ಮೊಬೈಲ್ ಕಳ್ಳತನದ (Mobile Theft) ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ. ಆದರೆ ಇತ್ತೀಚಿನ ಕಳ್ಳರು ಅಮಾಯಕರಂತೆ ನಟಿಸಿ ಮೊಬೈಲ್ ಕದಿಯುತ್ತಾರೆ. ಇದರಿಂದ ಮೋಸ ಹೋದ ಜನಗಳು ಎಷ್ಟೋ ಮಂದಿ. ಯಾರೇ ಆದ್ರೂ ನಿಮ್ಮ ಬಳಿ ಬಂದು ಮೊಬೈಲ್ ಕೇಳುವ ಮುನ್ನ ಎಚ್ಚರವಹಿಸಿ. ಸ್ವಲ್ಪ ಯಾಮಾರಿದ್ರು ಮೊಬೈಲ್ (Mobile) ನಿಮ್ಮ ಕೈಯಿಂದ ಮಿಸ್ಸಾಗ್ಬೋದು. ಮೊಬೈಲ್ ಬಳಕೆ ಹೆಚ್ಚಾದಂತೆ ಇಲ್ಲಿ ಹ್ಯಾಕರ್ಸ್ಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಕಿಡಿಕೇಡಿಗಳು ಅಮಾಯಕರ ಮೊಬೈಲ್ಗಳನ್ನು ಹ್ಯಾಕ್ ಮಾಡಿ ಅದರಲ್ಲಿದ್ದ ಬ್ಯಾಂಕ್ ಹಣವನ್ನು (Bank Money), ಡೇಟಾವನ್ನು (Data) ದೋಚುವ ಪ್ರಯತ್ನವನ್ನು ಮಾಡುತ್ತಾರೆ. ಇದೀಗ ಕೈಯಲ್ಲಿದ್ದ ಮೊಬೈಲ್ ಅನ್ನು ಕೂಡ ಸುಲಭದಲ್ಲಿ ಕದ್ದಕೊಂಡು ಹೋಗುತ್ತಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಅಮಾಯಕರಂತೆ ಮಾಡಿಕೊಂಡು ಮೊಬೈಲ್ ಕದ್ದುವ ಪ್ರಯತ್ನ ಮಾಡುತ್ತಾರೆ.
ಇಲ್ಲೊಬ್ಬ ದಾರಿ ಬದಿ ನಿಂತಿದ್ದ ಒಬ್ಬರಲ್ಲಿ ಮೊಬೈಲ್ ಕೆಟ್ಟಿದೆ ಎಂದು ಹೇಳಿ ಕರೆ ಮಾಡಲು ಮೊಬೈಲ್ ಕೇಳಿ, ಮೊಬೈಲ್ ಕಳ್ಳತನ ಮಾಡುವ ಪ್ರಯತ್ನ ಮಾಡಿದ್ದಾನೆ.
ಮತ್ತಿಕೆರೆಯಲ್ಲಿ ಮೊಬೈಲ್ ಕಳ್ಳತನ
ಮತ್ತಿಕೆರೆಯಲ್ಲಿ ದೇವವ್ರಾತ್ ಸಿಂಗ್ ಎಂಬಾತನಲ್ಲಿ ಪವನ್ ಎಂಬಾತ ನನ್ನ ಮೊಬೈಲ್ ಕೆಟ್ಟಿದೆ, ಕಾಲ್ ಮಾಡಬೇಕು ಎಂದು ಮೊಬೈಲ್ ಕೇಳಿದ್ದಾನೆ. ಏನೋ ಪಾಪ ಎಂದು ದೇವವ್ರಾತ್ ಸಿಂಗ್ ಮೊಬೈಲ್ ಕೊಡುತ್ತಾರೆ. ಕೊಡುವ ಮುನ್ನ ಎದುರಲ್ಲೇ ಅನ್ಲಾಕ್ ಮಾಡಿಕೊಡುತ್ತಾರೆ. ಅದೇ ರೀತಿ ಆ ಅನ್ಲಾಕ್ ಪ್ಯಾಟರ್ನ್ ಲಾಕ್ ಅನ್ನು ಆತ ಗಮನಿಸಿದ್ದ.
ಇದನ್ನೂ ಓದಿ: ತಾಯಿಯನ್ನು ಸದಾ ಜೀವಂತವಿಟ್ಟ ಮಗ, ಅವ್ವನ ನೆನಪು ಎಂಬ ಮಮತೆಯ ಮ್ಯೂಸಿಯಂ
ಮೊಬೈಲ್ ಹಿಡಿದು ಬೈಕ್ನಲ್ಲಿ ಎಸ್ಕೇಪ್
ದೇವವ್ರಾತ್ ಸಿಂಗ್ ಅವರು ಪವನ್ ಬಂದು ಮೊಬೈಲ್ ಕೇಳಿದಾಗ ತಕ್ಷಣ ಕೊಡುತ್ತಾರೆ. ಆದರೆ ಆರೋಪಿ ಪವನ್ ಮೊಬೈಲ್ ಪಡೆದ ಕ್ಷಣಾರ್ಧದಲ್ಲೇ ತನ್ನ ಬೈಕ್ ಹತ್ತಿ ಮೊಬೈಲ್ ಹಿಡಿದು ಎಸ್ಕೇಪ್ ಆಗಿದ್ದಾನೆ.
ಮೊಬೈಲ್ನ ಗ್ಯಾಲರಿ ನೋಡಿ ಬೆದರಿಕೆ
ಮೊದಲೇ ಹೇಳಿದಂತೆ ಆರೋಪಿ ಪವನ್ ಮೊಬೈಲ್ ಪಡೆಯುವ ಮುನ್ನ ಮೊಬೈಲ್ನ ಪ್ಯಾಟರ್ನ್ ಲಾಕ್ ಅನ್ನು ಗಮನಿಸಿದ್ದ. ಅದೇ ರೀತಿ ನಂತರ ಮೊಬೈಲ್ ಹಿಡಿದು ಓಡಿ ಹೋಗಿ, ಮೊಬೈಲ್ ಲಾಕ್ ಅನ್ನು ಓಪನ್ ಮಾಡಿದ್ದಾನೆ. ತದನಂತರದಲ್ಲಿ ಮೊಬೈಲ್ನಲ್ಲಿದ್ದ ಗ್ಯಾಲರಿಯ ಫೋಟೋಗಳನ್ನು ನೋಡಿದ್ದಾನೆ. ಅದರಲ್ಲಿ ದೇವವ್ರಾತ ಸಿಂಗ್ ಅವರ ಪ್ರೇಯಸಿಯ ಖಾಸಗಿ ಫೋಟೋಗಳನ್ನು ಗಮನಿಸಿದ್ದಾನೆ. ಅದನ್ನು ಹಿಡಿದುಕೊಂಡು ಬೆದರಿಕೆ ಒಡ್ಡಿದ್ದಾನೆ.
ಗರ್ಲ್ ಫ್ರೆಂಡ್ ಹಾಗೂ ತಾಯಿಗೆ ಬೆದರಿಕೆ
ದೇವವ್ರಾತ ಸಿಂಗ್ ಅವರ ಹುಡುಗಿಯ ಫೋಟೋವನ್ನು ನೋಡಿದ ತಕ್ಷಣ ಆರೋಪಿ ಪವನ್ ದೇವವ್ರಾತ್ ಸಿಂಗ್ ಅವರ ಗರ್ಲ್ ಫ್ರೆಂಡ್ಗೆ ಕಾಲ್ ಮಾಡಿ ಫೋಟೋ ಲೀಕ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಜೊತೆಗೆ ಅವರ ಬಳಿ 1 ಲಕ್ಷ ಹಣ ನೀಡಬೇಕೆಂದು ಡಿಮ್ಯಾಂಡ್ ಕೂಡ ಮಾಡಿದ್ದಾನೆ.
ಇದಲ್ಲದೆ ದೇವವ್ರಾತ ಸಿಂಗ್ ಅವರ ತಾಯಿಗೂ ಕಾಲ್ ಮಾಡುವ ಮೂಲಕ ಹಗಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ.
ಯಶವಂತಪುರ ಪೊಲೀಸ್ ಠಾಣೆಗೆ ದೂರು
ನಂತರ ದೇವವ್ರಾತ್ ಸಿಂಗ್ ನಿಂದ ಸ್ಥಳೀಯ ಪೊಲೀಸ್ ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ. ಜೊತೆಗೆ ಪೊಲೀಸ್ನವರು ಹಣ ಕೊಡೋದಾಗಿ ಕರೆಸಿ ಆರೋಪಿ ಪವನ್ ಅನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಯಶವಂತಪುರ ಠಾಣೆಯ ಪೊಲೀಸರು.
ಅಪರಿಚಿತರಿಗೆ ಮೊಬೈಲ್ ಕೊಡುವ ಮುನ್ನ ಎಚ್ಚರ
ಯಾರೇ ಆಗಲಿ ಬಂದು ಅಪರಿಚಿತರು ಮೊಬೈಲ್ ಕೇಳುವಾಗ, ಸರಿಯಾಗಿ ಆಲೋಚಿಸಿ ಮೊಬೈಲ್ ನೀಡಿ. ಇಲ್ಲವಾದರೆ ನಿಮ್ಮ ಮೊಬೈಲ್ ಕಳ್ಳತನವಾಗುವುದು ಅಂತೂ ಗ್ಯಾರಂಟಿ. ಇದರಿಂದ ನಿಮ್ಮ ಡೇಟಾ, ಬ್ಯಾಂಕ್ ಹಣವನ್ನು ದೋಚುವ ಪ್ರಯತ್ನ ಮಾಡುತ್ತಾರೆ. ಜೊತೆಗೆ ಬೆದರಿಕೆಯನ್ನು ಹಾಕುತ್ತಾರೆ. ಇತ್ತೀಚೆಗೆ ಅಮಾಯಕರಂತೆ ನಟಿಸಿ ಕೆಲ ವಂಚಕರು ದಾರಿ ಬದಿ ಇದ್ದವರ ಬಳಿ ಬಂದು ಮೊಬೈಲ್ ಅನ್ನು ಕೇಳುತ್ತಾರೆ. ಆದರೆ ತದನಂತರದಲ್ಲಿ ಅಲ್ಲಿಂದ ಓಡಿ ಹೋಗುತ್ತಾರೆ. ಆದ್ದರಿಂದ ಯಾರೇ ಆಗಲಿ ಮೊಬೈಲ್ ಕೇಳುವಾಗ ಆಲೋಚಿಸಿ ನೀಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ