ಬೆಂಗಳೂರು (ಜು.18): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K Shivakumar) ಅವರ ಒಡೆತನದ ರಾಜರಾಜೇಶ್ವರಿ ನಗರದ ನ್ಯಾಷನಲ್ ಹಿಲ್ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಕರೆ (Bomb Threat Letter) ಬಂದಿದ್ದು, ಹುಚ್ಚ ವೆಂಕಟ್ ಹೆಸರಿನಲ್ಲೇ ಬೆದರಿಕೆ ಪತ್ರ ಬಂದಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹುಚ್ಚ ವೆಂಕಟ್, ನನ್ನ ಹೆಸರನ್ನ ಯಾವುದೇ ಕಾರಣಕ್ಕೂ ಮಿಸ್ ಯೂಸ್ ಮಾಡಕೂಡದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ವಿಡಿಯೋ ಮೂಲಕ ಹುಚ್ಚ ವೆಂಕಟ್ ಸ್ಪಷ್ಟನೆ
ಹುಚ್ಚ ವೆಂಕಟ್ ಹೆಸರಲ್ಲಿ ಬಾಂಬ್ ಬೆದರಿಕೆ ಇಮೇಲ್ ಹಿನ್ನಲೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಹುಚ್ಚ ವೆಂಕಟ್, ಇದು ಕೆಲವರಿಗೆ ಹೇಳ್ತಾ ಇರೋದು. ನನ್ನ ಹೆಸರನ್ನ ಯಾವುದೇ ಕಾರಣಕ್ಕು ಮಿಸ್ ಯೂಸ್ ಮಾಡಿಕೊಳ್ಳಬೇಡಿ. ಅಥವಾ ನನ್ನ ಹೆಸರಲ್ಲಿ ಮೇಲ್ ಕಳಿಸೋದಾಗ್ಲಿ, ಏನು ಮಾಡಬೇಡಿ. ಇದನ್ನು ನಾನು ಹೇಳ್ತಾ ಇರೋದು ಯಾರು ನನ್ನ ಹೆಸರು ಮಿಸ್ ಯೂಸ್ ಮಾಡಿಕೊಳ್ತಾರೋ ಅವರಿಗೆ ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ. ಕಿಡಿಗೇಡಿಗಳು ಹುಚ್ಚ ವೆಂಕಟ್ ಹೆಸರಲ್ಲಿ ಬಾಂಬ್ ಬೆದರಿಕೆ ಮೇಲ್ ಕಳುಹಿಸಿದ್ದಾರೆ. ‘
ಹುಚ್ವ ವೆಂಕಟ್ ಹೆಸರಲ್ಲಿ ಬಾಂಬ್ ಬೆದರಿಕೆ ಮೇಲ್
ಈ ಬಗ್ಗೆ ಪ್ರತಿಕ್ರಿಯಿಸಿದ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್ ಹುಚ್ವ ವೆಂಕಟ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಬಾಂಬ್ ಬೆದರಿಕೆ ಪತ್ರ ಬಂದಿದೆ ಎಂದು ತಿಳಿಸಿದ್ದಾರೆ. ಭಾನುವಾರ ರಾತ್ರಿ ಇ-ಮೇಲ್ ಮೂಲಕ ಬೆದರಿಕೆ ಬಂದಿತ್ತು. ಸೋಮವಾರ ಬೆಳಿಗ್ಗೆ ಶಿಕ್ಷಕರು ಮತ್ತು ಸಿಬ್ಬಂದಿ ಶಾಲೆಗೆ ಬಂದ ಬಳಿಕ ವಿಷಯ ಗೊತ್ತಾಯಿತು. ಅಷ್ಟರಲ್ಲಾಗಲೇ ಮಕ್ಕಳು ಶಾಲೆಗೆ ಬಂದಿದ್ದರು ಎಂದರು. ವಿದ್ಯಾರ್ಥಿಗಳನ್ನು ಶಾಲೆಯಿಂದ ಸ್ಥಳಾಂತರ ಮಾಡಲಾಗಿದೆ. ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಡಿಕೆಶಿ ತಿಳಿಸಿದರು.
ಇದನ್ನೂ ಓದಿ: Bengaluru Mosque: ಒತ್ತುವರಿ ಆರೋಪ, ಮಸೀದಿ ಕೆಡವಲು ಮುಂದಾದ ಬಿಬಿಎಂಪಿ
ನನ್ನ ಪ್ರಕಾರ ಇದೊಂದು ಹುಸಿ ಕರೆ
ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎಂದು ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಮಗೆ ಮಾಹಿತಿ ಬಂತು. ತಕ್ಷಣ ಪೊಲೀಸರನ್ನು ಸಂಪರ್ಕಿಸಿದೆ. ಶಾಲೆಯ ಆವರಣವನ್ನು ಖಾಲಿ ಮಾಡಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಕಾರ್ಯಾಚರಣೆ ನಡೆಸುತ್ತಿದೆ. ನನ್ನ ಪ್ರಕಾರ ಇದೊಂದು ಹುಸಿ ಕರೆ ಎಂದರು.
ಶಾಲೆಯ ಆವರಣದಲ್ಲಿ ಪರಿಶೀಲನೆ
ಬೆಂಗಳೂರು ಪಶ್ಚಿಮ ವಿಭಾದ ಡಿಸಿಪಿ ಲಕ್ಷ್ಮಣ ಬಿ.ನಿಂಬರಗಿ ಮಾಹಿತಿ ನೀಡಿ, ರಾಜರಾಜೇಶ್ವರಿ ನಗರದ ಐಡಿಯಲ್ ಟೌನ್ಶಿಪ್ನಲ್ಲಿರುವ ಖಾಸಗಿ ಶಾಲೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ ಶಾಲೆಯ ಆವರಣದಲ್ಲಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಆತಂಕಪಡುವ ಅಗತ್ಯವಿಲ್ಲ ಎಂದ್ರು ಡಿಕೆಶಿ ಮಗಳಿ ಐಶ್ವರ್ಯ
ಬಾಂಬ್ ಬೆದರಿಕೆ ಕುರಿತು ವಿದ್ಯಾರ್ಥಿಗಳ ಪೋಷಕರ ಜೊತೆ ಮಾತನಾಡುತ್ತಿರುವ ಮಗಳು ಐಶ್ವರ್ಯ, ಆತಂಕಪಡುವ ಅಗತ್ಯವಿಲ್ಲವೆಂದು ಹೇಳುತ್ತಿದ್ದಾರೆ. ಬಾಂಬ್ ಬೆದರಿಕೆಯಿಂದ ಆತಂಕಗೊಂಡಿದ್ದ ಪೋಷಕರು, ಶಾಲೆಗೆ ದೌಡಾಯಿಸಿದ್ರು. ಅವರ ಜೊತೆ ಮಾತಾಡಿದ ಐಶ್ವರ್ಯ, 'ಬಾಂಬ್ ಬೆದರಿಕೆ ನಮಗೂ ಆತಂಕ ತಂದಿದೆ. ಮಕ್ಕಳನ್ನು ಈಗಾಗಲೇ ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಲಾಗಿದ್ದು, ಆತಂಕ ಪಡಬೇಡಿ. ಆಡಳಿತ ಮಂಡಳಿ ಜೊತೆ ಸಹಕರಿಸಿ ಎಂದು ಪೋಷಕರ ಬಳಿ ಐಶ್ವರ್ಯ ಕೇಳಿಕೊಂಡ್ರು.
ಎಲ್ಲಾ ಮಕ್ಕಳು ಸೇಫ್ ಆಗಿದ್ದಾರೆ
ಪೊಲೀಸರು ಶಾಲೆಗೆ ಬಂದು ತಪಾಸಣೆ ನಡೆಸುತ್ತಿದ್ದಾರೆ. ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವ ಜವಾಬ್ದಾರಿ ನಮ್ಮದು. ಪೋಷಕರು ಸಹ ನಮ್ಮ ಜೊತೆಗಿದ್ದು, ಪರಿಸ್ಥಿತಿ ನಿಭಾಯಿಸಲು ಸಹಕರಿಸಬೇಕು ಎಂದೂ ಮನವಿ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ