• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shivaji Statue: ಲಕ್ಷ್ಮಿ ಹೆಬ್ಬಾಳ್ಕರ್ Vs ರಮೇಶ್​​ ಜಾರಕಿಹೊಳಿ ನಡುವೆ 'ಶಿವಾಜಿ ಪ್ರತಿಮೆ' ಪಾಲಿಟಿಕ್ಸ್; 'ಸಾಹುಕಾರ್'​ಗೆ ದಾರಿ ಬಿಟ್ಟು ಕಾರು ವಾಪಾಸ್ ತೆಗೆದ ಹೆಬ್ಬಾಳ್ಕರ್ ಸಹೋದರ!

Shivaji Statue: ಲಕ್ಷ್ಮಿ ಹೆಬ್ಬಾಳ್ಕರ್ Vs ರಮೇಶ್​​ ಜಾರಕಿಹೊಳಿ ನಡುವೆ 'ಶಿವಾಜಿ ಪ್ರತಿಮೆ' ಪಾಲಿಟಿಕ್ಸ್; 'ಸಾಹುಕಾರ್'​ಗೆ ದಾರಿ ಬಿಟ್ಟು ಕಾರು ವಾಪಾಸ್ ತೆಗೆದ ಹೆಬ್ಬಾಳ್ಕರ್ ಸಹೋದರ!

ಮಾಜಿ ಸಚಿವ ರಮೇಶ್​ ಜಾರಕಿಹೊಳಿ

ಮಾಜಿ ಸಚಿವ ರಮೇಶ್​ ಜಾರಕಿಹೊಳಿ

ಶಿವಾಜಿ ಪ್ರತಿಮೆ ಅನಾವರಣಕ್ಕೆ ವಿಚಾರದಲ್ಲೂ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ಮಧ್ಯೆ ಪ್ರತಿಷ್ಠೆಯ ಸಮರ ಆರಂಭವಾಗಿದೆ.

  • News18 Kannada
  • 3-MIN READ
  • Last Updated :
  • Belgaum, India
  • Share this:

ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Electoion) ಈ ಬಾರಿ ಬೆಳಗಾವಿ ಗ್ರಾಮೀಣ ಕ್ಷೇತ್ರ (Belagavi Rural) ಪ್ರತಿಷ್ಠೆಯ ಕಣವಾಗಿ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಅದರಲ್ಲೂ ಮಾಜಿ ಸಚಿವ ರಮೇಶ್​ ಜಾರಕಿಹೊಳಿ (Ramesh Jarkiholi ) ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದು, ಸದ್ಯ ಕ್ಷೇತ್ರದಲ್ಲಿ ಶಿವಾಜಿ ಪ್ರತಿಮೆಯ ಅನಾವರಣದಲ್ಲೂ ಪ್ರತಿಷ್ಠೆಯ ಫೈಟ್​ ಶುರುವಾಗಿದೆ. ಸರ್ಕಾರಿ ಅನುದಾನದಲ್ಲಿ ನಿರ್ಮಾಣ ಮಾಡಲಾಗಿರುವ ಪ್ರತಿಮೆಯನ್ನು ಕಾಂಗ್ರೆಸ್​ (Congress) ನಾಯಕರ ಸಮ್ಮುಖದಲ್ಲಿ ಲೋಕಾರ್ಪನೆ ಮಾಡಲು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ರಮೇಶ್​ ಜಾರಕಿಹೊಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪರೋಕ್ಷವಾಗಿ ಶಾಸಕಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಹೆಬ್ಬಾಳ್ಕರ್​ಗೆ ರಮೇಶ್ ಜಾರಕಿಹೊಳಿ ಪರೋಕ್ಷ ಎಚ್ಚರಿಕೆ


ಹೌದು, ಶಿವಾಜಿ ಪ್ರತಿಮೆ ಅನಾವರಣಕ್ಕೆ ವಿಚಾರದಲ್ಲೂ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ಮಧ್ಯೆ ಪ್ರತಿಷ್ಠೆಯ ಸಮರ ಆರಂಭವಾಗಿದೆ. ಐತಿಹಾಸಿಕ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆಗೆ ಸಿದ್ಧಗೊಂಡಿದೆ.


ಆದರೆ ಸರ್ಕಾರಿ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮ ಮಾಡಲು ಹೆಬ್ಬಾಳ್ಕರ್‌ ಯತ್ನಿಸಿದ್ದಾರೆ ಎನ್ನಲಾಗಿದೆ. ಚುನಾವಣೆ ಹೊತ್ತಲ್ಲಿ ಸರ್ಕಾರಿ ಯೋಜನೆಯನ್ನು ತನ್ನದೆಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ಮಾಡಲು ಯತ್ನಿಸಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಸೇರಿ ಇತರ ಬಿಜೆಪಿ ನಾಯಕರು ಆರೋಪಿಸಿದ್ದಾರೆ.


ಮಾಜಿ ಸಚಿವ ರಮೇಶ್​ ಜಾರಕಿಹೊಳಿ


ಇದನ್ನೂ ಓದಿ: DK Shivakumar: ರಾಮಮಂದಿರದ ಅಗತ್ಯವೇನಿತ್ತು ಎಂದ ಡಿಕೆಶಿ​; ಚುನಾವಣೆ ಬಳಿಕ ಎಲ್ಲಿ ಇರ್ತಾರೆ ನೋಡೋಣಾ ಅಂತ ಅಶ್ವತ್ಥ್ ನಾರಾಯಣ ಸವಾಲು


ಸಾಹುಕಾರ್​ಗೆ ದಾರಿ ಬಿಟ್ಟು ಕಾರ್ ವಾಪಾಸ್ ತೆಗೆದ ಚನ್ನರಾಜ್


ಈ ನಡುವೆ ಇಂದು ಐತಿಹಾಸಿಕ ರಾಜಹಂಸಗಡ ಕೋಟೆಯಲ್ಲಿ ನಿರ್ಮಾಣ ಮಾಡಲಾಗಿರುವ ಛತ್ರಪತಿ ಶಿವಾಜಿ ಪ್ರತಿಮೆ ಸ್ಥಳಕ್ಕೆ ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದಾರೆ. ಇತ್ತ ರಮೇಶ್​ ಜಾರಕಿಹೊಳಿ ಆಗಮಿಸಿದ್ದಾರೆ ಎಂದು ತಿಳಿದ ಕೂಡಲೇ ಹೆಬ್ಬಾಳ್ಕರ್ ಸಹೋದರ, ಎಂಎಲ್​​ಸಿ ಚನ್ನರಾಜ್​ ಹಟ್ಟಿಹೊಳಿ ಅವರು ಮಾಜಿ ಸಚಿವರ ಭೇಟಿಗೂ ಮುನ್ನವೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದರು.


ಇತ್ತ ಸ್ಥಳಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ರಾಜಹಂಸಗಢದಲ್ಲಿ ರಮೇಶ್ ಜಾರಕಿಹೊಳಿ-ಚನ್ನರಾಜ್ ಹಟ್ಟಿಹೊಳಿ ಮುಖಾಮುಖಿಯಾಗಿದ್ದಾರೆ. ರಸ್ತೆಯಲ್ಲಿ ಒಂದೇ ಕಾರು ಹೋಗುವಷ್ಟು ಜಾಗವಿದ್ದ ಕಾರಣ, ಇಬ್ಬರು ಒಮ್ಮೆಗೆ ಚಲಿಸಲು ಸಮಸ್ಯೆ ಎದುರಾಗಿದೆ. ಕೊನೆಗೆ ಚೆನ್ನರಾಜ್ ಹಟ್ಟಿಹೊಳಿ ತಮ್ಮ ಕಾರನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.




ಇದು ಸರ್ಕಾರಿ ಕಾರ್ಯಕ್ರಮ, ಸಿಎಂ ನೇತೃತ್ವದಲ್ಲೇ ಆಗಬೇಕು


ಇನ್ನು, ರಾಜಹಂಸಘಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, 2010 ರಿಂದಲೇ ರಾಜಹಂಸಘಡ ಅಭಿವೃದ್ಧಿ ಕಾರ್ಯ ನಡೆದಿದೆ. ನಾನು ನೀರಾವರಿ ಸಚಿವನಾಗಿದ್ದಾಗ ಸಿ.ಟಿ ರವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದರು. ಹಣ ಬಿಡುಗಡೆ ವಿಚಾರ ಕ್ಯಾಬಿನೆಟ್‌ನಲ್ಲೂ ಚರ್ಚೆ ಆಯಿತು. ಯಾವುದೇ ಪಕ್ಷ ಇರಲಿ ಅಭಿವೃದ್ಧಿ ಮುಖ್ಯ ಎಂದು ನಾನು ಅಂದಿನ ಸಭೆಯಲ್ಲಿ ಹೇಳಿದ್ದೆ.


ರಾಜಹಂಸಘಡ ಅಭಿವೃದ್ಧಿಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ. ಇದಕ್ಕೆ ನಮ್ಮ ವಿರೋಧ ಇದೆ, ಶಾಸಕರಿಗೆ ಸಿಗಬೇಕಾದ ಗೌರವ ಸಿಗಲೇಬೇಕು, ಅದಕ್ಕೆ ನಮ್ಮ ವಿರೋಧವಿಲ್ಲ. ಇದು ಸರ್ಕಾರಿ ಕಾರ್ಯಕ್ರಮ, ಸಿಎಂ ನೇತೃತ್ವದಲ್ಲೇ ಕಾರ್ಯಕ್ರಮ ಆಗಬೇಕು ಎಂದು ಒತ್ತಾಯ ಮಾಡಿದರು.


ಚನ್ನರಾಜ್ ನನ್ನ ಲೇವಲ್ ಅಲ್ಲ, ಎಂಎಲ್‌ಸಿ ಆದರೂ ಕನಿಷ್ಠ ಜ್ಞಾನ ಇಲ್ಲ


ಇದೇ ವೇಳೆ ಗ್ರಾಮೀಣ ಕ್ಷೇತ್ರಕ್ಕೂ ನಿಮಗೂ ಏನು ಸಂಬಂಧ ಎಂಬ ಎಂಎಲ್​​ಸಿ ಚನ್ನರಾಜ್ ಹಟ್ಟಿಹೊಳಿ ಪ್ರಶ್ನೆಗೆ ತಿರುಗೇಟು ಕೊಟ್ಟ ರಮೇಶ್​ ಜಾರಕಿಹೊಳಿ, ಚನ್ನರಾಜ್ ಹಟ್ಟಿಹೊಳಿ ‌ಬಹಳ ಸಣ್ಣ ಹುಡುಗ, ಗಾಡಿ ಹೊಡೆದು, ಬಾಗಿಲು ಕಾದು ಎಂಎಲ್‌ಸಿ ಆಗಿದ್ದಾನೆ. ಅವನೇನೂ ಹೋರಾಟ ಮಾಡಿ, ಸಂಘಟನೆ ಮಾಡಿ ಎಂಎಲ್​​ಸಿ ಆಗಿಲ್ಲ. ನಾನು ಚನ್ನರಾಜ್ ಜೊತೆಗೆ ಬಹಿರಂಗ ಚರ್ಚೆ ಮಾಡಲ್ಲ, ಅಗತ್ಯ ಬಿದ್ದರೆ ಡಿಕೆ ಶಿವಕುಮಾರ್ ಜೊತೆಗೆ ಚರ್ಚೆ ಮಾಡುತ್ತೇನೆ. ಚನ್ನರಾಜ್ ನನ್ನ ಲೇವಲ್ ಅಲ್ಲ, ಎಂಎಲ್‌ಸಿ ಆದರೂ ಕನಿಷ್ಠ ಜ್ಞಾನವೂ ಆತನಿಗೆ ಇಲ್ಲ.


ಹಕ್ಕುಚ್ಯುತಿ ಮಂಡನೆ ಮಾಡಲು ಆತನಿಗೆ ಹಕ್ಕಿದೆ, ನನ್ನ ಪಕ್ಷ ಸಂಘಟನೆ ಮಾಡಲು ನನಗೆ ಹಕ್ಕಿಲವೇ? ನಾನೇನು ಗ್ರಾಮೀಣದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ, ಸರ್ಕಾರಿ ಕೆಲಸದಲ್ಲಿ ಶಿಷ್ಟಾಚಾರ ಪಾಲಿಸುವಂತೆ ಆಗ್ರಹಿಸುತ್ತಿದ್ದೇನೆ ಅಷ್ಟೇ. ಶಿಷ್ಟಾಚಾರ ಪ್ರಕಾರ ನಾಳೆಯೇ ಶಿವಾಜಿ ಮೂರ್ತಿ ಉದ್ಘಾಟಿಸಲಿ, ನಮ್ಮದೇನೂ ಅಭ್ಯಂತರವಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 50 ಲಕ್ಷ ಅನುದಾನ ನೀಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ 5 ಕೋಟಿ ರೂಪಾಯಿ ಅನುದಾ‌ನ ನೀಡಿದ್ದರು. ಸ್ವಾಗತ ದಾಖಲೆ ಇದ್ದರೆ ಮೊದಲು ತೋರಿಸಲಿ ಎಂದು ಸವಾಲು ಎಸೆದರು.


ಇದನ್ನೂ ಓದಿ: Crime News: ಬಿಜೆಪಿ ಮುಖಂಡ ಆಯೋಜಿಸಿದ್ದ ಕ್ರಿಕೆಟ್​​ ಟೂರ್ನಿ ವೇಳೆ ಗಲಾಟೆ; ಚಾಕುವಿನಿಂದ ತಿವಿದು ಇಬ್ಬರು ಯುವಕರ ಬರ್ಬರ ಹತ್ಯೆ


ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ


ಲಕ್ಷ್ಮಿ ಹೆಬ್ಬಾಳ್ಕರ್ ವೈಯುಕ್ತಿಕವಾಗಿ ಒಂದು ಕೋಟಿ ನೀಡಿದ್ದಾರೆ


ಇನ್ನು, ವಿವಾದ ಬಗ್ಗೆ ಮಾತನಾಡಿದ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಸಮಸ್ತ ಕರ್ನಾಟಕ, ಗ್ರಾಮೀಣ ಕ್ಷೇತ್ರದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲು ಆಗಿಮಿಸಿದ್ದೇವು. ಶಿವಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆ ಉಳಿದ ಕೆಲಸ ಮಾಡಿದ ಕೂಡಲೇ ಆಗುತ್ತೆ. ಮೂರು ಕೋಟೆ ಪ್ರವಾಸೋದ್ಯಮ ಇಲಾಖೆ, ಐವತ್ತು ಲಕ್ಷ ರೂಪಾಯಿ ಕನ್ನಡ ಮತ್ತು ಸಂಸ್ಕೃತ ಇಲಾಖೆ, ಲಕ್ಷ್ಮಿ ಹೆಬ್ಬಾಳ್ಕರ್ ವೈಯುಕ್ತಿಕವಾಗಿ ಒಂದು ಕೋಟಿ ನೀಡಿದ್ದಾರೆ. ಒಟ್ಟು ನಾಲ್ಕೂವರೆ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಪ್ರಾಜೆಕ್ಟ್ ಇದು.




ಜಿಲ್ಲಾಡಳಿತದಿಂದ ಅಧಿಕೃತವಾಗಿ ಆಮಂತ್ರಣ ಪತ್ರಿಕೆ ಮುದ್ರಣ ಆಗಿಲ್ಲ. ಆಮಂತ್ರಣ ಪತ್ರಿಕೆಯಲ್ಲಿ ಯಾರದಾದ್ದರೂ ಹೆಸರು ಬಿಟ್ಟಿದ್ದರೆ ಶಿಷ್ಟಾಚಾರ ಉಲ್ಲಂಘನೆ ಆಗುತ್ತೆ. ಈಗ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರದ್ದು ಹಕ್ಕುಚ್ಯುತಿ ಆಗುತ್ತಿದೆ. ಇವರು ಗೋಕಾಕ್ ಶಾಸಕರು ಇವರಿಗೆ ಬೆಳಗಾವಿಗೆ ಏನು ಸಂಬಂಧ ಎಂದು ಪ್ರಶ್ನಿಸಿದರು.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು