ವಾಹನ ಸವಾರರೇ ಎಚ್ಚರ! ಇನ್ಮುಂದೆ ಹಾಫ್​​ ಹೆಲ್ಮೆಟ್​​ ಹಾಕುವಂತಿಲ್ಲ: ಹಾಕಿದ್ರೆ ದಂಡದ ಬದಲಿಗೆ ಈ ಶಿಕ್ಷೆ ಗ್ಯಾರಂಟಿ

ಒರಿಸ್ಸಾ ಟ್ರಾಫಿಕ್​​ ಪೊಲೀಸರ ರೀತಿಯಲ್ಲೇ ಕರ್ನಾಟಕ ಸಂಚಾರಿ ಪೊಲೀಸರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇನ್ಮುಂದೆ ಹಾಫ್​​ ಹೆಲ್ಮೆಟ್​​ ಧರಿಸುವವರ ಹೆಲ್ಮೆಟ್​​​ ಪೊಲೀಸರು ಕಿತ್ತೊಗೆಯಲಿದ್ದಾರೆ. ಅಲ್ಲದೇ ಫುಲ್​ ಹೆಲ್ಮೆಟ್​​​ ಧರಿಸುವಂತೆ ವಾಹನ ಸವಾರರರಿಗೆ ಹಾಕಬೇಕೆಂದು ಸೂಚನೆ ನೀಡಲಿದ್ಧಾರೆ.​

news18-kannada
Updated:November 10, 2019, 10:54 AM IST
ವಾಹನ ಸವಾರರೇ ಎಚ್ಚರ! ಇನ್ಮುಂದೆ ಹಾಫ್​​ ಹೆಲ್ಮೆಟ್​​ ಹಾಕುವಂತಿಲ್ಲ: ಹಾಕಿದ್ರೆ ದಂಡದ ಬದಲಿಗೆ ಈ ಶಿಕ್ಷೆ ಗ್ಯಾರಂಟಿ
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು(ನ.10): ಟ್ರಾಫಿಕ್​​ ಪೊಲೀಸರು ಹಾಫ್​​ ಹೆಲ್ಮೆಟ್​ ಹಾಕುವವರಿಗೆ ಬುದ್ದಿ ಕಲಿಸಲು ಮುಂದಾಗಿದ್ದಾರೆ. ಇಷ್ಟು ದಿನ ಹೆಲ್ಮೆಟ್ ಧರಿಸದಿದ್ದರೆ ದಂಡ ಹಾಕುತ್ತಿದ್ದ ಪೊಲೀಸರು ಇದೀಗ ಬೇರೆಯದ್ದೇ ಕಾನೂನು ಜಾರಿಗೆ ಮುಂದಾಗಿದ್ಧಾರೆ. ಇನ್ಮುಂದೆ ಹಾಫ್​​ ಹೆಲ್ಮೆಟ್​​​ ಧರಿಸಿದರೇ ಪೊಲೀಸರು ನಿಮ್ಮ ಹೆಲ್ಮೆಟನ್ನೇ ವಶಕ್ಕೆ ಪಡೆಯುತ್ತಿದ್ದಾರೆ. ಹಾಫ್​​ ಹೆಲ್ಮೆಟ್​​ ಧರಿಸುವುದರಿಂದ ಜೀವಕ್ಕೆ ಅಪಾಯವಿದೆ. ಹಾಗಾಗಿ ವಾಹನ ಸವಾರರು ಫುಲ್​​ ಹೆಲ್ಮೆಟ್​​ ಹಾಕಬೇಕೆಂದು ಪೊಲೀಸರು ಸೂಚಿಸುತ್ತಿದ್ಧಾರೆ.

ಹಾಫ್ ಹೆಲ್ಮೆಟ್ ಬದಲಿಗೆ ಫುಲ್ ಹೆಲ್ಮೆಟ್ ಧರಿಸಬೇಕೆಂದು ಟ್ರಾಫಿಕ್​​ ಪೊಲೀಸರು ಜಾಗೃತಿ ಮೂಡಿಸುತ್ತಿದ್ಧಾರೆ. ಈಗಾಗಲೇ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಆಪರೇಷನ್ ಶುರು ಮಾಡಿದ್ದು, ಸಿಕ್ಕ ಹಾಫ್ ಹೆಲ್ಮೆಟ್‍ಗಳನ್ನು ಕಸಿದುಕೊಳ್ಳುತ್ತಿದ್ದಾರೆ. ದಂಡ ತಪ್ಪಿಸಿಕೊಳ್ಳಲು ಸವಾರರು ಹಾಕುತ್ತಿದ್ದ ಹಾಫ್​​ ಹೆಲ್ಮೆಟ್​​ಗಳನ್ನು ತಿಪ್ಪೆಗೆ ಎಸೆಯುತ್ತಿದ್ದಾರೆ. ಹಾಗಾಗಿಯೇ ಇನ್ಮುಂದೆ ವಾಹನ ಸವಾರರು ಫುಲ್​​ ಹೆಲ್ಮೆಟ್​​ ಧರಿಸಬೇಕಿದೆ.

ಎಲ್ಲ ದಾಖಲೆಗಳೂ ಸರಿಯಾಗಿದ್ದರೂ ಟ್ರಾಫಿಕ್ ಪೊಲೀಸರು ಬೇರೇನಾದರೂ ತಪ್ಪು ಹುಡುಕಿ ಎಲ್ಲಿ ದಂಡ ಹಾಕಿಬಿಡುತ್ತಾರೋ ಎಂಬ ಭಯದಿಂದ ಅನೇಕ ಜನರು ವಾಹನವನ್ನು ರಸ್ತೆಗೆ ಇಳಿಸೋಕೂ ಹಿಂಜರಿಯುವಂತಾಗಿದೆ. ಚಪ್ಪಲಿ ಹೆಲ್ಮೆಟ್ ಧರಿಸದೇ ಇದ್ದದ್ದು, ಡಿಎಲ್​ ಇಲ್ಲದೇ ಗಾಡಿ ಓಡಿಸಿದ್ದು ಇಂತಹ ತಪ್ಪುಗಳ ಜೊತೆಗೆ ಚಪ್ಪಲಿ ಹಾಕಿಕೊಂಡು ಗಾಡಿ ಓಡಿಸಿದ್ದಕ್ಕೆ, ಲುಂಗಿ ಉಟ್ಟುಕೊಂಡು ಡ್ರೈವ್ ಮಾಡಿದ್ದಕ್ಕೆ ಹೀಗೆ ಹೊಸ ಹೊಸ ಕಾರಣಗಳನ್ನು ನೀಡಿ ಟ್ರಾಫಿಕ್ ಪೊಲೀಸರು ಸಾವಿರಾರು ರೂ. ದಂಡ ಹಾಕುತ್ತಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ ಸಿಹಿಸುದ್ದಿ: ಗಗನಕ್ಕೇರಿದ ಈರುಳ್ಳಿ ದರ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ

ಟ್ರಾಫಿಕ್ ರೂಲ್ಸ್​ ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುವುದರಿಂದ ಏನೂ ಉಪಯೋಗವಿಲ್ಲ. ಅದರ ಬದಲು ಹೆಲ್ಮೆಟ್ ಇಲ್ಲದವರ ಬಳಿ 500 ರೂ. ತೆಗೆದುಕೊಂಡು ಹೊಸ ಹೆಲ್ಮೆಟ್ ನೀಡಿ, ಆರ್​ಸಿ ಇಲ್ಲದವರಿಗೆ ವ್ಯವಸ್ಥೆ ಕಲ್ಪಿಸಿ. ಆಗ ಅವರೂ ಸುರಕ್ಷಿತರಾಗಿರುತ್ತಾರೆ ಎಂಬ ಸಲಹೆಗಳು ಸಾರ್ವಜನಿಕರಿಂದ ಬಂದಿತ್ತು. ಅದೇ ಹಾದಿಯಲ್ಲಿ ಸಾಗಿದ್ದ ಒರಿಸ್ಸಾ ಟ್ರಾಫಿಕ್​​ ಪೊಲೀಸರು ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವವರಿಗೆ ಗುಲಾಬಿ ಹೂವು ಕೊಟ್ಟು, ಉಚಿತವಾಗಿ ಹೆಲ್ಮೆಟ್ ಕೂಡ ವಿತರಿತ್ತು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದರು.

ಒರಿಸ್ಸಾ ಟ್ರಾಫಿಕ್​​ ಪೊಲೀಸರ ರೀತಿಯಲ್ಲೇ ಕರ್ನಾಟಕ ಸಂಚಾರಿ ಪೊಲೀಸರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇನ್ಮುಂದೆ ಹಾಫ್​​ ಹೆಲ್ಮೆಟ್​​ ಧರಿಸುವವರ ಹೆಲ್ಮೆಟ್​​​ ಪೊಲೀಸರು ಕಿತ್ತೊಗೆಯಲಿದ್ದಾರೆ. ಅಲ್ಲದೇ ಫುಲ್​ ಹೆಲ್ಮೆಟ್​​​ ಧರಿಸುವಂತೆ ವಾಹನ ಸವಾರರರಿಗೆ ಹಾಕಬೇಕೆಂದು ಸೂಚನೆ ನೀಡಲಿದ್ಧಾರೆ.​
--------
First published:November 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading