Bee Hotel: ಬೆಂಗಳೂರಿನಲ್ಲಿ‌ ಜೇನು ಹೋಟೆಲ್! 50 ಕಡೆ ಹೊಸ ಸಾಹಸ

ಉದ್ಯಾನಗರಿ ಬೆಂಗಳೂರು ಮತ್ತೊಂದು ವಿಶೇಷತೆಯ ಗರಿ ಮುಡಿದುಕೊಳ್ಳುತ್ತಿದೆ. ಅದೇನಪ್ಪಾ ಅಂದ್ರೆ ಸಿಲಿಕಾನ್ ಸಿಟಿಯಲ್ಲಿ ‘ಬೀ ಹೋಟೆಲ್ಸ್’ ಅಂದರೆ ಜೇನುನೊಣಗಳ ಹೋಟೆಲ್ ಆರಂಭವಾಗ್ತಿದೆ. ಅರೇ, ಇದೇನಿದು ಜೇನು ಹೋಟೆಲ್? ಏನ್ ಸ್ಪೆಷಲ್ ಅನ್ನೋದರ ವಿವರ ನೋಡೋಣ

ಬೆಂಗಳೂರಲ್ಲಿ ಜೇನು ಹೋಟೆಲ್!

ಬೆಂಗಳೂರಲ್ಲಿ ಜೇನು ಹೋಟೆಲ್!

  • Share this:
ಪರಾಗ ಸ್ಪರ್ಶದ ನಾಶ ಎಂದರೆ ಆಹಾರದ ಲಭ್ಯತೆಯೇ ನಾಶ ಎಂದರ್ಥ. ಭೂಮಿ‌ ಮೇಲಿನ 85% ಜಾತಿಯ ಸಸ್ಯಗಳ ಉಳಿವು ಜೇನುನೊಣಗಳ ಉಳಿವನ್ನು ಅವಲಂಬಿಸಿದೆ. ನಾವು ಸೇವಿಸುವ 1/3 ಭಾಗ ಆಹಾರ ಪರಾಗಸ್ಪರ್ಶ ಕ್ರಿಯೆಯ ಮೇಲೆ ನಿಂತಿದೆ. ಈ ಕಾರಣದಿಂದ ಜೇನು ನೊಣಗಳು ಆಹಾರ‌ ಭಧ್ರತೆಯ ಬೆನ್ನೆಲುಬು. ಇಂತಹ ಜೇನುನೊಣಗಳು ಇಂದು ಕೃಷಿಕ್ಷೇತ್ರದಲ್ಲಿನ ಅತಿಯಾದ ರಾಸಾಯನಿಕಗಳ ಬಳಕೆ, ಅತಿಯಾದ ಮಾಲಿನ್ಯ, ಅರಣ್ಯ ನಾಶ, ಜೀವವೈವಿಧ್ಯತೆಯ ನಾಶ ಮುಂತಾದ ಕಾರಣಗಳಿಂದಾಗಿ ವಿನಾಶದ ಅಂಚು ತಲುಪುತ್ತಿವೆ. ಜೇನು ನೊಣಗಳ ವಿನಾಶವೆಂದರೆ, ಅದು ಮಾನವ ಜನಾಂಗದ ವಿನಾಶವೇ ಸರಿ. ಹೀಗಿರೋವಾಗ ಬೆಂಗಳೂರಿನಲ್ಲಿ ಜೇನು ಹೊಟೇಲ್ ಆರಂಭವಾಗ್ತಿದೆ.

ಬೆಂಗಳೂರಿನಲ್ಲಿ‌ ಜೇನು ಹೋಟೆಲ್?

ಉದ್ಯಾನಗರಿ ಬೆಂಗಳೂರು ಮತ್ತೊಂದು ವಿಶೇಷತೆಯ ಗರಿ‌ ಮುಡಿದುಕೊಳ್ಳುತ್ತಿದೆ. ಅದೇನಪ್ಪಾ ಅಂದ್ರೆ ಸಿಲಿಕಾನ್ ಸಿಟಿಯಲ್ಲಿ ‘ಬೀ ಹೋಟೆಲ್ಸ್’ ಅಂದರೆ ಜೇನುನೊಣಗಳ ಹೋಟೆಲ್ ಆರಂಭವಾಗ್ತಿದೆ.

Bee Hotels in Bengaluru 50 different placed saving plan
ಬೆಂಗಳೂರಿನಲ್ಲಿ ಬೀ ಹೋಟೆಲ್!


ಅಶೋಕ ಟ್ರಸ್ಟ್ ನ ಹೊಸ ಸಾಹಸ

ಜೇನು ಹೋಟೆಲ್ ಅಂದರೆ ಹೋಟೆಲ್ ಅಲ್ಲ.. ಇದು ಜೇನುನೊಣ ಜಾತಿಗೆ‌ಸೇರಿದ ವಿಶೇಷ ನೊಣಗಳ ಸಂರಕ್ಷಣೆಗಾಗಿ ಬೆಂಗಳೂರಿನ ಪರಿಸರ ಸಂಶೋಧನೆ ಮಾಡ್ತಿರೋ ಅಶೋಕ ಟ್ರಸ್ಟ್ ನ ಹೊಸ ಸಾಹಸ.

ಹೇಳಿ ಕೇಳಿ‌ ಬೆಂಗಳೂರು ತನ್ನ ಹವಾಮಾನದಿಂದಲೇ ಹೆಸರು ವಾಸಿಯಾಗಿರೋ ನಗರ. ಇಲ್ಲಿನ ಪರಿಸರ ಎಂಥವರನ್ನೂ ಮನಸೂರೆ ಮಾಡುತ್ತೆ. ಅದೇ ರೀತಿ, ಇಂಥ ಆಹ್ಲಾದಕರ ಪರಿಸರದಲ್ಲಿ ತರಹೇವಾರಿ,  ವಿವಿಧ ಜಾತಿಯ ಜೇನುನೊಣಗಳ, ಅಳಿವಿನಂಚಿನ ಮಕರಂದ ಹೀರುವ ನೊಣಗಳ ಆವಾಸ ಸ್ಥಾನವಾಗಿದೆ.

ಇದನ್ನೂ ಓದಿ: ಸಂಭ್ರಮದಿಂದ ಜರುಗಿದ ಹಾಲೋಕಳಿ ಜಾತ್ರೆ, 60 ಅಡಿ ಎತ್ತರದ ಕಂಬವೇರಿ ಯುವಕರ ಸಾಹಸ!

50 ಕಡೆ ‘ಬೀ ಹೋಟೆಲ್ಸ್’!

ಇಂಥಹ ನೊಣಗಳ ಸಂರಕ್ಷಣೆಗಾಗಿ ವಿಜ್ಞಾನಿಗಳು ಹೊಸ ಸಂಶೋಧನೆಗೆ ಮುಂದಾಗಿದ್ದಾರೆ. ‘ಬೀ ಹೋಟೆಲ್’ ಹೆಸರಿನಲ್ಲಿ ಬೆಂಗಳೂರಿನ ಆಯ್ದ 50 ಕಡೆ ಈ ‘ಬೀ ಹೋಟೆಲ್’ಗಳನ್ನು ನಿರ್ಮಿಸಲಾಗ್ತಿದೆ. ಇಲ್ಲಿ ನೊಣಗಳ ಸಂರಕ್ಷಣೆ ಮಾಡಲಾಗ್ತಿದೆ.

ಜೇನುನೊಣಗಳ ಸಂತತಿ ರಕ್ಷಣೆಯ ಉದ್ದೇಶ

ಈ ಬೀ ಹೋಟೆಲ್​​ಗಳನ್ನು ಮನೆಗಳ ಟೆರೆಸ್ ಗಳಲ್ಲೇ ನಿರ್ಮಿಸುವುದು ಇದರ ಪ್ರಮುಖ ಉದ್ದೇಶ. ಮಕರಂದ ಹೀರುವ ನೊಣಗಳ ಚಲನವಲನಗಳ ಮೇಲೆ ನಿಗಾ ಇರಿಸಿ ಅವುಗಳ ಸಂತತಿ ರಕ್ಷಣೆ ಮಾಡುವುದು ಜೇನುನೊಣ ಹೋಟೆಲ್​ಗಳ ಮುಖ್ಯ ಉದ್ದೇಶವಾಗಿದೆ.

ಬೆಂಗಳೂರಿನಲ್ಲಿ ಜೇನುನೊಣದ ಬಗ್ಗೆ ಸಂಶೋಧನೆ

ಈ ಜೇನುನೊಣ ಹೋಟೆಲ್​​ನಲ್ಲಿ ವಿವಿಧ ಜಾತಿಯ ಜೇನುನೊಣಗಳ ಸಹಬಾಳ್ವೆಗೆ ಅವಕಾಶ ಇರುತ್ತಾ ಅನ್ನೋದರ ಬಗ್ಗೆ ಸಂಶೋಧನೆ, ಅಧ್ಯಯನ ನಡೆಯಲಿದೆ. ಇದಕ್ಕಾಗಿ ವಿಜ್ಞಾನಿಗಳು ಈಗಾಗಲೇ ಬೆಂಗಳೂರಿನಲ್ಲಿರುವ ಜೇನುನೊಣಗಳ ಜಾತಿಗಳ ಬಗ್ಗೆ ಸಂಶೋಧನಾ ಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಜನರಿಗೆ ಬಂಪರ್; ಸಿಂಪಲ್ ಆಗಿ ಸಿಂಗಾಪುರಕ್ಕೆ ಹಾರಿ!

ಮಕರಂದ‌ ಹೀರೋ ಇಂಥಹ ವಿಭಿನ್ನ ಜೇನುನೊಣಗಳು ಮನುಷ್ಯನಿಂದ ಹೇಗೆ ಕ್ಷೀಣಿಸುತ್ತಿವೆ? ಇವುಗಳ ಸಂರಕ್ಷಣೆ ಹೇಗೆ? ಉಳಿವು ಹೇಗೆ ಅನ್ನೋದರ ಬಗ್ಗೆ ಸಂಶೋಧನೆ ಕೈಗೆತ್ತಿಕೊಂಡಿದ್ದಾರೆ.

ನೊಣಗಳನ್ನು ಸಾಯಿಸಬೇಡಿ ಎಂಬ ಸಂದೇಶ

ನೊಣಗಳು ಜೇನುನೊಣಗಳಷ್ಟು ಅಪಾಯಕಾರಿ ಅಲ್ಲ. ಸೌಮ್ಯ ಸ್ವಭಾವದ, ನೋಡಲು ಆಕರ್ಷಕ ಆಗಿರೋ ಈ ನೊಣಗಳನ್ನು ಹೊಡೆದು ಸಾಯಿಸಬೇಡಿ. ಬದಲಿಗೆ ಅವುಗಳ ರಕ್ಷಣೆಗೆ ನಮ್ಮ ಬೀ ಹೋಟೆಲ್​​ಗಳನ್ನು ಬಳಸಿ ಅಂತ ವಿಜ್ಞಾನಿಗಳು ಬೆಂಗಳೂರಿಗರಿಗೆ ಕರೆ‌ನೀಡಿದ್ದಾರೆ.

‘ಬೀ ಹೋಟೆಲ್‘ಗಳ ಮಾದರಿಗೆ 10 ತಿಂಗಳ ಶ್ರಮ

‘ಬೀ ಹೋಟೆಲ್‘ಗಳ ಮಾದರಿ ಬಗ್ಗೆ ವಿಜ್ಞಾನಿಗಳು 10 ತಿಂಗಳ ಕಾಲ ಶ್ರಮಿಸಿದ್ದಾರೆ. ಇದೀಗ ಸರಳ, ಸುಲಭ ಬೀ ಮಾಡೆಲ್​​ಗಳನ್ನು ಆಯ್ದ ಕೊಡುತ್ತಿದ್ದಾರೆ. ಇದೊಂದು ಪ್ರಾರ್ಥಮಿಕ, ಪ್ರಾಯೋಗಿಕ ಹಂತವಾಗಿದೆ. ಆಸಕ್ತರು‌ ಮೊಬೈಲ್ ಆ್ಯಪ್ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.

ಜೇನ್ನೋಣಗಳು ಪ್ರಕೃತಿಯ ಸಸ್ಯಗಳಲ್ಲಿನ ಹೂವುಗಳಲ್ಲಿ ಪರಾಗಸ್ಪರ್ಶ ಮಾಡುವ, ನೈಸರ್ಗಿಕವಾಗಿ ಸಿಗುವ ಅತ್ಯದ್ಭುತ ಸಂಪನ್ಮೂಲ. ಅಷ್ಟೇ ಅಲ್ಲ ಅವುಗಳು ನಮ್ಮನ್ನು ಕಾಪಾಡೋ ಏಂಜೆಲ್ಸ್ ಥರ. ಪರಾಗ ಸ್ಪರ್ಶ ಮಾಡಿಸಿ ಸಸ್ಯಗಳ ಸಂಸಾರನ ಸಾಕಿ ತಮ್ಮ ಸಂಸಾರನೂ ಸಾಕೋ ಈ ಸಹಬಾಳ್ವೆನ ಮನುಷ್ಯ ನೋಡಿ ಕಲಿಯಬೇಕು. ಜೇನು ಇಲ್ಲಾಂದ್ರೆ ನಾವಿಲ್ಲ ಅಷ್ಟೇ.
Published by:Thara Kemmara
First published: