ಹಾರ-ತುರಾಯಿ ಬೇಡ, ಹೃದಯವಂತಿಕೆಯಿಂದ ಬಂದು ಶುಭಾಶಯ ಕೋರಲಿ; ಕಾಂಗ್ರೆಸ್ ನಾಯಕರಿಗೆ ಬಿ.ಸಿ.ಪಾಟೀಲ್ ತಿರುಗೇಟು

ಎಷ್ಟು ಬೇಗ ಅವರು ಸಚಿವರಾಗ್ತಾರೆ ಅವರಿಗೆ ಹಾರ-ತುರಾಯಿ ತಗೊಂಡು ಹೋಗಬೇಕು ಅಂತಿದ್ರು. ಅವರು ಹಾರ-ತುರಾಯಿ ತರೋದು ಬೇಡ, ಹೃದಯವಂತಿಕೆ ಇರುವವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಂದು ಶುಭಾಶಯ ಕೋರಲಿ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು.

ಬಿ.ಸಿ ಪಾಟೀಲ್

ಬಿ.ಸಿ ಪಾಟೀಲ್

  • Share this:
ಬೆಂಗಳೂರು: ಸಿಎಂ ಯಡಿಯೂರಪ್ಪ ಕೊಟ್ಟ ಮಾತು ಯಾವತ್ತೂ ತಪ್ಪಿಲ್ಲ. ಅವರು ಕೊಟ್ಟ ಮಾತಿನಂತೆ ನಡೆದುಕೊಂಡು ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ. ನೀನು ಮಂತ್ರಿಯಾಗುತ್ತಿದ್ದೀಯ ಎಂದು ಯಡಿಯೂರಪ್ಪ ಫೋನ್​ ಮಾಡಿ ಹೇಳಿದಾಗ ಹೃದಯ ತುಂಬಿ ಬಂತು ಎಂದು ಸಚಿವರಾಗಲಿರುವ ಬಿ.ಸಿ.ಪಾಟೀಲ್ ಹೇಳಿದರು.

ಬಿಎಸ್​ವೈ ಅವರನ್ನು ಭೇಟಿಯಾದ ಬಳಿಕ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್ ಅವರು, ರಾಜಕೀಯದಲ್ಲಿ ಯಾವುದು ಸ್ಥಿರವಲ್ಲ. ಅನರ್ಹಗೊಳಿಸಿದ್ದಲ್ಲದೇ ಟೀಕೆ ಟಿಪ್ಪಣಿಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದು ಅವರ ದೊಡ್ಡತನವಲ್ಲ. ಮಾಧ್ಯಮದ ಮೂಲಕ ಈಗ ನೀವೇ ಹೇಳಬೇಕು. ನಾವು ಮಂತ್ರಿಯಾಗಲ್ಲ ಎಂದವರು ಈಗ ಪಶ್ಚಾತಾಪ ಪಡಲಿ. ಎಷ್ಟು ಬೇಗ ಅವರು ಸಚಿವರಾಗ್ತಾರೆ ಅವರಿಗೆ ಹಾರ-ತುರಾಯಿ ತಗೊಂಡು ಹೋಗಬೇಕು ಅಂತಿದ್ರು. ಅವರು ಹಾರ-ತುರಾಯಿ ತರೋದು ಬೇಡ, ಹೃದಯವಂತಿಕೆ ಇರುವವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಂದು ಶುಭಾಶಯ ಕೋರಲಿ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು.

ಇದನ್ನು ಓದಿ: ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪಗಿಂತ ಮಗ ಬಿ. ವೈ ವಿಜಯೇಂದ್ರ ಪ್ರಭಾವಿ: ಹೇಗಂತೀರಾ? ಇಲ್ಲಿ ಓದಿ..

 
First published: