ಮಂತ್ರಿಗಿರಿ ಪೈಪೋಟಿಯಲ್ಲಿ ಬೆಳಗಾವಿ ಶಾಸಕರು ಮಗ್ನ: ಕೇಳೋರಿಲ್ಲದೆ ಬೀದಿಗೆ ಬಿದ್ದ ಜನ; ಹೆಸರಿಗೆ ಮಾತ್ರ ಜಿಲ್ಲಾ ಉಸ್ತುವಾರಿ

ಪ್ರವಾಹ ಪೀಡಿತ ಪ್ರದೇಶ ಜನರು ನೇರವಾಗಿ ಕಂದಾಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ತೊಡಿಕೊಳ್ಳುವ ಸ್ಥಿತಿ ಇದೆ. ಜಿಲ್ಲೆಯಲ್ಲಿ ಅನೇಕ ಪ್ರಭಾವಿ ಶಾಸಕರ ಒತ್ತಡ, ಇಲ್ಲಿನ ಒಳ ರಾಜಕೀಯ ಜಗದೀಶ ಶೆಟ್ಟರ್ ಗೊತ್ತಿದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ನೆರವಾಗಿ ಪರಿಣಾಮ ಬೀರಿದೆ. ಇಲ್ಲಿ ಯಾವುದೇ ಸಮಸ್ಯೆ ಇದ್ದರು ಯಾರ ಬಳಿಗೆ ಹೋಗಬೇಕು ಎನ್ನುವ ಪ್ರಶ್ನೆ ಸಾರ್ವಜನಿಕರಿಗೆ ಕಾಡುತ್ತಿದೆ.

news18-kannada
Updated:February 6, 2020, 7:28 AM IST
ಮಂತ್ರಿಗಿರಿ ಪೈಪೋಟಿಯಲ್ಲಿ ಬೆಳಗಾವಿ ಶಾಸಕರು ಮಗ್ನ: ಕೇಳೋರಿಲ್ಲದೆ ಬೀದಿಗೆ ಬಿದ್ದ ಜನ; ಹೆಸರಿಗೆ ಮಾತ್ರ ಜಿಲ್ಲಾ ಉಸ್ತುವಾರಿ
ಬೆಳಗಾವಿ ಪ್ರವಾಹ ಸಂತ್ರಸ್ಥರು
  • Share this:
ಬೆಳಗಾವಿ(ಫೆ.06): ಅತ್ತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಬೆಳಗಾವಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ ಎಂದು ಅನೇಕ ಶಾಸಕರು ಅಸಮಧಾನಗೊಂಡಿದ್ದಾರೆ. ಇತ್ತ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮವರಲ್ಲದ ಕಾರಣ ಅಭಿವೃದ್ಧಿ ಹಾಗೂ ನೆರೆ ಪರಿಹಾರ ಕಾಮಾಗಾರಿ ಕೆಲಸಗಳು ಸರಿಯಾಗಿ ಆಗುತ್ತಿಲ್ಲ ಎಂದು ಸ್ಥಳೀಯ ಶಾಸಕರು ಆರೋಪಿಸುತ್ತಿದ್ದಾರೆ. ಈ ಮಧ್ಯೆಯೇ ಬೆಳಗಾವಿ ಮೂಲದ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಇದ್ದರೂ ಜಿಲ್ಲಾ ಉಸ್ತುವಾರಿ ಮಾತ್ರ ಸಚಿವ ಜಗದೀಶ ಶೆಟ್ಟರ್ ಹೆಗಲಿಗೆ ವಹಿಸಲಾಗಿದೆ. ಇವರು ಉಸ್ತುವಾರಿ ಸಚಿವರಾದ ಬಳಿಕ 3 ತಿಂಗಳ ಹಿಂದೆ ಕಚೇರಿ ಉದ್ಘಾಟಿಸಿದರೆ ಹೊರತು ನಂತರ ಒಮ್ಮೆಯೂ ಭೇಟಿ ನೀಡಲಿಲ್ಲ. ಯಾವುದೇ ಕೆಲಸಕ್ಕೂ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಹೌದು, ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಇನ್ನೂ ನಡೆಯುತ್ತಿದೆ. ಆದರೂ ಇಲ್ಲಿಯವರೆಗೂ ಒಮ್ಮೆಯೂ ಸಚಿವರು ಈ ಸ್ಥಳಗಳಿಗೆ ಭೇಟಿ ಕೊಟ್ಟಿಲ್ಲ. ಕೇವಲ ಕಾಟಾಚಾರಕ್ಕೆ ಜಿಲ್ಲಾ ಉಸ್ತುವಾರಿಯನ್ನು ಜಗದೀಶ ಶೆಟ್ಟರ್ ವಹಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಪ್ರವಾಹ ಪೀಡಿತ ಪ್ರದೇಶ ಜನರು ನೇರವಾಗಿ ಕಂದಾಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ತೊಡಿಕೊಳ್ಳುವ ಸ್ಥಿತಿ ಇದೆ. ಜಿಲ್ಲೆಯಲ್ಲಿ ಅನೇಕ ಪ್ರಭಾವಿ ಶಾಸಕರ ಒತ್ತಡ, ಇಲ್ಲಿನ ಒಳ ರಾಜಕೀಯ ಜಗದೀಶ ಶೆಟ್ಟರ್ ಗೊತ್ತಿದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ನೆರವಾಗಿ ಪರಿಣಾಮ ಬೀರಿದೆ. ಇಲ್ಲಿ ಯಾವುದೇ ಸಮಸ್ಯೆ ಇದ್ದರು ಯಾರ ಬಳಿಗೆ ಹೋಗಬೇಕು ಎನ್ನುವ ಪ್ರಶ್ನೆ ಸಾರ್ವಜನಿಕರಿಗೆ ಕಾಡುತ್ತಿದೆ.

ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪಗಿಂತ ಮಗ ಬಿ. ವೈ ವಿಜಯೇಂದ್ರ ಪ್ರಭಾವಿ: ಹೇಗಂತೀರಾ? ಇಲ್ಲಿ ಓದಿ..

ಪ್ರವಾಹ  ನಿರ್ವಹಣೆ, ಗಡಿ ಬಗ್ಗೆ ಮಹಾರಾಷ್ಟ್ರ ಸರ್ಕಾರ ಕ್ಯಾತೆ ನಿರ್ವಹಿಸುವಲ್ಲಿ ಶೆಟ್ಟರ್ ವಿಫಲರಾಗಿದ್ದಾರೆ. ಒಂದೆಡೆ ಜಿಲ್ಲೆಯಿಂದ ಸಚಿವರಾಗಲು ರಮೇಶ ಜಾರಕಿಹೊಳಿ, ಉಮೇಶ ಕತ್ತಿ, ಶ್ರೀಮಂತ ಪಾಟೀಲ್ ಹಾಗೂ ಮಹೇಶ ಕುಮಟಹಳ್ಳಿ ಭರ್ಜರಿ ಪೈಪೋಟಿ ನಡೆಸುತ್ತಿದ್ದಾರೆ. ಇನ್ನೊಂದೆಡೆ ಇವರು ಪ್ರತಿನಿಧಿಸುವ ಬೆಳಗಾವಿ ಜಿಲ್ಲಾಡಳಿತ ವ್ಯವಸ್ಥೆಯೇ ಕುಸಿದಿದೆ. ಇದನ್ನು ಸರಿ ಮಾಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚಿನ ಆಸಕ್ತಿ ತೋರದಂತೆ ಕಾಲ ಕಳೆಯುತ್ತಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ಇನ್ನಾದರೂ ಈ ಬಗ್ಗೆ ಸರಿಯಾದ ಸರ್ಕಾರ ಕ್ರಮ ಕೈಗೊಳ್ಳಲಿದೆಯೇ ಕಾದು ನೋಡಬೇಕಿದೆ.
First published:February 6, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ