Belagavi: ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಆಯ್ಕೆ ವಿಚಾರ! ಸರ್ಕಾರದ ವಿಳಂಬ ಧೋರಣೆಗೆ ಸದಸ್ಯರ ಆಕ್ರೋಶ

ರಾಜ್ಯ ಸರ್ಕಾರ (State Govt) ನಿರ್ಲಕ್ಷ್ಯ ಧೋರಣೆಗೆ ಪಾಲಿಕೆ ಸದಸ್ಯರು ಬೇಸತ್ತು ಹೋಗಿದ್ದಾರೆ. ಬಿಜೆಪಿಗೆ (BJP) ಸರಳ ಬಹುಮತ (Majority) ಇದ್ರು ಮೇಯರ್ (Mayor), ಉಪಮೇಯರ್ ಆಯ್ಕೆ ವಿಳಂಬವಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ

ಬೆಳಗಾವಿ ಮಹಾನಗರ ಪಾಲಿಕೆ

  • Share this:
ಬೆಳಗಾವಿ(ಜೂ.28): ಬೆಳಗಾವಿ (Belagavi) ಮಹಾನಗರ ಪಾಲಿಕೆಗೆ ಆಯ್ಕೆಯಾದ ನೂತನ ಸದಸ್ಯರು ಅತಂತ್ರರಾಗಿದ್ದಾರೆ. ಪಾಲಿಕೆ ಸದಸ್ಯರಿಗೆ ಅಧಿಕಾರ ಎನ್ನುವುದು ನಾಳೆ ಬಾ ಎನ್ನುವಂತೆ ಆಗಿದೆ. ರಾಜ್ಯ ಸರ್ಕಾರ (State Govt) ನಿರ್ಲಕ್ಷ್ಯ ಧೋರಣೆಗೆ ಪಾಲಿಕೆ ಸದಸ್ಯರು ಬೇಸತ್ತು ಹೋಗಿದ್ದಾರೆ. ಬಿಜೆಪಿಗೆ (BJP) ಸರಳ ಬಹುಮತ (Majority) ಇದ್ರು ಮೇಯರ್ (Mayor), ಉಪಮೇಯರ್ ಆಯ್ಕೆ ವಿಳಂಬ. ಕಳೆದ ಮೂರು ವರ್ಷಗಳಿಂದ ಬೆಳಗಾವಿ ಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರಗೆ ಬೇಸತ್ತ ಜನರು. ಶೀಘ್ರದಲ್ಲೇ ಮೇಯರ್, ಉಪಮೇಯರ್ ಆಯ್ಕೆ ಮಾಡಿ ಎಂದು ಪ್ರತಿಭಟನೆ (Protest) ‌ಮಾಡೋ ಹಂತಕ್ಕೆ ತಲುಪಿದೆ.

2021ರ  ಸೆಪ್ಟೆಂಬರ್ 6ರಂದು ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟ ಅಗಿದೆ. ಜನರಿಗೆ ಅನೇಕ ಭರವಸೆ ‌ನೀಡಿ‌ ಆಯ್ಕೆಯಾಗಿದ್ದ ಸದಸ್ಯರು ಈಗ ಅತಂತ್ರರಾಗಿದ್ದಾರೆ.  ಇಂದು, ನಾಳೆ ಅಧಿಕಾರ ಸಿಗುತ್ತೆ ಅಂತ 9 ತಿಂಗಳು ಕಳೆದು ಹೋಗಿದೆ. ಸ್ಥಳೀಯ ಸಂಸ್ಥೆಯಿಂದ  ವಿಧಾನ ಪರಿಷತ್  ಚುನಾವಣೆ ಸಂದರ್ಭದಲ್ಲಿ ಮತದಾನದ ಹಕ್ಕು ನೀಡಲಾಗಿತ್ತು.

ಅಧಿಕಾರ ಇಲ್ಲದೇ ಕೆಲಸ ಮಾಡೋಕಾಗ್ತಿಲ್ಲ

ಅಧಿಕಾರ ಇಲ್ಲದೇ ಜನರ ಕೆಲಸ ಮಾಡಲು ಆಗದೇ ಪರದಾಟ ಸ್ಥಿತಿ ಈಗ ಇದೆ. ಬಿಜೆಪಿ ಸದಸ್ಯರು ಬಹಿರಂಗ ಪ್ರತಿಭಟನೆಯು ನಡೆಸದ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್, ಪಕ್ಷೇತರ ಪಾಲಿಕೆ ಸದಸ್ಯರಿಂದ ಆರ್ ಸಿ ಕಚೇರಿ ಬಳಿ ಧರಣಿ ನಡೆಸಿದರು. ಶೀಘ್ರದಲ್ಲೇ ಮೇಯರ್, ಉಪಮೇಯರ್ ಚುನಾವಣೆ ನಡೆಸಲು ಆಗ್ರಹ ಮಾಡಿದ್ರು.

15 ಕ್ಕೂ ಹೆಚ್ಚು ಪಾಲಿಕೆ ಸದಸ್ಯರಿಂದ ಧರಣಿ

ಧರಣಿಯಲ್ಲಿ 15 ಕ್ಕೂ ಹೆಚ್ಚು ಪಾಲಿಕೆ ಸದಸ್ಯರು ಭಾಗವಹಿಸಿದರು.‌ ಶೀಘ್ರವಾಗಿ ಕ್ರಮ ವಹಿಸದೇ ಇದ್ರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಮೀಸಲಾತಿ ವಿಚಾರ ಹೈಕೋರ್ಟ್‌ನಲ್ಲಿದೆ ಅಂತಾ ಅಧಿಕಾರಿಗಳ ಸಬೂಬು. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ನೀಡದ ಅಧಿಕಾರಿಗಳು.

ಇದನ್ನೂ ಓದಿ: Paying guest: ಧಾರವಾಡದಲ್ಲಿ ಎರಡು ಸಾವಿರಕ್ಕೂ ಅಧಿಕ ಪಿಜಿಗಳಿಗೆ ನೋಟಿಸ್ ನೀಡಲು ಮುಂದಾದ ಪಾಲಿಕೆ

ಉದ್ದೇಶ ಪೂರ್ವಕವಾಗಿ ವಿಳಂಬವಾಗ್ತಿದ್ಯಾ ಕೆಲಸ?

ಚುನಾವಣೆ ವರ್ಷ ಹಿನ್ನೆಲೆ ಉದ್ದೇಶಪೂರ್ವಕವಾಗಿಯೇ ಮೇಯರ್, ಉಪಮೇಯರ್ ಆಯ್ಕೆ ವಿಳಂಬಸರ್ಕಾರದ ನಡೆಗೆ ಬಿಜೆಪಿಯೇತರ ಪಾಲಿಕೆ ಸದಸ್ಯರ ಆಕ್ರೋಶ.

ಶಾಸಕರ ಕೈತಪ್ಪುವ ಭೀತಿ

ಬೆಳಗಾವಿ ಮಹಾನಗರ ಪಾಲಿಕೆ ಒಟ್ಟು 58 ಸದಸ್ಯ ಬಲ ಹೊಂದಿದೆ. ಬಿಜೆಪಿ- 35, ಕಾಂಗ್ರೆಸ್- 10, ಎಂಐಎಂ- 1, ಪಕ್ಷೇತರರು- 12 ಸದಸ್ಯರು ಆಯ್ಕೆ ಆಗಿದ್ದಾರೆ. ಪಾಲಿಕೆ ಸದಸ್ಯರ ಕೈಗೆ ಅಧಿಕಾರ‌ ಕೊಟ್ಟರೇ ಶಾಸಕರ ಹಿಡಿತ ಕೈತಪ್ಪುವ ಭೀತಿ.

ಇದನ್ನೂ ಓದಿ: Assembly Election: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭ, ಸಿದ್ದು-ಡಿಕೆಶಿ ಜೊತೆ ರಾಹುಲ್ ಗಾಂಧಿ ಚರ್ಚೆ

ಬೆಳಗಾವಿ ನಗರದ ಇಬ್ಬರು ಬಿಜೆಪಿ ಶಾಸಕರ ಇದೆ ಆತಂಕ ಇದೆ ಎನ್ನುವ‌ ಆರೋಪ ಇದೆ. ಬೆಳಗಾವಿ ಉತ್ತರ ‌ಕ್ಷೇತ್ರದ ಶಾಸಕ ಅನಿಲ್ ಬೆನಕೆ, ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರದಲ್ಲಿ  ನಿರ್ಣವೇ ಅಂತಿಮವಾಗಿದೆ.ಸರ್ಕಾರದ ಯಾರೊಬ್ಬರೂ ಒತ್ತಡ ಹಾಕದ ಹಿನ್ನೆಲೆಯಲ್ಲಿ ವಿಳಂಬ ಆಗಿದೆ.

ಬಿಜೆಪಿ ಸದಸ್ಯರಿಗೆ ಈಗ ಭಾರೀ ಇಕ್ಕಟ್ಟು ಸ್ಥಿತಿ

ಹೆಚ್ಚು ಸಂಖ್ಯೆಯಲ್ಲಿ ಆಯ್ಕೆಯಾದ ಬಿಜೆಪಿ ಸದಸ್ಯರಿಗೆ ಇಕ್ಕಟ್ಟು. ಪಕ್ಷದ ವಿರುದ್ಧ ಬಹಿರಂಗವಾಗಿ ಪ್ರತಿಭಟನೆ ನಡೆಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಾಲಿಕೆ ಸದಸ್ಯರಿಗೆ ಸ್ಥಳೀಯ ಸಮಸ್ಯೆ ಇತ್ಯರ್ಥಪಡಿಸುವಂತೆ ಜನರ ಆಗ್ರಹ.ಪಾಲಿಕೆಯಲ್ಲಿ ಅಧಿಕಾರ ಇಲ್ಲದೇ ಆಯ್ಕೆಯಾದ ಪಾಲಿಕೆ ಸದಸ್ಯರು ಅತಂತ್ರರಾಗಿದ್ದಾರೆ.
Published by:Divya D
First published: