ಬೆಂಗಳೂರು: ಅತೀ ಶೀಘ್ರದಲ್ಲೇ ಕೋವಿಡ್ ಲಸಿಕೆ ಬಿಡುಗಡೆಗೆ ರಾಜ್ಯದಲ್ಲಿ ಸಕಲ ಸಿದ್ದತೆ ನಡೆದಿದೆ. ಈ ನಡುವೆ ಲಸಿಕೆ ಸಂಗ್ರಹಕ್ಕೆ ಬೆಂಗಳೂರು ಬಿಬಿಎಂಪಿಯಿಂದಲೂ ಭರ್ಜರಿ ತಯಾರಿ ನಡೆದಿದೆ. 2017ರ ಸಮಯವನ್ನೇ ಬಿಬಿಎಂಪಿ ಫಾಲೋ ಮಾಡಲು ಮುಂದಾಗಿದೆ.
ಹೌದು, 2017 ರಲ್ಲಿ ಕಾಣಿಸಿದ್ದ ದಡಾರ ರೋಗದ ನಿಯಂತ್ರಣ ಮಾದರಿಯನ್ನೇ ಕೋವಿಡ್ ನಿಯಂತ್ರಣಕ್ಕೆ ಅನುಸರಿಸಲು ಬಿಬಿಎಂಪಿ ಕಮಿಷನರ್ ಮುಂದಾಗಿದ್ದಾರೆ. ಆಗ ಒಂದೇ ತಿಂಗಳಲ್ಲಿ ಎಲ್ಲಾ ರೋಗಿಗಳಿಗೆ ವ್ಯಾಕ್ಸಿನ್ ಹಾಕಲಾಗಿತ್ತು. ಆರೋಗ್ಯ ಕೇಂದ್ರಗಳ ಮೂಲಕ 23 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿತ್ತು. ಸ್ಟಾಫ್ ನರ್ಸ್ ಸೇರಿ 1000 ಮಂದಿ ಈ ಲಸಿಕೆ ಕಾರ್ಯದಲ್ಲಿ ನಿರತರಾಗಿದ್ದು, ಆಗ ಯಶಸ್ವಿಯಾಗಿದ್ದ ಲಸಿಕೆ ವಿಧಾನವನ್ನೇ ಅನುಸರಿಸಲು ಉಪಾಯ ಮಾಡಿದೆ. ಇದೇ ಉಪಾಯವನ್ನರಿತು ವ್ಯಾಕ್ಸಿನ್ ಸಪ್ಲೈ ಹಾಗೂ ಹಾಕುವ ವಿಧಾನಕ್ಕೆ ಬಿಬಿಎಂಪಿ ಮುಂದಾಗಿದೆ..
ಇನ್ನು ಬೆಂಗಳೂರಿನಲ್ಲಿ 25 ಲಕ್ಷ ಕೋವಿಡ್ ಲಸಿಕೆ ಸಂಗ್ರಹಕ್ಕೆ 141 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದಾಸಪ್ಪ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದಲ್ಲಿ 1 ಲಕ್ಷ ಹತ್ತು ಸಾವಿರ ಕೊರೋನಾ ವಾರಿಯರ್ಸ್ ಗೆ ವ್ಯಾಕ್ಸಿನ್ ಸಿಗಲಿದೆ. ಲಸಿಕೆ ಸಂಗ್ರಹಿಸಲು ಐಸ್ ಲೆಂಡ್ ರೆಫ್ರಿಜಿರೇಟರ್ ವ್ಯವಸ್ಥೆ ಮಾಡಲಾಗಿದೆ. ಈಗ ದಾಸಪ್ಪ ಆಸ್ಪತ್ರೆಯನ್ನು ಕೋವಿಡ್ ವ್ಯಾಕ್ಸಿನ್ ಮುಖ್ಯ ಸಂಗ್ರಹ ಘಟಕವಾಗಿದೆ.
ಏಕಕಾಲಕ್ಕೆ ವ್ಯಾಕ್ಸಿನ್ ಸಪ್ಲೈ ಇಲ್ಲ, ಹಂತಹಂತವಾಗಿ ವ್ಯಾಕ್ಸಿನ್ ಹಾಕಲಾಗುತ್ತೆ.. ಮೊದಲು ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕೊಡಲು ಸಿದ್ದತೆ ನಡೆಸಲಾಗಿದೆ. ವಾರ್ಡ್ ಮಟ್ಟದಲ್ಲಿ ಕೊಡದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಸಪ್ಲೈ ಆಗಲಿದ್ದು, ಮೆಡಿಕಲ್ ಸ್ಟೂಡೆಂಟ್ಸ್, ಸ್ಟಾಫ್ ನರ್ಸ್ , ಫೈನಲ್ ಇಯರ್ ಸ್ಟೂಡೆಂಟ್ಸ್ ಸೇರಿ ಸಾವಿರ ಮಂದಿಯನ್ನು ಲಸಿಕೆ ಹಾಕಲು ಬಳಕೆ ಮಾಡಿಕೊಳ್ಳಲಿದ್ದಾರೆ.
ಇದನ್ನು ಓದಿ: ಮಠದ ಆವರಣದಲ್ಲಿ ಗಾಂಜಾ ಗಿಡ ಪತ್ತೆ; ಜಾಗದ ಮಾಲೀಕರ ಪತ್ತೆಗೆ ಮುಂದಾದ ಅಬಕಾರಿ ಇಲಾಖೆ
ಕೇಂದ್ರ ಸರ್ಕಾರದ ಸೂಚನೆಯಂತೆ ಒಂದು ಲಕ್ಷದ ಹತ್ತು ಸಾವಿರ ಕೊರೋನಾ ವಾರಿಯರ್ಸ್ ಪಟ್ಟಿ ಸಿದ್ದ ಪಡಿಸಿರುವ ಬಿಬಿಎಂಪಿ,ಸೋಮವಾರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. 20,072 ಸರ್ಕಾರಿ ಆರೋಗ್ಯ ಅಧಿಕಾರಿ ಸಿಬ್ಬಂದಿ, 76,655 ಖಾಸಗಿ ಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು, 2864 ಆಶಾ ಕಾರ್ಯಕರ್ತೆಯರು, 12.400 ಖಾಸಗಿ ಆಸ್ಪತ್ರೆ ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿ ಕೊರೋನಾ ವಾರಿಯರ್ಸ್ ಪಟ್ಟಿಯಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ