Belagavi: 7 ಭ್ರೂಣಗಳ ಪತ್ತೆ ಕೇಸ್, ಹೆರಿಗೆ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್ ಸೀಜ್; ಸಚಿವ ಸುಧಾಕರ್ ಖಡಕ್​ ಆದೇಶ

ಆಸ್ಪತ್ರೆ ಅಕ್ರಮಗಳು ಬಯಲಿಗೆ ಬರುವ ಭೀತಿಯಿಂದ ಆಸ್ಪತ್ರೆಯ ಸಿಬ್ಬಂದಿ ಈ ರೀತಿ ರಾತ್ರಿ ಭ್ರೂಣಗಳನ್ನು ಹಳ್ಳಕ್ಕೆ ಎಸೆದಿದ್ದಾರೆ. ಜೂನ್ 23ರ ರಾತ್ರಿಯೇ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆರಿಗೆ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್ ಸೀಜ್

ಹೆರಿಗೆ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್ ಸೀಜ್

  • Share this:
ಬೆಳಗಾವಿ (ಜೂ 25) : ಮೂಡಲಗಿ ಪಟ್ಟಣದ ಹಳ್ಳದಲ್ಲಿ7  ಭ್ರೂಣಗಳ ಮೃತದೇಹ (Neonatal Babies) ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಡಿಎಚ್​ಒ ಮಹೇಶ (DHO Mahesh) ಕೋಣಿ ಅವರು ಪೊಲೀಸರ (Police) ನೇತೃತ್ವದಲ್ಲಿ ಮೂಡಲಗಿಯ ಸ್ಕ್ಯಾನಿಂಗ್​,  6 ಮೆಟರ್ನಿಟಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ರು.  ವೆಂಕಟೇಶ ಮೆಟರ್ನಿಟಿ ಆಸ್ಪತ್ರೆಯನ್ನು (Venkatesha Maternity Hospital) ಸೀಜ್ ಮಾಡಿದ್ದಾರೆ.  ಮೂರು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಏಳು ಭ್ರೂಣಗಳ ಲಿಂಗ ಪತ್ತೆ ಮಾಡಿ ಹತ್ಯೆ ಮಾಡಿದ ಅನುಮಾನವಿದೆ. ಹೀಗಾಗಿ ಅಸ್ಪತ್ರೆ ಬಂದ್ ಮಾಡಿ ಇನ್ನಷ್ಟು ತನಿಖೆ (Investigation) ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು (Officer) ತಿಳಿಸಿದ್ದಾರೆ.


ಆಸ್ಪತ್ರೆ ಮೇಲೆ ದಾಳಿ ಮಾಹಿತಿ ತಿಳಿದು ಕೃತ್ಯ




ಈ ಹಿಂದೆಯೇ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಕೆಲ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿದ್ದರು. ತಮ್ಮ ಅಕ್ರಮಗಳು ಬಯಲಿಗೆ ಬರುವ ಭೀತಿಯಿಂದ ಆಸ್ಪತ್ರೆಯ ಸಿಬ್ಬಂದಿ ಈ ರೀತಿ ರಾತ್ರಿ ಭ್ರೂಣಗಳನ್ನು ಹಳ್ಳಕ್ಕೆ ಎಸೆದಿದ್ದಾರೆ. ಜೂನ್ 23ರ ರಾತ್ರಿಯೇ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಪ್ಪು ಒಪ್ಪಿಕೊಂಡ ಆಸ್ಪತ್ರೆ ಆಡಳಿತ ಮಂಡಳಿ

ಪತ್ತೆಯಾದ ಭ್ರೂಣಗಳು ತಮ್ಮದೇ ಆಸ್ಪತ್ರೆಯಲ್ಲಿ ತೆಗೆಯಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿಯವರು ತಪ್ಪು ಒಪ್ಪಿಕೊಂಡಿದ್ದಾರೆ. ಹೊಸ ಅಸ್ಪತ್ರೆಗೆ ಸ್ಥಳಾಂತರಗೊಳ್ಳುವ ಸಮಯದಲ್ಲಿ ಸಿಬ್ಬಂದಿ ನಿರ್ಲಕ್ಷದ ಕಾರಣ ಇದು ನಡೆದಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭ್ರೂಣಗಳ ಲಿಂಗಪತ್ತೆ ಹಾಗೂ ಹತ್ಯೆಗೆ ನಿಖರ ಕಾರಣ ಏನು ಎಂಬ ಬಗ್ಗೆ ವಿಚಾರಣೆ ನಡೆದಿದೆ. ಮೂರು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಏಳು ಭ್ರೂಣಗಳ ಲಿಂಗ ಪತ್ತೆ ಮಾಡಿ ಹತ್ಯೆ ಮಾಡಿದ ಅನುಮಾನವಿದೆ. ಹೀಗಾಗಿ ಅಸ್ಪತ್ರೆ ಬಂದ್ ಮಾಡಿ ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು  ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Neonatal Baby: ಹಳ್ಳದಲ್ಲಿ ತೇಲಿ ಬಂತು 7 ಭ್ರೂಣಗಳ ಮೃತದೇಹ! ಗಾಬರಿಯಾದ್ರು ಬಸ್ ನಿಲ್ದಾಣದಲ್ಲಿದ್ದ ಜನ!

ನಿನ್ನೆ ಹಳ್ಳದಲ್ಲಿ ಭ್ರೂಣಗಳು ಪತ್ತೆ

7 ಭ್ರೂಣಗಳ (Neonatal Babies) ಮೃತದೇಹವನ್ನು (Dead Body) ಹಳ್ಳದಲ್ಲಿ ತೇಲಿ ಬಿಟ್ಟಿರುವ ಹೀನ ಕೃತ್ಯ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಬೆಳಕಿಗೆ ಬಂದಿತ್ತು. ಒಟ್ಟು 5 ಡಬ್ಬಿಗಳಲ್ಲಿ 7 ಭ್ರೂಣಗಳು ಪತ್ತೆಯಾಗಿದೆ. ಮೂಡಲಗಿ ಬಸ್ ನಿಲ್ದಾಣದ ಬಳಿ ಇರುವ ಹಳ್ಳದಲ್ಲಿ ಭ್ರೂಣಗಳ ಮೃತ ದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಯಾರು ಎಸೆದಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಮೃತದೇಹ ಕಂಡು ಮೂಡಲಗಿ ಜನರು ಹೌಹಾರಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದರು

ಇದನ್ನೂ ಓದಿ: Bengaluru: ಆನ್‌ಲೈನಲ್ಲೇ ಬ್ಯಾಂಕ್‌ ಮ್ಯಾನೇಜರ್‌ಗೆ ಗಾಳ ಹಾಕಿದ ಯುವತಿ, 5 ಕೋಟಿ ಕಳೆದುಕೊಂಡು ಈತನಾದ ಪೊಲೀಸ್ ಅತಿಥಿ!

ಭ್ರೂಣ ಪತ್ತೆ ಕೇಸ್​ ಬಗ್ಗೆ ಮಾಹಿತಿ ಪಡೆದ ಸಚಿವ ಸುಧಾಕರ್​

ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಶುಕ್ರವಾರ ಏಳು ಭ್ರೂಣಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಡಾ.ಕೆ‌.ಸುಧಾಕರ್ ಶನಿವಾರ ಮಾಹಿತಿ ಪಡೆದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಅವರಿಗೆ ಕರೆ ಮಾಡಿದ ಸಚಿವರು, ಈ ಘಟನೆಗೆ ಕಾರಣವೇನು? ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಪಡೆದರು. ಇದು ಗಂಭೀರವಾದ ಪ್ರಕರಣ. ಯಾರೇ ತಪ್ಪಿತಸ್ಥರಿದ್ದರೂ, ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಯಾರ ಒತ್ತಡಕ್ಕೂ ಮಣಿಯಬಾರದು ಎಂದು ಸೂಚಿಸಿದರು.

Published by:Pavana HS
First published: