ಬೆಂಗಳೂರು: ಒಂದು ಕಡೆ ಪೊಲೀಸರು (Police) ಎಲೆಕ್ಷನ್ ಡ್ಯೂಟಿಯಲ್ಲಿ (Election Duty) ಫುಲ್ ಬ್ಯುಸಿ. ಸಂಚಾರಿ ಪೊಲೀಸರು (Traffic Police) ಟ್ರಾಫಿಕ್ ಆಗದಂತೆ ನೋಡುವುದರಲ್ಲಿ ಬ್ಯುಸಿ, ಇದರ ನಡುವೆ ವಾಹನ ಸವಾರರು (Vehicle Owners) ಪೊಲೀಸರು ಇಲ್ಲ ಅಂತೇಳಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ. ಈಗ ರೂಲ್ಸ್ ಬ್ರೇಕ್ ಮಾಡುತ್ತಿರುವವರಿಗೆ ಎಲೆಕ್ಷನ್ ಆಗಮೇಲೆ ಶಾಕ್ ಕಾದಿದೆ ಹುಷಾರ್. ಪೊಲೀಸರು ಸುಮ್ಮನಿದ್ದರೂ ಕಾನೂನು (Law) ಮಾತ್ರ ಕೃತ್ಯ ಎಸಗಿದವರ ಮೇಲೆ ಹದ್ದಿನ ಕಣ್ಣಿಟ್ಟಿರುತ್ತೆ ಎಂಬುದಕ್ಕೆ ಈ ಸ್ಟೋರಿಯೇ ಸಾಕ್ಷಿ.
ಹೌದು, ನಗರದಲ್ಲಿ ಕಳೆದ ಒಂದು, ಒಂದೂವರೆ ತಿಂಗಳಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ಉಲ್ಲಂಘನೆ ಕೇಸ್ ಗಳು ದಾಖಲಾಗುತ್ತಿದೆ. ಇದಕ್ಕೆ ಕಾರಣ ಸಂಚಾರಿ ಪೊಲೀಸರು ರಸ್ತೆಯಲ್ಲಿ ನಿಂತು ವಾಹನಗಳನ್ನು ತಡೆಯದೇ ಇರೋದು. ಇದರಿಂದ ಪೊಲೀಸರು ಇಲ್ಲ ಅಂತೇಳಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಸಿಕ್ಕ ಸಿಕ್ಕ ಹಾಗೆ ವಾಹನ ಸವಾರರು ಓಡಾಡ್ತಾ ಇದ್ದಾರೆ.
ಇದನ್ನೂ ಓದಿ: Gift Politics: ವಾಹನದೊಳಗಿತ್ತು ₹6.93 ಕೋಟಿ ಮೌಲ್ಯದ 11 ಕೆಜಿ ಚಿನ್ನ, 74 ಕೆಜಿ ಬೆಳ್ಳಿ! ಅತ್ತ 60 ಲಕ್ಷ ನೋಟ್ ಸೀಜ್!
ಇದರ ಜೊತೆಗೆ ಎಷ್ಟೋ ಜನ ಪೊಲೀಸರು ಇಲ್ಲ ಅಂತ ಹೆಲ್ಮೆಟ್ ಹಾಕದೆಯೇ ಬೈಕ್ ಓಡಿಸ್ತಾ ಇದ್ದಾರೆ. ಇನ್ನು ಕೆಲವರಂತೂ ಸಿಗ್ನಲ್ ಬಿದ್ದರೂ ರಾಜಾರೋಷವಾಗಿ ಜಂಪ್ ಮಾಡಿಕೊಂಡು ಹೋಗುತ್ತಿದ್ದಾರೆ. ಹೀಗೆ ರೂಲ್ಸ್ ಬ್ರೇಕ್ ಮಾಡುತ್ತಿರುವವರಿಗೆ ಖಾಕಿ ಚುರುಕು ಮುಟ್ಟಿಸಲು ಮುಂದಾಗಿದೆ.
ಚುನಾವಣೆ ಬಳಿಕ ಮನೆ ಬಾಗಿಲಿಗೆ ಬರ್ತಾರೆ ಸಂಚಾರಿ ಪೊಲೀಸರು
ಪೊಲೀಸರು ಹಾಕಿದ ಕ್ಯಾಮರಾಗಳಲ್ಲಿ ಕೇಸ್ ಗಳ ಮೇಲೆ ಕೇಸ್ ಗಳು ದಾಖಲಾಗುತ್ತಿದೆ. ಈ ತಿಂಗಳಲ್ಲಿ ಸುಮಾರು 18 ಲಕ್ಷಕ್ಕೂ ಅಧಿಕ ಕೇಸ್ ಗಳು ಕ್ಯಾಮರಾಗಳ ಮೂಲಕ ರಿಜಿಸ್ಟರ್ ಆಗಿದೆ. ಇದರ ಜೊತೆಗೆ ರಸ್ತೆಯಲ್ಲಿ ನಿಂತು ಪೊಲೀಸರು ಪೋಟೋ ತೆಗೆದು ಅಪ್ ಲೋಡ್ ಮಾಡುವ ಕೇಸ್ ಗಳು ಬೇರೆ.
ದಿನಕ್ಕೆ ಅಂದಾಜು ಅಂದರೂ 60-70 ಸಾವಿರ ಕೇಸ್ ಗಳು ರಿಜಿಸ್ಟರ್ ಆಗುತ್ತಿದ್ದು, ರೂಲ್ಸ್ ಬ್ರೇಕ್ ಮಾಡುವುದರ ಮನೆಗೆ ನೋಟಿಸ್ ಗಳನ್ನು ಕಳಿಸುತ್ತಿದ್ದಾರೆ. ಚುನಾವಣೆ ಬಳಿಕ ಹೆಚ್ಚಿನ ದಂಡ ಇರುವ ವಾಹನಗಳನ್ನು ಜಫ್ತಿ ಮಾಡುವುದರ ಜೊತೆಗೆ ಮನೆ ಬಾಗಿಲಿಗೆ ಹೋಗಿ ದಂಡ ವಸೂಲಿಗೆ ಪೊಲೀಸರು ಚಿಂತನೆ ಮಾಡಿದ್ದಾರೆ.
ಇನ್ನು ಚುನಾವಣೇ ಕೆಲಸಕ್ಕೆ ಟ್ರಾಫಿಕ್ ಸಿಬ್ಬಂದಿಯನ್ನ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಸ್ವಯಂಚಾಲಿತವಾಗಿ ಕ್ಯಾಮರಾಗಳು ಸಂಚಾರಿ ಉಲ್ಲಂಘನೆಯ ಬಗ್ಗೆ ಹದ್ದಿನ ಕಣ್ಣಿಟ್ಟಿದೆ. ಹಾಗಾಗಿ ಸಿಗ್ನಲ್ ಬ್ರೇಕ್ ಮಾಡೋಕು ಮುನ್ನ ನೀವೂ ಹುಷಾರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ