ಮಾಡೋದು ದೊಡ್ಡವರಿಗೂ ಸಹ ಕಷ್ಟವಾಗುತ್ತದೆ. ಆದರೆ, ಇಂತಹ ಕಠಿಣ ಉಪವಾಸವನ್ನು ಒಂದು ತಿಂಗಳವರೆಗೆ ಆಚರಿಸುವ ಮೂಲಕ  ಗೋಕಾಕ್ ನಗರದ 6 ವರ್ಷದ ಬಾಲಕಿಯೊಬ್ಬಳು ಗಮನ ಸೆಳೆದಿದ್ದಾಳೆ.

ಬೆಳಗಾವಿಯ ಬಾಂಬೆ ಚಾಳನಲ್ಲಿರುವ ಜಾವೀದ ಮುಲ್ಲಾ ಅವರ ಪುತ್ರಿ 6 ವರ್ಷದ ಬೇಬಿ ಆಯಿಷಾ ರಂಜಾನ್ ಹಬ್ಬದ ಪ್ರಯುಕ್ತ ಒಂದು ತಿಂಗಳ ಉಪವಾಸ ಕೈಗೊಂಡಿದ್ದಾಳೆ. ಯುಕೆಜಿ ಓದುತ್ತಿರುವ ಆಯಿಷಾ, ಕಳೆದ ವರ್ಷ ರಂಜಾನ್ ವೇಳೆ ಒಂದು ದಿ‌ನ ಉಪವಾಸ ಆಚರಿಸಿದ್ದಳು. ಆದರೆ, ಈ ಬಾರಿ ತಂದೆ ತಾಯಿ ಮುಂದೆ ಪಟ್ಟು ಹಿಡಿದು ರಂಜಾನ್ ಮೊದಲ ದಿನದಿಂದಲೂ ಉಪವಾಸ ಆಚರಿಸುತ್ತಿದ್ದಾಳೆ. ಇಂದು ರಂಜಾನ್ ಹಬ್ಬವಾದ್ದರಿಂದ  ಉಪವಾಸ ಕೊನೆಗೊಳಿಸಿದ್ದಾಳೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಇಂದು 93 ಕೊರೋನಾ ಕೇಸ್ ಪತ್ತೆ; ದಕ್ಷಿಣ ಕನ್ನಡ, ಬೆಂಗಳೂರಿನಲ್ಲಿ ಮತ್ತೆರಡು ಬಲಿ

ಪ್ರತಿದಿನ ನಸುಕಿನ ಜಾವ 4 ಗಂಟೆಗೆ ತಂದೆ-ತಾಯಿ ಜೊತೆಗೆ ಎದ್ದೇಳುವ ಬಾಲಕಿ ಆಯಿಷಾ, ಮನೆಯವರ ಜೊತೆ ಪ್ರಾರ್ಥನೆ ಸಲ್ಲಿಸುತ್ತಾಳೆ. ಮಗಳ ಉಪವಾಸ ಕಂಡು ಮನೆಯವರು ಸಹ ಹೆಮ್ಮೆಪಡುತ್ತಿದ್ದಾರೆ. ಆಯಿಷಾಳ ಅಜ್ಜ ನೀರಾವರಿ ಇಲಾಖೆ ನಿವೃತ್ತ ಇಂಜಿನಿಯರ್ ಹುಸೇನ್ ದಸ್ತಗೀರ ಸಾಬ್  ಮುಲ್ಲಾ, ಮೊಮ್ಮಗಳ ಕಠಿಣ ಉಪವಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬಾಲಕಿ ತಂದೆ ಜಾವೀದ್ ಮುಲ್ಲಾ, ಮಗಳ ಬಗ್ಗೆ ನನಗೆ ಮಾತ್ರವಲ್ಲ, ಇಡೀ ಕುಟುಂಬಕ್ಕೆ ಹೆಮ್ಮೆ ಇದೆ. ಇಡೀ ಬಡಾವಣೆ  ಜನರೂ ನನ್ನ ಮಗಳ ಬಗ್ಗೆ ಹೆಮ್ಮೆ ಪಡುತ್ತಿರುವುದು ಕಂಡು ಸಂತೋಷವಾಗುತ್ತದೆ ಎಂದಿದ್ದಾರೆ.

ಇಂದು ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಮನೆಯಲ್ಲಿ ಪ್ರಾರ್ಥನೆ ನಡೆಸಲಾಗಿದೆ. ಲಾಕ್ ಡೌನ್, ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿಲ್ಲ. ಇಂದು ಎಲ್ಲ ಮುಸ್ಲಿಂ ಬಾಂಧವರು ಮನೆಯಲ್ಲಿ ಹಬ್ಬ ಆಚರಣೆ ಮಾಡಲಾಗಿದೆ.

First published: