• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಒನ್ ನೇಷನ್ ಒನ್ ಎಲೆಕ್ಷನ್​ಗೆ ಈ ಹಿಂದೆ ಸಿದ್ದರಾಮಯ್ಯ ಕೂಡ ಬೆಂಬಲ ನೀಡಿದ್ದರು; ಸಚಿವ ಬಸವರಾಜ ಬೊಮ್ಮಾಯಿ

ಒನ್ ನೇಷನ್ ಒನ್ ಎಲೆಕ್ಷನ್​ಗೆ ಈ ಹಿಂದೆ ಸಿದ್ದರಾಮಯ್ಯ ಕೂಡ ಬೆಂಬಲ ನೀಡಿದ್ದರು; ಸಚಿವ ಬಸವರಾಜ ಬೊಮ್ಮಾಯಿ

ಗೃಹ ಸಚಿವ ಬಸವರಾಜ​​ ಬೊಮ್ಮಾಯಿ

ಗೃಹ ಸಚಿವ ಬಸವರಾಜ​​ ಬೊಮ್ಮಾಯಿ

ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಕುಟುಂಬದ ಮೇಲೆ ಎಫ್ ಐ ಆರ್ ದಾಖಲು ವಿಚಾರವಾಗಿವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಇದರ ಬಗ್ಗೆ ಅವರು ನಡೆದ ಘಟನೆಗಳನ್ನು ವಿವರಿಸಲಿ. ಪೊಲೀಸ್ ಇಲಾಖೆ ಸೂಕ್ತವಾಗಿ ತನಿಖೆ ಮಾಡುತ್ತೆ. ಹಾಗಂತ ಸದನದಲ್ಲಿ ಬಟ್ಟೆ ಬಿಚ್ಚುವುದಾ...? ಎಂದು ಪ್ರಶ್ನೆ ಮಾಡಿದರು.

ಮುಂದೆ ಓದಿ ...
  • Share this:

    ಬೆಂಗಳೂರು: ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಕೂಡ ಈ ಹಿಂದೆ ಒನ್ ನೇಷನ್ ಒನ್ ಎಲೆಕ್ಷನ್ ಗೆ ( one nation one election) ಬೆಂಬಲ ನೀಡೋದಾಗಿ ಹೇಳಿದ್ದರು. ಕಾಂಗ್ರೆಸ್ ಪಕ್ಷ ವೈಚಾರಿಕವಾಗಿ ದಿವಾಳಿಯಾಗಿದೆ. ವಿರೋಧ ಪಕ್ಷದಲ್ಲಿ ಕೂರಲು ಸಹ ಸಮರ್ಥವಲ್ಲ. ಪ್ರತಿ ಬಾರಿ ಈ ರೀತಿ ವಿರೋಧ ಮಾಡೋದು ಸರಿಯಲ್ಲ. ಶಾಸಕ ಬಿ.ಕೆ. ಸಂಗಮೇಶ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆಗಬೇಕು. ವೈಯಕ್ತಿಕವಾದುದೇನೂ ಇಲ್ಲ. ಹಾಗಂತ ಬಟ್ಟೆ ಹರಿದುಕೊಳ್ಳೋದಾ? ಅವರ ಸರ್ಕಾರದ ಸಮಯದಲ್ಲೂ ನಮ್ಮ ಪಕ್ಷದ ಮುಖಂಡರ ಮೇಲೆ ದೂರುಗಳನ್ನು ದಾಖಲಿಸಿದ್ದರು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.


    ಮೊದಲ ದಿನದ ಬಜೆಟ್ ಅಧಿವೇಶನದ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ ಅವರು, ಇವತ್ತು ಸದನದ ಮೊದಲನೆಯ ದಿನ. ಈ ಹಿಂದೆ ತೀರ್ಮಾನ ಆಗಿತ್ತು. ಬಜೆಟ್ ಗೂ ಮೊದಲು ಎರಡು ದಿನ one nation one election ಬಗ್ಗೆ ಚರ್ಚೆ ಮಾಡಲು ನಿರ್ಧರಿಸಲಾಗಿತ್ತು. ಬ್ಯುಸಿನೆಸ್ ಅಡ್ವೈಸರಿ ಕಮಿಟಿ ಸಂದರ್ಭ ವಿರೋಧ ಪಕ್ಷದವರು ಚರ್ಚೆ ಮಾಡೋಣ ಎಂದಿದ್ದರು. ಈಗ ಇಲ್ಲ ಸಲ್ಲದ ಕಾರಣ ನೀಡಿ ಚರ್ಚೆಗೆ ಅಡ್ಡಿ ಪಡಿಸಿದ್ದಾರೆ. ಮೋದಿಯವರ ಒನ್ ನೇಷನ್ ಒನ್ ಎಲೆಕ್ಷನ್ ಗೆ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸಮ್ಮತಿ ಇದೆ ಎಂದಿದ್ದರು. ಆದರೆ ಈಗ ವಿರೋಧ ಪಕ್ಷದಲ್ಲಿರುವ ಅವರು ಮಾತು ಬದಲಿಸಿ ವಿರೋಧ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.


    ಇತಿಹಾಸದಲ್ಲೆ ಇದೆ ಮೊದಲು ಕಾರಣವಿಲ್ಲದೆ ಸ್ಪೀಕರ್ ವಿರುದ್ದ ಧರಣಿ ಮಾಡಿ ಸದನವನ್ನು ಹಾಳು ಮಾಡಿರುವುದು. ಸ್ಪೀಕರ್ ವಿರುದ್ದ ಕಾಂಗ್ರೆಸ್ ಸದಸ್ಯರು ಆಡಿದ ಮಾತುಗಳು ಅಕ್ಷಮ್ಯ ಅಪರಾಧ. ಇಂತಹ ವರ್ತನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಕಾಂಗ್ರೆಸ್ ಪಕ್ಷ ವೈಚಾರಿಕವಾಗಿ ದಿವಾಳಿಯಾಗಿದೆ. ರಾಜ್ಯದ ಜನತೆ ನೋಡ್ತಾ ಇದ್ದಾರೆ. ಇವರ ವರ್ತನೆಯನ್ನು ನಾವೆಲ್ಲರೂ ಖಂಡನೆ ಮಾಡುತ್ತೇವೆ. ಮೊದಲೇ ತೀರ್ಮಾನಿಸಿದ ಅಜೆಂಡಾದ ಚರ್ಚೆಗೆ ಅಡ್ಡಿ ಮಾಡಿರುವುದು ನಿಜಕ್ಕೂ ಯಾರು ಒಪ್ಪುವುದಿಲ್ಲ ರಾಜ್ಯದ ಜನ ಕೂಡ ಒಪ್ಪಲ್ಲ ಎಂದರು.


    ಇದನ್ನು ಓದಿ: Session | ಸದನದಲ್ಲಿ ಗದ್ದಲ; ಬಾವಿಗಿಳಿದು ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ, ಸ್ಪೀಕರ್ ವಿರುದ್ಧ ಘೋಷಣೆ


    ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಕುಟುಂಬದ ಮೇಲೆ ಎಫ್ ಐ ಆರ್ ದಾಖಲು ವಿಚಾರವಾಗಿವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಇದರ ಬಗ್ಗೆ ಅವರು ನಡೆದ ಘಟನೆಗಳನ್ನು ವಿವರಿಸಲಿ. ಪೊಲೀಸ್ ಇಲಾಖೆ ಸೂಕ್ತವಾಗಿ ತನಿಖೆ ಮಾಡುತ್ತೆ. ಹಾಗಂತ ಸದನದಲ್ಲಿ ಬಟ್ಟೆ ಬಿಚ್ಚುವುದಾ...? ಎಂದು ಪ್ರಶ್ನೆ ಮಾಡಿದರು.


    ಇಂದು ಬಜೆಟ್ ಅಧಿವೇಶನ ಆರಂಭವಾದ ನಂತರ ಸದನದಲ್ಲಿ ಕಾಂಗ್ರೆಸ್ ಬಿ.ಕೆ. ಸಂಗಮೇಶ್ ಅವರು ತಮ್ಮ ವಿರುದ್ಧ ಭದ್ರಾವತಿ ಎಫ್​ಐಆರ್​ ದಾಖಲಿಸಿರುವುದನ್ನು ಖಂಡಿಸಿ ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಅಂಗಿ ಬಿಚ್ಚಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಕಾಗೇರಿ ಅವರು ಸಂಗಮೇಶ್ ಅವರನ್ನು ಒಂದು ವಾರಗಳ ಕಾಲ ಸದನದಿಂದ ಅಮಾನತು ಮಾಡಿದರು.

    Published by:HR Ramesh
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು