• Home
 • »
 • News
 • »
 • state
 • »
 • Belagavi: ಅಖಾಡಕ್ಕೆ ಇಳಿದ ಮಾಜಿ ಶಾಸಕ ಸಂಜಯ್ ಪಾಟೀಲ್, ಗಿಫ್ಟ್ ಪಾಲಿಟಿಕ್ಸ್ ಜೋರು!

Belagavi: ಅಖಾಡಕ್ಕೆ ಇಳಿದ ಮಾಜಿ ಶಾಸಕ ಸಂಜಯ್ ಪಾಟೀಲ್, ಗಿಫ್ಟ್ ಪಾಲಿಟಿಕ್ಸ್ ಜೋರು!

ಸಂಜಯ್ ಪಾಟೀಲ್

ಸಂಜಯ್ ಪಾಟೀಲ್

ಚುನಾವಣೆ ಘೋಷಣೆಗೂ ಮುನ್ನವೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಮತದಾರರಿಗೆ ಬಹಿರಂಗವಾಗಿ ಆಮಿಷವೊಡ್ಡಿದ್ದಾರೆ.  ನಗರದ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದ ಆವರಣದಲ್ಲಿ ಆಯೋಜಿಸಲಾಗಿದ್ದ 53ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅಬ್ಬರದ ಭಾಷಣ ಮಾಡಿದ್ದಾರೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Belgaum, India
 • Share this:

ಬೆಳಗಾವಿ(ಜ.3): ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಸೆಳೆಯಲು ನಾನಾ ಕಸರತ್ತು ಆರಂಭವಾಗಿದೆ. ಆಕಾಂಕ್ಷಿಗಳು ನಾನಾ ತರಹದ ಕಸರತ್ತು ನಡೆಸುತ್ತಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಮತದಾರರಿಗೆ ಬಹಿರಂಗವಾಗಿ ಆಮಿಷವೊಡ್ಡಿದ್ದಾರೆ.  ನಗರದ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದ ಆವರಣದಲ್ಲಿ ಆಯೋಜಿಸಲಾಗಿದ್ದ 53ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅಬ್ಬರದ ಭಾಷಣ ಮಾಡಿದ್ದಾರೆ.


ಹೌದು ಅವರು ತಮ್ಮ ಭಾಷಣದಲ್ಲಿ ನಮ್ಮ ಪ್ರತಿಸ್ಪರ್ಧಿಗಳು ಕುಕ್ಕರ್, ಡಬ್ಬಿ ಕೊಡುತ್ತಾರೆ ನೀವೇನು ಬರೀ ಭಾಷಣ ಮಾಡ್ತೀನಿ ಎನ್ನಬಹುದು. ಆದರೆ ನಾನು ಈ ಬಾರಿ ಸುಮ್ಮನೆ ಕೂರುವ ಮನುಷ್ಯ ಅಲ್ಲ. ಅವರು ಏನು ಕೊಡುತ್ತಾರೆ ಅದರ ಡಬಲ್ ಕೊಡುತ್ತೀನಿ ಆದರೆ ಬಿಜೆಪಿಯೇ ಗೆಲ್ಲಬೇಕು, ಅವರು ಏನೇನು ಮಾಡುತ್ತಾರೆ ಅದರ ಡಬಲ್ ಎಂದಿದ್ದಾರೆ. ನನ್ನ ಹುಟ್ಟುಹಬ್ಬ ಎಂದು ಹೇಳಿ ಗಿಫ್ಟ್ ಕೊಡಬೇಕು ಎಂದು ಬಯಸಿದ್ದೇನೆ. ಇನ್ನೂ ನಾಲ್ಕು ತಿಂಗಳು ಪ್ರತಿಯೊಂದು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೂ ಬರುತ್ತೇನೆ. ಯಾರಿಗೆ ಸಿಕ್ಕಿಲ್ಲ ಅವರಿಗೆ ಮುಟ್ಟಿಸುತ್ತೇನೆ. ಏಪ್ರಿಲ್ -ಮೇ ವರೆಗೆ ಕಾಳಜಿ ಮಾಡಬೇಡಿ. ಏನೇ ಆದರೂ ಆ ಕಡೆ ಹೋಗಬೇಡಿ ಇದೊಂದೇ ನನ್ನ ವಿನಂತಿ ಎಂದು ಮತದಾರರಿಗೆ ಸಂಜಯ ಪಾಟೀಲ್ ಹೇಳಿದರು.


ಇದನ್ನೂ ಓದಿ: Crime News: ಕ್ರಿಕೆಟ್​ ಆಡ್ತಿದ್ದ ವೇಳೆ ಚಾಕು ಇರಿತ; ಡಬಲ್​​ ಮರ್ಡರ್​ಗೆ ಬೆಚ್ಚಿಬಿದ್ದ ಬೆಳಗಾವಿ


ಅಲ್ಲಿ ಹಿಂದೂ ಧರ್ಮ, ಶಿವಾಜಿ ಮಹಾರಾಜರ ಅಪಮಾನ ಆಗುತ್ತದೆ. ನಾಲ್ಕೈದು ತಿಂಗಳು ನಿಮ್ಮ ಹತ್ತಿರ ಏನು ಬರುತ್ತದೆ ನನಗೆ ಫೋನ್ ಮಾಡಿ, ಮಾರನೇ ದಿನ ನಿಮಗೆ ಅದು ಬಂದು ತಲುಪುತ್ತದೆ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಬಿಜೆಪಿ, ಕಮಲ, ನರೇಂದ್ರ ಮೋದಿ, ಹಿಂದುತ್ವ ಇದನ್ನು ಮರೀಬೇಡಿ ಅವ್ವ ಅಪ್ಪನ ಮೇಲೆ ಆಣೆ ಮಾಡುತ್ತೇನೆ ನಿಮ್ಮ ಬೆನ್ನಿಗೆ ಚೂರಿ ಹಾಕಲ್ಲ ಎಂದರು.


ನಮ್ಮ ಕಾರ್ಯಕರ್ತರು, ತಾಯಂದಿರು ಇದನ್ನ ಲಕ್ಷ್ಯದಲ್ಲಿಡಿ ನಿಮ್ಮಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ, ಅವರ ಕಡೆ ಹೋಗಬೇಡಿ. ಅಲ್ಲಿ ಧರ್ಮ ಇಲ್ಲ, ಅಲ್ಲಿ ನಮ್ಮ ದೇಶದ ಇತಿಹಾಸ ಇಲ್ಲ, ಮೋದಿಯಂತ ಪ್ರಧಾನಿ ಇಲ್ಲ. ಕಾಂಗ್ರೆಸ್ ಪಕ್ಷ ಜತೆ ಇರೋದು ಹಿಂದೂ ಸಂಸ್ಕೃತಿಗೆ ಮಾಡಿದ ಅಪಮಾನ, ಶಿವಾಜಿ ಮಹಾರಾಜ, ಡಾ.ಬಾಬಾಸಾಹೇಬ್ ಅಂಬೇಡ್ಕರ್​ಗೆ ಅಪಮಾನ ಮಾಡಿದಂತೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ್ ವಾಗ್ದಾಳಿ ನಡೆಸಿದರು.


ಇದನ್ನೂ ಓದಿ: Belagavi Session: ಸದ್ದು ಮಾಡಲಿಲ್ಲ ಬೆಳಗಾವಿ ಅಧಿವೇಶನ; ನಡೆಯಲಿಲ್ಲ ಅರ್ಥಪೂರ್ಣ ಚರ್ಚೆ!


ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಈಗಾಗಲೇ ಚುನಾವಣೆ ರಂಗೇರಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅರಶಿಣ- ಕುಂಕುಮ ಕಾರ್ಯಕ್ರಮ ಮಾಡುತ್ತಿದ್ದಾರೆ. ಪ್ರತಿ ಮನೆಗೆ ಟಿಫಿನ್ ಬಾಕ್ಸ್ ಹಂಚಿಕೆ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಹ ಸಿದ್ದತೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಚುನಾವಣೆ ತೀವ್ರ ತುರುಸಿನಿಂದ ನಡೆಯುವ‌ ಎಲ್ಲಾ ಲಕ್ಷಣಗಳು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇವೆ

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು