Belagavi Lok Sabha Bypoll: ಅಭ್ಯರ್ಥಿಗಳ ಮೇಲೆ ಮಾಧ್ಯಮ ಕಣ್ಗಾವಲು, ಸಾಮಾಜಿಕ ಜಾಲತಾಣದ ಮೇಲೂ ಕಣ್ಣು

ಮಾಧ್ಯಮ ಕಣ್ಗಾವಲು ಕೇಂದ್ರದ ಕಾರ್ಯನಿರ್ವಹಣೆ ಕುರಿತು ವಿವರಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಹಾಗೂ ಎಂಸಿಎಂಸಿ ನೋಡಲ್ ಅಧಿಕಾರಿ ಗುರುನಾಥ ಕಡಬೂರ, ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಯ 40 ಅಧಿಕೃತ ದಿನಪತ್ರಿಕೆಗಳಲ್ಲಿ ಪ್ರತಿದಿನ ಪ್ರಕಟವಾಗುವ ಚುನಾವಣಾ ಸಂಬಂಧಿತ ಸುದ್ದಿ-ಜಾಹೀರಾತುಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.

ಮಾಧ್ಯಮ ಕಣ್ಗಾವಲು

ಮಾಧ್ಯಮ ಕಣ್ಗಾವಲು

  • Share this:
ಚಿಕ್ಕೋಡಿ(ಏ.01): ಬೆಳಗಾವಿ ಲೋಕಸಭಾ ಉಪ ಚುನಾವಣಾ ಸಾಮಾನ್ಯ ವೀಕ್ಷಕ(ಜನರಲ್ ಅಬ್ಸರ್ವರ್) ಹಿರಿಯ ಐ.ಎ.ಎಸ್‌ ಅಧಿಕಾರಿ ಡಾ.ಚಂದ್ರಭೂಷಣ್ ತ್ರಿಪಾಠಿ ಮಾಧ್ಯಮ ಕಣ್ಗಾವಲು, ಎಂಸಿಸಿ, ಸಿವಿವಿಜಿಲ್, ದೂರು‌ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದ ವಾರ್ತಾಭವನದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಕೇಂದ್ರದ ಸಮಗ್ರ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಅವರು, ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಕ್ರಮಗಳ ಬಗ್ಗೆ ದೂರು ಅಥವಾ ಮಾಹಿತಿ ಲಭಿಸಿದರೆ ಸಂಬಂಧಿಸಿದ ನೋಡಲ್ ಅಧಿಕಾರಿಗಳ ಗಮನಕ್ಕೆ ತರುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಮಾದರಿ ನೀತಿಸಂಹಿತೆ ಜಾರಿ ಬಂದ ದಿನದಿಂದ ಇದುವರೆಗೆ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳ ಪತ್ರಿಕಾ ತುಣುಕುಗಳನ್ನು ಅವರು ಪರಿಶೀಲಿಸಿದರು. ಟಿವಿ ಮಾಧ್ಯಮಗಳು ಹಾಗೂ ಅಧಿಕೃತ ಅಭ್ಯರ್ಥಿಗಳು ಮತ್ತು ಪಕ್ಷಗಳ ಸಾಮಾಜಿಕ ಜಾಲತಾಣಗಳಲ್ಲಿ  ಪ್ರಸಾರವಾಗುವ ವರದಿಗಳ ಮೇಲೆ ಯಾವ ರೀತಿ ನಿಗಾ ವಹಿಸುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಮಾಧ್ಯಮ ಕಣ್ಗಾವಲು ಕೇಂದ್ರದ ಕಾರ್ಯನಿರ್ವಹಣೆ ಕುರಿತು ವಿವರಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಹಾಗೂ ಎಂಸಿಎಂಸಿ ನೋಡಲ್ ಅಧಿಕಾರಿ ಗುರುನಾಥ ಕಡಬೂರ, ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಯ 40 ಅಧಿಕೃತ ದಿನಪತ್ರಿಕೆಗಳಲ್ಲಿ ಪ್ರತಿದಿನ ಪ್ರಕಟವಾಗುವ ಚುನಾವಣಾ ಸಂಬಂಧಿತ ಸುದ್ದಿ-ಜಾಹೀರಾತುಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. ಅಲ್ಲದೇ ಎಲ್ಲ ಪ್ರಮುಖ ಟಿವಿ ಚಾನೆಲ್ ಗಳು, ಕೇಬಲ್ ಟಿವಿ ಮತ್ತು ಚುನಾವಣಾ ಅಭ್ಯರ್ಥಿಗಳ ಅಧಿಕೃತ ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳ ಮೇಲೂ ನಿಗಾ ಇರಿಸಲಾಗಿದೆ ಎಂದಿದ್ದಾರೆ.

ಹಾವೇರಿಯ ಈ ಗ್ರಾಮದಲ್ಲಿ ಮದ್ಯದಂಗಡಿ ಸ್ಥಾಪನೆಗೆ ಜನರ ವಿರೋಧ ಯಾಕೆ ಗೊತ್ತಾ?

ಎಂಸಿಸಿ ಕೇಂದ್ರಕ್ಕೆ ವೀಕ್ಷಕರ ಭೇಟಿ:

ಲೋಕಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಆರಂಭಿಸಲಾಗಿರುವ ಮಾದರಿ ನೀತಿ ಸಂಹಿತೆ ಕಂಟ್ರೋಲ್ ರೂಮ್, ಸಿವಿಜಿಲ್ ಹಾಗೂ ದೂರು ನಿರ್ವಹಣಾ ಕೇಂದ್ರಗಳಿಗೂ ಚುನಾವಣಾ ಸಾಮಾನ್ಯ ವೀಕ್ಷಕ ಡಾ.ಚಂದ್ರಭೂಷಣ್ ತ್ರಿಪಾಠಿ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಎಂಸಿಸಿ ನೋಡಲ್ ಅಧಿಕಾರಿ ನಿಸಾರ್ ಅಹ್ಮದ್ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರು ಹಾಗೂ ಮಾಹಿತಿಯನ್ನು ಆಧರಿಸಿ ನಿಯಮಾವಳಿ ಪ್ರಕಾರ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ 27 ಚೆಕ್ ಪೋಸ್ಟ್ ಗಳ ಮೇಲೆ ಕೂಡ ವೆಬ್ ಕ್ಯಾಮೆರಾ ಮೂಲಕ ಇಲ್ಲಿಂದಲೇ ನಿಗಾ ವಹಿಸಲಾಗಿದೆ.

ಫ್ಲೈಯಿಂಗ್ ಸ್ಕ್ವಾಡ್ ಗಳ ವಾಹನಗಳಿಗೆ ಜಿಪಿಎಸ್:

ಇನ್ನು ಚುನಾವಣೆ ವೇಳೆ ದೂರುಗಳು ಬಂದತಹ ಸಂದರ್ಭದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಗಳ ಅಧಿಕಾರಿಗಳು ಸರಿಯಾದ ಸಮಯಕ್ಕೆ ಹೊಗಲ್ಲಾ ಎಲ್ಲೊ ಇದ್ದು ಇನ್ನಾವುದೇ ಲೋಕೇಶನ ನೀಡುತ್ತಾರೆ ಎಂಬ ದೂರುಗಳ ಹಿನ್ನಲೆ ಈ ಬಾರಿ ಫ್ಲೈಯಿಂಗ್ ಸ್ಕ್ವಾಡ್ ಗಳ ವಾಹನಗಳಿಗೂ ಜಿಪಿಎಸ್ ಅಳವಡಿಸಿ ಅದನ್ನ ಕಂಟ್ರೋಲ್ ರೂಂ ನಿಂದಲೆ ಮಾನಿಟರ್ ಮಾಡುವ ವ್ಯವಸ್ಥೆಯನ್ನ ಮಾಡಿದ್ದಾರೆ. ದಾರುಗಳು ಬಂದತಹ ಸಂದರ್ಭದಲ್ಲಿ ದೂರಿನ ಘಟನೆ ನಡೆದಿ ಸ್ಥಳದ ಸಮೀಪೆ ಇರುವ ಫ್ಲೈಯಿಂಗ್ ಸ್ಕ್ವಾಡ್ ಗಳಿಗೆ ಮಾಹಿತಿ ನೀಡಿ ಕೂಡಲೆ ಘಟನಾ ಸ್ಥಳಕ್ಕೆ ತೆರಳುವ ಹಾಗೂ ಮಾನಿಟರ್ ಮಾಡುವ ವ್ಯವಸ್ಥೆಯನ್ನ ಮಾಡಲಾಗಿದೆ.

ಒಟ್ಟಿನಲ್ಲಿ ಚುನಾವಣಾ ಅಕ್ರಮಗಳನ್ನ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿ ಕಟ್ಟುನಿಟ್ಟಿನ ಕ್ರಮಗಳನ್ನ ಜಾರಿಗೆ ತಂದಿದ್ದು ಅಭ್ಯರ್ಥಿಗಳ ಸಾಮಾಜೀಕ ಜಾಲತಾಣಗಳನ್ನ ಈ ಬಾರಿ ಮಾನಿಟರ್ ಮಾಡಲು ಚುನಾವಣಾ ಆಯೋಗ ಮುಂದಾಗಿದೆ.
Published by:Latha CG
First published: