ಹಿರೇಕೆರೂರು ಚುನಾವಣಾ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ ಬಿ.ಸಿ. ಪಾಟೀಲ್

ಬಿ.ಸಿ. ಪಾಟೀಲ ಅವರು ಈ ಭರ್ಜರಿ ಗೆಲುವಿನ ಮೂಲಕ 52 ವರ್ಷಗಳ ಹಳೆಯ ದಾಖಲೆ ಮುರಿದಿದ್ಧಾರೆ. 1967ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಲ್ಲಿ 15,242 ಮತಗಳ ಅಂತರದಿಂದ ಗೆದ್ದಿರುವುದು ಈವರೆಗಿನ ದಾಖಲೆಯಾಗಿತ್ತು.

news18
Updated:December 9, 2019, 3:17 PM IST
ಹಿರೇಕೆರೂರು ಚುನಾವಣಾ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ ಬಿ.ಸಿ. ಪಾಟೀಲ್
ಬಿ.ಸಿ. ಪಾಟೀಲ್
  • News18
  • Last Updated: December 9, 2019, 3:17 PM IST
  • Share this:
ಹಾವೇರಿ(ಡಿ. 09): ಹಿರೇಕೆರೂರು ಉಪಚುನಾವಣೆಯಲ್ಲಿ ಹಾಲಿ ಶಾಸಕ ‘ಕೌರವ’ ಬಿ.ಸಿ. ಪಾಟೀಲ್ ಪುನರಾಯ್ಕೆಯಾಗಿದ್ಧಾರೆ. ಜೊತೆಗೆ ಮೂರನೇ ಬಾರಿ ಕ್ಷೇತ್ರದ ಶಾಸಕರಾಗಿದ್ಧಾರೆ. ಡಿ. 5ರಂದು ನಡೆದ ಉಪಚುನಾವಣೆಯ ಫಲಿತಾಂಶ ಇವತ್ತು ಪ್ರಕಟವಾಗಿದ್ದು ಬಿ.ಸಿ. ಪಾಟೀಲ್ 29,055 ಮತಗಳ ಅಂತರದಿಂದ ಕಾಂಗ್ರೆಸ್​ನ ಬಿ.ಹೆಚ್. ಬನ್ನಿಕೋಡ್ ವಿರುದ್ಧ ಭರ್ಜರಿ ಗೆಲುವು ಪಡೆದಿದ್ಧಾರೆ. ಇದು ಕ್ಷೇತ್ರದ ಮಟ್ಟಿಗೆ ನೂತನ ದಾಖಲೆ ಗೆಲುವಾಗಿದೆ.

ಬಿ.ಸಿ. ಪಾಟೀಲ ಅವರು ಈ ಭರ್ಜರಿ ಗೆಲುವಿನ ಮೂಲಕ 52 ವರ್ಷಗಳ ಹಳೆಯ ದಾಖಲೆ ಮುರಿದಿದ್ಧಾರೆ. 1967ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಲ್ಲಿ 15,242 ಮತಗಳ ಅಂತರದಿಂದ ಗೆದ್ದಿರುವುದು ಈವರೆಗಿನ ದಾಖಲೆಯಾಗಿತ್ತು. ಈಗ ಬಿ.ಸಿ. ಪಾಟೀಲ್ ಆ ದಾಖಲೆ ಮುರಿದು ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

ಇದನ್ನೂ ಓದಿ: ಉಪಚುನಾವಣೆ ಶಾಕ್: ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ

ಹಿರೇಕೆರೂರು ಕ್ಷೇತ್ರದ ಹಿರಿಯ ಬಿಜೆಪಿ ಮುಖಂಡ ಹಾಗೂ ಕ್ಷೇತ್ರದ ಹಳೆಯ ಹೆಸರಾಗಿರುವ ಯು.ಬಿ. ಬಣಕಾರ್ ಅವರು ಬೆಂಬಲವಾಗಿ ನಿಂತಿದ್ದು ಬಿ.ಸಿ. ಪಾಟೀಲ್ ಗೆಲುವಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಬಿ.ಸಿ. ಪಾಟೀಲ್ ಅವರಿಗೆ ಸಿಕ್ಕಿರುವ ಈ ಅಭೂತಪೂರ್ವ ಗೆಲುವಿಗೆ ಅವರಿಬ್ಬರೂ ಕಾರಣವೆನ್ನಲಾಗುತ್ತಿದೆ.

ಹಿರೇಕೆರೂರು ಉಪಚುನಾವಣೆ ಫಲಿತಾಂಶ:

ಒಟ್ಟು ಮತದಾರರು: 1,83,481
ಚಲಾವಣೆಯಾದ ಮತ: 1,44,265ಬಿ.ಸಿ. ಪಾಟೀಲ್, ಬಿಜೆಪಿ: 85,562
ಬಿ.ಎಚ್. ಬನ್ನಿಕೋಡ, ಕಾಂಗ್ರೆಸ್: 56,495
ಉಜನೇಪ್ಪ ಕೋಡಿಹಳ್ಳಿ, ಜೆಡಿಎಸ್ ಬೆಂಬಲಿತ: 275
ದೇವೇಂದ್ರಪ್ಪ, ಪ್ರಜಾಕೀಯ: 597
ಮಂಜುನಾಥ್ ಜಿ.ಎಸ್., ಕರ್ನಾಟಕ ರಾಷ್ಟ್ರ ಸಮಿತಿ: 193
ಹರೀಶ್, ಕೆಜೆಪಿ: 182
ಪೂಜಾರ ಸಿದ್ದಪ್ಪ, ಪಕ್ಷೇತರ: 472
ರುದ್ರಯ್ಯ ಸಾಲಿಮಠ, ಪಕ್ಷೇತರ: 356
ರಾಜಶೇಖರಪ್ಪ, ಪಕ್ಷೇತರ: 133
ನೋಟಾ: 789
ತಿರಸ್ಕೃತ ಮತ: 09

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 9, 2019, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading