ಸಹಕಾರ ಸಮ್ಮೇಳನ ಉದ್ಘಾಟನೆ ಮುನ್ನ ಗೋ ಪೂಜೆ ಮಾಡಿ, ನಂದಿನಿ ಪೇಡಾ ಸವಿದ Amit Shah

ಸಹಕಾರ ಕ್ಷೇತ್ರದಲ್ಲಿ ಅಭಿವೃದ್ದಿಗೆ ಸಾಕಷ್ಟು ಅವಕಾಶಗಳಿವೆ. ಜತೆ ಜತೆಗೆ ಸವಾಲುಗಳೂ ಇವೆ. ಆ ಸವಾಲುಗಳನ್ನು ಮೆಟ್ಟಿ ನಿಲ್ಲದೇ ಇದ್ದರೆ ಸಹಕಾರ ಆಂದೋಲನಕ್ಕೆ ಕಷ್ಟವಿದೆ.

ಗೋ ಪೂಜೆ ಮಾಡಿದ ಅಮಿತ್ ಶಾ

ಗೋ ಪೂಜೆ ಮಾಡಿದ ಅಮಿತ್ ಶಾ

 • Share this:
  ಬೆಂಗಳೂರು (ಏ. 1): ಅರಮನೆ ಮೈದಾನದಲ್ಲಿ ಸಹಕಾರ ಸಮ್ಮೇಳನಕ್ಕೆ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ (Amit Shah)  ಅವರು ವೇದಿಕೆಗೆ ಆಗಮಿಸುವ ಮುನ್ನ ಗೋ ಪೂಜೆ  (Goo Puja) ಮಾಡಿ ಗಮನ ಸೆಳೆದರು. ಬಳಿಕ ಕೆಎಂಎಫ್ (KMF)​ ಮಳಿಗೆ ಉದ್ಘಾಟಿಸಿ, ನಂದಿನಿ ಪೇಡವನ್ನು ಸವಿದರು. ಬಳಿಕ ಸಹಕಾರ ಇಲಾಖೆ ಆಯೋಜಿಸಿದ್ದ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕಿನ ಲಾಂಛನ ಬಿಡುಗಡೆ ಹಾಗೂ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ನ್ನು ಅವರು ಉದ್ಘಾಟಿಸಿದರು.

  ಸಹಕಾರಿ ಸಂಘದ ರೂವಾರಿ ಸಿದ್ದನಗೌಡ ರಾಮನಗೌಡ ಪಾಟೀಲರಿಗೆ ನಮಸ್ಕರಿಸಿ ಭಾಷಣ ಆರಂಭಿಸಿದ ಅವರು, ಸಹಕಾರಿ ಆಂದೋಲನದಲ್ಲಿ ರಾಜ್ಯ ಎ ಗ್ರೇಡ್​ನಲ್ಲಿದೆ. ಸಹಕಾರಿ ಕ್ಷೇತ್ರದಲ್ಲಿರುವ ಭ್ರಷ್ಟಾಚಾರಕ್ಕೆ ಕೊನೆ ಹಾಡಬೇಕಿದೆ. ಅದಕ್ಕಾಗಿ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಪಾರದರ್ಶಕತೆ ತರಬೇಕಾಗಿದೆ. ಸಹಕಾರಿ ಕ್ಷೇತ್ರ ಔಟ್ ಡೇಟೆಡ್ ಎಂದು ಲೇವಡಿ ಮಾಡಲಾಗಿತ್ತು. ಆದರೆ ನಾನು ಹೇಳುತ್ತೇನೆ ಸಹಕಾರಿ ಕ್ಷೇತ್ರ ಸದೃಢವಾಗಿದೆ ಎಂದರು.  ಬಡತನ ನಿರ್ಮೂಲನೆ ಸಂಕಲ್ಪ

  ಅಮೂಲ್ ಸಂಸ್ಥೆ, ಲಿಜ್ಜಡ್ ಪಾಪಡ್, ಇಫ್ಕೋ, ಕ್ರಿಪ್ಕೋ ಗಳು ಸಹಕಾರಿ ಆಂದೋಲನದ ಫಲಶೃತಿಗಳು‌. ಕರ್ನಾಟಕ ನಂದಿನಿ ಸಹ ಇದರಲ್ಲಿ‌ಮುಂಚೂಣಿಯಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ಅಭಿವೃದ್ದಿಗೆ ಸಾಕಷ್ಟು ಅವಕಾಶಗಳಿವೆ. ಜತೆ ಜತೆಗೆ ಸವಾಲುಗಳೂ ಇವೆ. ಆ ಸವಾಲುಗಳನ್ನು ಮೆಟ್ಟಿ ನಿಲ್ಲದೇ ಇದ್ದರೆ ಸಹಕಾರ ಆಂದೋಲನಕ್ಕೆ ಕಷ್ಟವಿದೆ. ಹಾಗಾಗಿ ಸ್ವಾತಂತ್ರ್ಯ ಮಹೋತ್ಸವದ 75ನೇ ಮಹೋತ್ಸವದ ವೇಳೆಯಲ್ಲಿ ನಾವು ಒಂದು ಸಂಕಲ್ಪ ಮಾಡಬೇಕು. ದೇಶದ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವದ ವೇಳೆಗೆ ನಾವು ಪ್ರತಿಯೊಂದು ಕುಟುಂಬಕ್ಕೂ ಸಹಕಾರ ಆಂದೋಲನವನ್ನು ಮುಟ್ಟಿಸುವ ಮೂಲಕ ಬಡತನವನ್ನು ಹೊಡೆದೋಡಿಸಬೇಕಾಗಿದೆ ಎಂದು ಕರೆ ನೀಡಿದರು.

  ಇದನ್ನು ಓದಿ: ಶಿವಕುಮಾರ ಶ್ರೀಗಳು ಆಧುನಿಕ ಬಸವಣ್ಣ; Amit Shah

  ಹಾಲು ಉತ್ಪಾದಕರಿಗೆ ಕ್ರೆಡಿಟ್​ ಕಾರ್ಡ್​ ವಿತರಣೆ

  ನಂದಿನಿ ಕ್ಷೀರ ಸಂವೃದ್ದಿ ಸಹಕಾರ ಬ್ಯಾಂಕ್ ಮೂಲಕ ಎಲ್ಲ ಹಾಲು ಉತ್ಪಾದಕರಿಗೆ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಬೇಕು. ಇದು ಕೇಂದ್ರ ಸರ್ಕಾರದ್ದೇ ಯೋಜನೆ, ಅದರ ಪೈಲೆಟ್ ಪ್ರಾಜೆಕ್ಟ್ ಕರ್ನಾಟಕದಿಂದಲೇ ಆರಂಭವಾಗಲಿ ಎಂದು ಆಶಿಸಿದ ಅವರು, ಬೇಕಾದ ಅಗತ್ಯವಾದ ಎಲ್ಲ ಸಹಕಾರ ಸಹಾಯವನ್ನು ಕೇಂದ್ರ ಸರ್ಕಾರ ನೀಡುತ್ತದೆ ಎಂದು ಭರವಸೆ ನೀಡಿದರು.  33 ಸಾವಿರ ರೈತರಿಗೆ ಬಡ್ಡಿರಹಿತ ಸಾಲ

  ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ಕಾರ ಸಹಕಾರಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದೆ. ಈ ವರ್ಷ ರಾಜ್ಯದ 33 ಸಾವಿರ ರೈತರಿಗೆ ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ. ಹಾಲು ಉತ್ಪಾದಕರ ಶಕ್ತಿಯನ್ನು ನಂದಿನಿ ಸಹಕಾರಿ ಬ್ಯಾಂಕ್ ತೋರಿಸಿ ಕೊಡಲಿದೆ. ಹಾಲು ಉತ್ಪಾದನೆಯ ಜೊತೆಗೆ ರೈತರಿಗೆ ವಿಶೇಷ ಕೊಡುಗೆಯನ್ನು ಕೊಡಲಿದೆ. ನಂದಿನಿ ಬ್ಯಾಂಕ್'ಗೆ ಸರ್ಕಾರ ನೂರು ಕೋಟಿ ರೂ. ಮೂಲ ಬಂಡವಾಳವನ್ನು ಕೊಡುತ್ತಿದೆ. ಇಂದು ಯಶಸ್ವಿನಿ ಯೋಜನೆಯನ್ನು ಪುನಃ ಆರಂಭಿಸುತ್ತಿದ್ದೇವೆ. ಅದಕ್ಕೆ 300 ಕೋಟಿ ರೂ. ಗಳನ್ನು ಕಾಯ್ದಿರಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈತಪರ ಯೋಜನೆಗಳನ್ನು ಸರ್ಕಾರ ಮಾಡಲಿದೆ

  ಇದನ್ನು ಓದಿ: ಹುಟ್ಟೂರಲ್ಲಿ ತಲೆ ಎತ್ತಲಿದೆ HD Deve Gowda ಸಾಧನೆ ಬಿಂಬಿಸುವ ಮ್ಯೂಸಿಯಂ

  ಸಹಕಾರ ರಂಗದ ಶಕ್ತಿ ಅನಾವರಣ

  ಪ್ರಧಾನಿ ನರೇಂದ್ರ ಮೋದಿಯವರು ಕೃಷಿಯಿಂದ ಸಹಕಾರಿ ಇಲಾಖೆಯನ್ನು ಪ್ರತ್ಯೇಕ ಮಾಡಿದ್ದಾರೆ. ದೇಶದ ಎಲ್ಲ ಪ್ಯಾಕ್ಸ್ ಗಳು ಕಾಂಪ್ರೆಸ್ ಆಗಬೇಕೆಂದು ಕ್ರಮ ಕೈಗೊಂಡಿದ್ದಾರೆ. ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಹಾಲು ಮಾರುವವರ ಶಕ್ತಿ ಏನು ಎಂದು ತೋರಿಸುತ್ತದೆ.

  ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸಹಕಾರಿ ರಂಗ ಸರ್ಕಾರವನ್ನು ಆಳುತ್ತಿವೆ. ನಮ್ಮಲ್ಲಿ ರಾಜಕೀಯ ಸಹಕಾರ ಕ್ಷೇತ್ರವನ್ನು ನಿಯಂತ್ರಿಸುತ್ತಿದೆ. ಸಹಕಾರಿಗಳು ಸ್ವಾವಲಂಬಿಗಳಾಗಿ ಬ್ಯಾಂಕ್ ಗಳನ್ನು ಅಭಿವೃದ್ಧಿ ಪಡಿಸಬೇಕು. ರೈತರು ಮತ್ತು ಸಹಕಾರ ಗ್ರಾಮೀಣ ಭಾರತದ ಆರ್ಥಿಕ ಶಕ್ತಿ ಎಂದು ತಿಳಿಸಿದರು
  Published by:Seema R
  First published: