• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Assembly Election 2023: ಚುನಾವಣೆ ನೀತಿ ಸಂಹಿತೆ ಭಯ; ಸಿಎಂ ರಾಜ್ಯ ಪ್ರವಾಸ ರದ್ದು, ರಾಮಮಂದಿರ ಭೂಮಿ ಪೂಜೆಗೂ ಬ್ರೇಕ್

Karnataka Assembly Election 2023: ಚುನಾವಣೆ ನೀತಿ ಸಂಹಿತೆ ಭಯ; ಸಿಎಂ ರಾಜ್ಯ ಪ್ರವಾಸ ರದ್ದು, ರಾಮಮಂದಿರ ಭೂಮಿ ಪೂಜೆಗೂ ಬ್ರೇಕ್

ಬಸವರಾಜ್ ಬೊಮ್ಮಾಯಿ, ಸಿಎಂ

ಬಸವರಾಜ್ ಬೊಮ್ಮಾಯಿ, ಸಿಎಂ

ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಭೂಮಿ ಪೂಜೆಗೆ ಬಿಜೆಪಿ ಸರ್ಕಾರ ಮುಂದಾಗಿದೆ. ರಾಮಮಂದಿರ ಭೂಮಿ ಪೂಜೆಗೆ 40 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಚುನಾವಣಾ ನೀತಿ ಸಂಹಿತೆಯಿಂದಾಗಿ ಭೂಮಿ ಪೂಜೆ ಮಾಡಲು ಸಾಧ್ಯವಾಗಲ್ಲ.

 • News18 Kannada
 • 2-MIN READ
 • Last Updated :
 • Karnataka, India
 • Share this:

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ (Election Commission) ಇಂದು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ಕರೆಯುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ (Karnataka Politics) ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಇಂದು ಸಿಎಂ ಬೊಮ್ಮಾಯಿ (CM Basavaraj Bommai) ಸಂಪುಟದ ಬಹುತೇಕರ ಸಚಿವರು ತಮ್ಮ ಇಲಾಖೆಯ ಸಾಧನೆಗಳ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆದಿದ್ದರು. ಚುನಾವಣಾ ಆಯೋಗದ ಸುದ್ದಿಗೋಷ್ಠಿ ಬೆನ್ನಲ್ಲೇ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ (Election Code Of Conduct) ಜಾರಿಯಾಗಲಿದೆ. ಇತ್ತ ಸಿಎಂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಗಳು ರದ್ದುಗೊಳ್ಳಲಿವೆ. ಇನ್ನು ಈ ಬಗ್ಗೆ ಮಾತನಾಡಿರುವ ಸಿಎಂ ಬೊಮ್ಮಾಯಿ, ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆ ರಾಜ್ಯ ಪ್ರವಾಸ ರದ್ದುಗೊಳಿಸುತ್ತಿದ್ದೇನೆ. ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದೇನೆ ಎಂದು ಹೇಳಿದ್ದಾರೆ.


ನಾನು ಪಟ್ಟಿ ಬಿಡುಗಡೆ ಬಗ್ಗೆ ದಿನಾಂಕ ಹೇಳಲ್ಲ. ಇನ್ನೂ ಮುಂದೆ ಪಟ್ಟಿ ಫೈನಲ್ ಮಾಡ್ತೀವಿ. ನಮ್ಮದು ಯಾವಾಗಲೂ ನೀತಿ ಸಂಹಿತೆ ಜಾರಿ ಆದ ಮೇಲೆ ಆಗೋದು. ನಮ್ಮ ಬಳಿ ಸರ್ವೇ ರಿಪೋರ್ಟ್ ಇದೆ. ಅದು ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ಮಾಡ್ತಾರೆ. ಟಿಕೆಟ್ ಫೈನಲ್ ವಿಚಾರದ ದಿನಾಂಕ ಹೇಳಲ್ಲ ಎಂದು ಹೇಳಿದ ಸಿಎಂ ಎಲ್ಲಾ ಪ್ರವಾಸ ರದ್ದುಗೊಳಿಸಿ ಸರ್ಕಾರ ನಿವಾಸಕ್ಕೆ ತೆರಳಿದರು.


ನೀತಿ ಸಂಹಿತೆ ನಿಯಮಗಳು


ಇನ್ನು ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಲಿದ್ದರು. ನೀತಿ ಸಂಹಿತೆ ಜಾರಿಯಾದ್ರೆ ನಿಯಮಗಳು ಅನ್ವಯವಾಗಲಿವೆ.


ಕಳೆದ ಒಂದೂವರೆ ತಿಂಗಳಲ್ಲಿ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿದೆ. ಕಾಮಗಾರಿ ಪೂರ್ಣ ಆಗದೆ ಇದ್ರು, ತರಾತುರಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡಲಾಗಿದೆ. ಇನ್ನೂ ಅಪೂರ್ಣ ಆಗದೆ ಇರುವ ಕಾಮಗಾರಿಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಲು ಸರ್ಕಾರ ಪ್ಲಾನ್ ಮಾಡಿಕೊಂಡಿತ್ತು. ಇದೀಗ ಸರ್ಕಾರದ ಪ್ಲಾನ್​ಗೆ ನೀತಿ ಸಂಹಿತೆ ಅಡ್ಡಿಯಾಗಿದೆ.
ಇದನ್ನೂ ಓದಿ: Karnataka Assembly Election 2023 Schedule Live: ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗೆ ಕೌಂಟ್​ಡೌನ್


ಪ್ರತಿಮೆಗಳ ಉದ್ಘಾಟನೆ


ಅಂದುಕೊಂಡಂತೆ ಸಿಎಂ ಬೊಮ್ಮಾಯಿ ಸರ್ಕಾರವಿಧಾನಸೌಧದ ಮುಂದೆ ಕೆಂಪೇಗೌಡ, ಬಸವೇಶ್ವರ ಪ್ರತಿಮೆ,  ಬೆಳಗಾವಿಯ ಸುವರ್ಣಸೌಧದ ಮುಂದೆ ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆಯನ್ನು ಸರ್ಕಾರ ಅನಾವರಣಗೊಳಿಸಿದೆ. ಕಾಮಗಾರಿಗಳು ಸರಿಯಾಗಿ ಪೂರ್ಣ ಗೊಳದೇ ಇದ್ರೂ ನೀತಿ ಸಂಹಿತೆ ಭಯದಿಂದ ಪ್ರತಿಮೆ ಗಳ ಉದ್ಘಾಟನೆ ಮಾಡಿ ಮುಗಿಸಲಾಗಿದೆ.


ಇದನ್ನೂ ಓದಿ:  Karnataka Election Date 2023: ಚುನಾವಣಾ ನೀತಿ ಸಂಹಿತೆ ಅಂದ್ರೆ ಏನು? ಜಾರಿಯಾದ ನಂತ್ರ ಏನೆಲ್ಲಾ ಮಾಡಬಾರದು?


ರಾಮಮಂದಿರ ಭೂಮಿ ಪೂಜೆಗೆ ತಡೆ


ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಭೂಮಿ ಪೂಜೆಗೆ ಬಿಜೆಪಿ ಸರ್ಕಾರ ಮುಂದಾಗಿದೆ. ರಾಮಮಂದಿರ ಭೂಮಿ ಪೂಜೆಗೆ 40 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಚುನಾವಣಾ ನೀತಿ ಸಂಹಿತೆಯಿಂದಾಗಿ ಭೂಮಿ ಪೂಜೆ ಮಾಡಲು ಸಾಧ್ಯವಾಗಲ್ಲ.

First published: