ಬೆಳಗಾವಿ(ಏ.18): ದಿ. ಸುರೇಶ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಶನಿವಾರ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಕ್ಷೇತ್ರದಲ್ಲಿ ಮತದಾನಕ್ಕೆ ಬೆಳಗ್ಗೆಯಿಂದಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಇದಕ್ಕೆ ಕೊರೊನಾ ಸೋಂಕಿನ ಹಾವಳಿ ಹಾಗೂ ಬಿಸಿಲಿನ ತಾಪ ಕಾರಣವಾಯಿತು. 12 ಗಂಟೆ ಮತದಾನಕ್ಕೆ ಅವಕಾಶವಿದ್ರು ಕ್ಷೇತ್ರದಲ್ಲಿ ಕೇವಲ ಶೇ 55.61ರಷ್ಟು ಮಾತ್ರ ಮತದಾನ ಆಗಿದೆ. ಇನ್ನೂ ಪಿಪಿಇ ಕಿಟ್ ಧರಿಸಿ ಸವದತ್ತಿ ಶಾಸಕ ಆನಂದ ಮಾಮಾನಿ ಹಾಗೂ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಮತದಾನದ ಹಕ್ಕನ್ನು ಚಲಾವಣೆ ಮಾಡಿದರು.
ಬೆಳ್ಳಂ ಬೆಳಗ್ಗೆ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಹಾಗೂ ಪುತ್ರಿಯರಾದ ಡಾ. ಸ್ಪೂರ್ತಿ ಪಾಟೀಲ್ ಹಾಗೂ ಶ್ರದ್ಧಾ ಶೆಟ್ಟರ್ ಮತದಾನ ಮಾಡಿದ್ರು. ವಿಶ್ವೇಶ್ವರಯ್ಯ ನಗರದ ಮತಗಟ್ಟೆ ಸಂಖ್ಯೆ 3ಎ ರಲ್ಲಿ ಮತದಾನ ಮಾಡಿದ್ರು. ಈ ವೇಳೆ ಮಾತನಾಡಿದ ಮಂಗಲಾ ಸುರೇಶ ಅಂಗಡಿ, ಕೋವಿಡ್ ಸೋಂಕಿನ ಭಯ ಹಿನ್ನೆಲೆಯಲ್ಲಿ ಯಾರೂ ಸಹ ಹೆದರುವ ಅವಶ್ಯಕತೆ ಇಲ್ಲ. ಚುನಾವಣಾ ಆಯೋಗ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ವಹಿಸಿದೆ. ಎಲ್ಲರೂ ಮತವನ್ನು ಚಲಾವಣೆ ಮಾಡಬೇಕು ಎಂದು ಮನವಿ ಮಾಡಿದ್ರು. 8 ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರವನ್ನು ಮಾಡಿದ್ದೀವಿ. ಕಾರ್ಯಕರ್ತರು ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ದಿ. ಸುರೇಶ ಅಂಗಡಿ ಕನಸು ಈಡೇರಿಸಲು ನನಗೆ ಮತಹಾಕಿ ಎಂದು ಮನವಿ ಮಾಡಿದ್ದೇನೆ ಎಂದರು.
CoronaVirus: ರೈಲು ನಿಲ್ದಾಣ-ಪ್ರಯಾಣದ ವೇಳೆಯೂ ಮಾಸ್ಕ್ ಕಡ್ಡಾಯ; ನಿಯಮ ಮೀರಿದರೆ 500 ರೂ. ದಂಡ
ಸ್ಪೂರ್ತಿ ಪಾಟೀಲ್ ಮಾತನಾಡಿ, ಕ್ಷೇತ್ರದಲ್ಲಿ ದಿ. ಸುರೇಶ ಅಂಗಡಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅರ್ಧಕ್ಕೆ ನಿಂತಿರುವ ತಂದೆಯ ಕೆಲಸ ಪೂರ್ಣ ಮಾಡಲು ನಮ್ಮ ತಾಯಿ ಮಂಗಲಾ ಸುರೇಶ ಅಂಗಡಿಗೆ ಮತ ಹಾಕುವಂತೆ ಮನವಿ ಮಾಡಿದ್ರು. ಶ್ರದ್ಧಾ ಶೆಟ್ಟರ್ ಮಾತನಾಡಿ, ಕಳೆದ 15 ದಿನಗಳಿಂದ ಹಗಲು, ರಾತ್ರಿ ನಮ್ಮ ಜತೆಗೆ ಪ್ರಚಾರ ನಡೆಸಿದ ಕಾರ್ಯಕರ್ತರಿಗೆ ಅಭಿನಂದನೆಗಳು. ಈ ವೇಳೆಯಲ್ಲಿ ತಂದೆಯನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ತಂದೆಯನ್ನು ನೆನಪಿಸಿಕೊಂಡರು.
ಕ್ಷೇತ್ರದಲ್ಲಿ ಬೆಳಗ್ಗೆಯಿಂದಲೇ ಜನ ಮತಗಟ್ಟೆಯ ಕಡೆ ಬರಲು ಮನಸ್ಸು ಮಾಡಲಿಲ್ಲ. ಕ್ಷೇತ್ರದಲ್ಲಿ ಒಟ್ಟು ಶೇ 55.61ರಷ್ಟು ಮತದಾನ ನಡೆದಿದೆ. ಇನ್ನೂ ಸವದತ್ತಿ ಶಾಸಕ ಆನಂದ ಮಾಮನಿ ಹಾಗೂ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಪಿಪಿಇ ಕಿಟ್ ಧರಿಸಿಕೊಂಡು ಮತದಾನ ಮಾಡಿದ್ದರು. ಮತದಾನಕ್ಕೂ ಮೊದಲೇ ಮತಗಟ್ಟೆ ಸಿಬ್ಬಂದಿಗೆ ಮಾಹಿತಿ ನೀಡಿ ಅನುಮತಿ ಪಡೆದು ಮತದಾನ ಮಾಡಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ