Congress vs BJP Twitter War| ರಾಹುಲ್ ಗಾಂಧಿ ಮಾದಕ ವ್ಯಸನಿಯೇ? ಬಿಜೆಪಿಗರು ನಾಗರೀಕರಂತೆ ವರ್ತಿಸಿ ಎಂದ ಡಿ.ಕೆ. ಶಿವಕುಮಾರ್​

ರಾಜಕೀಯದಲ್ಲಿ ನಾಯಕರು ಸ್ವಲ್ಪ ನಾಗರೀಕರಂತೆ ವರ್ತಿಸಬೇಕು. ವಿರೋಧಿಗಳನ್ನೂ ಸಹ ಗೌರವಿಸುವಂತಿರಬೇಕು. ಬಿಜೆಪಿ ನಾಯಕರೂ ನನ್ನ ಮಾತನ್ನು ಒಪ್ಪುತ್ತಾರೆ ಎಂದು ನಾನು ಭಾವಿಸಿದ್ದೇನೆ. ಆದರೆ, ರಾಹುಲ್ ಗಾಂಧಿ ಬಗ್ಗೆ ಕೆಲವರ ಹೇಳಿಕೆ ನಿಜಕ್ಕೂ ದುರಾದೃಷ್ಟಕರ ಎಂದು ಡಿ.ಕೆ. ಶಿವಕುಮಾರ್ ವಿಷಾಧಿಸಿದ್ದಾರೆ.

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

 • Share this:
  ಬೆಂಗಳೂರು: ಬಿಜೆಪಿ ನಾಯಕರು ಇತ್ತೀಚೆಗೆ "ರಾಹುಲ್ ಗಾಂಧಿ ಹೆಬ್ಬಟ್​ ಗಿರಾಕಿ" ಎಂದು ಮಾಡಿದ್ದ ಟ್ವೀಟ್​ಗೆ ಪ್ರತಿಯಾಗಿ ನಿನ್ನೆ ಕಾಂಗ್ರೆಸ್​ ಸಹ ಪ್ರಧಾನಿ ನರೇಂದ್ರ ಮೋದಿಯವರೇ ನಿಜವಾದ "ಹೆಬ್ಬೆಟ್​ ಗಿರಾಕಿ" ಎಂದು ಟ್ವೀಟ್​ ಮಾಡಿತ್ತು. ಆದರೆ, ಕೆಲವೇ ನಿಮಿಷಗಳಲ್ಲಿ ಎಚ್ಚೆತ್ತಿದ್ದ ಕಾಂಗ್ರೆಸ್​ ನಾಯಕ ಡಿ.ಕೆ. ಶಿವಕುಮಾರ್ (DK Shivakumar)​ ಆ ಟ್ವೀಟನ್ನು ಡಿಲೀಟ್​ ಮಾಡಿ ಕ್ಷಮೆ ಕೋರಿದ್ದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಳ್ (Nalin Kumar Katil) ಮತ್ತು ಬಸನಗೌಡ ಪಾಟೀಲ್ (Basanagowda Patil Yatnal) ಸೇರಿದಂತೆ ಅನೇಕ ನಾಯಕರು "ರಾಹುಲ್ ಗಾಂಧಿ ಮಾದಕ ವ್ಯಸನಿ" ಎಂದು ಮತ್ತೆ ವ್ಯಯಕ್ತಿಕ ದಾಳಿ ನಡೆಸಲು ಮುಂದಾಗಿದ್ದಾರೆ. ಈ ದಾಳಿಗೆ ವಿಷಾಧ ವ್ಯಕ್ತಪಡಿಸಿರುವ ಡಿ.ಕೆ. ಶಿವಕುಮಾರ್​ "ಬಿಜೆಪಿ (BJP) ನಾಯಕರು ಮೊದಲು ನಾಗರೀಕರಂತೆ ವರ್ತಿಸುವುದನ್ನು ಕಲಿಯಲಿ" ಎಂದು ಕಿಡಿಕಾರಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಡಿ.ಕೆ. ಶಿವಕುಮಾರ್​ "ರಾಜಕೀಯದಲ್ಲಿ ನಾಯಕರು ಸ್ವಲ್ಪ ನಾಗರೀಕರಂತೆ ವರ್ತಿಸಬೇಕು. ವಿರೋಧಿಗಳನ್ನೂ ಸಹ ಗೌರವಿಸುವಂತಿರಬೇಕು. ಬಿಜೆಪಿ ನಾಯಕರೂ ನನ್ನ ಮಾತನ್ನು ಒಪ್ಪುತ್ತಾರೆ ಎಂದು ನಾನು ಭಾವಿಸಿದ್ದೇನೆ. ಆದರೆ, ರಾಹುಲ್ ಗಾಂಧಿ ಬಗ್ಗೆ ಕೆಲವರ ಹೇಳಿಕೆ ನಿಜಕ್ಕೂ ದುರಾದೃಷ್ಟಕರ" ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

  ರಾಹುಲ್ ಗಾಂಧಿಯನ್ನು ವ್ಯಯಕ್ತಿಕವಾಗಿ ನಿಂದಿಸಿ ನಿನ್ನೆ ಟ್ವೀಟ್ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ಮ "ರಾಹುಲ್ ಗಾಂಧಿ ಓರ್ವ ಮಾದಕ ವ್ಯಸನಿ, ಆತ ಡ್ರಗ್​ ಪೆಡ್ಲರ್​. ರಾಹುಲ್ ಗಾಂಧಿ ಮಾದಕ ವ್ಯಸನಕ್ಕೆ ಒಳಗಾದ ಆರೋಪಗಳಿಗೆ ಪುರಾವೆಗಳು ಇವೆ" ಎಂದು ಆರೋಪಿಸಿದ್ದರು.

  ಅಲ್ಲದೆ ಕಾಂಗ್ರೆಸ್​ CWC ಸಭೆ ಬಗ್ಗೆಯೂ ಪ್ರಶ್ನೆ ಮಾಡಿದ್ದ ನಳಿನ್ ಕುಮಾರ್​ ಕಟೀಲ್, "ನಿಮ್ಮ ಜಿ -23 ನಾಯಕರು ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಲ್ಲ ಎಂದು ಹೇಳುತ್ತಾರೆ. ಆದರೆ, ಸೋನಿಯಾ ಗಾಂಧಿ ಅವರು ತಾನೇ ಅಧ್ಯಕ್ಷೆ ಎಂದು ಘೋಷಿಸಿದ್ದಾರೆ. ಮತ್ತೊಂದೆಡೆ, ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗುತ್ತಾರೆ ಎಂದು ಹೇಳಲಾಗುತ್ತಿದೆ. ರಾಹುಲ್ ಗಾಂಧಿ ಎಂದರೇನು? ರಾಹುಲ್ ಗಾಂಧಿ ಓರ್ವ ಮಾದಕ ವ್ಯಸನಿ ಮತ್ತು ಡ್ರಗ್ ಪೆಡ್ಲರ್ .. . ನಾನು ಇದನ್ನು ಹೇಳುತ್ತಿಲ್ಲ, ಅದು ಸುದ್ದಿ ವರದಿಗಳಲ್ಲಿ ಕಾಣಿಸಿಕೊಂಡಿದೆ" ಎಂದು ಕಟೀಲ್ ಟ್ವೀಟ್​ ಮಾಡಿದ್ದರು.

  ಇದನ್ನೂ ಓದಿ: Nalin Kumar Kateel: 'ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್': ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ

  "ಯಾರು ಪಕ್ಷವನ್ನು ನಡೆಸಲು ಸಾಧ್ಯವಿಲ್ಲವೋ? ಸವರು ಇಡೀ ದೇಶವನ್ನು ಹೇಗೆ ಮುನ್ನಡೆಸುತ್ತಾರೆ?" ಎಂದು ಟ್ವೀಟ್​ ಮೂಲಕ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದರು.  ಬಿಜೆಪಿ ನಾಯಕರ ಈ ಎಲ್ಲಾ ಟೀಕೆಗೆ ಉತ್ತರ ನೀಡಿರುವ ಡಿ.ಕೆ. ಶಿವಕುಮಾರ್​, "ನಾಗರೀಕ ಮತ್ತು ಸಂಸದೀಯ ಭಾಷೆ ರಾಜಕೀಯ ಚರ್ಚೆಗೆ ಅಥವಾ ಮಾತುಕತೆಗೆ ಪೂರ್ವಾಪೇಕ್ಷಿತ ಎಂದು ನಾನು ಯಾವಾಗಲೂ ನಂಬಿದ್ದೇನೆ. ಕರ್ನಾಟಕ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಅನನುಭವಿ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರು ಮಾಡಿದ  ಟ್ವೀಟ್ ವಿಷಾದನೀಯ ಇದೇ ಕಾರಣಕ್ಕೆ ಅದನ್ನು ಹಿಂತೆಗೆದುಕೊಳ್ಳಲಾಗಿದೆ. ಆದರೆ, ಬಿಜೆಪಿ ನಾಯಕರು ಇದಕ್ಕೆ ಪ್ರತಿಯಾಗಿ ವ್ಯಯಕ್ತಿಕ ದಾಳಿ ನಡೆಸಿರುವುದು ಉತ್ತಮ ಬೆಳವಣಿಗೆ ಅಲ್ಲ" ಎಂದು ಅಸಮಾಧಾನ ಹೊರಹಾಕಿದ್ದಾರೆ.

  ಇದನ್ನೂ ಓದಿ: ಸದನದಲ್ಲಿ ಅಶ್ಲೀಲ ದೃಶ್ಯ ನೋಡಿದವರು, ಸಿಡಿ ಸುಳಿಯಲ್ಲಿ ಸಿಕ್ಕಿ ರಾಜೀನಾಮೆ ಕೊಟ್ಟ ಶೀಲವಂತರು ಯಾರು?; ಜೆಡಿಎಸ್ ಪ್ರಶ್ನೆ

  ಜುಲೈನಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದಲ್ಲಿ ಮೊದಲ ಉಪ-ಚುನಾವಣೆ ನಡೆಯುತ್ತಿದೆ. ಈ ಉಪ ಚುನಾವಣೆ ಕಾರಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ದಿನನಿತ್ಯ ಟ್ವೀಟ್​ ವಾರ್​ ನಡೆಯುತ್ತಲೇ ಇದೆ. ಈ ಮೊದಲ ಚುನಾವಣಾ ಪರೀಕ್ಷೆಯನ್ನು ಗೆಲ್ಲುವುದು ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯವಾಗಿದೆ.
  Published by:MAshok Kumar
  First published: