Rajya Sabha Election: ಶುರುವಾಯ್ತು ರೆಸಾರ್ಟ್ ಪಾಲಿಟಿಕ್ಸ್; ಅಡ್ಡ ಮತದಾನದ ಭಯಕ್ಕೆ ಜೆಡಿಎಸ್ ಶಾಸಕರು ಶಿಫ್ಟ್!

ಅಡ್ಡ ಮತದಾನ ಆತಂಕ ಹಿನ್ನೆಲೆ ಜೆಡಿಎಸ್ ನ ಎಲ್ಲಾ ಶಾಸಕರನ್ನು ರೆಸಾರ್ಟ್​ಗೆ ಶಿಫ್ಟ್ ಮಾಡುವ ಸಿದ್ಧತೆಗಳು ನಡೆದಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ರೆಸಾರ್ಟ್​ಗೆ ಶಿಫ್ಟ್ ಮಾಡಲಾಗುತ್ತೆ. ಎರಡು ದಿನ ದೇವನಹಳ್ಳಿ ಬಳಿಯಿರುವ ಖಾಸಗಿ ರೆಸಾರ್ಟ್ ನಲ್ಲಿಎಲ್ಲಾ ಶಾಸಕರು ವಾಸ್ತವ್ಯ ಹೂಡಲಿದ್ದಾರೆ

ಎಚ್​ ಡಿ ಕುಮಾರಸ್ವಾಮಿ

ಎಚ್​ ಡಿ ಕುಮಾರಸ್ವಾಮಿ

  • Share this:
ಬೆಂಗಳೂರು (ಜೂ 8): ಜೂನ್​ 10 ರಂದು ರಾಜ್ಯಸಭಾ ಚುನಾವಣೆ (Rajya Sabha Election) ನಡೆಯಲಿದೆ. ಎಲ್ಲಾ ಪಕ್ಷಗಳಲ್ಲೂ (Party) ತಳಮಳ ಶುರುವಾಗಿದೆ. ಅಡ್ಡ ಮತದಾನದ ಭೀತಿ ಹೆಚ್ಚಾಗಿದೆ. ಈ ಬಾರಿ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಪಕ್ಷಗಳು ರಾಜ್ಯಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ರಾಜ್ಯಸಭಾ ಅಖಾಡದಲ್ಲಿ 6 ಅಭ್ಯರ್ಥಿಗಳಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಎಲ್ಲಾ ಪಕ್ಷದ ನಾಯಕರು (Leaders) ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಯಾರು, ಯಾವ ಪಕ್ಷಕ್ಕೆ ಮತ ಹಾಕುತ್ತಾರೆ ಅನ್ನೋದು ನಾಯಕರಿಗೆ ದೊಡ್ಡತಲೆನೋವಾಗಿದೆ. ನಮ್ಮ ಶಾಸಕರು ಅಡ್ಡಮತದಾನ ಮಾಡಲ್ಲ ಎಂದು ಹೇಳ್ತಿದ್ದ ಜೆಡಿಎಸ್​ ವರಿಷ್ಠರೇ, ತಮ್ಮ ಶಾಸಕರನ್ನು ರೆಸಾರ್ಟ್​ಗೆ ಶಿಫ್ಟ್​ (Resort Shift) ಮಾಡಲು ರೆಡಿಯಾಗಿದ್ದಾರೆ.

ಜೆಡಿಎಸ್ ನ ಎಲ್ಲಾ ಶಾಸಕರು ರೆಸಾರ್ಟ್​ಗೆ ಶಿಫ್ಟ್!

ಅಡ್ಡ ಮತದಾನ ಆತಂಕ ಹಿನ್ನೆಲೆ ಜೆಡಿಎಸ್ ನ ಎಲ್ಲಾ ಶಾಸಕರನ್ನು ರೆಸಾರ್ಟ್​ಗೆ ಶಿಫ್ಟ್ ಮಾಡುವ ಸಿದ್ಧತೆಗಳು ನಡೆದಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ರೆಸಾರ್ಟ್​ಗೆ ಶಿಫ್ಟ್ ಮಾಡಲಾಗುತ್ತೆ. ಎರಡು ದಿನ ದೇವನಹಳ್ಳಿ ಬಳಿಯಿರುವ ಖಾಸಗಿ ರೆಸಾರ್ಟ್ ನಲ್ಲಿಎಲ್ಲಾ ಶಾಸಕರು ವಾಸ್ತವ್ಯ ಹೂಡಲಿದ್ದಾರೆ. ಶಾಸಕರನ್ನ ಶಿಫ್ಟ್ ಮಾಡಲು ಜೆಡಿಎಸ್ ನಾಯಕರು ತಿಳಿಸಿದ್ದಾರೆ.

ಸಿದ್ದರಾಮಯ್ಯರನ್ನು ಭೇಟಿ ಮಾಡಲಿದ್ದಾರೆ ರೇವಣ್ಣ

ತೀವ್ರ ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆಯಲ್ಲಿ ಬೆಂಬಲ ಪಡೆಯುವ ನಿಟ್ಟಿನಲ್ಲಿ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರು ಶೀಘ್ರದಲ್ಲಿಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ: Kiran Mazumdar: ಬೆಂಗಳೂರಿನ ಹದಗೆಟ್ಟ ರಸ್ತೆ ಬಗ್ಗೆ ಕಿರಣ್ ಮಂಜುಂದಾರ್ ಟ್ವೀಟ್; ರಾಜಕಾರಣಿಗಳ ವಿರುದ್ಧ ಕಿಡಿ

ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಅವರೇ ಮಾಹಿಚಿ ನೀಡಿದ್ದು, 'ಸಿದ್ದರಾಮಯ್ಯನವರ ಉತ್ತಮ ಸ್ನೇಹಿತರಲ್ಲಿ ತಾವೂ ಒಬ್ಬರಾಗಿದ್ದು, ಇನ್ನೊಂದು ಜಾತ್ಯತೀತ ಪಕ್ಷದ ಬೆಂಬಲ ಕೋರುವುದರಲ್ಲಿ ತಪ್ಪೇನಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಕುಪೇಂದ್ರ ರೆಡ್ಡಿಗೆ ಬೆಂಬಲ ನೀಡುವಂತೆ ಮನವಿ

ಅಂತೆಯೇ ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ನೆನಪಿಸಿಕೊಂಡ ಹೆಚ್.ಡಿ.ರೇವಣ್ಣ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಿರಿಯ ರಾಜಕೀಯ ನಾಯಕರು ಹಲವು ಸಂದರ್ಭಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಜಾತ್ಯತೀತ ಪಕ್ಷದ ನಾಯಕರೊಂದಿಗೆ ಕೈಜೋಡಿಸಿದ್ದಾರೆ ಎಂದರು. ಅಲ್ಲದೆ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಬಿ.ಕೆ.ಹರಿಪ್ರಸಾದ್ ಅವರನ್ನು ರೇವಣ್ಣ ಒತ್ತಾಯಿಸಿದರು.

ಕರ್ನಾಟಕದಿಂದ ನಾಲ್ವರು ಸದಸ್ಯರ ಆಯ್ಕೆ

ಕರ್ನಾಟಕದಿಂದ ಈ ಬಾರಿ ನಾಲ್ವರು ಸದಸ್ಯರು ರಾಜ್ಯಸಭೆಗೆ ಆಯ್ಕೆಯಾಗಬೇಕಿದೆ. ಸದ್ಯ ಬಿಜೆಪಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಹಾಗೂ ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಕುಪ್ಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್‌ನಿಂದ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಹಾಗೂ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಆಲಿಖಾನ್ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: Explained: ರಾಜ್ಯಸಭಾ ಚುನಾವಣೆ ನಡೆಯುವುದು ಹೇಗೆ? ಇಲ್ಲಿದೆ ಓದಿ ಪಿನ್ ಟು ಪಿನ್ ಮಾಹಿತಿ

ಬಿಜೆಪಿಗೆ 2, ಕಾಂಗ್ರೆಸ್‌ಗೆ 1 ಗೆಲವು ನಿಶ್ಚಿತ

ಸದ್ಯ 2 ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಂಖ್ಯಾ ಬಲವಿದೆ. ಕಾಂಗ್ರೆಸ್ ಒಂದು ಸ್ಥಾನವನ್ನು ಅನಾಯಾಸವಾಗಿ ಪಡೆಯಲಿದೆ. ಆದರೆ 4ನೇ ಸ್ಥಾನಕ್ಕೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಥಾನಗಳ ಕೊರತೆ ಎದುರಾಗಲಿದೆ. ಜೆಡಿಎಸ್ ತಮ್ಮ ಬಳಿಯಲ್ಲಿರುವ ಶಾಸಕರ ಜೊತೆ 14 ಶಾಸಕರ ಕೊರತೆಯನ್ನು ಎದುರಿಸುತ್ತಿದ್ದು ನಾಲ್ಕನೇ ಸ್ಥಾನವನ್ನು ವಶಕ್ಕೆ ಪಡೆಯುವ ನಿರೀಕ್ಷೆಯಲ್ಲಿದೆ.

ಕರ್ನಾಟಕದಿಂದ ಗೆಲುವು ಯಾರಿಗೆ?

ರಾಜ್ಯಸಭಾ ಚುನಾವಣೆಯಲ್ಲಿ ಗೆಲುವನ್ನು ಪಡೆಯಲು ಒಬ್ಬ ಅಭ್ಯರ್ಥಿಗೆ 46 ಮತಗಳ ಅವಶ್ಯಕತೆ ಇದೆ. ಬಿಜೆಪಿಯು ಓರ್ವ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ 122 ಶಾಸಕರ ಮತಗಳನ್ನು ಹೊಂದಿದೆ. ಇದರಿಂದಾಗಿ ಸ್ವಂತ ಬಲದ ಮೇಲೆ ಎರಡು ಸ್ಥಾನಗಳನ್ನು ಪಡೆಯಲಿದ್ದು ಇನ್ನು 30 ಮತಗಳು ಹೆಚ್ಚುವರಿಯಾಗಿ ಇರಲಿದೆ. ಕಾಂಗ್ರೆಸ್ 70 ಶಾಸಕರ ಮತಗಳನ್ನು ಹೊಂದಿದ್ದು ಸ್ವಂತ ಬಲದ ಮೇಲೆ ಒಂದು ಸ್ಥಾನವನ್ನು ಗೆಲ್ಲಲಿದೆ. ಇದರೊಂದಿದೆ 24 ಮತಗಳು ಹೆಚ್ಚವರಿಯಾಗಿ ಸಿಗಲಿದೆ.

ಇದನ್ನೂ ಓದಿ:

ಇನ್ನು ಜೆಡಿಎಸ್ 32 ಶಾಸಕರನ್ನು ಹೊಂದಿದೆ. ಜೆಡಿಎಸ್‌ಗೆ ಸ್ವಂತ ಬಲದ ಮೇಲೆ ರಾಜ್ಯಸಭಾ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು,  ಕಾಂಗ್ರೆಸ್ ಅಥವಾ ಬಿಜೆಪಿಯ ಹೆಚ್ಚುವರಿ ಮತಗಳ ಮೇಲೆ ಕಣ್ಣಿಡಬೇಕಿದೆ.
Published by:Pavana HS
First published: