• Home
 • »
 • News
 • »
 • state
 • »
 • Dharmasthala: ಬೆಂಗಳೂರಿನಲ್ಲಿ ಬೆಳೆದು ಮಂಜುನಾಥನ ಮಡಿಲು ಸೇರಿದ ನಂದಿ! ಇಲ್ಲಿಂದ ಧರ್ಮಸ್ಥಳಕ್ಕೆ ಬರೀ ಪಯಣವಲ್ಲ, ಸುಂದರ ಅನುಭವ!

Dharmasthala: ಬೆಂಗಳೂರಿನಲ್ಲಿ ಬೆಳೆದು ಮಂಜುನಾಥನ ಮಡಿಲು ಸೇರಿದ ನಂದಿ! ಇಲ್ಲಿಂದ ಧರ್ಮಸ್ಥಳಕ್ಕೆ ಬರೀ ಪಯಣವಲ್ಲ, ಸುಂದರ ಅನುಭವ!

ಶ್ರೇಯಾಂಸ್​, ಭೀಷ್ಮ

ಶ್ರೇಯಾಂಸ್​, ಭೀಷ್ಮ

ನಾವು ಹೇಳುತ್ತಿರುವ ಹರಕೆ ವಿಷಯ ನಿಮಗೆ ಗೊತ್ತಾದರೆ ನಿಮಗೆ ಆಶ್ವರ್ಯವಾಗುತ್ತೆ. ನಿಮಗೆ ಗೊತ್ತಿರದ ಹಾಗೇ ನಿಮ್ಮ ಮುಖದಲ್ಲಿ ಒಂದು ನಗು (Smile) ಮೂಡುತ್ತೆ. ಮೈಂಡ್​ನಲ್ಲಿ ವ್ಹಾವ್ (Wow)​ ಅನ್ನುವ ಶಬ್ಧ ಗುನುಗುತ್ತೆ.

 • News18 Kannada
 • Last Updated :
 • Karnataka, India
 • Share this:

  ದೇವರಿ (God) ಗೆ ಹರಕೆ ಹೊತ್ತಿಕೊಳ್ಳುವ ಸಂಪ್ರದಾಯ (Tradition) ನಿನ್ನೆ ಮೊನ್ನೆಯದ್ದಲ್ಲ. ತನಗೆ ಬೇಕಿರುವುದುನ್ನು ದೇವರು ಮಾಡಿಸಿಕೊಟ್ಟರೆ ಹರಕೆ ತೀರಿಸುತ್ತೇವೆ ಅಂತ ಹಲವರು ಹರಕೆ ಕಟ್ಟಿಕೊಳ್ಳುತ್ತಾರೆ. ತಿರುಪತಿ (Tirupati)  ಗೆ ಹೋದವರು ಕೇಶ ಮುಂಡನೆ ಮಾಡಿಸಿಕೊಂಡು ಹರಕೆ ತೀರಿಸುತ್ತಾರೆ. ಈ ರೀತಿಯ ಚಿತ್ರ ವಿಚಿತ್ರ (Different) ವಾಗಿ ಹರಕೆ ತೀರಿಸುವುದನ್ನು ಎಲ್ಲರೂ ನೊಡಿದ್ದೇವೆ ಕೇಳಿದ್ದೇವೆ. ಆದರೆ, ಇಲ್ಲಿ ನಾವು ಹೇಳುತ್ತಿರುವ ಹರಕೆ ವಿಷಯ ನಿಮಗೆ ಗೊತ್ತಾದರೆ ನಿಮಗೆ ಆಶ್ವರ್ಯವಾಗುತ್ತೆ. ನಿಮಗೆ ಗೊತ್ತಿರದ ಹಾಗೇ ನಿಮ್ಮ ಮುಖದಲ್ಲಿ ಒಂದು ನಗು (Smile) ಮೂಡುತ್ತೆ. ಮೈಂಡ್​ನಲ್ಲಿ ವ್ಹಾವ್ (Wow)​ ಅನ್ನುವ ಶಬ್ಧ ಗುನುಗುತ್ತೆ. ಬೆಂಗಳೂರಿ (Bengaluru) ನ ಟೆಕ್ಕಿ ಹಾಗೂ ಗುಜರಾತಿನ ಕರು (Calf from Gujarat) ವೊಂದರ ಹರಕೆ ಕಥೆ ಇದು.


  ಕರು ಜೊತೆ ಧರ್ಮಸ್ಥಳಕ್ಕೆ ಪಾದಯಾತ್ರೆ!


  ಮನುಷ್ಯರು ಪಾದಯಾತ್ರೆ ಮಾಡುವುದನ್ನು ನಾವು ನೋಡಿದ್ದೇವೆ. ಇದ್ಯಾವುದಪ್ಪಾ, ಪ್ರಾಣಿಗಳ ಜೊತೆ ಪಾದಯಾತ್ರೆ ಅಂತೀರಾ? ಈ ವಿಷಯ ಗೊತ್ತಾಗಬೇಕು ಅಂದರೆ ಮೊದಲು ನೀವು ಶ್ರೀಯಂಶ ಜೈನ್ ಬಗ್ಗೆ ತಿಳಿದುಕೊಳ್ಳಬೇಕು. ಇವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಐಟಿ ಬಿಟಿ ಅಂದ್ರೆ ಮೊದಲೇ ಕೇಳಬೇಕಾ. ವಾರ ಪೂರ್ತಿ ದುಡಿದು, ವೀಕೆಂಡ್​ನಲ್ಲಿ ಮೋಜು ಮಸ್ತಿ ಮಾಡುತ್ತಾರೆ. ಆದರೆ ಇಂಥವರ ಕ್ಯಾಟಗರಿ ಈ ಟೆಕ್ಕಿ ಶ್ರೀಯಂಶ ಜೈನ್​ ಸೇರುವುದಿಲ್ಲ. ಇವರೇ ಬೇರೆ, ಇವರ ಸ್ಟೈಲ್​ ಬೇರೆ ಎಂದರೆ ತಪ್ಪಾಗಲ್ಲ.


  ಶ್ರೀಯಂಶ​ಗೆ ಹಸು ಮೇಲಿತ್ತು ಸಾಕಷ್ಟು ಪ್ರೀತಿ!


  ಶ್ರೀಯಂಶ​ ಜೈನ್​ಗೆ ಮೊದಲಿನಿಂದಲೂ ಹಸುಗಳ ಮೇಲೆ ಸಾಕಷ್ಟು ಪ್ರೀತಿ. ಅವುಗಳನ್ನು ಸಾಕಿ ಸಲಹುವುದು ಎಂದರೆ ತುಂಬಾ ಇಷ್ಟ. ಹೀಗಾಗಿ ಗುಜರಾತ್​ನಿಂದ ಗಿರ್​ ತಳಿಯ ಹೋರಿಯನ್ನು ಬೆಂಗಳೂರಿಗೆ ತರಿಸಿಕೊಂಡಿದ್ದರು. ಅದು ಕೂಡ ಟ್ರೈನ್​ನಲ್ಲಿ. ಗಿರ್​ ತಳಿಯ ಹೋರಿ ಬೆಲೆ 1 ಲಕ್ಷದ 35 ಸಾವಿರದಿಂದ 2 ಲಕ್ಷದ ವರೆಗೆ ಇರುತ್ತೆ. ಆದರೆ, ಶ್ರೇಯಾಂಸ್​ ಮಾತ್ರ ಮಾಲೀಕರ ಜೊತೆ ಮಾತಾನಾಡಿ 1 ಲಕ್ಷ 5 ಸಾವಿರಕ್ಕೆ ಈ ಹೋರಿಯನ್ನು ಟ್ರೈನ್​ ಮೂಲಕ ಬೆಂಗಳೂರಿಗೆ ತರಿಸಿಕೊಂಡಿದ್ದರು.


  ಖಾಲಿ ಸೈಟ್​ ಬಾಡಿಗೆ ಪಡೆದಿದ್ದ ಶ್ರೇಯಾಂಸ್​!


  ಬೆಂಗಳೂರಿನ ದೊಡ್ಡ ಆಲದಮರದ ಬಳಿಯ ಸ್ಟೇಷನ್​ನಲ್ಲಿ ಈ ಹೋರಿ ಬಂದಿತ್ತು. ಜೊತೆಗೆ ಇದರ ಪುಟ್ಟ ಕರು ಕೂಡ ಬಂದಿತ್ತು. ಸಿಟಿಯಿಂದ ದೊಡ್ಡ ವಾಹನ ಬುಕ್​ ಮಾಡಿಕೊಂಡು ಶ್ರೀಯಂಶ​ ಅಲ್ಲಿಗೆ ತೆರಳಿ ಹೋರಿ ಮತ್ತು ಕರುವನ್ನು ಜೊತೆಗೆ ಕರೆದುಕೊಂಡು ಬಂದರು. ಮನೆ ಬಳಿ ಇದ್ದ ಖಾಲಿ ಸೈಟ್​ವೊಂದನ್ನು ಬಾಡಿಗೆ ಪಡೆದುಕೊಂಡಿದ್ದರು ಶ್ರೀಯಂಶ​. ಗುಜರಾತ್​ನಿಂದ ತರಿಸಿದ್ದ ಹೋರಿಗೆ  ಪಾವರ್ತಿ ಅಂತ ಹೆಸರಿಟ್ಟರಿದ್ದರು. ಕರುಗೆ ಭೀಷ್ಮ ಅಂತ ಹೆಸರಿಟ್ಟಿದ್ದರು. ಹೋರಿ ಮತ್ತು ಕರುವನ್ನು ತುಂಬಾ ಪ್ರೀತಿಯಿಂದ ಸಾಕಿ, ಸಲುಹಿದರು. ಕರು ಇವರ ಮನೆಗೆ ಬಂದಾಗ ಅದು ನಾಲ್ಕು ದಿನದ ಮರಿ, ಈಗ ಅದಕ್ಕೆ 2 ವರ್ಷ.


  ಶ್ರೇಯಾಂಸ್​, ಭೀಷ್ಮ


  ಇದನ್ನೂ ಓದಿ: ಇವರಿಗೆ ಕಾಲೇ ಕೈ! ಕಾಲಿಂದಲೇ ಬೈಕ್ ರಿಪೇರಿ ಮಾಡುವ ಕಲಬುರಗಿಯ ಮೆಕಾನಿಕ್


  ಧರ್ಮಸ್ಥಳಕ್ಕೆ ಭೀಷ್ಮನನ್ನು ಒಪ್ಪಿಸುವ ಹರಕೆ!


  ಪಾವರ್ತಿ ಜೊತೆ ಬಂದಿದ್ದ ಭೀಷ್ಮನನ್ನು ಶ್ರೀಯಂಶ​ ಧರ್ಮಸ್ಥಳದ ಗೋಶಾಲೆಗೆ ಒಪ್ಪಿಸುವುದಾಗಿ ಹರಕೆ ಹೊತ್ತಿಕೊಂಡಿದ್ದರು. ಆ ಸಮಯ ಕೂಡ ಬಂದಿತ್ತು, ಅದು ಕೂಡ ಪಾದಯಾತ್ರೆ ಹರಕೆ. ಇಲ್ಲಿಂದ ಧರ್ಮಸ್ಥಳಕ್ಕೆ ನಡೆದುಕೊಂಡು ಹೋಗುವ ಹರಕೆ. ಅದರಂತೆ ಪಾವರ್ತಿಯನ್ನು ಶ್ರೀಯಂಶ​ ಇದ್ದ ಪಕ್ಕದ ಮನೆಯ ದಂಪತಿಗೆ ನೋಡಿಕೊಳ್ಳವಂತೆ ಹೇಳಿದ್ದರು. ಅದರಂತೆ ಶ್ರೀಯಂಶ​ ಭೀಷ್ಮನೊಂದಿಗೆ ಪಾದಯಾತ್ರೆ ಆರಂಭಿಸಿದರು. ಆಫೀಸ್​ ಕೆಲಸ ಮಾಡಲೇ ಬೇಕಿತ್ತು ಅಂತ ಬ್ಯಾಗ್​ನಲ್ಲಿ ಫೋನ್​, ಲ್ಯಾಪ್​ ಟಾಪ್​ ಕೆಲವೊಂದು ಬಟ್ಟೆ ಬಿಟ್ಟರೆ ಬೇರೆ ಏನೂ ಇರಲಿಲ್ಲ.


  ಬೆಳಗಿನ ಜಾವ 4 ರಿಂದ 9ರವರೆಗೆ ಪಾದಯಾತ್ರೆ!


  ಶ್ರೀಯಂಶ​ಗೆ ಕೆಲಸ ಮಾಡುವ ಅನಿವಾರ್ಯತೆ ಇತ್ತು. ಹೀಗಾಗಿ ಬೆಳಗಿನ ಜಾವ 4 ರಿಂದ 9ರವರೆಗೂ ಪಾದಯಾತ್ರೆ ಮಾಡುತ್ತಿದ್ದರು. ಬಳಿಕ ಒಂಬತ್ತು ಗಂಟೆಗೆ ಲ್ಯಾಪ್​ಟಾಪ್​ ಹಿಡಿದು ಎಲ್ಲಿದ್ದರೂ ಅಲ್ಲಿಂದಲೇ ಕೆಲಸ ಮಾಡುತ್ತಿದ್ದರು. ಊಟ, ತಿಂಡಿ ಕಥೆಯೇನು? ಅಂತ ನೀವು ಕೇಳಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಪಾದಯಾತ್ರೆ ಮಾಡುವಾಗ ಶ್ರೀಯಂಶ ಹೈವೇಗಳಲ್ಲಿ ಹೋಗುತ್ತಿರಲಿಲ್ಲ. ಯಾಕೆಂದರೆ ಭೀಷ್ಮನಿಗೆ ಹುಲ್ಲು ಸಿಗಬೇಕು ಪ್ರತಿ ಬಾರಿ ಅನ್ನೋದು ಶ್ರೀಯಂಶ ಯೋಚನೆಯಾಗಿತ್ತು. ಶ್ರೇಯಾಂಸ್​ ಇಂದಿರಾ ಕ್ಯಾಂಟೀನ್​ ಸೇರಿದಂತೆ ಪಾದಯಾತ್ರೆಯಲ್ಲಿ ಸಿಗುವ ಪ್ರತಿಹಳ್ಳಿಯ ಜನರ ಮನೆಯಲ್ಲೇ ಊಟ ಮಾಡುತ್ತಿದ್ದರಂತೆ.


  ಶ್ರೇಯಾಂಸ್​, ಭೀಷ್ಮ


  ಸಿಕ್ಕ ಜಾಗದಲ್ಲೇ ವಿಶ್ರಾಂತಿ, ಕೆಲಸ, ಊಟ!


  ಶ್ರೇಯಾಂಸ್​ ಪಾದಯಾತ್ರೆ ವೇಳೆ ಸಿಗುವ ಊರಿನ ಶಾಲೆ, ಅಥವಾ ಅರಳಿಕಟ್ಟೆ, ಮನೆ ಹೀಗೆ ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಕುಳಿತು ಕೆಲಸ ಮತ್ತು ವಿಶ್ರಾಂತಿ ಮಾಡುತ್ತಿದ್ದರು. ಇವರನ್ನು ಕಂಡ ಊರಿನ ಜನರಿಗೂ ಖುಷಿಯಾಗುತ್ತಿತ್ತು. ಶ್ರೀಯಂಶ ಅವರಿಗೆ ಊರಿನ  ಜನರು ಅಡುಗೆ ಮಾಡಿ ಉಣ ಬಡಿಸುತ್ತಿದ್ದರು. ಜೊತೆಗೆ ಭೀಷ್ಮನಿಗೂ ಕೂಡ ಬುಸಾ, ಹುಲ್ಲು, ಹಣ್ಣುಗಳನ್ನು ನೀಡುತ್ತಿದ್ದರು. ಒಂದು ಊರಿನಿಂದ ಮತ್ತೊಂದು ಊರಿಗೆ ಶ್ರೀಯಂಶ ಹೋಗುವಷ್ಟರಲ್ಲಿ ಈ ಊರಿನ ಜನರು ಆ ಊರಿನ ಜನರಿಗೆ ಕರೆ ಮಾಡಿ ಇವರಿಗೆ ಅಡುಗೆ, ವಿಶ್ರಾಂತಿ ವ್ಯವಸ್ಥೆ ಮಾಡಿಸುತ್ತಿದ್ದರು.


  ಶ್ರೇಯಾಂಸ್​, ಭೀಷ್ಮ


  36 ದಿನ ಭೀಷ್ಮ-ಶ್ರೀಯಂಶ​ ಪಾದಯಾತ್ರೆ!


  ಕೆಲವೊಂದು ಊರಿನ ಜನರು ಶ್ರೀಯಂಶ​-ಭೀಷ್ಮ ಜೋಡಿಗೆ ಅದ್ಧೂರಿ ಸ್ವಾಗತ ಮಾಡಿದ್ದಾರೆ. ಹಣೆಗೆ ತಿಲಕ ಇಟ್ಟು, ಆರತಿ ತೆಗೆದು ಬರಮಾಡಿಕೊಂಡಿದ್ದಾರೆ. ಕೆಲ ಚಿಕ್ಕ ಮಕ್ಕಳಂತೂ ಭೀಷ್ಮನನ್ನು ತಬ್ಬಿಕೊಂಡು ಮುತ್ತಿಟ್ಟಿದ್ದಾರೆ. ಭೀಷ್ಮನಿಗೆ ಚೆಂದ ಚೆಂದ ಅಲಂಕಾರ ಕೂಡ ಮಾಡಿದ್ದಾರೆ. ಹೀಗೆ ಇವರ ಪಯಣ ಸುಮಾರು 360 ಕಿಲೋ ಮೀಟರ್ ದೂರವನ್ನು 36 ದಿನಗಳಲ್ಲಿ ಕ್ರಮಿಸುತ್ತಾ ಧರ್ಮಸ್ಥಳ ತಲುಪಿದ್ದಾರೆ.  ಧರ್ಮಸ್ಥಳಕ್ಕೆ ಬಂದ ಭೀಷ್ಮನನ್ನು ಸ್ವತಃ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರೇ ಬಾಳೆಹಣ್ಣು ನೀಡಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.


  ಭೀಷ್ಮನ ಕಾಲುಗಳಿಗೆ ಮಸಾಜು ಮಾಡುತ್ತಿದ್ದ ಶ್ರೇಯಾಂಸ್​!


  ಕಾಲ್ನಡಿಗೆಯುದ್ದಕ್ಕೂ ಭೀಷ್ಮನ ಹಸಿವು, ತ್ರಾಣ, ದಾಹವನ್ನ ಶ್ರೀಯಂಶ ನೀಗಿಸಿದ್ದಾರೆ. ಭೀಷ್ಮನ ಹಾಗೂ ತನ್ನ ಕೊನೆಯ ಪಯಣ ಇದಾಗಿದ್ರಿಂದ ಅದಕ್ಕೆ ವಿಶ್ರಾಂತಿ ಬೇಕೆಂದಾಗಲೆಲ್ಲ, ಅದರ ಕಾಲುಗಳಿಗೆ ಮಸಾಜು ಮಾಡುತ್ತಾ ಆರೈಕೆ ಮಾಡಿದ್ದಾರೆ. ಕ್ಯಾಂಟೀನ್ ಗಳಿಗೆ ಕರೆದೊಯ್ದು ಊಟ, ರೈತರಿಂದ ಪಡೆದು ಹುಲ್ಲುಗಳನ್ನೂ ನೀಡಿದ್ದಾರೆ. ಇನ್ನೇನು ಧರ್ಮಸ್ಥಳಕ್ಕೆ ನೀಡುತ್ತಾ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.


  ಇದನ್ನೂ ಓದಿ: ಅಮ್ಮ ಮೃತಪಟ್ಟ ನಂತರ ಮರಿಹುಲಿಗಳ ಮೊದಲ ಬೇಟೆ!


  ಶ್ರೀಯಂಶ ಜೈನ್ ದಾರಿಯುದ್ದಕ್ಕೂ ತನ್ನ ಕಂಪೆನಿಯ ವರ್ಕ್ ಫ್ರಂ ಹೋಮ್ ಜಾಬ್ ಅನ್ನು ಮಾಡಿಕೊಂಡು ಬಂದಿದ್ದಾರೆ.  ಹೀಗೆ ತಾನು ಹೊತ್ತಿದ್ದ ಹರಕೆಯನ್ನು ಶ್ರೇಯಾಂಸ್ ನೆರವೇರಿಸಿದ್ದಾರೆ. ಧರ್ಮಸ್ಥಳಕ್ಕೆ ಬರಬೇಕಾದರೆ ಇದ್ದ ಖುಷಿ ವಾಪಸ್ ತೆರಳಬೇಕಾದರೆ ಅವರ ಖುಷಿ ಮಾಯವಾಗಿ, ಮನಸ್ಸು ಭಾರವಾಗಿತ್ತು.


  ಮನುಷ್ಯನ ಕಂಡರೆ ಮತ್ತೊಬ್ಬ ಮನುಷ್ಯ ಆಗದೇ ಇರುವ ಕಾಲದಲ್ಲಿ ಆ ಮೂಕ ಪ್ರಾಣಿಯ ಮೇಲೆ ಶ್ರೇಯಾಂಸ್​ಗೆ ಇದ್ದ ಪ್ರೀತಿ ಎಂಥದ್ದು ಅನ್ನುವುದನ್ನು ಕೇವಲ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.

  Published by:ವಾಸುದೇವ್ ಎಂ
  First published: