Traffic Rules: ಟ್ರಾಫಿಕ್ ಪೊಲೀಸ್​ ಜೊತೆ ಕಿರಿಕ್ ಮಾಡಿದ್ರೆ ಹುಷಾರ್​, ಮೊದಲು ಈ ಹೊಸ ರೂಲ್ಸ್​ ಬಗ್ಗೆ ತಿಳಿದುಕೊಳ್ಳಿ!

New Traffic Rules: ನಿಮ್ಮ ಬಳಿ ವಾಹನದ ಎಲ್ಲಾ ದಾಖಲೆಗಳು ಇದ್ದರೂ ಸಹ ಪೊಲೀಸರು ಅದನ್ನೆಲ್ಲಾ ನೋಡಿ ನಿಮ್ಮನ್ನು ಬಿಡುವವರೆಗೂ ಸಮಾಧಾನದಿಂದ ಇರುವುದು ಒಳ್ಳೆಯದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅನೇಕ ಬಾರಿ ಈ ವಾಹನ (Vehicle) ಸವಾರರನ್ನು ಪೊಲೀಸರು ರಸ್ತೆಯ ಮಧ್ಯೆ ತಡೆದು ನಿಲ್ಲಿಸಿ, ಅವರ ಬಳಿ ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಇವೆಯೆ ಅಂತ ನೋಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಸ್ವಲ್ಪ ತಡವಾಗುವುದು ಸಹಜ ಮತ್ತು ಕೆಲವೊಬ್ಬರಿಗೆ ಯಾವುದೋ ಒಂದು ತುರ್ತು ಕೆಲಸದ ಮೇಲೆ ಎಲ್ಲಿಗೂ ಹೋಗುವುದಿರುತ್ತದೆ. ಇಂತಹ ಸಮಯದಲ್ಲಿ(Time) ವಾಹನ ಸವಾರರು ಕೋಪ ಮಾಡಿಕೊಂಡು ಪೊಲೀಸರ ಜೊತೆಯಲ್ಲಿ ಸ್ವಲ್ಪ ಜೋರಾಗಿ ಮಾತಿಗಿಳಿಯುವುದು ಮತ್ತು  ಚಿಕ್ಕದಾಗಿ ಶುರುವಾದ ಮಾತು ದೊಡ್ಡ (Big)  ವಾಗ್ವಾದ ಆಗಿ ಬದಲಾಗುವುದನ್ನು ನಾವು ರಸ್ತೆಯ ಮಧ್ಯೆದಲ್ಲಿ ಅನೇಕ ಬಾರಿ ನೋಡಿರುತ್ತೇವೆ. ಆದರೆ ಈಗ ಈ ರೀತಿ ಪೊಲೀಸರ (Police) ಮೇಲೆ ಕೂಗಾಡುವಂತಿಲ್ಲ.

ನಿಮ್ಮ ಬಳಿ ವಾಹನದ ಎಲ್ಲಾ ದಾಖಲೆಗಳು ಇದ್ದರೂ ಸಹ ಪೊಲೀಸರು ಅದನ್ನೆಲ್ಲಾ ನೋಡಿ ನಿಮ್ಮನ್ನು ಬಿಡುವವರೆಗೂ ಸಮಾಧಾನದಿಂದ ಇರುವುದು ಒಳ್ಳೆಯದು. ಇಲ್ಲ ಎಂದರೆ ಸುಮ್ಮನೆ ನೀವು 2000 ರೂಪಾಯಿ ಭಾರಿ ದಂಡವನ್ನು ನೀಡಬೇಕಾಗುತ್ತದೆ. ಹೌದು.. ಹೊಸ ಸಂಚಾರ ನಿಯಮಗಳು ಜಾರಿಗೆ ಬಂದಿವೆ, ನೀವು ಮುಂದಿನ ಬಾರಿ ರಸ್ತೆಗಿಳಿಯುವ ಮುಂಚೆ ಒಂದು ಬಾರಿ ಈ ಹೊಸ ಸಂಚಾರ ನಿಯಮಗಳನ್ನು ಒಮ್ಮೆ ವಿವರವಾಗಿ ಓದಿಕೊಳ್ಳುವುದು ಒಳ್ಳೆಯದು.

ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿಯಬೇಡಿ

ವಾಸ್ತವವಾಗಿ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ವಾಹನದ ಕಾಗದಪತ್ರಗಳನ್ನು ಅಥವಾ ಯಾವುದೇ ರೀತಿಯಲ್ಲಿ ಪರಿಶೀಲಿಸುವಾಗ ನೀವು ಸಂಚಾರಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದರೆ ನಿಯಮ 179 MVA ಪ್ರಕಾರ  ಅವರು ನಿಮಗೆ 2000 ರೂಪಾಯಿಯ ದಂಡ ನೀಡುವ ಹಕ್ಕನ್ನು ಹೊಂದಿದ್ದಾರೆ.ನಮ್ಮ ವಾಹನವನ್ನು ತಡೆದು ನಿಲ್ಲಿಸಿದಾಗ ನಮಗೆ ಪೊಲೀಸರು ಕೇಳುವ ಪ್ರಶ್ನೆಗಳಿಗೆ ಕೆಲವೊಮ್ಮೆ ಇರುಸು ಮುರುಸು ಆಗುವುದು ಮತ್ತು ವಾಗ್ವಾದವನ್ನು ಪ್ರಾರಂಭಿಸುತ್ತೇವೆ. ಆ ವಾದವು ಎಷ್ಟು ಹೆಚ್ಚಾಗುತ್ತದೆಯೆಂದರೆ ಅದು ಕೆಲವೊಮ್ಮೆ ದುರ್ವರ್ತನೆಯಾಗಿ ಬದಲಾಗುತ್ತದೆ.

ನೀವೂ ಸಹ ಪೊಲೀಸರ ವಿರುದ್ಧ ದೂರು ನೀಡಬಹುದು:

ಅಂತಹ ಪರಿಸ್ಥಿತಿಯಲ್ಲಿ ಸಂಚಾರಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸದಂತೆ ನಿಮಗೆ ಸಲಹೆ ನೀಡಲಾಗುತ್ತದೆ ಮತ್ತು ಪೊಲೀಸರು ನಿಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರೆ, ನೀವು ದೂರು ನೀಡುವ ಮತ್ತು ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವ ಆಯ್ಕೆಯನ್ನು ಸಹ ನೀವು ಹೊಂದಿದ್ದೀರಿ.

ಇದನ್ನೂ ಓದಿ: ವಾಹನ ಸವಾರರೇ ಎಚ್ಚರ; ಈ ಹೆಲ್ಮೆಟ್​ಗಳನ್ನು ಧರಿಸಿದ್ರೆ ಬೀಳುತ್ತೆ ಭಾರೀ ದಂಡ!

ಸರಿಯಾದ ಹೆಲ್ಮೆಟ್ ಧರಿಸದೆ ಇದ್ದರೂ ದಂಡ

ಹೊಸ ಸಂಚಾರ ನಿಯಮಗಳ ಪ್ರಕಾರ ಸರಿಯಾದ ಹೆಲ್ಮೆಟ್ ಧರಿಸದಿದ್ದರೂ ಸಹ ಪೊಲೀಸರು ನಿಮ್ಮ ಮೇಲೆ 2000 ರೂಪಾಯಿಯ ದಂಡ ಹಾಕಬಹುದು. ಮೋಟಾರು ವಾಹನ ಕಾಯ್ದೆಯ ಪ್ರಕಾರ ನೀವು ಮೋಟರ್ ಸೈಕಲ್, ಸ್ಕೂಟರ್ ಓಡಿಸುವಾಗ ಹೆಲ್ಮೆಟ್ ಧರಿಸದಿದ್ದರೆ ನಿಯಮ 194 ಡಿ MVA ಪ್ರಕಾರ ನಿಮ್ಮ ಮೇಲೆ 1000 ರೂಪಾಯಿಯ ದಂಡ ವಿಧಿಸಲಾಗುವುದು.

 ನಿಮಗೆ ಏಕೆ ದಂಡ ವಿಧಿಸಿದ್ದಾರೆ ಅಂತ ತಿಳಿಯುವುದು ಹೇಗೆ?

ನಿಮಗೆ ಪೊಲೀಸರು ನೀಡಿರುವ ಚಲನ್ ನಲ್ಲಿ ದಂಡವನ್ನು ಏತಕ್ಕಾಗಿ ವಿಧಿಸಿದ್ದಾರೆ ಅಂತ ನೋಡಿಕೊಳ್ಳಬಹುದು. ಹೀಗೆ ನೋಡಿಕೊಳ್ಳಲು ನೀವು ಮೊದಲು https://echallan.parivahan.gov.in ವೆಬ್‌ಸೈಟ್ ಗೆ ಹೋಗಿ. ನಂತರ ಚಲನ್ ಸ್ಟೇಟಸ್ ಚೆಕ್ ಮಾಡುವ ಆಯ್ಕೆಯನ್ನು ಆರಿಸಿ. ಚಲನ್ ಸಂಖ್ಯೆ, ವಾಹನ ಸಂಖ್ಯೆ ಮತ್ತು ಚಾಲನಾ ಪರವಾನಗಿ ಸಂಖ್ಯೆ (DL) ಆಯ್ಕೆಯನ್ನು ನೀವು ಪಡೆಯುತ್ತೀರಿ. ವಾಹನ ಸಂಖ್ಯೆಯ ಆಯ್ಕೆಯನ್ನು ಆರಿಸಿ. ಕೇಳಿದ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು 'ಗೆಟ್ ಡೀಟೈಲ್ಸ್' ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಚಲನ್ ಅನ್ನು ನೋಡಬಹುದು.

ಇದನ್ನೂ ಓದಿ : ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕನಿಗೆ ದಂಡ! ಕಾರಣ ಕೇಳಿದ್ರೆ ನಗೋದು ಪಕ್ಕಾ

ಆನ್ಲೈನ್​ನಲ್ಲಿ ಟ್ರಾಫಿಕ್ ಚಲನ್ ಭರ್ತಿ ಮಾಡುವುದು ಹೇಗೆ?

https://echallan.parivahan.gov.in/ ವೆಬ್‌ಸೈಟ್ ಗೆ ಹೋಗಿ, ಚಲನ್ ಗೆ ಸಂಬಂಧಿಸಿದ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ‘ಗೆಟ್ ಡೀಟೈಲ್ಸ್’ ಮೇಲೆ ಕ್ಲಿಕ್ ಮಾಡಿ. ಚಲನ್ ನ ವಿವರಗಳನ್ನು ನೀಡುವ ಹೊಸ ಪುಟವು ತೆರೆದುಕೊಳ್ಳುತ್ತದೆ. ನೀವು ಪಾವತಿಸಲು ಬಯಸುವ ಇನ್ವಾಯ್ಸ್ ಅನ್ನು ಕಂಡು ಹಿಡಿಯಿರಿ. ಚಲನ್ ಜೊತೆಗೆ, ಆನ್ಲೈನ್ ಪಾವತಿಯ ಆಯ್ಕೆಯು ಕಾಣಿಸಿಕೊಳ್ಳುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ಪಾವತಿ ಮಾಹಿತಿಯನ್ನು ಭರ್ತಿ ಮಾಡಿ. ಪಾವತಿಯನ್ನು ದೃಢೀಕರಿಸಿ. ಹೀಗೆ ನಿಮ್ಮ ಆನ್ಲೈನ್ ಚಲನ್ ಅನ್ನು ಭರ್ತಿ ಮಾಡಬಹುದು.
First published: