ಬೆಳಗಾವಿ (ನ.28): ಬೆಳಗಾವಿಯಲ್ಲಿ ಸಿನಿಮೀಯ ರೀತಿಯ ಮರ್ಡರ್ ನಡೆದಿದ್ದು, ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಮನೆಯಲ್ಲಿ ಯಾರೂ ಇಲ್ಲ ಬಾ ಅಂತ ಪ್ರೇಯಸಿಯಿಂದಲೇ (Lover) ಫೋನ್ (Phone) ಮಾಡಿ ಕರೆಸಿ ಯುವಕನೋರ್ವನನ್ನು ಕೊಲೆಗೈದಿರುವ ಘಟನೆ ಬೆಳಗಾವಿಯ (Belagavi) ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೋಕಾಕ್ ಪೊಲೀಸರು (gokak police) ನವಂಬರ್ 8 ರಂದು ನಡೆದ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ಆರೋಪಿಗಳು ರೋಚಕ ಮರ್ಡರ್ (Murder) ಕಥೆಯನ್ನು ಬಯಲಿಗಳೆದಿದ್ದಾರೆ.
ಪ್ಲಾನ್ ಮಾಡಿ ಕೊಂದೇ ಬಿಟ್ರು
ಇದೇ ತಿಂಗಳ ನವೆಂಬರ್ 8ರಂದು ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಸೋಮಲಿಂಗ್ ಕಂಬಾರ (22) ಎಂಬಾತನ್ನು ಪಕ್ಕಾ ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ. ಕೊಲೆಯಾದ ಯುವಕ, ಬೇರೆ ಯುವಕನ ಜತೆ ನಿಶ್ಚಿತಾರ್ಥವಾಗಿದ್ದ ಯುವತಿಯ ಜತೆಯನ್ನೇ ಪ್ರೀತಿ ಮಾಡುತ್ತಿದ್ದನಂತೆ. ಕೊಲೆ ಮಾಡುವ ಉದ್ದೇಶದಿಂದ ಪ್ರೇಯಿಸಿ ಕಡೆಯಿಂದ ಹಂತಕರು ಪೋನ್ ಮಾಡಿಸಿದ್ದರು.
ಮನೆಯಲ್ಲಿ ಯಾರು ಇಲ್ಲ ಬಾ ಎಂದು ಕರೆಸಿದ್ರು
ಮನೆಯಲ್ಲಿ ಯಾರು ಇಲ್ಲ ಬಾ ಎಂದು ಕರೆಸಿಕೊಂಡು ಸೋಮಲಿಂಗ್ ಕಂಬಾರನನ್ನು ಯುವತಿ ಕುಟುಂಬಸ್ಥರು ಕೊಲೆ ಮಾಡಿದ್ದಾರೆ. ನ.12ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ಹೊರ ವಲಯದ ಶಿಂಗಳಾಪುರ ಬ್ರಿಡ್ಜ್ನಲ್ಲಿ ಶವ ಪತ್ತೆಯಾಗಿತ್ತು. ಈ ಕುರಿತು ಗೋಕಾಕ್ ಶಹರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ನಿಶ್ಚಿತಾರ್ಥವಾಗಿದ್ದ ಯುವತಿ ಜತೆಗೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ಕೊಲೆ ಮಾಡಿರುವುದು ಬಯಲಾಗಿದೆ.
ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನಿಂದ ಕೊಲೆ
ಯುವತಿ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಮತ್ತು ಯುವತಿಯ ಕುಟುಂಬಸ್ಥರು ಸೇರಿಕೊಂಡು ಈ ಹತ್ಯೆ ಮಾಡಿದ್ದಾರೆ. ಶಿವಲಿಂಗ ತಳವಾರ್, ಸಂತೋಷ್ ತಳವಾರ್ ಬಂಧಿತ ಆರೋಪಿಗಳು.
ಯುವತಿಗೆ ಹೆದರಿಸಿ ಸೋಮಲಿಂಗನಿಗೆ ಕರೆ
ಕುಟುಂಬಸ್ಥರು ಯುವತಿಗೆ ಹೆದರಿಸಿ ಸೋಮಲಿಂಗನಿಗೆ ಕರೆ ಮಾಡಿಸಿದ್ದಾರೆ. ಮನೆಯಲ್ಲಿ ಯಾರು ಇಲ್ಲ ಬಾ ಅಂತ ಯುವತಿ ಕಡೆಯಿಂದ ಮನೆಗೆ ಕರೆಯಿಸಿಕೊಂಡಿದ್ದಾರೆ. ನಂತರ ಆತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಸಾಯಿಸಿದ್ದಾರೆ.
ಟ್ಯಾಟೋ ನೋಡಿ ಗುರುತು ಪತ್ತೆ
ಕೊಲೆ ಮಾಡಿದ ಬಳಿಕ ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಹಂತಕರು ಸಿಮೆಂಟ್ ಕಂಬಕ್ಕೆ ಮೃತದೇಹವನ್ನು ಕಟ್ಟಿ ಘಟಪ್ರಭಾ ನದಿಗೆ ಎಸೆದಿದ್ದರು. ಮೃತನ ಕೈ ಮೇಲೆ ಮಾಮ್-ಡ್ಯಾಡ್ ಅಂತಾ ಬರೆದ ಟ್ಯಾಟೋ, ಕೈಯಲ್ಲಿದ್ದ ಖಡ್ಗ ನೋಡಿ ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ.
ಪ್ರೇಯಸಿ ಬಾಯ್ಬಿಟ್ಟ ಸತ್ಯ
ಈ ವೇಳೆ ಸೋಮಲಿಂಗನ ಮೊಬೈಲ್ ಕಾಲ್ ಡಿಟೈಲ್ ತೆಗೆದು ಪರಿಶೀಲನೆ ನಡೆಸಿದ್ದ ಪೊಲೀಸರು, ಕೊನೆಯ ಪೋನ್ ಯುವತಿಯದ್ದು ಬಂದಿದ್ದರಿಂದ ಪ್ರೇಯಸಿಯನ್ನು ವಶಕ್ಕೆ ಪಡೆದಿದ್ದರು. ಪ್ರೇಯಸಿಯನ್ನು ವಶಕ್ಕೆ ಪಡೆದಾಗ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶಿವಲಿಂಗ ಮತ್ತು ಚಿಕ್ಕಪ್ಪ ಸಂತೋಷ್ ಹೆಸರು ಬಾಯಿ ಬಿಟ್ಟಿದ್ದಳು. ಆಕೆಯ ಹೇಳಿಕೆ ಆಧಾರದ ಮೇಲೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ತಾವೇ ಕೊಲೆ ಮಾಡಿದ್ದಾಗಿ ಹಂತಕರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Bengaluru: ಪ್ರಿಯತಮೆಯ ಗಂಡನಿಂದ ತಪ್ಪಿಸಿಕೊಳ್ಳಲು ಹೋಗಿ ಜೈಲು ಪಾಲಾದ ಇನಿಯ
ಗಂಡನ ಅನುಮಾನಕ್ಕೆ ಯುವತಿ ಬಲಿ
ಮದುವೆಯಾಗಿ (Marriage) ಇನ್ನೂ ಆರು ತಿಂಗಳು ಅಗಿತ್ತು, ಹೊಸ ಹೊಸ ಕನಸುಗಳ ಜೊತೆ ಪತಿಯ ಮನೆಗೆ (Husband House) ಬಂದಿದ್ದ 20 ವರ್ಷದ ಯುವತಿ ಗಂಡನ ಅನುಮಾನಕ್ಕೆ ಬಲಿಯಾಗಿದ್ದಾಳೆ. ರಶ್ಮಿ ಅಲಿಯಾಸ್ ರೇಷ್ಮಾ ಕೊಲೆಯಾದ ನವ ವಿವಾಹಿತೆ. ಮದುವೆಯಾದ ಒಂದು ತಿಂಗಳ ನಂತರ ರಶ್ಮಿ ಗರ್ಭಿಣಿ (Pregnant) ಆಗಿದ್ದಾರೆ. ಆದ್ರೆ ಪತಿ ಮೋಹನ್ ಪತ್ನಿಯ ಮೇಲೆ ಅನುಮಾನಗೊಂಡು ಕೊಲೆ ಮಾಡಿ, ದಟ್ಟ ಅರಣ್ಯ ಪ್ರದೇಶದಲ್ಲಿ ರಶ್ಮಿ ಶವ ಹೂತು ಹಾಕಿದ್ದಾನೆ. ಕೊಂದ (Wife Murder) ಬಳಿಕ ದೇವರ ಮುಂದೆ ಪ್ರಮಾಣ ಮಾಡಿದ್ದ ನೀಚ ಮೋಹನ್ ಕುಮಾರ್ ಅಲಿಯಾಸ್ ಮನು ಪತ್ನಿಯನ್ನು ನಾನು ಕೊಲೆ ಮಾಡಿಲ್ಲ. ಯಾಕೆ ಯಾರ ಜೊತೆಯಲ್ಲಾದ್ರೂ ಓಡಿ ಹೋಗಿರಬೇಕು ಎಂದು ಕಾಗಕ್ಕ ಗುಬ್ಬಕ್ಕನ ಕಥೆಯನ್ನು ಕುಟುಂಬಸ್ಥರ ಮುಂದೆ ಹೇಳಿದ್ದನು. ಪೊಲೀಸರು (Police) ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ ಕೊಲೆಯ ವಿಷಯವನ್ನು ಬಾಯಿ ಬಿಟ್ಟಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ