• Home
  • »
  • News
  • »
  • state
  • »
  • Belagavi Politics: ರಾಜಕೀಯ ಮುಖಂಡರಿಂದ ಬೆಳಗಾವಿಯಲ್ಲಿ ಓಲೈಕೆ ರಾಜಕೀಯ; ಜನರಿಗೆ ಹಲವು ಬಗೆ ಬಗೆಯ ಗಿಫ್ಟ್

Belagavi Politics: ರಾಜಕೀಯ ಮುಖಂಡರಿಂದ ಬೆಳಗಾವಿಯಲ್ಲಿ ಓಲೈಕೆ ರಾಜಕೀಯ; ಜನರಿಗೆ ಹಲವು ಬಗೆ ಬಗೆಯ ಗಿಫ್ಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಪಿಯುಸಿ ವಿದ್ಯಾರ್ಥಿಗಳಿಗೆ ಅನಕೂಲ ಆಗೋ ದೃಷ್ಠಿಯಿಂದ ಕೈಪಿಡಿ ಹಂಚಿಕೆ ಮಾಡುತ್ತಿದ್ದಾರೆ.

  • News18 Kannada
  • Last Updated :
  • Belgaum, India
  • Share this:

ಬೆಳಗಾವಿ: ರಾಜ್ಯದಲ್ಲಿ 2023ರ ಸಾರ್ವತ್ರಿಕ ಚುನಾವಣೆಗೆ (Assembly Election 2023) ಇನ್ನೂ 5 ತಿಂಗಳು ಬಾಕಿ ಉಳಿದಿದೆ. ಇನ್ನೂ ಯಾವುದೇ ಪಕ್ಷ ಟಿಕೆಟ್ (Election Ticket) ಸಹ ಘೋಷಣೆ ಮಾಡಿಲ್ಲ. ಆದರೆ ಬೆಳಗಾವಿ (Belagavi) ಜಿಲ್ಲೆಯಲ್ಲಿ ಈಗನಿಂದಲೇ ಓಲೈಕೆ ರಾಜಕೀಯ (Politics) ಆರಂಭವಾಗಿದೆ. ಬೆಳಗಾವಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಮತದಾರರಿಗೆ ಹಲವು ಬಗೆಯ ಗಿಫ್ಟ್​​ಗಳನ್ನು ನೀಡಲಾಗುತ್ತಿದೆ. ಟಿಫನ್ ಬಾಕ್ಸ್, ಸೀರೆ, ಕನ್ನಡಕ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪುಸ್ತಕಗಳು ಮತದಾರರ ಕೈ ಸೇರುತ್ತಿವೆ. ಬೆಳಗಾವಿ ಗ್ರಾಮೀಣ (Belagavi Rural) ಹಾಗೂ ಖಾನಾಪುರ (Khanapura) ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar), ಅಂಜಲಿ ನಿಂಬಾಳ್ಕರ್ (Anjali Nimbalkar) ಮತದಾರರಿಗೆ ಅರಶಿನ- ಕುಂಕುಮ ಕಾರ್ಯಕ್ರಮ ಮಾಡಿ ಟಿಫನ್ ಬಾಕ್ಸ್ ನೀಡುತ್ತಿದ್ದಾರೆ. ಪ್ರತಿ ಹಳ್ಳಿ ಹಳ್ಳಿಯಲ್ಲಿಯೂ ಈ ಕಾರ್ಯಕ್ರಮ ನಡೆಯುತ್ತಿದ್ದು, ಮಹಿಳೆಯರ (Women Voters) ಓಲೈಕೆಗೆ ಮುಂದಾಗಿದ್ದಾರೆ.


ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಪಿಯುಸಿ ವಿದ್ಯಾರ್ಥಿಗಳಿಗೆ ಅನಕೂಲ ಆಗೋ ದೃಷ್ಠಿಯಿಂದ ಕೈಪಿಡಿ ಹಂಚಿಕೆ ಮಾಡುತ್ತಿದ್ದಾರೆ.


ಕ್ಷೇತ್ರದ ಜನತೆಗೆ ಬಗೆ ಬಗೆಯ ಕೊಡುಗೆಗಳು


ಖಾನಾಪುರ ಕ್ಷೇತ್ರ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದಲೂ ಜನರಿಗೆ ಗಿಫ್ಟ್ ನೀಡಲಾಗುತ್ತಿದೆ. ದಿಲೀಪ್ ಕುಮಾರ್, ಡಾ. ಸೋನಾಲಿ ಸರ್ನೋಬತ್ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ದಿಲೀಪ್ ಕುಮಾರ್ ಸೀರೆ, ಅರಶಿಣ, ಕುಂಕುಮ ಇರೋ ಕಿಟ್ ವಿತರಣೆ ಮಾಡುತ್ತಿದ್ದಾರೆ.


ಇನ್ನೂ ಡಾ. ಸೋನಾಲಿಯಿಂದ ಕ್ಷೇತ್ರ ಜನರಿಗೆ ಗಿಫ್ಟ್ ರೂಪದಲ್ಲಿ ಕನ್ನಡಕ ವಿತರಣೆ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಗೆ ಐದು ತಿಂಗಳು ಬಾಕಿ ಇರುವಾಗಲೇ ಗಿಫ್ಟ್ ಭಾಗ್ಯ ಆರಂಭವಾಗಿದೆ.


ಸಂಜಯ್ ಪಾಟೀಲ್ ಪ್ರತಿಕ್ರಿಯೆ


ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿಯರಿಂದ ಜನರಿಗೆ ಗಿಫ್ಟ್ ಹಂಚಿಕೆ ಬಗ್ಗೆ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ್ ಪಾಟೀಲ್  ಮಾತನಾಡಿದ್ದಾರೆ. ನಾನು ಅರಶಿನ, ಕುಂಕುಮ ಕಾರ್ಯಕ್ರಮಕ್ಕೆ ಹೋಗಲ್ಲ. ಆದರೇ ಗ್ರಾಮೀಣ ಕ್ಷೇತ್ರದಲ್ಲಿ ಟಿಫನ್ ಬಾಕ್ಸ್ ಹಂಚಿಕೆ ಗಮನಕ್ಕೆ ಇದೆ. ಬಿಜೆಪಿ ಕಾರ್ಯಕರ್ತರು ಟಿಫನ್ ಬಾಕ್ಸ್ ತೆಗೆದುಕೊಳ್ಳಲ್ಲ.


ಇದನ್ನೂ ಓದಿ:  Moral Science: ನೈತಿಕ ಶಿಕ್ಷಣ ಪಠ್ಯ ಸಿದ್ಧಪಡಿಸಲು ಮಠಾಧೀಶರ ಸಲಹೆ ಕೇಳಿದ BC Nagesh


ಜ್ಞಾನದ ವೃದ್ಧಿಗೆ ಪುಸ್ತಕ ಹಂಚಿಕೆ


ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಆಗಬೇಕು. ಮತವನ್ನು ಯಾರೊಬ್ಬರು ಮಾರಾಟ ಮಾಡಬಾರದು. ಬಿಜೆಪಿ ಶಾಸಕರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪುಸ್ತಕ ಹಂಚಿಕೆ ವಿಚಾರ. ನಾವೇನು ಸಾರಾಯಿ ಹಂಚುತ್ತಿಲ್ಲವಲ್ಲ. ಜ್ಞಾನದ ವೃದ್ಧಿಗೆ ಪುಸ್ತಕ ಹಂಚಿಕೆ ಮಾಡುತ್ತಿದ್ದೇವೆ ಎಂದರು.


ಬಡವರ ಮಕ್ಕಳ ಕಲಿಕೆಗೆ ಪುಸ್ತಕ ಅನುಕೂಲ ಆಗಿದೆ. ಟಿಫನ್ ಬಾಕ್ಸ್ ಬಗ್ಗೆ ನಾನೇನು ಟೀಕೆ ಮಾಡಿಲ್ಲ. ಮತ ಹಾಕಬೇಕು ಎಂದು ಷರತ್ತು ವಿಧಿಸುವ ಪ್ರಕ್ರಿಯೆ ನಡೆದಿದೆ. ದೇವಸ್ಥಾನಕ್ಕೆ 50 ಲಕ್ಷ ಕೊಡುತ್ತೇವೆ ಬೇರೆ ಲೇಬಲ್ ಹಚ್ಚಬೇಡಿ ಈ ರೀತಿಯ ಕೆಲಸ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದಿದೆ. ಯಾರು ಅಭಿವೃದ್ಧಿ ಮಾಡುತ್ತಾರೆ ಅವರಿಗೆ ಆಮಿಷ ಒಡ್ಡುವ ಅವಶ್ಯಕತೆ ಇಲ್ಲ ಎಂದರು.


ಇದನ್ನೂ ಓದಿ:  Basavaraj Bommai: ದೇವೇಂದ್ರ ಫಡ್ನವಿಸ್ ಹೇಳಿಕೆಗೆ ಸಿಎಂ ಬೊಮ್ಮಾಯಿ ಖಡಕ್ ತಿರುಗೇಟು


ಬಿಜೆಪಿ ಟಿಕೆಟ್ ಆಕಾಂಕ್ಷಿಯ ಪ್ರಮಾಣ


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ. ಪಿ ಕುಮಾರಸ್ವಾಮಿ ಮೇಲಿನ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮೂಡಿಗೆರೆ ತಾಲೂಕಿನ ಬಿಜೆಪಿ ಟಿಕೆಟ್ ಆಕಾಂಕ್ಷಿ ದೀಪಕ್ ದೊಡ್ಡಯ್ಯ ಸ್ಪಷ್ಟಪಡಿಸಿದ್ದಾರೆ.


ಇದರ ಸತ್ಯಾಸತ್ಯತೆಯನ್ನೂ ನೀನೇ ಪರಿಶೀಲನೆ ಮಾಡಿ, ತಪ್ಪಿತಸ್ಥರಿಗೆ ನ್ಯಾಯ-ನೀತಿ-ಧರ್ಮದ ಆಧಾರದಲ್ಲಿ ಶಿಕ್ಷೆ ಕೊಡು ಎಂದು ಸೃಷ್ಠಿಕರ್ತ ಓಂಕಾರೇಶ್ವರನಲ್ಲಿ ಬೇಡಿಕೊಂಡಿದ್ದಾರೆ

Published by:Mahmadrafik K
First published: