ಅನಾಥವಾದ ಬೆಳಗಾವಿ ಪಾಲಿಕೆ; ಅಧಿಕಾರಿಗಳೂ ಇಲ್ಲ, ಜನಪ್ರತಿನಿಧಿಗಳೂ ಇಲ್ಲ

ಅಧಿಕಾರಿಗಳ ಕೊರತೆ ಸಮಸ್ಯೆ ಒಂದೆಡೆ ಆದ್ರೆ ಮತ್ತೊಂದು ಕಡೆ ಪಾಲಿಕೆಯಲ್ಲಿ 11 ತಿಂಗಳಿಂದ ಜನಪ್ರತಿನಿಧಿಗಳು ಇಲ್ಲ. ವಾರ್ಡ್ ಪುನರ್ ವಿಂಗಡನೆ ಹಾಗೂ ಮೀಸಲಾತಿ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದು, ಇನ್ನೂ ಇತ್ಯರ್ಥವಾಗದ ಕಾರಣ ಚುನಾವಣೆ ನಡೆದಿಲ್ಲ. ಹೀಗಾಗಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸದ್ಯ ಎಲ್ಲವೂ ಸರಿಯಾಗಿಲ್ಲ.

news18
Updated:February 8, 2020, 3:04 PM IST
ಅನಾಥವಾದ ಬೆಳಗಾವಿ ಪಾಲಿಕೆ; ಅಧಿಕಾರಿಗಳೂ ಇಲ್ಲ, ಜನಪ್ರತಿನಿಧಿಗಳೂ ಇಲ್ಲ
ಬೆಳಗಾವಿ ಮಹಾನಗರ ಪಾಲಿಕೆ
  • News18
  • Last Updated: February 8, 2020, 3:04 PM IST
  • Share this:
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ಪಾಲಿಕೆ ಎಂಬ ಖ್ಯಾತಿ ಗಳಿಸಿದೆ. ಆದರೆ, ಈ ಸಲ ಮಾತ್ರ ಪಾಲಿಕೆಯ ಟ್ಯಾಕ್ಸ್‌ ಸಂಗ್ರಹದಲ್ಲಿ ಇಳಿಕೆಯಾಗುವ ಲಕ್ಷಣ ಕಾಣಿಸಿದೆ. ಅಷ್ಟಕ್ಕೂ ಇದಕ್ಕೆ ಕಾರಣ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಳೆದ 11 ತಿಂಗಳಿಂದ ಜನಪ್ರತಿನಿಧಿಗಳ ಆಡಳಿತ ಇಲ್ಲದಿರುವುದು. ಇನ್ನೊಂದು ಕಡೆದ ಪಾಲಿಕೆಯಲ್ಲಿ ಹುದ್ದೆಗಳಲ್ಲಿ ಭಾರೀ ಪ್ರಮಾಣದಲ್ಲಿ ಕಡಿತವಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಸಾರ್ವಜನಿಕ ಕುಂದು ಕೊರತೆಗಳು, ದೂರುಗಳ ಕಡತಗಳನ್ನು ವಿಲೇವಾರಿ ಮಾಡಲು ವಿಳಂಬ ಆಗಿದ್ದು ಸಾರ್ವಜನಿಕರು ಪರದಾಟ ನಡೆಸಿದ್ದಾರೆ. ವಿವಿಧ ವಿಭಾಗದಲ್ಲಿ ಪಾಲಿಕೆಯಲ್ಲಿ 1,725 ಹುದ್ದೆಗಳ ಪೈಕಿ ಸುಮಾರು 735 ಹುದ್ದೆಗಳು ಖಾಲಿ ಉಳಿದಿದ್ದು, ಕುರ್ಚಿಗಳು ಬಣಗುಡುತ್ತಿವೆ. ಎ ಗ್ರೇಡ್​ನಿಂದ  ಹಿಡಿದು ಬಿ ಮತ್ತು ಸಿ ಗ್ರೇಡ್​ ವರೆಗಿನ ಹುದ್ದೆಗಳು ಖಾಲಿಯಾಗಿವೆ. 5 ಲಕ್ಷ ಜನಸಂಖ್ಯೆ ಹೊಂದಿರುವ ನಗರ ಪಾಲಿಕೆಯಲ್ಲಿ ಆರೋಗ್ಯ ಅಧಿಕಾರಿ ಹುದ್ದೆ ಸೇರಿ ಅನೇಕ ಹುದ್ದೆಗಳು ಖಾಲಿಯಾಗಿ ಉಳಿದುಕೊಂಡಿವೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಇದನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಸ್ವತಂತ್ರವಾಗಿ ಖಾತೆ ಹಂಚಿಕೆ ಮಾಡಲಾರದಷ್ಟು ಅಸಮರ್ಥ ಸಿಎಂ: ಸಿದ್ಧರಾಮಯ್ಯ ಲೇವಡಿ

ಸಿಬ್ಬಂದಿಯ ಕೊರತೆಯಿಂದ ಪಾಲಿಕೆಯ 58 ವಾರ್ಡ್​ಗಳ ಪೈಕಿ ಒಬ್ಬರೇ 2, 3 ಹಾಗೂ 4 ಹುದ್ದೆಗಳ ನಿರ್ವಹಿಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರ ಸಮಸ್ಯೆಗೆ ಶೀಘ್ರಗತಿಯಲ್ಲಿ ಇತ್ಯರ್ಥಪಡಿಸಲು ಸಾಧ್ಯವಾಗುತ್ತಿಲ್ಲ. ಇನ್ನು, ಈ ಬಗ್ಗೆ ಮಹಾನಗರ ಪಾಲಿಕೆಯ ಆಯುಕ್ತ ಕೆ.ಎಚ್. ಜಗದೀಶ್ ಮಾತನಾಡಿ, ಗ್ರೂಪ್ ಎ, ಬಿ ಹಾಗೂ ಸಿ ನಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹುದ್ದೆಗಳ ಭರ್ತಿಯ ನಂತರ ಪಾಲಿಕೆಗೆ ಅಧಿಕಾರಿಗಳು ಬರುತ್ತಿದ್ದಾರೆ ಎನ್ನುತ್ತಾರೆ.

ಅಧಿಕಾರಿಗಳ ಕೊರತೆ ಸಮಸ್ಯೆ ಒಂದೆಡೆ ಆದ್ರೆ ಮತ್ತೊಂದು ಕಡೆ ಪಾಲಿಕೆಯಲ್ಲಿ 11 ತಿಂಗಳಿಂದ ಜನಪ್ರತಿನಿಧಿಗಳು ಇಲ್ಲ. ವಾರ್ಡ್ ಪುನರ್ ವಿಂಗಡನೆ ಹಾಗೂ ಮೀಸಲಾತಿ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದು, ಇನ್ನೂ ಇತ್ಯರ್ಥವಾಗದ ಕಾರಣ ಚುನಾವಣೆ ನಡೆದಿಲ್ಲ. ಹೀಗಾಗಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸದ್ಯ ಎಲ್ಲವೂ ಸರಿಯಾಗಿಲ್ಲ. ಇನ್ನು, ಬೆಳಗಾವಿ ಮಹಾನಗರ ಸ್ಮಾರ್ಟ್ ಸಿಟಿ ಯೋಜನೆಯಾಗಿ ಅನೇಕ ಕೆಲಸಗಳು ನಡೆಯುತ್ತಿವೆ. ಆದ್ರೂ ಅಧಿಕಾರಿಗಳ ಕೊರತೆಯ ಎಫೆಕ್ಟ್  ಸಾರ್ವಜನಿಕರಿಗೆ ತಟ್ಟಿದೆ. ಇನ್ನಾದರೂ ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: February 8, 2020, 3:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading