ಡಿಸಿಎಂ ಕೈತಪ್ಪಿದ ಬೆಳಗಾವಿ ಉಸ್ತುವಾರಿ; ಸಿಎಂ ಬಿಎಸ್​​ವೈ ನಡೆಯಿಂದ ಲಕ್ಷ್ಮಣ್ ಸವದಿಗೆ ಭಾರೀ ಬೇಸರ

ಡಿಸಿಎಂ ಲಕ್ಷ್ಮಣ್​​ ಸವದಿ ಮೂಲತ ಬೆಳಗಾವಿಯಾದರೂ, ಜಿಲ್ಲಾ ಉಸ್ತುವಾರಿ ಮಾತ್ರ ಮಾಜಿ ಸಿಎಂ ಜಗದಿಶ್​​ ಶೆಟ್ಟರ್​​ ಅವರಿಗೆ ನೀಡಲಾಗಿದೆ. ಜಗದೀಶ್​​ ಶೆಟ್ಟರ್​ ಅವರಿಗೆ ಹುಬ್ಬಳ್ಳಿ- ಧಾರವಾಡ ಜೊತೆಗೆ ಬೆಳಗಾವಿ ಉಸ್ತುವಾರಿ ನೀಡಿರುವುದು ಸವದಿಗೆ ಭಾರೀ ಬೇಸರ ತರಿಸಿದೆ.

news18
Updated:September 16, 2019, 6:57 PM IST
ಡಿಸಿಎಂ ಕೈತಪ್ಪಿದ ಬೆಳಗಾವಿ ಉಸ್ತುವಾರಿ; ಸಿಎಂ ಬಿಎಸ್​​ವೈ ನಡೆಯಿಂದ ಲಕ್ಷ್ಮಣ್ ಸವದಿಗೆ ಭಾರೀ ಬೇಸರ
ಸಿಎಂ ಬಿಎಸ್​​ವೈ, ಡಿಸಿಎಂ ಲಕ್ಷ್ಮಣ ಸವದಿ, ಜಗದೀಶ್​​ ಶೆಟ್ಟರ್​​
  • News18
  • Last Updated: September 16, 2019, 6:57 PM IST
  • Share this:
ಬೆಂಗಳೂರು(ಸೆ.16): ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಆದೇಶ ಹೊರಡಿಸಿದೆ. ತನ್ನ ಬದಲಿಗೆ ಮಾಜಿ ಸಿಎಂ ಜಗದೀಶ್​​ ಶೆಟ್ಟರ್​​ ಅವರಿಗೆ ಬೆಳಗಾವಿ ಉಸ್ತುವಾರಿ ನೀಡುವ ಮೂಲಕ ಯಡಿಯೂರಪ್ಪ ಡಿಸಿಎಂ ಲಕ್ಷ್ಮಣ್​​ ಸವದಿಗೆ ನಿರಾಸೆ ಮೂಡಿಸಿದ್ಧಾರೆ. ಹೀಗಾಗಿ ಮುಖ್ಯಮಂತ್ರಿ ಮೇಲೆ ಡಿಸಿಎಂ ಮುನಿಸಿಕೊಂಡಿದ್ಧಾರೆ ಎನ್ನಲಾಗಿದೆ.

ಡಿಸಿಎಂ ಲಕ್ಷ್ಮಣ್​​ ಸವದಿ ಮೂಲತ ಬೆಳಗಾವಿಯಾದರೂ, ಜಿಲ್ಲಾ ಉಸ್ತುವಾರಿ ಮಾತ್ರ ಮಾಜಿ ಸಿಎಂ ಜಗದಿಶ್​​ ಶೆಟ್ಟರ್​​ ಅವರಿಗೆ ನೀಡಲಾಗಿದೆ. ಜಗದೀಶ್​​ ಶೆಟ್ಟರ್​ ಅವರಿಗೆ ಹುಬ್ಬಳ್ಳಿ- ಧಾರವಾಡ ಜೊತೆಗೆ ಬೆಳಗಾವಿ ಉಸ್ತುವಾರಿ ನೀಡಿರುವುದು ಸವದಿಗೆ ಭಾರೀ ಬೇಸರ ತರಿಸಿದೆ. ಸಿಎಂ ತನಗೇಕೆ ಜಿಲ್ಲಾ ಉಸ್ತುವಾರಿ ನೀಡಲಿಲ್ಲ ಎಂದು ಸವದಿ ಚಿಂತೆಗೀಡಾಗಿದ್ದಾರೆ.

ಇತ್ತ ತನಗೆ ಬೆಳಗಾವಿ ಉಸ್ತುವಾರಿ ಖಾತೆ ಕೈ ತಪ್ಪಿರುವುದರ ಹಿಂದೆ ಅನರ್ಹ ಶಾಸಕ ರಮೇಶ್​​ ಜಾರಕಿಹೊಳಿ ಕೈವಾಡ ಇರಬಹುದು ಎಂದು ಚಿಂತಿಸುತ್ತಿದ್ಧಾರೆ. ಅತ್ತ ಕಳೆದ ವಿಧಾನಸಭೆಯಲ್ಲಿ ಸೋತರು ಸವದಿಗೆ ಹೈಕಮಾಂಡ್​​​ ಡಿಸಿಎಂ ಜೊತೆಗೆ ಸಚಿವ ಸ್ಥಾನ ನೀಡಿದ್ದಾರೆ. ಈ ವಿಚಾರಕ್ಕೆ ಸಚಿವ ಉಮೇಶ್​​ ಕತ್ತಿ ಅಸಮಾಧಾಗೊಂಡಿದ್ದಾರೆ. ಈಗೇನಾದರೂ ಬೆಳಗಾವಿ ಉಸ್ತುವಾರಿ ಸವದಿಗೆ ನೀಡಿದರೆ ಪಕ್ಷದಲ್ಲಿ ಬಂಡಾಯವೇಳುವ ಸಾಧ್ಯತೆಯಿದೆ. ಮುಂದೆ ಒಂದು ವೇಳೆ ರಮೇಶ್​ ಜಾರಕಿಹೊಳಿ ಬಿಜೆಪಿಗೆ ಬಂದಲ್ಲಿ, ಅವಾಗ ಬೆಳಗಾವಿ ಉಸ್ತುವಾರಿ ಅವರಿಗೆ ನೀಡುವ ಎಂಬುದು ಬಿಎಸ್​ವೈ ಲೆಕ್ಕಚಾರ ಎಂಬ ಚರ್ಚೆ ನಡೆಯುತ್ತಿದೆ.

ಈ ಹಿಂದೆಯೇ ಬೆಳಗಾವಿ ಜಿಲ್ಲೆಯಿಂದ ಇಬ್ಬರು ಯಡಿಯೂರಪ್ಪ ಸಂಪುಟ ಸೇರ್ಪಡೆಯಾದರು. ಈ ಪೈಕಿ ಒಬ್ಬರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಮತ್ತೊಬ್ಬರು ಮಹಿಳಾ ಮತ್ತು ಮಕ್ಕಳ ಸಚಿವೆ ಶಶಿಕಲಾ ಜೊಲ್ಲೆಯವರು. ಜೊಲ್ಲೆ ಮೊದಲ ಬಾರಿಗೆ ಸಚಿವರಾಗಿರುವುದರಿಂದ ಅವರಿಗೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ನೀಡುವ ಸಾಧ್ಯತೆ ಕ್ಷೀಣಿಸಿತ್ತು. ಉಪಮುಖ್ಯಮಂತ್ರಿಯಾಗಿರುವುದರಿಂದ ಲಕ್ಷ್ಮಣ ಸವದಿ ಅವರಿಗೆ ಜಿಲ್ಲಾ ಉಸ್ತುವಾರಿ ನೀಡುವ ಸಂಭವ ಹೆಚ್ಚಾಗಿತ್ತು. ಆದರೆ, ಸವದಿಗೆ ಈಗ ಉಸ್ತುವಾರಿ ನೀಡಿ ಮುಂದೆ ರಮೇಶ್‌ ಜಾರಕಿಹೊಳಿ ಅವರು ಸಂಪುಟ ಸೇರಿದ ನಂತರ ಕೇಳಿದರೆ ಬಿಟ್ಟು ಕೊಡಲಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿತ್ತು. ಹೀಗಾಗಿ ಸವದಿಗೆ ನೀಡದೇ ಜಗದೀಶ್​​ ಶೆಟ್ಟರ್ ಅವರಿಗೆ ನೀಡಿದ್ಧಾರೆ ಎನ್ನುತ್ತಿವೆ ಮೂಲಗಳು.

ಇದನ್ನೂ ಓದಿ: ಕಡೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ; ಅಶೋಕ್​, ರಾಮುಲುಗೆ ಕಹಿ - ಸಿಎಂ ಬಳಿಯೇ ಉಳಿದ ಬೆಂಗಳೂರು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತರು ಬಿಜೆಪಿ ಹೈಕಮಾಂಡ್​​​ ಕೃಪೆಯಿಂದ ಲಕ್ಷ್ಮಣ ಸವದಿಗೆ ಡಿಸಿಎಂ ಜೊತೆಗೆ ಸಚಿವ ಸ್ಥಾನ ಸಿಕ್ಕಿದೆ. ಬಿಜೆಪಿ ಹೈಕಮಾಂಡ್​​ ಅಮಿತ್​​ ಶಾ ಅವರೇ ಈ ವರ್ಷಾಂತ್ಯಕ್ಕೆ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಉಸ್ತುವಾರಿ ಜವಾಬ್ದಾರಿ ನೀಡಿದ್ದಾರೆ. ಈ ಮಧ್ಯೆ ಪಕ್ಷದ ವಿರಿಷ್ಠರ ಕೃಪೆಯಿದ್ದರೂ ಡಿಸಿಎಂ ಲಕ್ಷ್ಮಣ ಸವದಿ ರಾಜ್ಯ ಬಿಜೆಪಿಯಲ್ಲಿ ಏಕಾಂಗಿಯಾಗಿದ್ದಾರೆ ಎನ್ನಲಾಗಿತ್ತು.

ಕರ್ನಾಟಕ ಬಿಜೆಪಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಏಕಾಂಗಿಯಾಗಿದ್ದಾರೆ. ತಮಗೆ ಆತ್ಮೀಯರಾಗಿದ್ದ ನಾಯಕರೇ ಈಗ ದೂರವಾಗಿದ್ದಾರೆ. ರಾಜ್ಯದ ಸಚಿವರು, ಶಾಸಕರು ಸವದಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಡಿಸಿಎಂ ಲಕ್ಷ್ಮಣ ಸವದಿ ಆಂತರಿಕವಾಗಿ ಭಾರೀ ನೋವು ಅನುಭವಿಸುತ್ತಿದ್ದಾರೆ ಎನ್ನುತ್ತಿವೆ ಉನ್ನತ ಮೂಲಗಳು.ರಾಜ್ಯ ಬಿಜೆಪಿಯಲ್ಲಿ ಡಾ. ಅಶ್ವಥನಾರಾಯಣ, ಗೋವಿಂದ ಕಾರಜೋಳಗೆ ಸಿಕ್ಕಷ್ಟು ಪ್ರಾಶಸ್ತ್ಯ ಸವದಿಗಿಲ್ಲ. ದೆಹಲಿಗೆ ಹೋದಾಗಲೂ ಸಿಎಂ ಯಡಿಯೂರಪ್ಪ ಸವದಿಯನ್ನ ಕರೆಯಲಿಲ್ಲ. ತಮ್ಮ ರಾಜ್ಯದ ಉಸ್ತವಾರಿಯಾದರೂ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಭೇಟಿ ವೇಳೆ ಸವದಿಗೆ ಯಾವುದೇ ಆಹ್ವಾನ ನೀಡಿಲ್ಲ. ಇವರ ಬದಲಿಗೆ ಸಿಎಂ ಬಿ.ಎಸ್​ ಯಡಿಯೂರಪ್ಪ ಡಾ. ಅಶ್ವಥನಾರಾಯಣ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಕರೆದೊಯ್ದಿದ್ದರು. ಈಗ ತಮಗೆ ಬೆಳಗಾವಿ ಜಿಲ್ಲಾ ಉಸ್ತುವಾರಿಯೂ ಕೈತಪ್ಪಿದ್ದು, ಈ ಅನುಮಾನ ಮತ್ತಷ್ಟು ಗಟ್ಟಿಗೊಂಡಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
-------------
First published:September 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ