ಬೆಳಗಾವಿ(ಜು.23): ಅರಣ್ಯ ಸಚಿವರ ತವರು ಜಿಲ್ಲೆಯಲ್ಲೇ ಅರಣ್ಯ ವೀಕ್ಷಕರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾಡುಕೋಣ ಇರಿದು ಕೈ, ಬೆನ್ನೆಲುಬು ಮುರಿದುಕೊಂಡ ಅರಣ್ಯ ಇಲಾಖೆಯ ದಿನಗೂಲಿ ನೌಕರನೊಬ್ಬರು ತಾನು ಮಾಡುವ ಕೆಲಸವಿಲ್ಲದೇ, ಪರಿಹಾರವೂ (Compensation) ಇಲ್ಲದೇ ಅಲೆದಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಕೃಷ್ಣ ಗುರವ್ ಎಂಬುವವರು ತಾನು ಮಾಡುತ್ತಿ ಅರಣ್ಯ (Forest) ವೀಕ್ಷಕ ಕೆಲಸವಿಲ್ಲದೇ ಸರ್ಕಾರದ (Govt) ಪರಿಹಾರವೂ ಇಲ್ಲದೇ ಪರದಾಡುತ್ತಿದ್ದಾರೆ. ಪ್ರಕರಣದ ಹಿನ್ನೆಲೆ ನೋಡುವುದಾದರೆ, ಏಪ್ರಿಲ್ 3ರಂದು ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಕಬ್ಬಿನ ಗದ್ದೆಗಳಲ್ಲಿ ಕಾಡುಕೋಣಗಳು ಪ್ರತ್ಯಕ್ಷವಾಗಿದ್ದವು.
ಈ ಬಗ್ಗೆ ಅರಣ್ಯ ಇಲಾಖೆಗೆ ಕೆಂಪಟ್ಟಿ ಗ್ರಾಮಸ್ಥರು ದೂರು ನೀಡಿದ್ದರು. ಇತ್ತ ಚಿಕ್ಕೋಡಿ ಅರಣ್ಯ ಇಲಾಖೆ ರೇಂಜ್ನಲ್ಲಿ ದಿನಗೂಲಿ ಆಧಾರದಲ್ಲಿ ಅರಣ್ಯ ವೀಕ್ಷಕನಾಗಿ (Forest Watcher) ಕೆಲಸ ಮಾಡ್ತಿದ್ದ ಕೃಷ್ಣಾ ಗುರವ್ ಅವರನ್ನು ಕಾಡುಕೋಣ ಸೆರೆಗೆ ಕೃಷ್ಣ ಗುರವ್ ಸೇರಿ ಇತರೆ ಸಿಬ್ಬಂದಿಗಳನ್ನು ಕಳುಹಿಸಿದ್ದರು. ಈ ವೇಳೆ ಮೇಲಾಧಿಕಾರಿಗಳು ಕೃಷ್ಣ ಗುರವ್ ಹೋಗಲು ಒಪ್ಪದಿದ್ದಾಗ ಅವಾಚ್ಯ ಶಬ್ದಗಳಿಂದ ಬೈದು ಕಳಿಸಿದ ಆರೋಪ ಅಧಿಕಾರಿಗಳ ಮೇಲಿದೆ.
ಕಾಡುಕೋಣ ಇರಿದು ಗಂಭೀರ ಗಾಯ
ಕಾಡುಕೋಣ ಸೆರೆ ಹಿಡಿಯುವ ಬಗ್ಗೆ ಏನು ಗೊತ್ತೇ ಇಲ್ಲದ ಅಮಾಯಕ ದಿನಗೂಲಿ ನೌಕರನನ್ನು ಅಧಿಕಾರಿಗಳು ಕಳುಸಿದ್ದಾರೆ. ಈ ವೇಳೆ ಕಾಡುಕೋಣ ಇರಿದು ಗಂಭೀರ ಗಾಯಗೊಂಡಿದ್ದ ಕೃಷ್ಣ ಗುರವ್ ಅವರಿಗೆ ಇರಿದು ಎಡಗೈ ಮೂಳೆ ಮುರಿದು ಆಸ್ಪತ್ರೆ ದಾಖಲಾಗಿದ್ದರು. ಇದರ ಜೊತೆಗೆ ಬೆನ್ನೆಲುಬು ಮುರಿದಿತ್ತು. ಹೀಗಾಗಿ ಅವರನ್ನ ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: Kolara: ಸೋನಿಯಾ ED ವಿಚಾರಣೆ ವಿರುದ್ಧದ ಪ್ರತಿಭಟನೆಯಲ್ಲೂ ಒಗ್ಗಟ್ಟಿಲ್ಲ, ಕಾಂಗ್ರೆಸ್ ಗುಂಪುಗಾರಿಕೆ!
ಎರಡು ತಿಂಗಳ ವೇತನವೂ ಸಿಗಲಿಲ್ಲ
ಅಧಿಕಾರಿಗಳು ಕೃಷ್ಣಾ ಗುರವ್ಗೆ ಆಸ್ಪತ್ರೆಯ ಸಂಪೂರ್ಣ ಚಿಕಿತ್ಸಾ ವೆಚ್ಚ ಸಮೇತ ಖಾಯಂ ನೌಕರಿ, ವೇತನ ನೀಡುವ ಭರವಸೆ ನೀಡಿದ್ದರಂತೆ. ಆದ್ರೆ ಬಳಿಕ ಆಸ್ಪತ್ರೆ ಚಿಕಿತ್ಸಾ ವೆಚ್ಚ 60 ಸಾವಿರ ರೂ ಹಣವನ್ನು ನೀಡಿ ಕೈ ತೊಳೆದುಕೊಂಡಿದ್ದಾರೆ. ಘಟನೆಗೂ ಮುನ್ನ ತಾನು ಸೇವೆ ಸಲ್ಲಿಸಿದ ಎರಡು ತಿಂಗಳ ವೇತನವನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ನೀಡಿಲ್ಲ.
ಇದನ್ನೂ ಓದಿ: School Students: ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಲು 132 ಕೋಟಿ ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ
ಮನೆಯಲ್ಲಿ ಇಬ್ಬರು ಚಿಕ್ಕಮಕ್ಕಳು, ಪತ್ನಿ, ವೃದ್ಧ ತಂದೆ ತಾಯಿ ಇದ್ದಾರೆ. ಹೇಗಾದರೂ ಮಾಡಿ ಸಹಾಯ ಮಾಡಿ ಕೆಲಸ ಮತ್ತು ಬಾಕಿ ವೇತನ ಕೊಡಿಸಿ ಅಂತಾ ಮನವಿ ಮಾಡಿಕೊಂಡರು. ನಾಲ್ಕು ತಿಂಗಳಿಂದ ಮನೆಯಲ್ಲಿ ಇದ್ದೇನೆ. ತುತ್ತು ಅನ್ನ ತಿನ್ನಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಅಂತಾ ತನ್ನ ಮೇಲಾಧಿಕಾರಿ ಉಮೇಶ್ ವಿರುದ್ಧ ಪ್ರಧಾನಿ ಮತ್ತು ರಾಯಬಾಗ ಪೊಲೀಸರಿಗೆ ದೂರು ನೀಡಿದ್ದಾರೆ. ನೆರವಿನ ನಿರೀಕ್ಷೆಯಲ್ಲಿ ಕೃಷ್ಣ ಗುರವ್ ಇದ್ದಾರೆ.
ಈ ಹಿಂದೆಯೂ ಹಲವಾರು ಬಾರಿ ಇಂಥಹ ಘಟನೆಗಳು ನಡೆದಿದ್ದು ತಳಮಟ್ಟದಲ್ಲಿ ಕೆಲಸ ಮಾಡುವ ನೌಕರರ ವಿರುದ್ಧ ಮೇಲಧಿಕಾರಿಗಳ ನಿರ್ಲಕ್ಷ್ಯ ಸಾಬೀತಾಗುತ್ತಲೇ ಇರುತ್ತದೆ. ಇದರಿಂದಾಗಿ ಕಾರ್ಮಿಕರು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತಿದೆ. ಸಂಬಳಕ್ಕಾಗಿ ದುಡಿದ ವ್ಯಕ್ತಿಗೆ ಸಂಬಳವೂ ಇಲ್ಲ, ದುಡಿಯುವ ಸ್ಥಿತಿಯೂ ಇಲ್ಲದಂತೆ ಮಾಡಿಹಾಕಿರುವುದು ಮಾತ್ರ ನಿಜಕ್ಕೂ ವಿಪರ್ಯಾಸ.
ಇಷ್ಟೆಲ್ಲ ನಡೆದ ಮೇಲೆ ಕಾರ್ಮಿಕನ ಕುರಿತು ಜವಾಬ್ದಾರಿ ಇಲ್ಲದೆ ಉಡಾಫೆಯಿಂದ ವರ್ತಿಸಿರುವ ಅಧಿಕಾರಿಗಳು ತಕ್ಷಣ ಈ ಬಗ್ಗೆ ಸ್ಪಂದಿಸಿ ಕ್ರಮ ಕೈಗೊಳ್ಳಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ