ಹೊಸೂರು ರಸ್ತೆಯಲ್ಲಿ ವೈಟ್​ ಟಾಪಿಂಗ್​ ಕಾಮಗಾರಿ; ವಾಹನ ಸವಾರರು ಹೈರಾಣು

ಡೈರಿ ವೃತ್ತದಿಂದ ಬದಲಿ ಮಾರ್ಗ ಅನುಸರಿಸಿ ಎಂಬ ಬೋರ್ಡ್​ಗಳು ಕಂಡು ಬರುತ್ತಿದ್ದು, ಜನರು ಸುತ್ತು ಮಾರ್ಗ ಬಳಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಅಡುಗೋಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಗಂಟೆಗಟ್ಟಲೇ ವಾಹನ ಸವಾರರು ಕಾದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Seema.R | news18-kannada
Updated:December 4, 2019, 12:33 PM IST
ಹೊಸೂರು ರಸ್ತೆಯಲ್ಲಿ ವೈಟ್​ ಟಾಪಿಂಗ್​ ಕಾಮಗಾರಿ; ವಾಹನ ಸವಾರರು ಹೈರಾಣು
ವೈಟ್​ ಟಾಪಿಂಗ್​
  • Share this:
ಬೆಂಗಳೂರು (ಡಿ.04): ನಗರದ ಹೊಸೂರು ರಸ್ತೆಯಲ್ಲಿ ವೈಟ್​ ಟಾಪಿಂಗ್​ ಕಾಮಗಾರಿ ನಡೆಯುತ್ತಿದ್ದು, ಕೋರಮಂಗಲ, ಎಲೆಕ್ಟ್ರಾನಿಕ್​ ಸಿಟಿ, ಮಡಿವಾಳ, ಸರ್ಜಾಪುರ, ಚೆನ್ನೈಗೆ ಹೋಗುವ ಪ್ರಯಾಣಿಕರು ತೊಂದರೆಪಡುವಂತೆ ಆಗಿದೆ. 

ಹೊಸೂರು ರಸ್ತೆಯ ಡೈರಿ ವೃತ್ತದಿಂದ ಚೆಕ್​ಪೋಸ್ಟ್​ ವರೆಗೂ 1.5 ಕಿ.ಮೀ ವೈಟ್​ ಟಾಪಿಂಗ್​ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಮಂಗಳವಾರದಿಂದ ಈ ರಸ್ತೆ ಸಂಚಾರ ಮಾರ್ಗ ಬದಲಾಗಿದೆ.

ಹೊಸೂರು ರಸ್ತೆಯಲ್ಲಿ ಬರುವ  ನಿಮ್ಹಾನ್ಸ್​, ಸೆಂಟ್​ಜಾನ್ಸ್​ ಆಸ್ಪತ್ರೆಗೆ ಇದೇ ಮಾರ್ಗದಲ್ಲಿ ಸಂಚಾರ ಮಾಡುವ ಹಿನ್ನೆಲೆ ಈಗ ಮಾರ್ಗ ಬಂದ್​ ಆಗಿದ್ದು, ರೋಗಿಗಳು ತೊಂದರೆ ಪಡುವಂತೆ ಆಗಿದೆ. ಅಲ್ಲದೇ ನಗರದ ಐಟಿ ಹಬ್​ ಆದ ಎಲೆಕ್ಟ್ರಾನಿಕ್​ಸಿಟಿ, ಚಂದಾಪುರ, ವಿಪ್ರೋ, ಸರ್ಜಾಪುರ, ಚೆನ್ನೈ, ಸೇಲಂ, ಕೃಷ್ಣಗಿರಿಗೆ ಹೋಗುವ ಮಾರ್ಗ ಇದಾಗಿದ್ದು, ಸದಾ ಟ್ರಾಫಿಕ್​ನಿಂದ ಕೂಡಿರುವ ಈ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಜನರು ಹೈರಾಣಾಗುತ್ತಿದ್ದಾರೆ.

ಡೈರಿ ವೃತ್ತದಿಂದ ಬದಲಿ ಮಾರ್ಗ ಅನುಸರಿಸಿ ಎಂಬ ಬೋರ್ಡ್​ಗಳು ಕಂಡು ಬರುತ್ತಿದ್ದು, ಜನರು ಸುತ್ತು ಮಾರ್ಗ ಬಳಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಅಡುಗೋಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಗಂಟೆಗಟ್ಟಲೇ ವಾಹನ ಸವಾರರು ಕಾದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕ್ರೈಸ್ಟ್​ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಬದಲಿ ಮಾರ್ಗವಿಲ್ಲದೆ ನಾಲ್ಕೈದು ಕಿ,ಮೀ ನಡೆದೆ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಓದಿ: #RejectDisqualifiedMLAs: ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ಅನರ್ಹ ಶಾಸಕರ ಸೋಲಿಸಿ ಎಂಬ ಹ್ಯಾಷ್​ಟ್ಯಾಗ್

ಅಡುಗೋಡಿ ರಸ್ತೆಯಲ್ಲಿ ಈಗ ಮೂರು ಪಟ್ಟು ವಾಹನ ದಟ್ಟಣೆ ಹೆಚ್ಚಾದ ಹಿನ್ನೆಲೆ ಎಲ್ಲೆಡೆ ಟ್ರಾಫಿಕ್​ ಜಾಮ್​ ಉಂಟಾಗಿದೆ.  ಕಚೇರಿ, ಶಾಲೆ, ಊರಿಗೆ ಪಯಣಿಸುವ ಜನರು ಗಂಟೆ ಗಟಲ್ಲೇ ಟ್ರಾಫಿಕ್​ನಲ್ಲಿಯೇ ಕಾಲ ಕಳೆಯುವಂತೆ ಆಗಿದ್ದು, ಆದಷ್ಟು ಬೇಗ ಈ ಕಾಮಗಾರಿ ಮುಗಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
First published: December 4, 2019, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading