Eye Donation: ನೇತ್ರದಾನಕ್ಕೆ ಸಹಿ ಹಾಕಿದ ಸಚಿವ ಬಿ.ಸಿ ನಾಗೇಶ್; ಅಂಧರ ಬಾಳಿಗೆ ಬೆಳಕಾಗಿ ಎಂದು ಸಚಿವರ ಕರೆ

ಅಂಧರ ಬಾಳಿನಲ್ಲಿ ಬೆಳಕು ಮೂಡಿಸುವ ಶ್ರೇಷ್ಠ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದಾಗಬೇಕು ಎಂದು ನೇತ್ರದಾನಕ್ಕೆ ಸಚಿವ ನಾಗೇಶ್ ಕರೆ ನೀಡಿದರು.

ಸಚಿವ ಬಿ.ಸಿ ನಾಗೇಶ್​

ಸಚಿವ ಬಿ.ಸಿ ನಾಗೇಶ್​

  • Share this:
ತುಮಕೂರು (ಏ.25): ದಾನಗಳಲ್ಲಿ ಶ್ರೇಷ್ಠದಾನ ಎನಿಸಿಕೊಂಡಿರುವ ನೇತ್ರದಾನ (Eye Donate) ಮಾಡಲು 'ಪ್ರತಿಜ್ಞಾ ಪತ್ರ'ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ (B.C Nagesh) ಸೋಮವಾರ ತಿಪಟೂರಿನಲ್ಲಿ ಸಹಿ ಹಾಕಿದ್ದಾರೆ. ತಿಪಟೂರು (Tipturu) ತಾಲೂಕು ಆಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ (Public Hospital) ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳ ಹಾಗೂ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಸಚಿವ ನಾಗೇಶ್ ಅವರು ನೇತ್ರದಾನ ಮಾಡುವ ಪ್ರತಿಜ್ಞಾ ಪತ್ರಕ್ಕೆ ಸಹಿ ಹಾಕಿದರು.

ಅನ್ನದಾನದಂತೆ ನೇತ್ರದಾನ ಕೂಡ ಶ್ರೇಷ್ಠ ದಾನ

ಅನ್ನದಾನದಂತೆ ನೇತ್ರದಾನ ಕೂಡ ಶ್ರೇಷ್ಠ ದಾನವಾಗಿದೆ. ಮನುಷ್ಯ ತಾನು ಕಾಲವಾದ ನಂತರ ಮತ್ತೊಬ್ಬರ ಜೀವನದಲ್ಲಿ ಬೆಳಕು ಮೂಡಿಸುವ, ಜಗತ್ತನ್ನು ನೋಡಲು ಅವಕಾಶ ಕಲ್ಪಿಸುವ ಶ್ರೇಷ್ಠ ಕಾರ್ಯವೇ ನೇತ್ರದಾನ. ವಿವಿಧ ಕಾರಣಗಳಿಂದ ನಮ್ಮ ದೇಶದಲ್ಲಿ ಅಂಧತ್ವ ಎದುರಿಸುತ್ತಿರುವ ನಾಗರಿಕರ ಸಂಖ್ಯೆ ದೊಡ್ಡದಿದೆ. ಇಂತಹ ಅಂಧರ ಬಾಳಿನಲ್ಲಿ ಬೆಳಕು ಮೂಡಿಸುವ ಶ್ರೇಷ್ಠ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದಾಗಬೇಕು' ಎಂದು ನೇತ್ರದಾನಕ್ಕೆ ಸಚಿವ ನಾಗೇಶ್ ಕರೆ ನೀಡಿದರು.

'ಆರೋಗ್ಯ ಕ್ಷೇತ್ರದಲ್ಲಿ ಭಾರತದ ಸಾಧನೆ’

'ಆರೋಗ್ಯ ಕ್ಷೇತ್ರದಲ್ಲಿ ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುವಂತಹ ಸಾಧನೆಗಳನ್ನು ಭಾರತ ಮಾಡುತ್ತಿದೆ. ಎರಡು ವರ್ಷಗಳ ಹಿಂದೆ ಕೋವಿಡ್-19 ಮಹಾಮಾರಿ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ವ್ಯಾಪಿಸುತ್ತಿದ್ದ ಸಂದರ್ಭದಲ್ಲಿ ಭಾರತ ಎದುರಿಸಬಹುದಾದ ಪರಿಸ್ಥಿತಿ ಕುರಿತು ಮುಂದುವರೆದ ರಾಷ್ಟ್ರಗಳು ಭಯ, ಭೀತಿ, ಆತಂಕ ವ್ಯಕ್ತಪಡಿಸಿದ್ದವು. ಭಾರತವು ಕೋವಿಡ್-19 ಔಷಧಿ ಮತ್ತು ಲಸಿಕೆಗಾಗಿ ಅನ್ಯ ರಾಷ್ಟ್ರಗಳ ಮೇಲೆ ಅವಲಂಬಿಸಬೇಕಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Corona Virus: ಇನ್ಮುಂದೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ- ಸಚಿವ ಸುಧಾಕರ್

ಕೋವಿಡ್-19 ನಿಯಂತ್ರಣದಲ್ಲಿ ಅಭೂತಪೂರ್ವ ಸಾಧನೆ

130 ಕೋಟಿಗೂ ಅಧಿಕ ಜನಸಂಖ್ಯೆಯ ಭಾರತಕ್ಕೆ ಲಸಿಕೆ ಮತ್ತು ಔಷಧಿ ಸಿಗುವುದು ವಿಳಂಬವಾಗುವ ಕಾರಣ ಭಾರತದಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸುತ್ತದೆ ಎಂದು ವಿವಿಧ ರಾಷ್ಟ್ರಗಳ ತಜ್ಞರು ಹೇಳಿಕೆ ನೀಡಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕೋವಿಡ್-19 ನಿಯಂತ್ರಣದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ.

ಭಾರತ ಸೈ ಎನಿಸಿಕೊಂಡಿತು

ಬೇರೆ ದೇಶಗಳ ಮೇಲೆ ಅವಲಂಬನೆಯಾಗದೆ ಭಾರತದಲ್ಲೇ ಲಸಿಕೆಗಳನ್ನು ಅಭಿವೃದ್ಧಿಪಡಿಸಿ, ಜನರಿಗೆ ಉಚಿತವಾಗಿ ನೀಡುವ ಮೂಲಕ ಇಡೀ ಜಗತ್ತೇ ಭಾರತದ ಕಡೆ ನೋಡುವ ಸಾಧನೆಗೆ ಕಾರಣವಾಯಿತು. ಅಷ್ಟೇ ಅಲ್ಲದೆ ಹಲವು ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆ ಸರಬರಾಜು ಮಾಡಿ ಭಾರತ ಸೈ ಎನಿಸಿಕೊಂಡಿತು' ಎಂದು ಸಚಿವ ನಾಗೇಶ್ ಹೇಳಿದರು‌.

ಇದನ್ನೂ ಓದಿ: Mysore: ಮುಡಾದಲ್ಲಿ ನಡೆದಿದೆ ಬ್ರಹ್ಮಾಂಡ ಭ್ರಷ್ಟಾಚಾರ! ನೂರಾರು ನಿವೇಶನಗಳ ದಾಖಲೆಯೇ ಮಂಗ ಮಾಯ!

ಆಯುಷ್ಮಾನ್ ಭಾರತ ಕಾರ್ಡ್ ವಿತರಣೆ

'ಲಸಿಕೆ ಅಭಿವೃದ್ಧಿಪಡಿಸುತ್ತಿದ್ದ ಭಾರತೀಯ ವಿಜ್ಞಾನಿಗಳಿಗೆ, ಕಂಪನಿಗಳಿಗೆ ಬೆಂಬಲ ನೀಡಿ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಲಸಿಕೆ ಅಭಿವೃದ್ಧಿಯಾಗಿ ಶೀಘ್ರದಲ್ಲೇ ಜನರಿಗೆ ತಲುಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹತ್ವದ ಪಾತ್ರ ವಹಿಸಿದರು' ಎಂದು ಸಚಿವ ನಾಗೇಶ್ ನುಡಿದರು. ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ - ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಆರೋಗ್ಯ ಇಲಾಖೆ, ತಾಲೂಕು ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

ದೇಶದಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲಾಗ್ತಿದೆ. ಅನೇಕ ಗಣ್ಯರು ನೇತ್ರದಾನಕ್ಕೆ ಸಹಿ ಹಾಕಿದ್ದು ಅಂಧರ ಬಾಳಿಗೆ ಬೆಳಕಾಗುವ ಮಹಾಕಾರ್ಯಕ್ಕೆ ಸಾಥ್​ ನೀಡುತ್ತಿದ್ದಾರೆ.
Published by:Pavana HS
First published: