ಬೆಳಗಾವಿಯಲ್ಲಿ ಎಪಿಎಂಸಿ ಚುನಾವಣೆ; ಮತ್ತೆ ಸ್ಫೋಟಗೊಳ್ಳಲಿದೆಯಾ ಹೆಬ್ಬಾಳ್ಕರ್, ಜಾರಕಿಹೊಳಿ ಬಣದ ಭಿನ್ನಮತ?

sushma chakre | news18
Updated:October 12, 2018, 11:25 AM IST
ಬೆಳಗಾವಿಯಲ್ಲಿ ಎಪಿಎಂಸಿ ಚುನಾವಣೆ; ಮತ್ತೆ ಸ್ಫೋಟಗೊಳ್ಳಲಿದೆಯಾ ಹೆಬ್ಬಾಳ್ಕರ್, ಜಾರಕಿಹೊಳಿ ಬಣದ ಭಿನ್ನಮತ?
sushma chakre | news18
Updated: October 12, 2018, 11:25 AM IST
ನ್ಯೂಸ್​18 ಕನ್ನಡ

ಬೆಳಗಾವಿ (ಅ. 12): ಕಳೆದ ತಿಂಗಳು ಬೆಳಗಾವಿಯ ಪಿಎಲ್​ಡಿ ಬ್ಯಾಂಕ್​ ಚುನಾವಣೆ ವಿಷಯದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಮತ್ತು ಜಾರಕಿಹೊಳಿ ಸಹೋದರರ ನಡುವೆ ಉಂಟಾದ ಮನಸ್ತಾಪ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಕುತ್ತು ತರುವ ಮಟ್ಟಕ್ಕೆ ಹೋಗಿ, ಕೊನೆಗೆ ರಾಜ್ಯದ ಗಡಿಯನ್ನೂ ದಾಟಿ ದೆಹಲಿ ಅಂಗಳದವರೆಗೂ ತಲುಪಿತ್ತು. ಇದೀಗ ಮತ್ತೆ ಬೆಳಗಾವಿಯಲ್ಲಿ ಎಪಿಎಂಸಿ ಚುನಾವಣೆ ಎದುರಾಗಿದೆ. ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ಸೃಷ್ಟಿಯಾದ ಭಿನ್ನಮತದ ಕಾವು ಈ ಚುನಾವಣೆಯಲ್ಲಿ ಎದುರಾಗುವ ಸಂಭವವಿದೆ. ಇದಕ್ಕೆ ಕಾರಣವೂ ಇದೆ.

ಇದೇ ಅ. 15ರಂದು ಬೆಳಗಾವಿ ಎಪಿಎಂಸಿ ಚುನಾವಣೆ ನಡೆಯಲಿದೆ. ಇದರಲ್ಲಿ ಕೂಡ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಬಣದ ಸದಸ್ಯರು ಸ್ಪರ್ಧಿಸುತ್ತಿರುವುದರಿಂದ ಇದು ಕೂಡ ಮತ್ತೊಂದು ಪ್ರತಿಷ್ಠೆಯ ಚುನಾವಣೆಯಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ.

ಎಪಿಎಂಸಿ ಚುನಾವಣೆಯಲ್ಲಿ ಒಟ್ಟು 14 ಜನ ಚುನಾಯಿತ ಸದಸ್ಯರು, 3 ಜನ ನಾಮ ನಿರ್ದೇಶಿತ ಸದಸ್ಯರು ಇರಲಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಸತೀಶ್​ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಬಣಗಳು ಸಮಬಲ ಸಾಧಿಸಿದ್ದವು.  ನಂತರ, ಚೀಟಿ ಮೂಲಕ ವಿಠ್ಠಲ್​ ಜಾದವ್​ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ವಿಠ್ಠಲ್​ ಜಾದವ್​ಗೆ ಸತೀಶ್​ ಜಾರಕಿಹೊಳಿ, ಬಿಜೆಪಿ, ಎಂಇಎಸ್​ ಬೆಂಬಲವೂ ಸಿಕ್ಕಿತ್ತು.

ಇದನ್ನೂ ಓದಿ: ಜಾರಕಿಹೊಳಿ ಸಹೋದರರು- ಹೆಬ್ಬಾಳ್ಕರ್ ನಡುವೆ ನೇರಾನೇರ ಫೈಟ್ ಆರಂಭ..!

ಇದೀಗ, ವಿಠ್ಠಲ್ ಜಾದವ್​ ಅವರ 20 ತಿಂಗಳ ಅಧಿಕಾರಾವಧಿ ಮುಗಿದಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚುನಾವಣೆ ನಡೆಯುತ್ತಿದೆ. ಅ. 15ರಂದು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಇಬ್ಬರು ನಾಯಕರ ಪ್ರತಿಷ್ಠೆಗೆ ವೇದಿಕೆಯಾಗಲಿದೆ. ಈಗಾಗಲೇ ಶಾಸಕರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಗೆಲ್ಲಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ಇದನ್ನೂ ಓದಿ: ಪಿಎಲ್​​ಡಿ ಬ್ಯಾಂಕ್​ಗೆ ಅವಿರೋಧ ಆಯ್ಕೆ; ಲಕ್ಷ್ಮೀ ಹೆಬ್ಬಾಳ್ಕರ್​ ಬಣಕ್ಕೆ ಒಲಿದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ
Loading...

First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...