HOME » NEWS » State » BELAGAVI LOK SABHA BYPOLL CM BS YEDIYURAPPA AND OTHER BJP LEADERS DID CAMPAIGN AT BELAGAVI CSB LG

ಬೆಳಗಾವಿ ಲೋಕಸಭಾ ಉಪಚುನಾವಣೆ; ಸಿಎಂ ಬಿಎಸ್ ಯಡಿಯೂರಪ್ಪ ಭರ್ಜರಿ ಮತ ಬೇಟೆ

ಸತೀಶ್ ಜಾರಕಿಹೊಳಿಯನ್ನು ಕಾಂಗ್ರೆಸ್ ಪಕ್ಷ ಒತ್ತಾಯ ಪೂರ್ವಕವಾಗಿ ಚುನಾವಣಾ ಕಣಕ್ಕೆ ಇಳಿಸಿದೆ. ಚುನಾವಣೆ ನೆಪದಲ್ಲಿ ಜಾರಕಿಹೊಳಿಯನ್ನು ಮುಗಿಸಲು ಡಿಕೆಶಿ ಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

news18-kannada
Updated:April 8, 2021, 7:58 AM IST
ಬೆಳಗಾವಿ ಲೋಕಸಭಾ ಉಪಚುನಾವಣೆ; ಸಿಎಂ ಬಿಎಸ್ ಯಡಿಯೂರಪ್ಪ ಭರ್ಜರಿ ಮತ ಬೇಟೆ
ಸಿಎಂ ಬಿಎಸ್ ಯಡಿಯೂರಪ್ಪ.
  • Share this:
ಬೆಳಗಾವಿ(ಏ.8): ಇದೇ ತಿಂಗಳು 17ಕ್ಕೆ ಬೆಳಗಾವಿ ಲೋಕಸಭಾ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಇನ್ನಿಲ್ಲದ ಕಸರತ್ತು ಆರಂಭಿಸಿವೆ. ಬುಧವಾರ ಸಿಎಂ ಬಿ ಎಸ್ ಯಡಿಯೂರಪ್ಪ ನಾಲ್ಕು ಕಡೆಗಳಲ್ಲಿ ಬಹಿರಂಗ ಸಮಾವೇಶದ ಮೂಲಕ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು. ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ನಾಯಕರು, ಕಾಂಗ್ರೆಸ್ ಪಕ್ಷವನ್ನು ಮಾತಿನಿಂದ ಚುಚ್ಚಿದ್ದರು. ಇನ್ನೂ ಸಭೆಯೊಂದರಲ್ಲಿ ಸಿಎಂ ಬಿಎಸ್ ವೈ ಬದಲಾಗಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಎಂದು ಪ್ರಲ್ಹಾದ್ ಜೋಶಿ ಹೇಳಿದ್ರು. ತಕ್ಷಣ ತಮ್ಮ ತಪ್ಪಿನ ಅರಿವಾಗಿ ಸರಿಮಾಡಿಕೊಂಡರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ್ ಅಂಗಡಿ ಪರವಾಗಿ ಇಂದು ಸಿಎಂ ಬಿ ಎಸ್ ಯಡಿಯೂರಪ್ಪ ಭರ್ಜರಿ ಪ್ರಚಾರ ನಡೆಸಿದರು. ಸತತ 4 ಸಲ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಈ ಸಲ ಕೂಡ ಬಿಜೆಪಿ ತೆಕ್ಕೆಗೆ ಕ್ಷೇತ್ರವನ್ನು ತೆಗೆದುಕೊಳ್ಳಬೇಕು ಎಂದು ಬಿಜೆಪಿ ಹರಸಾಹಸ ಮಾಡುತ್ತಿದೆ. ಬುಧವಾರ ರಾಮದುರ್ಗ ತಾಲೂಕಿನ ಸಾಲಹಳ್ಳಿ, ಯರಗಟ್ಟಿ, ಮುರುಗೋಡ ಹಾಗೂ ಹಿರೇಬಾಗೇವಾಡಿಯಲ್ಲಿ ಬಹಿರಂಗ ಸಮಾವೇಶ ನಡೆಸಲಾಯಿತು. ಸಮಾವೇಶದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ಜಗದೀಶ ಶೆಟ್ಟರ್, ಸಿ ಸಿ ಪಾಟೀಲ್, ಉಮೇಶ ಕತ್ತಿ ಹಾಗೂ ಬೆಳಗಾವಿ ಜಿಲ್ಲೆಯ ಅನೇಕ ನಾಯಕರು ಸಾಥ್ ನೀಡಿದ್ರು.

ಅರಾಜಕತೆ ಸೃಷ್ಠಿಸೋದು ನಾಯಕತ್ವದ ಲಕ್ಷಣ ಅಲ್ಲ; ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿ.ಟಿ. ರವಿ ಗುಡುಗು‌

ಬಿಜೆಪಿ ಸಮಾವೇಶ ನಡೆದ ಬಹುತೇಕ ಕಡೆಗಳಲ್ಲಿ ಕೊರೊನಾ ನಿಯಮದ ಉಲ್ಲಂಘನೆ ಕಂಡು ಬಂದಿತು. ಯಾವುದೇ ಸಾಮಾಜಿಕ ಅಂತರ ಇಲ್ಲದೇ ಸಾವಿರಾರು ಜನ ಒಂದೇ ಕಡೆ ಸೇರಿಕೊಂಡಿದ್ದರು. ಸಾಲಹಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ಪಕ್ಷಕ್ಕೆ ಕೈ ಬೆರಳು ಹಿಡಿದುಕೊಂಡು ಹೋಗುವ ಸ್ಥಿತಿ ನಿರ್ಮಾವಾಗಿದೆ. ಕೇರಳದಲ್ಲಿ ಒಂದು ರೀತಿ, ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ರೀತಿಯ ಅಜೆಂಡಾ ಹೊಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಿದ್ದಾಂತವಿಲ್ಲ. ಬಿಜೆಪಿ ಸೋಲಿಸಲು ದಾವೂದ್ ಇಬ್ರಾಹಿಂ ಜತೆಗೆ ಸಹ ಕಾಂಗ್ರೆಸ್ ಸಿದ್ದವಿದೆ ಎಂದು ವಾಗ್ದಾಳಿ ನಡೆಸಿದ್ದರು.

ಸತೀಶ್ ಜಾರಕಿಹೊಳಿಯನ್ನು ಕಾಂಗ್ರೆಸ್ ಪಕ್ಷ ಒತ್ತಾಯ ಪೂರ್ವಕವಾಗಿ ಚುನಾವಣಾ ಕಣಕ್ಕೆ ಇಳಿಸಿದೆ. ಚುನಾವಣೆ ನೆಪದಲ್ಲಿ ಜಾರಕಿಹೊಳಿಯನ್ನು ಮುಗಿಸಲು ಡಿಕೆಶಿ ಯತ್ನ ಮಾಡುತ್ತಿದ್ದಾರೆ. ಈಗಾಗಲೇ ಲೋಕಸಭೆಯಲ್ಲಿ 51 ಜನ ಕಾಂಗ್ರೆಸ್ ಸಂಸದರು ಇದ್ದಾರೆ. ಪ್ರತಿ ಸಲದ ಅಧಿವೇಶನ ಸಂದರ್ಭದಲ್ಲಿ ಮೋದಿ ಮುರ್ದಾಬಾದ್ ಎಂದು ಘೋಷಣೆ ಹಾಕುತ್ತಾರೆ. ಇಲ್ಲಿ ಕಾಂಗ್ರೆಸ್ ಗೆದ್ದರೆ 51ರ ಜೊತಗೆ ಮತ್ತೊಂದು ಸೇರ್ಪಡೆಯಾಗಲಿದೆ. ಮುರ್ದಾಬಾದ್ ಘೋಷಣೆ ಹಾಕೋ ಸಂಸದರು ಬೇಕಾ ಎಂದು ಜನರನ್ನು ಪ್ರಶ್ನಿಸಿದ್ರು. ಮಂಗಲಾ ಸುರೇಶ್​ ಅಂಗಡಿಗೆ ಆಶೀರ್ವಾದ ಮಾಡುವ ಮೂಲಕ ಮೋದಿ ಕೈಯನ್ನು ಬಲ ಪಡಿಸಬೇಕು ಎಂದು ಜೋಶಿ ಕರೆ ನೀಡಿದ್ರು.

ಸಾಲಹಳ್ಳಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ ಬಿ ಎಸ್ ಯಡಿಯೂರಪ್ಪ, ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ಹಣದ ಭರವಸೆ ನೀಡಲಾಗಿತ್ತು. ಇದೀಗ 25 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಈ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ದೂರ ಮಾಡಬೇಕು. ಇಲ್ಲವೇ ಅನಿವಾರ್ಯವಾಗಿ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ರು.
Published by: Latha CG
First published: April 8, 2021, 7:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories