Belagavi: ಸಾಮಾಜಿಕ ಕಾರ್ಯಕರ್ತನ ಕೊಲೆ; ನಾಲ್ಕು ಕಾರ್, ಟ್ರ್ಯಾಕ್ಟರ್, ಎರಡು ಟೆಂಪೋ ಸೇರಿ ಮೇವಿನ ಬಣವೆಗಳಿಗೆ ಬೆಂಕಿ

ಸತೀಶ್ ಪಾಟೀಲ್ ಕೊಲೆ ಬೆನ್ನಲ್ಲೇ ಗ್ರಾಮದಲ್ಲಿ ಹಿಂಸಾಚಾರ ನಡೆದಿದೆ. ಇನ್ನೋವಾ ಸೇರಿ ನಾಲ್ಕು ಕಾರು, ಒಂದು ಟ್ರ್ಯಾಕ್ಟರ್, ಎರಡು ಟೆಂಪೋ ಸೇರಿ ಹಲವು ವಾಹನಗಳಿಗೆ ಬೆಂಕಿ ಹಾಕಲಾಗಿದೆ. ದುಷ್ಕರ್ಮಿಗಳು ಗ್ರಾಮದ ಹಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಬೆಂಕಿಗಾಹುತಿಯಾದ ವಾಹನಗಳು

ಬೆಂಕಿಗಾಹುತಿಯಾದ ವಾಹನಗಳು

  • Share this:
ಬೆಳಗಾವಿ ತಾಲೂಕಿನ ಗೌಂಡವಾಡ (Goundavada, Belagavi) ಗ್ರಾಮದಲ್ಲಿ ನಡೆದ ಕೊಲೆ (Murder) ಸಂಬಂಧ ಇಡೀ ಹಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಉದ್ರಿಕ್ತರ ಗುಂಪು 10ಕ್ಕೂ ಹೆಚ್ಚು ವಾಹನಗಳು (Vehicles), ಮೇವಿನ (Fodder) ಬಣವೆಗಳಿಗೆ ಬೆಂಕಿ ಹಾಕಿದೆ. ಕಾರು ಪಾರ್ಕಿಂಗ್ (Car Parking) ವಿಚಾರ‌ಕ್ಕೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ‌ಗೈದ ಬಳಿಕ ಗ್ರಾಮದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. 37 ವರ್ಷದ ಸತೀಶ್ ಪಾಟೀಲ್ ಕೊಲೆಯಾದ ವ್ಯಕ್ತಿ. ಕೊಲೆಯಾದ ಸತೀಶ್ ಗ್ರಾಮದಲ್ಲಿಯ ಒಂದು ಗುಂಪಿನೊಂದಿಗೆ ವೈಷಮ್ಯ ಹೊಂದಿದ್ದರು. ಕಾರ್ ಪಾರ್ಕಿಂಗ್ ವಿಚಾರಕ್ಕೆ ಆರಂಭವಾದ ಗಲಾಟೆ ಹಳೆಯ ವೈಷಮ್ಯಕ್ಕೆ ತಿರುಗಿಕೊಂಡಿದೆ. ಈ ವೇಳೆ ದುಷ್ಕರ್ಮಿಗಳು ಸತೀಶ್ ಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ.

ಗ್ರಾಮದ ಕಾಳಭೈರವನಾಥ ದೇವಸ್ಥಾನಕ್ಕೆ ಸೇರಿದ ಜಮೀನು ವಿಚಾರವಾಗಿ ಸತೀಶ್ ಕೆಲವರೊಂದಿಗೆ ವೈಷಮ್ಯ ಹೊಂದಿದ್ದರು. ಈ ವಿವಾದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದೆ. ದೇವಸ್ಥಾನಕ್ಕೆ ಮೀಸಲಿಟ್ಟ ಜಾಗ ಮಾರಲು ಪ್ಲಾನ್ ಮಾಡುತ್ತಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆ ಗ್ರಾಮದಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಸತೀಶ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

'ಭೂ ಉಳಿತಾಯ ಮೋರ್ಚಾ' ಹೆಸರಿನಲ್ಲಿ ಹೋರಾಟ

ದೇವಸ್ಥಾನ ಜಮೀನು ಉಳಿವಿಗಾಗಿ ಸತೀಶ್ ಹೋರಾಟ ಮಾಡಿಕೊಂಡು ಬಂದಿದ್ದರು. 'ಭೂ ಉಳಿತಾಯ ಮೋರ್ಚಾ' ಹೆಸರಿನಲ್ಲಿ ಸತೀಶ್ ಹೋರಾಟ ಆರಂಭಿಸಿದ್ದರು.

ಸತೀಶ್ ಪಾಟೀಲ್ ಕೊಲೆ ಬೆನ್ನಲ್ಲೇ ಗ್ರಾಮದಲ್ಲಿ ಹಿಂಸಾಚಾರ ನಡೆದಿದೆ. ಇನ್ನೋವಾ ಸೇರಿ ನಾಲ್ಕು ಕಾರು, ಒಂದು ಟ್ರ್ಯಾಕ್ಟರ್, ಎರಡು ಟೆಂಪೋ ಸೇರಿ ಹಲವು ವಾಹನಗಳಿಗೆ ಬೆಂಕಿ ಹಾಕಲಾಗಿದೆ. ದುಷ್ಕರ್ಮಿಗಳು ಗ್ರಾಮದ ಹಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಇದನ್ನೂ ಓದಿ:  Mekedatu Project: ಜೂ 23ಕ್ಕೆ CWMA ಸಭೆಯಲ್ಲಿ ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚೆ, ಸ್ಟಾಲಿನ್ ಆಕ್ರೋಶ

ಗ್ರಾಮದಲ್ಲಿ ಪೊಲೀಸರ ನಿಯೋಜನೆ

ಸ್ಥಳಕ್ಕೆ ಆಗಮಿಸಿ 3 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು ಬೆಂಕಿಯನ್ನು ನಂದಿಸಿದ್ದಾರೆ. ಗೌಂಡವಾಡ ಗ್ರಾಮಕ್ಕೆ ಪೊಲೀಸ್ ಆಯುಕ್ತ ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಸತೀಶ್ ಕೊಲೆಯ ಸಂಬಂಧ ಐವರು ಮತ್ತು ಗ್ರಾಮದಲ್ಲಿಯ ಗಲಾಟೆಗೆ ಸಂಬಂಧ 15 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಹಿನ್ನೆಲೆ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದೆ.

ಕುಟುಂಬಸ್ಥರ ಆಕ್ರಂದನ

ಇತ್ತ ಸತೀಶ್ ಪಾಟೀಲ್ ಸಾವಿನ ಸುದ್ದಿಯಿಂದಾಗಿ ಮನೆಯಲ್ಲಿ ಕರಿಛಾಯೆ ಆವರಿಸಿದೆ. ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದ್ದು, ದುಷ್ಕರ್ಮಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸತೀಶ್ ಪಾಟೀಲ್ ಪತ್ನಿ ಸ್ನೇಹಾ, ಪತಿಯ ಚಪ್ಪಲಿ, ಬೈಕ್ ಹಿಡಿದು ಕಣ್ಣೀರು ಹಾಕುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೀಕರ ರಸ್ತೆ ಅಪಘಾತ

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ತಂದೆ- ಮಗ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಆಲೂರು-ಈಶ್ವರಹಳ್ಳಿ ಕೂಡಿಗೆ ಸಮೀಪ ಅಪಘಾತ ಸಂಭವಿಸಿದೆ.

ಇದನ್ನೂ ಓದಿ:  Pension Golmaal: ಅಂಚೆ ಕಚೇರಿ ನೌಕರರಿಂದಲೇ 1.27 ಕೋಟಿ ರೂಪಾಯಿ ಲೂಟಿ, ಸತ್ತವರ ಹೆಸರಲ್ಲೂ ಗೋಲ್ಮಾಲ್!

ಕ್ಯಾಂಟರ್ ಹಾಗೂ ಮಾರುತಿ-800  ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ತಮಿಳುನಾಡು ಮೂಲದ ಅಂಜನಪ್ಪ (40), ಕಾರ್ತಿಕ್ (17) ಮೃತಪಟ್ಟ ತಂದೆ ಮಗ. ಗಾಯಾಳುಗಳಾದ ಪುನೀತ್(15), ಕಾರ್ತಿಕ್ (19), ರಾಮಚಂದ್ರ (40) ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಧರ್ಮಸ್ಥಳಕ್ಕೆ ಎರಡು ಕಾರಿನಲ್ಲಿ 10 ಜನ ತೆರಳುತ್ತಿದ್ದರು. ಅದರಲ್ಲಿ ಒಂದು ಕಾರು ಅಪಘಾತವಾಗಿದೆ. ಸ್ಥಳಕ್ಕೆ ಆಲೂರು ವೃತ್ತ ನಿರೀಕ್ಷಕ ಹೇಮಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.
Published by:Mahmadrafik K
First published: