ಸ್ಪೀಕರ್ ಕೋಪ; ಕಿವಿಗೆ ಬೀಳದ ಮಾತು; 3 ವಿಧೇಯಕಗಳು – ವಿಧಾನಸಭೆ ಅಧಿವೇಶನದ ಹೈಲೈಟ್ಸ್

ಪ್ರಶ್ನೆ ಕೇಳುವ ವಿಧಾನವನ್ನ ಮೊದಲು ತಿಳ್ಕೋಬೇಕು ಅಂತ ಹೊಸ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಕ್ಲಾಸ್. ಶಾಸಕನ ಪ್ರಶ್ನೆಯೂ ಕೇಳದೇ, ಸಚಿವರ ಉತ್ತರವೂ ಕೇಳದೇ ಕಂಗಾಲಾದ ಸದನ. ಇದು ವಿಧಾನಸಭೆ ಕಲಾಪದ ಇವತ್ತಿನ ಹೈಲೈಟ್ಸ್.

Vijayasarthy SN | news18
Updated:December 14, 2018, 6:06 PM IST
ಸ್ಪೀಕರ್ ಕೋಪ; ಕಿವಿಗೆ ಬೀಳದ ಮಾತು; 3 ವಿಧೇಯಕಗಳು – ವಿಧಾನಸಭೆ ಅಧಿವೇಶನದ ಹೈಲೈಟ್ಸ್
ರಮೇಶ್ ಕುಮಾರ್
Vijayasarthy SN | news18
Updated: December 14, 2018, 6:06 PM IST
- ಶ್ರೀನಿವಾಸ ಹಳಕಟ್ಟಿ, 

ಬೆಳಗಾವಿ(ಡಿ. 14): ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುವ ವಿಧಾನಸಭೆಯ ಕಲಾಪಗಳ ರಂಗೇ ಬೇರೆ ರೀತಿ ಇರುತ್ತದೆ. ಅವರು ನಿರ್ವಹಿಸುವ ರೀತಿ, ಸಿಡುಕುವ ಶೈಲಿ, ಚುಚ್ಚುವ ಪರಿ ನಿಜಕ್ಕೂ ಒಂದು ಸೋಜಿಗ. ರಮೇಶ್ ಕುಮಾರ್ ಮಾತಿನ ಮೊನಚಿಗೆ ಸ್ವಪಕ್ಷೀಯರೂ ಹೊರತಾಗುವುದಿಲ್ಲ. ಐದನೇ ದಿನದ ಅಧಿವೇಶನವು ಇದಕ್ಕೆಲ್ಲಾ ಸಾಕ್ಷಿಯಾಯಿತು.

ಮಂಡ್ಯದ ಜಿಲ್ಲಾ ಕಚೇರಿ ಆವರಣದಲ್ಲಿನ ಉದ್ಯಾನವನಗಳ ಅಭಿವೃದ್ಧಿ ವಿಚಾರದ ಬಗ್ಗೆ ಜೆಡಿಎಸ್ ಶಾಸಕ ಎಂ. ಶ್ರೀನಿವಾಸ್ ಪ್ರಶ್ನೆ ಕೇಳಿದರು. ಆ ಪ್ರಶ್ನೆ ಯಾರಿಗೂ ಕೇಳಲಿಲ್ಲ. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶಕುಮಾರ್, “ಕೇಳೋ ರೀತಿ ಪ್ರಶ್ನೆ ಕೇಳ್ರಿ ಮಾರಾಯ್ರೆ” ಅಂದ್ರು. ಬಳಿಕ ಜೆಡಿಎಸ್ ಶಾಸಕರ ಈ ಪ್ರಶ್ನೆಗೆ ತೋಟಗಾರಿಕಾ ಸಚಿವ ಎಂ ಸಿ ಮನಗೂಳಿ ಉತ್ತರಿಸಿದರಾದರೂ, ಅದು ಸದನದ ಯಾವೊಬ್ಬ ಸದಸ್ಯರಿಗೂ ಕೇಳಲಿಲ್ಲ. ಈ ಬೆಳವಣಿಗೆಯಿಂದ ಸದನವೇ ಗೊಂದಲಗೊಂಡಿತು. ಸಭಾಧ್ಯಕ್ಷ ರಮೇಶ್ ಕುಮಾರ್ ಕೂಡ ತಬ್ಬಿಬ್ಬಾದರು. ಇಡೀ ಸದನ ನಗೆಗಡಲಲ್ಲಿ ತೇಲಿತು. “ಇಂತಹವರಿಗೆ ಜನ ಅದ್ಹೇಗೆ ವೋಟ್ ಹಾಕ್ತಾರೋ” ಅಂತಾ ರಮೇಶಕುಮಾರ್ ಚಟಾಕಿ ಹಾರಿಸಿದ್ರು.

ಹೊಸಬರಿಗೆ ಸ್ಪೀಕರ್ ಕ್ಲಾಸ್:
“ನನಗೆ ಸಾಕಾಗಿ ಹೋಗಿದೆ. ಈ ಕೆಲಸ ಉಸಿರು ಗಟ್ಟುತ್ತಿದೆ” ಎಂದು ಸ್ಪೀಕರ್ ರಮೇಶ್ ಕುಮಾರ್ ಅಸಹಾಯಕತೆ ತೋಡಿಕೊಂಡ ಪ್ರಸಂಗವೂ ಎದುರಾಯ್ತು. “ನೂತನ ಶಾಸಕರು ತರಬೇತಿಗೆ ಕರೆದರೆ ಬರಲ್ಲ. ಪಕ್ಷದವರು ಕೂಡ ತರಬೇತಿ ಕೊಡಲ್ಲ. ಪ್ರಶ್ನೋತ್ತರದಲ್ಲಿ ಉಪಪ್ರಶ್ನೆ ಕೇಳಿ ಅಂದ್ರೆ ಭಾಷಣ ಮಾಡ್ತಾರೆ. ಮೂರು ಉಪಪ್ರಶ್ನೆ ಕೇಳಬೇಕಾದ ಕಡೆ ಮೂವತ್ತು ಶಾಸಕರು ಎದ್ದು ನಿಲ್ಲುತ್ತಾರೆ. ಹೀಗಾದ್ರೆ ಸದನ ನಡೆಸೋದು ಹೇಗೆ?” ಎಂದು ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ರು.

ಅಡಿಕೆ ಕೊಳೆ ರೋಗದ ಬಗ್ಗೆ ಬಿಜೆಪಿಯ ಹರೀಶ್ ಪೂಂಜಾ ಉಪಪ್ರಶ್ನೆ ಕೇಳುವ ಬದಲು ವಿವರಣೆ ಕೊಡೋಕೆ ಮುಂದಾದ್ರು. ಈ ವೇಳೆ, “ನೀವು ಪ್ರಶ್ನೆಯನ್ನ ಕೇಳೋದು ಬಿಟ್ಟು ಚರ್ಚೆ ಮಾಡೋಕೆ ನಿಂತ್ರೆ ಹೇಗೆ? ಇದು ಸಮಯವಲ್ಲ,” ಅಂತ ಬಿಜೆಪಿ ಶಾಸಕರಿಗೆ ಸ್ಪೀಕರ್ ತಿಳಿಹೇಳಿದ್ರು.
Loading...

ಚಾಮುಂಡೇಶ್ವರಿ ಸದ್ದು:
ಬಿಜೆಪಿ ಸದಸ್ಯ ರಾಮದಾಸ್ ಅವರು ಮೈಸೂರಿನ ಚಾಮುಂಡೇಶ್ವರಿ ದೇಗುಲದ ಪೂಜೆ ಪುನಸ್ಕಾರ ಬಂದ್ ಆಗಿರುವ ಬಗ್ಗೆ ವಿಚಾರವನ್ನ ಕಲಾಪದಲ್ಲಿ ಪ್ರಸ್ತಾಪಿಸಿದರು. ಕಳೆದ ನಾಲ್ಕು ದಿನಗಳಿಂದ ದೇಗುಲದ ಸಿಬ್ಬಂದಿಗಳು ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳನ್ನ ನಮಗೂ ನೀಡಬೇಕು ಅಂತ ಅರ್ಚಕರು ಮುಷ್ಕರ ಹೂಡಿದ್ದಾರೆ. ಇಂದು ದರ್ಶನವನ್ನ ಬಿಟ್ಟು ಇತರ ಸೇವೆಗಳನ್ನ ನಿಲ್ಲಿಸಿದ್ದಾರೆ. ಇದರಿಂದ. ಭಕ್ತಾದಿಗಳಿಗೆ ಸಾಕಷ್ಟು ತೊಂದರೆಯಾಗಿದೆ ಎಂದರು.

ಇದಕ್ಕೆ ಉತ್ತರಿಸಿದ ಮುಜರಾಯಿ ಸಚಿವ ರಾಜಶೇಖರ್ ಪಾಟೀಲ್, ಈಗಾಗಲೇ ದೂರವಾಣಿ ಮೂಲಕ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಅವರಲ್ಲಿ 171 ಜನರಿಗೆ ಐದನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲಾಗಿದೆ. 76 ಜನರಿಗೆ ಮಾತ್ರ ಬಾಕಿಯಿದೆ ಎಂದು ವಿವರ ನೀಡಿದರು.

ಇದೇ ವೇಳೆ, ಸದನದಲ್ಲಿ ಮೂರು ವಿಧೇಯಕಗಳು ಮಂಡನೆಯಾದ್ವು. ಕರ್ನಾಟಕ ಭೂಕಂದಾಯ ಎರಡನೇ ತಿದ್ದುಪಡಿ ವಿಧೇಯಕ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ವಿಧೇಯಕ. ಕರ್ನಾಟಕ ಸರುಕು ಮತ್ತು ಸೇವೆಗಳ ತಿದ್ದುಪಡಿ ವಿಧೇಯಕಗಳು ಅಂಗೀಕಾರವಾದವು. ಇನ್ನು ಶುಕ್ರವಾರವಾದ್ದರಿಂದ ಮಧ್ಯಾಹ್ನಕ್ಕೇ ಕಲಾಪ ಮುಗಿಸುವಂತೆ ಎಲ್ಲ ಸದಸ್ಯರು ಪರೋಕ್ಷವಾಗಿ ಒತ್ತಾಯಿಸಿದರು. ವಿಧೇಯಕಗಳ ಮಂಡನೆ ಮಾಡುವ ಪ್ರಕ್ರಿಯೆ ಮುಂದುವರಿಸಿದರೂ, ಈಗ ಬೇಡ ಸೋಮವಾರಕ್ಕೆ ಇಟ್ಟುಕೊಳ್ಳಿ ಸಾರ್ ಅಂತ ಸಭಾದ್ಯಕ್ಷರಿಗೆ ಮನವಿ ಮಾಡಿದ್ರು. ಬೆಂಗಳೂರು ಕಡೆ ಮುಖ ಮಾಡೋಕೆ ಸದನದ ಕಲಾಪವನ್ನೇ ಮೊಟಕುಗೊಳಿಸುವಂತೆ ಮಾಡಿದರು ಜನಪ್ರತಿನಿಧಿಗಳು.
First published:December 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626