• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Yadagiri: ದಾಳಿ ಮಾಡಿದ ಕರಡಿ ಜೊತೆ ಸೆಣಸಾಡಿ ಜೀವ ಉಳಿಸಿಕೊಂಡ ವ್ಯಕ್ತಿ! ಈತ ಮಾಡಿದ ಐಡಿಯಾ ಏನ್ ಗೊತ್ತಾ?

Yadagiri: ದಾಳಿ ಮಾಡಿದ ಕರಡಿ ಜೊತೆ ಸೆಣಸಾಡಿ ಜೀವ ಉಳಿಸಿಕೊಂಡ ವ್ಯಕ್ತಿ! ಈತ ಮಾಡಿದ ಐಡಿಯಾ ಏನ್ ಗೊತ್ತಾ?

ಕರಡಿ

ಕರಡಿ

ನಸುಕಿನ ಜಾವ ಜಂಪಾರದೊಡ್ಡಿಯ ನಿವಾಸಿ ರುದ್ರಪ್ಪ ಎಂದಿನಂತೆ ಬಹಿರ್ದೆಸೆಗೆ ತೆರಳುತ್ತಿರುವಾಗ ಎದುರಿಗೆ ಬಂದ ಕರಡಿಯು ದಾಳಿ ಮಾಡಿದೆ. ಈ ವೇಳೆ ಕೆಲ ಕ್ಷಣ ಕರಡಿ ಜೊತೆ ಸೆಣಸಾಡಿ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾರೆ.Bear

  • Share this:

ಯಾದಗಿರಿ(ಜೂ.28): ಕರಡಿ (Bear) ಜೊತೆ ಸೆಣಸಾಡಿ ವ್ಯಕ್ತಿಯೊಬ್ಬ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಕರಡಿಯು ವ್ಯಕ್ತಿಯೊರ್ವರ ಮೇಲೆ ಡೆಡ್ಲಿ ಅಟ್ಯಾಕ್ (Deadly Attack) ಮಾಡಿದೆ. ರುದ್ರಪ್ಪ ಅವರ ಮೇಲೆ ಅಟ್ಯಾಕ್ ಮಾಡಿ ಗಂಭೀರ ಗಾಯಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕೂಡ ರುದ್ರಪ್ಪ ಕರಡಿ ಜೊತೆ ಸೆಣಸಾಡಿದ್ದಾರೆ. ಕರಡಿ ಬಾಯಿಯೊಳಗೆ ಟವಲ್ ಇಟ್ಟು ರುದ್ರಪ್ಪ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಯಾದಗಿರಿ (Yadagiri) ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ್ 12ರ ಜಂಪಾರದೊಡ್ಡಿಯಲ್ಲಿ ಈ ಘಟನೆ ಜರುಗಿದೆ. ನಸುಕಿನ ಜಾವ (Early Morning) ಜಂಪಾರದೊಡ್ಡಿಯ ನಿವಾಸಿ ರುದ್ರಪ್ಪ ಎಂದಿನಂತೆ ಬಹಿರ್ದೆಸೆಗೆ ತೆರಳುತ್ತಿರುವಾಗ ಎದುರಿಗೆ ಬಂದ ಕರಡಿಯು ದಾಳಿ ಮಾಡಿದೆ. ಈ ವೇಳೆ ಕೆಲ ಕ್ಷಣ ಕರಡಿ ಜೊತೆ ಸೆಣಸಾಡಿ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾರೆ.


ಕರಡಿ ಬಾಯಿಯೊಳಗೆ ಟವಲ್ ಇಟ್ಟು ರಕ್ಷಣೆ ಮಾಡಿಕೊಂಡಿದ್ದಾನೆ. ನಂತರ ಸ್ಥಳೀಯರು ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿ ಕರಡಿಯನ್ನು ಓಡಿಸಿದ್ದಾರೆ. ಗಂಭೀರ ಗಾಯಗೊಂಡ ರುದ್ರಪ್ಪನನ್ನು ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ಜಿಲ್ಲೆಯ ಲಿಂಗಸೂಗುರು ಆಸ್ಪತ್ರೆಗೆ ದಾಖಲಿಸಿದ್ದಾರೆ.


ವ್ಯಕ್ತಿಯ ತಲೆಗೆ ಕಚ್ಚಿದ ಕರಡಿ


ಸ್ಥಳಕ್ಕೆ ಕೊಡೇಕಲ್ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಗೊಂಡ ರುದ್ರಪ್ಪ ಮಾತನಾಡಿ ಕರಡಿ ದಾಳಿ ಮಾಡಿ ತಲೆಗೆ ಕಚ್ಚಿದೆ ನಂತರ ನಾನು ರಕ್ಷಣೆ ಮಾಡಿಕೊಳ್ಳಲು ಪ್ರಯತ್ನ ಮಾಡಿದೆ. ಸ್ಥಳೀಯರು ಬಂದು ಕರಡಿಯನ್ನು ಓಡಿಸಿ ರಕ್ಷಣೆ ಮಾಡಿದ್ದಾರೆ ಎಂದರು.


ಬೆಚ್ಚಿ ಬಿದ್ದ ಜನ..!


ಕೃಷ್ಣಾ ನದಿ ತೀರದಲ್ಲಿರುವ ಜಂಪಾರದೊಡ್ಡಿ ಸುತ್ತಲು ಬೆಟ್ಟವಿದೆ. ಇದೆ ಮೊದಲ ಬಾರಿಗೆ ಕರಡಿ ದಾಳಿ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಕರಡಿ ದಾಳಿಯಿಂದ ಜನರು ಆತಂಕಗೊಂಡಿದ್ದಾರೆ. ಕರಡಿ ದಾಳಿಯಿಂದ ಸ್ಥಳೀಯ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಮಕ್ಕಳು,ವೃದ್ಧರು, ಯುವಕರು ಪ್ರತಿಯೊಬ್ಬರೂ ಮನೆಯಿಂದ ಹೊರಗೆ ಬರಲು  ಭಯಪಡುವಂತಾಗಿದೆ.


ಅರಣ್ಯಾಧಿಕಾರಿಗಳಿಗೆ ಮನವಿ


ಈ ಬಗ್ಗೆ ಶಿವರಾಜ ಮಾತನಾಡಿ, ರುದ್ರಪ್ಪನ ಮೇಲೆ ಕರಡಿ ದಾಳಿಯಾಗಿದ್ದು ನಮಗೆ ಆತಂಕವಾಗಿದೆ. ಇದೆ ಮೊದಲ ಬಾರಿ ಇಂತಹ ಘಟನೆ ಜರುಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಕರಡಿ ಹಿಡಿದುಕೊಂಡು ಹೋಗಬೇಕೆಂದರು.


ಇದನ್ನೂ ಓದಿ: ನನ್ನ ಸ್ವಂತ ಸಾಮಾಜಿಕ ಜಾಲತಾಣದ ನಿರ್ವಹಣೆಗೆ ಸರ್ಕಾರದ ಹಣ ಬಳಸಿಲ್ಲ: BC Nagesh ಸ್ಪಷ್ಟನೆ


ಕರಡಿ ರಕ್ಷಿಸಿ ಒಯ್ಯಲು ಗ್ರಾಮಸ್ಥರ ಆಗ್ರಹ


ಜಂಪಾರದೊಡ್ಡಿ ನಿವಾಸಿಗಳು ಕರಡಿ ದಾಳಿಯಿಂದ ನೆಮ್ಮದಿ ಕಳೆದುಕೊಂಡಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ  ಆಗಮಿಸಿ ಕರಡಿಯನ್ನು ರಕ್ಷಣೆ ಮಾಡಿ ಕರಡಿಯನ್ನು ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಈಗ ಕೃಷಿ ಚಟುವಟಿಕೆ ಗರಿಗೆದರಿದ್ದು .ಕಕ್ಕೇರಾ,ನೀಲಕಂಠರಾಯನಗಡ್ಡಿ,ಹೊಸುರು ದೊಡ್ಡಿ,ಜಂಪಾರದೊಡ್ಡಿ, ಅನೇಕ ಗ್ರಾಮಗಳ ರೈತರು ಬಿತ್ತನೆ ಕಾರ್ಯ ಮಾಡಲು ಜಮೀನಿಗೆ ತೆರಳುತ್ತಾರೆ. ಕರಡಿ ದಾಳಿ ಘಟನೆಯಿಂದ ರೈತರು ಕೃಷಿ ಕಾರ್ಯ ಮಾಡಲು ತೆರಳಲು ಭಯಪಡುವಂತಾಗಿದೆ.


ಇದನ್ನೂ ಓದಿ: ದಾಳಿಂಬೆ, ಟೊಮೇಟೋ ಬೆಳೆಗಳಿಗೆ ವಿಮೆ ನೋಂದಣಿಗೆ ಅವಕಾಶ, ಇಲ್ಲಿದೆ ಮಾಹಿತಿ


ಮನೆಯಿಂದ ಹೊರಹೋಗಲು ಆತಂಕ ಪಡುತ್ತಿದ್ದಾರೆ.ಒಂದು ವೇಳೆ ಕರಡಿಯನ್ನು ಹಿಡಿದುಕೊಂಡು ಹೋಗದಿದ್ದರೆ ಮತ್ತೆ ಕರಡಿ ದಾಳಿ ಪ್ರಕರಣಗಳು ಹೆಚ್ಚಾಗಲಿದ್ದು,ಈ ಬಗ್ಗೆ ಅರಣ್ಯಾಧಿಕಾರಿಗಳು  ಎಚ್ಚೆತ್ತು ಕರಡಿಯನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡಿ ಜನರಲ್ಲಿರುವ ಆತಂಕ ನಿವಾರಣೆ ಮಾಡಬೇಕಿದೆ ಎಂದು ಜನರ ಒತ್ತಾಯವಾಗಿದೆ.

Published by:Divya D
First published: