Pramoda Devi Wadiyar: ಬೇಬಿ ಬೆಟ್ಟದ ವಿವಾದ, ಮಂಡ್ಯ ಡಿಸಿಗೆ ಆಕ್ಷೇಪಣಾ ಪತ್ರ ಬರೆದ 'ರಾಜಮಾತೆ'

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಮಂಡ್ಯ ಡಿಸಿಗೆ ಆಕ್ಷೇಪಣಾ ಪತ್ರ ಕಳುಹಿಸಿದ್ದಾರೆ. ನರೇಂದ್ರ ಡಿ.ವಿ.ಗೌಡ , ಪ್ರಮೋದಾ ದೇವಿ ಒಡೆಯರ್ ಪರ ವಕೀಲರ ಮೂಲಕ ಡಿಸಿಗೆ ಆಕ್ಷೇಪ ಪತ್ರ ಕಳುಹಿಸಲಾಗಿದೆ.

ಪ್ರಮೋದಾದೇವಿ ಒಡೆಯರ್

ಪ್ರಮೋದಾದೇವಿ ಒಡೆಯರ್

  • Share this:
ಮಂಡ್ಯ  (ಜು 25): ಬೇಬಿ ಬೆಟ್ಟದ ವಿವಾದಕ್ಕೆ (Bebi Betta Controversy) ರಾಜಮಾತೆ ಎಂಟ್ರಿ ಕೊಟ್ಟಿದ್ದಾರೆ. ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಮಂಡ್ಯ ಡಿಸಿಗೆ ಆಕ್ಷೇಪಣಾ ಪತ್ರ ಕಳುಹಿಸಿದ್ದಾರೆ. ನರೇಂದ್ರ ಡಿ.ವಿ.ಗೌಡ , ಪ್ರಮೋದಾ ದೇವಿ ಒಡೆಯರ್  (Pramoda Devi Wadiyar) ಪರ ವಕೀಲರ ಮೂಲಕ ಡಿಸಿಗೆ ಆಕ್ಷೇಪ ಪತ್ರ ಕಳುಹಿಸಲಾಗಿದೆ. ಜು.22ರಂದು ಮೇಲ್ ಮಾಡುವ ಮೂಲಕ ಒಡೆಯರ್ ಬೇಬಿ ಬೆಟ್ಟದ ಬ್ಲಾಸ್ಟ್​ಗೆ  ಆಕ್ಷೇಪಿಸಿದ್ದರು. ಇದೀಗ ಖುದ್ದು ಡಿಸಿ ಆಪ್ತ ಶಾಖೆಗೆ ಪತ್ರ ರವಾನಿಸಿದ್ದಾರೆ.

ಟ್ರಯಲ್ ಬ್ಲಾಸ್ಟ್ ಮಾಡೋದು ಕಾನೂನು ಬಾಹಿರ

ಬೇಬಿ ಬೆಟ್ಟ ಸರ್ವೇ ನಂಬರ್ 1 ಅಮೃತ್ ಮಹಲ್ ಕಾವಲು, ಒಟ್ಟು 1,623 ಎಕರೆ ಜಮೀನು ರಾಜಮನೆತನಕ್ಕೆ ಸೇರಿದ್ದು. 1950ರ ಗೆಜೆಟ್ ನೋಟಿಫಿಕೇಷನ್ ಪ್ರಕಾರ ಅದು ನಮ್ಮ ಖಾಸಗಿ ಆಸ್ತಿ, ನಮ್ಮ ಅನುಮತಿ ಪಡೆಯದೆ ಟ್ರಯಲ್ ಬ್ಲಾಸ್ಟ್ ಮಾಡೋದು ಕಾನೂನು ಬಾಹಿರ.
ನಮ್ಮ ಒಪ್ಪಿಗೆ ಪಡೆಯದೆ ಅನುಮತಿ ಕೊಟ್ಟಿರೋದಕ್ಕೆ ಆಕ್ಷೇಪ.
ಕೂಡಲೇ ಅನುಮತಿ ಆದೇಶ ಹಿಂಪಡೆಯಬೇಕ. ಇಲ್ಲವಾದ್ರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಸಹ ನೀಡಲಾಗಿದೆ.

ಈ ಹಿಂದೆಯೂ ಪತ್ರ ಬರೆದಿದ್ದ ಪ್ರಮೋದದೇವಿ

ಮೈಸೂರು ರಾಜಮನೆತನಕ್ಕೆ ಸೇರಿದ ಪಾಂಡವಪುರ ತಾಲೂಕಿನ ಬೇಬಿಬೆಟ್ಟದ ಅಮೃತ್‌ ಮಹಲ್‌ ಕಾವಲು ಪ್ರದೇಶವನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಒತ್ತಾಯಿಸಿ ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಅವರು ಪಾಂಡವಪುರ ತಹಶೀಲ್ದಾರ್‌ಗೆ ಈ ಹಿಂದೆ ಪ್ರಮೋದಾದೇವಿ ಪತ್ರ ಬರೆದಿದ್ದರು

ಬೇಬಿಬೆಟ್ಟ ಎಂದೇ ಪ್ರಸಿದ್ಧಿ ಪಡೆದಿರುವ ಸರ್ವೆ ನಂ-1ರ ಕಾವಲು ಪ್ರದೇಶವು 1,623 ಎಕರೆ 7 ಗುಂಟೆ ಎಕರೆ ವಿಸ್ತೀರ್ಣ ಹೊಂದಿದೆ. ಇದಿಷ್ಟು ರಾಜಮನೆತನಕ್ಕೆ ಸೇರಿದ್ದಾಗಿದೆ. ಹೀಗಾಗಿ 1623 ಎಕರೆ ಪ್ರದೇಶವನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡಬೇಕು. ಅದಕ್ಕೆ ತಗಲುವ ಸರಕಾರಿ ಶುಲ್ಕವನ್ನು ಭರಿಸುವುದಾಗಿ, ಅ.24ರಂದು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದರು

ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಪತ್ರ

ಈ ಮೊದಲು ನ.11, 2014ರಂದು ಕೂಡ ಪತ್ರ ಬರೆದು ಖಾತೆ ಮಾಡಿಕೊಡುವಂತೆ ಒತ್ತಾಯಿಸಿದ್ದೆ. ಅದರ ಪ್ರತಿಯನ್ನು ಸರಕಾರದ ಮುಖ್ಯ ಕಾರ‍್ಯದರ್ಶಿ, ಕಂದಾಯ ಇಲಾಖೆ ಕಾರ‍್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಅವರಿಗೂ ಕಳುಹಿಸಿದ್ದೆ. ಆದರೆ ಈ ಬಗ್ಗೆ ಯಾವುದೇ ಸಮರ್ಪಕ ಉತ್ತರ ಬಂದಿಲ್ಲ. ಹೀಗಾಗಿ ಈಗ ಮತ್ತೊಮ್ಮೆ ಬರೆಯುತ್ತಿದ್ದು ಶೀಘ್ರ ಸರ್ವೆ ಕಾರ್ಯ ಮುಗಿಸಿ, ಖಾತೆ ಮಾಡಿಕೊಡಬೇಕು, ಎಂದು ಒತ್ತಾಯಿಸಿದ್ದರು.

ಮನೆತನದ ಖಾಸಗಿ ಆಸ್ತಿ ಬೇಬಿಬೆಟ್ಟ ಪ್ರದೇಶ

1950ರ ಒಪ್ಪಂದದಂತೆ ನನ್ನ ಮಾವನವರಾದ ಜಯಚಾಮರಾಜ ಒಡೆಯರ್‌ ತಮ್ಮ ರಾಜಾಧಿಕಾರವನ್ನು ಸರಕಾರಕ್ಕೆ ಬಿಟ್ಟುಕೊಟ್ಟು ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆ ಒಪ್ಪಂದದ ಅನ್ವಯ ರಾಜ ಮನೆತನಕ್ಕೆ ಸ್ಥಿರ ಮತ್ತು ಚರ ಆಸ್ತಿಯನ್ನು ಅನುಭವಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಭಾರತ ಸಂವಿಧಾನಕ್ಕೆ 1971ರಲ್ಲಿ ತಿದ್ದುಪಡಿ ತಂದು ರಾಜಮನೆತನದ ಎಲ್ಲ ವಿಶೇಷ ಅಧಿಕಾರವನ್ನು ರದ್ದು ಮಾಡಲಾಯಿತು.

ಆದರೆ, ಖಾಸಗಿ ಆಸ್ತಿಯನ್ನು ಅನುಭವಿಸುವ ಹಕ್ಕು ಕಲ್ಪಿಸಲಾಯಿತು. ನನ್ನ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ನಿಧನದ ನಂತರ ಅವರ ಆಸ್ತಿಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಹೀಗಾಗಿ ರಾಜಮನೆತನದ ಖಾಸಗಿ ಆಸ್ತಿಯಾಗಿರುವ ಬೇಬಿಬೆಟ್ಟ ಪ್ರದೇಶವನ್ನು ನನ್ನ ಹೆಸರಿಗೆ ಖಾತೆ ಮಾಡಿ, ದಾಖಲಾತಿ ನೀಡಬೇಕು ಎಂದು ಈ ಹಿಂದೆ ಕೋರಿಕೊಂಡಿದ್ರು.

ಬೇಬಿ ಬೆಟ್ಟದಲ್ಲಿ ಅಕ್ರಮಗಣಿಗಾರಿಕೆ

ಬೇಬಿಬೆಟ್ಟ ಸೇರಿದಂತೆ ಕೆಆರ್‌ಎಸ್‌ ಆಸುಪಾಸಿನಲ್ಲಿ ಬರುವ ಗಣಿ ಕಂಪನಿಗಳಿಗೆ ಕ್ವಾರಿ ಅನುಮತಿ ಮುಗಿದಿದ್ದು ಅವು ಗಣಿ ಚಟುವಟಿಕೆ ನಡೆಸುವಂತಿಲ್ಲ. ಆದರೆ ಗಣಿ ಮಾಲೀಕರು ಗಣಿ ಇಲಾಖೆ ಅಧಿಕಾರಿಗಳಿಗೆ ಪ್ರಭಾವ ಬೀರಿ ರಾತ್ರಿ ವೇಳೆ ಕದ್ದು ಮುಚ್ಚಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.ಸದ್ಯ ಬೇಬಿಬೆಟ್ಟದಲ್ಲಿ ಕೈಕುಳಿ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ. ಸ್ಫೋಟ, ಯಂತ್ರೋಪಕರಣ ಬಳಸಿ ಗಣಿಗಾರಿಕೆ ನಡೆಸುವಂತಿಲ್ಲ. ಆದರೆ ಚಾಮರಾಜನಗರದ ಜಿಲ್ಲೆಯಲ್ಲಿ ಗಣಿಗಾರಿಕೆ ನಿಷೇಧದ ನಂತರ ಕಲ್ಲಿಗೆ ಬೇಡಿಕೆ ತೀವ್ರವಾಗಿದ್ದು ಗಣಿ ಮಾಲೀಕರು ನಿಷೇಧ ಆದೇಶವನ್ನು ಗಾಳಿಗೆ ತೂರಿ ಚಟುವಟಿಕೆ ನಡೆಸುತ್ತಿದ್ದಾರೆ.
Published by:Pavana HS
First published: